ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಸ)

||ಆದಿತಾಳ||

ಸಿದ್ಧಿವಿನಾಯಕ ವಿದ್ಯಪ್ರದಾಯಕ | ಸದ್ಯೋಜಾತನ ಮುದ್ದು ಮೋಹದಸುತ |

ಬದ್ಧವಿಷಯದಿಹ ಬುದ್ಧಿಮನಗಳನು | ತಿದ್ದಿಜ್ಞಾನ ಭಕುತಿಗಳಿತ್ತು ಹರಿಪದ |

ಪದ್ಮಯುಗದಿ ಸದಾ ಮಗ್ನವಾಗಿರಿಸಯ್ಯ | ಬದ್ಧಾಂಜಲಿಯಾಗಿ ಪ್ರಾರ್ಥಿಪೆ 

ಗಗನೇಶಾ | ಮಧ್ವಾಂತರ್ಗತ ಹರಿ ಗುಣಗಾಯನ | ಪದ್ಯ ಸುಳಾದಿಗಳಿಂದ ಮಾಡಿ

ಪಾಡುತ | ಮಧ್ವಪನೊಲಿಸಿದ ದಧಿಶಿಲೆ ನಿಲಯನೆ | ಮಧ್ವಪತಿ ಅಭಿನವ ಪ್ರಾಣೇಶ

ವಿಠಲನ ಪದ ಪದ್ಮಗಳಲ್ಲಿ ದೃಢ ಭಕ್ತಿ ನೀಡು || 

 

||ಧೃವತಾಳ||

ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ | ಸಿರಿದೇವಿ ಉಳಿದನ್ಯ ನಾರಿ

ಶಿರೋಮಣಿ | ಸರಸಿಜ ಸಂಭವ ಬ್ರಹ್ಮದೇವನ ರಾಣಿ | ಸ್ಮರಿಪ ಸದ್ಭಕ್ತರ ಸುರಧೇನು

ಚಿಂತಾಮಣಿ | ಶರಣರ ಈಪ್ಸಿತ ಸಲಿಸುವ ಕಲ್ಯಾಣಿ | ಪರಮ ಸುಂದರ ಶ್ರೇಣಿ

ಶುಕವಾಣಿ ಫಣಿವೇಣಿ | ತಿರೋಹಿತವಾಗದ ವಿಮಲ ಸುಜ್ಞಾನಿ | ಪರಗತಿ ಸಾಧಕ

ಸದ್ ವಿದ್ಯಾದಾಯಿನಿ | ಸರ್ವ ವೇದಾಭಿಮಾನಿ ವೀಣಾಪಾಣಿ | ಸಿರಿಯರಸಭಿನವ

ಪ್ರಾಣೇಶ ವಿಠಲನ | ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ ||

 

 

||ಮಟ್ಟತಾಳ||

ಸಕಲ ದೇವರೋಳು ರುಗ್ಮಿಣಿ ಅರಸನ್ನ | ಸುಖ ಸಮುದಾಯಕ ಅಕಟ ನಾನೆಂಬೆ |

ಸಕಲ ಭೂಷಣ ಸುರನಿಕರ ಸಂದಣಿಯಲ್ಲಿ | ಮುಕುತಾ ಮುಕುತರ ಸೇವಕರ

ಕರದಿಂದ | ಅಕಳಂಕನಾಗಿ ಸಕಲ ಸೇವೆಯಗೊಂಬ | ಮಕ್ಕಳ ಮಾಣಿಕ ರಂಗ

ವಿಜಯ ವಿಠಲನ್ನ | ಭಕುತರೊಳಗ್ರಣಿ ಯುಕುತಿಲಿ ಪೇಳಿದನು ||

 

 

||ತ್ರಿವಿಡಿತಾಳ||

ಸ್ತುತಿ ಮಾಡುವೆ ನಿನ್ನ ಕಾಳಿ ಮಹಾ ಕಾಳಿ ಉನ್ನತ ಬಾಹು ಕರಾಳವದನೆ

ಚಂದಿರಮುಖೆ | ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ ಸ್ಥಿತಿಯೆ ನಿದ್ರಾ

ಭದ್ರೆ ಭಕ್ತ ವತ್ಸಲೆ ಭವ್ಯೇ | ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿಗಮನೆ ಅ | ದ್ಭುತ ಪ್ರಬಲೆ

ಪ್ರವಾಸೆ ದುರ್ಗಾರಣ್ಯವಾಸೆ ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ | ದ್ಗತಿ ಪ್ರದಾತೆ

ಮಾಯಾ ಶ್ರೀಯೆ ಇಂದಿರೆ ರಮೆ | ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ |

ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ | ಅತಿಶಯ ರಕ್ತ ಜಿಹ್ವಾಲೋಲೆ

ಮಾಣಿಕ್ಯಮಾಲೆ | ಜಿತ ಕಾಮೆ ಜನನ ಮರಣ ರಹಿತೆ ಖ್ಯಾತೆ | ಘೃತ ಪಾತ್ರ

ಪರಮಾನ್ನ ತಾಂಬೂಲ ಹಸ್ತೆ ಸು | ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ ಶತಪತ್ರ

ನಯನೆ ನಿರುತ ಕನ್ಯೇ ಉದಯಾರ್ಕ | ಶತಕೋಟಿ ಸನ್ನಿಭೆ ಹರಿಯಾಂಕ ಸಂಸ್ಥೆ |

ಶ್ರುತಿ ತತಿನುತೆ ಶುಕ್ಲ ಶೋಣಿತ ರಹಿತೆ ಅ | ಪ್ರತಿ ಹತೆ ಸರ್ವದಾ ಸಂಚಾರಿಣಿ

ಚತುರೆ | ಚತುರ ಕಪರ್ದಿಯೆ ಅಂಭ್ರಣಿ ಹ್ರೀ | ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರ

ಶೋಭನ ಮೂರ್ತೇ | ಪತಿತ ಪಾವನೆ ಧನ್ಯೆ (ರನ್ನೆ) ಸರ್ವೌಷಧಿಯಲಿದ್ದು ಹತ

ಮಾಡು ಕಾಡುವ ರೋಗಂಗಳಿಂದ | ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು |

ಸತತ ಕಾಯಲಿ ಬೇಕು ದುರ್ಗೇ ದುರ್ಗೇ | ಚ್ಯುತದೂರ ವಿಜಯ ವಿಠಲರೇಯನ 

ಪ್ರೀಯೆ | ಕೃತಾಂಜಲಿಯಿಂದಲಿ ತಲೆ ಬಾಗಿ ನಮಿಸುವೆ ||

 

||ಮಟ್ಟತಾಳ||

ಸರಸಿಜ ಭವ ಬೊಮ್ಮ ಕಶ್ಯಪರಾನ್ವಯದ | ಸಿರಿ ಪತಿ ಅಯ್ಯರ ಸದ್ವಂಶಜರಾದ |

ತಿರುಕಾರ್ಯರ ಪೌತ್ರ ಯೋಗೀಂದ್ರರ ಪುತ್ರ ಧರೆಯೊಳುದಿಸಿ ಬೆಳೆದ | ಪೆರೆಶುಕ್ಲನ 

ತೆರದಿ | ಹಿರಿಯರ ಮುಖದಿಂದ ಬ್ರಹ್ಮ ಕರ್ಮಗಳನು | ಅರಿತಾಚರಿಸುತ್ತ

ಕರ್ಮಠನೆನಿಸಿದನು | ಹಿರಿಯರ ಶಿಕ್ಷಣದಿ ಹರಿದಾಸ ರಹಸ್ಯ | ಹರಿಮತ ದರ್ಶನದ

ಪರಿಚಯವನು ಪಡೆದ ಹರಿಗುರುಗಳ ಸೇವೆ ಹರುಷದಿಗೈಯುತ್ತ | ಸಿರಿವರ

ಅಭಿನವಪ್ರಾಣೇಶವಿಠಲನ | ಕರುಣದಿಂದಿರುತಿರ್ದ ಸಿರಿ ವೆಂಕಟೇಶಾರ್ಯ ||

 

||ತ್ರಿವಿಡಿತಾಳ||

ಸುಳಾದಿಗಳು ಅರವತ್ತು ನಾಲ್ಕು ಸಾವಿರ | ಬಲುವೃತ್ತ ನಾಮ ಮೂವತ್ತಾರು

ಸಾವಿರ | ಸಲೆ ಶೇತ ದ್ವೀಪಾನಂತಾಸನ ವೈಕುಂಠ | ನಳಿನಜ ನಗರ ಕೈಲಾಸ ದಿ |

ಕ್ಪಾಲರ ನಿಲವರ ಪೇಳುವನು ಅರವತ್ತು ಸಾವಿರ ಒಲಿದು ಕೇಳಿ ದಶಕಲ್ಯಾಣ

ದಶಚರಿತೆ ತಿಳಿವದು ನಲವತ್ತು ಸಾವಿರ ನಿಜವೆಂದು ಇಳಿಯ ವಲ್ಲಭರಂಗ ವಿಜಯ

ವಿಠ್ಠಲನ್ನ | ಕಲ ಕಾಲ ಮನದೊಳು ನಿಲಸಿ ಕೊಂಡಾಡುತ್ತ ||

 

||ಮಟ್ಟತಾಳ||

ಸಾನುರಾಗದಿ ಎನ್ನ ಸಾಮಿಪ್ಯವ ನೈದಿ | ಪಾಣಿದ್ವಯದಲಿ ವೇಣಿ ಸ್ಪರಿಶ ಮಾಡಿ |

ಏನು ಬೇಡುವೆ ಬೇಡು ನೀಡುವೆನೆಂತೆಂದು | ವಾಣಿ ಇಂದಲಿ ನುಡಿದು

ಅನುಗ್ರಹಿಸಿದ ದಕ್ಕೆ | ಮಾನುಷಾನ್ನ ಜನಿತ ಅಜ್ಞಾನದಿಂದ | ಜ್ಞಾನನಿಧಿಯೆ ನಿನ್ನ

ಪದದ್ವಂದ್ವಕೆ ನಮಿಸಿ | ಮಾನಸಿನಾಪೇಕ್ಷೆ | ವಿವರಿಸಿ ಬಿನ್ನೈಸಿ | ಪೂರ್ಣ ಮಾಡು

ಎಂದು ವರಗಳ ಬೇಡದಲೆ ನಿನ್ನ ಪದದ್ವಂದ್ವಕೆ ನಮಿಸಿ | ಹೀನ ಮನೋಭಾವ

ಮಾಡಿದೆ ಹೇ ಜನನಿ | ಧೇನುವಿಗೆ ವತ್ಸ ಮಾಡಿದ ಅಪಚಾರ | ತಾನೆಣಿಸಿ ಅದರ

ಸಾಕದೆ ಬಿಡುವುದೆ | ಮಾನನಿಧಿಯೆ ಎನ್ನ ಅನುಚಿತವೆಣಿಸದಲೆ | ಏನು ಬೇಡಿದ

ವರವ ನೀಡುವೆನೆಂತೆಂದ | ವಾಣಿ ಸತ್ಯ ಮಾಡು ಅವ್ಯವಧಾನದಲಿ | ಜ್ಞಾನ ಪೂರ್ಣ

ಗುರು ವಿಜಯ ವಿಠ್ಠಲರೇಯನ | ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ || 

 

||ರಾಗ ಭೈರವಿ-ಧೃವತಾಳ ||

ಸುಂದರಮಯವಾದ ದ್ವಂದ್ವ ಚರಣವನ್ನು | ಇಂದು ಕಂಡೆನು ಬಂದು | ಅಂದು

ಕಾಳಿಂದಿಯ ಧುಮುಕಿ ನಾ | ಗೇಂದ್ರನ ಫಣೆಯಲ್ಲಿ ಕುಣಿಕುಣಿದಾಡಲು |

ದುಂದುಭಿ ರಭಸಾ ಮೊರೆಯ ಗಗನ | ದಿಂದಲೆ ಪೂಮಳೆ ಬಿಡದೆ ಸುರಿಯೆ |

ವೃಂದಾರಕವೃಂದ ಚಂದಾಗಿ ಸರಸಿಜ | ನಂದನ ಸಹಿತ ವಂದನೆ ಗೈವುತಿರೆ |

ನಂದನಂದನ ಗೋಪಿಯ ಕಂದ | ಅಂದಂದಾಡಿದ ಗೋವಿಂದ ವಿಜಯವಿಠಲಾ |

ನಿಂದು ನಲುವಿಂದಾ ಮೆರೆವನು ಇಲ್ಲಿ | ಇಂದಿರೆಯರಸನ ನಂದ ಮೂರುತಿಯಾ ||

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026