ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಚ)

||ಮಟ್ಟತಾಳ||

ಚಂಡಿದುರ್ಗೆ ಭೂತಗಣ ಸಂಸೇವಿತಳೆ | ರುಂಡಾಹಿಮಾಲಾಧರ ಹೃನ್ಮಂದಿರಳೆ |

ಉಂಡು ವಿಷವ ನಿನ್ನ ಗಂಡನು ಬಳಲಿ | ಕೈಕೊಂಡೌಷಿದ ವೆನಗೆ ಕರುಣದಿ ನೀಡಮ್ಮ

ಮಂಡೆ ಬಾಗಿ ಬೇಡ್ವೆ | ಕರಗಳ ಜೋಡಿಸುತ | ಪುಂಡರೀಕನಯನೆ ಪುಂಡರೀಕ

ಗಮನೆ | ಪಂಢರ ಅಭಿನವ ಪ್ರಾಣೇಶ ವಿಠಲನ | ಪುಂಡಲೀಕ ಚರಣ ಬಂಡುಣಿ

ಎನಿಸಮ್ಮಾ ||

 

||ಮಟ್ಟತಾಳ||

ಚರಣಡಿ ಎಂದೆಂಬೊ ಪುರದೊಳಗೆ ಸಂ | ಕರ ಜನಿಸಿದ್ದ ಪರಿಯನು ಎಲ್ಲ | ಅರಿತದ್ದೆ

ಕಾಣೊ ಮರೆ ಪರದೆ ಇಲ್ಲ | ಅರಿವನು ನಿನ್ನ ಗುರುವಿನ ಜನನ ಸುರ ರೊಡೆಯಾ

ಭಾಸ್ಕರ ದ್ಯುತಿನಾಮ ವಿಜಯ ವಿಠ್ಠಲಗೆ | ಶರಣೆಂದೆನ್ನದಲೆ ವರಲುವಾ ನಿತ್ಯಾ ||

 

||ಅಟ್ಟತಾಳ||

ಚರಿತೆ ಸುಳಾದಿ ಕವನಗಳ ವಿರಚಿಸಿ | ಗಿರಿರಾಜ ಮಹಾತ್ಮೈ ದೇವಶರ್ಮನ

ಕಥಾ | ಹರಿಹನುಮದ್ವೃತ ಚರಿತೆ ಕವಿತೆಗಳನು | ವಿರಚಿಸಿ ಕನ್ನಡಮ್ಮನ ಸೇವೆ

ಸಲ್ಲಿಸುತ | ಪರಣೇಶ ಮೊದಲಾದ ಹರಿದಾಸ ವಾಙ್ಮಯ ಹರುಷದಿ ಪ್ರಕಟಿಸಿ

ಧರೆಯೊಳು | ಹರಹೀದ | ಪರಮೋಪಕಾರವ ಮರೆಯರು ಸುಜನರು |

ಶರಧರ ಅಭಿನವ ಪ್ರಾಣೇಶವಿಠಲನ | ಚರಣವಾರಿಜ ಭೃಂಗ

ದೀನದಯಾಪಾಂಗ ||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026