ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಅ)

||ಜತೆ||

ಅದ್ವೈತ ಮತಾರಣ್ಯ ದಾವಾ ವ್ಯಾಸ ಶಿಷ್ಯ |

ಮಧ್ವಮುನಿ ವಿಜಯ ವಿಠಲನ ನಿಜದಾಸಾ ||

 

 

||ಮಟ್ಟತಾಳ||

ಅದ್ರಿಕುವರಿಲೋಲ ಕ್ಷುದ್ರದಿತಿಜಕಾಲ | ನಿದ್ರ ರಹಿತ ಖ್ಯಾತ ಭದ್ರ ಭಕುತಿದಾತ |

ಅದ್ರಿ ರಜತವಾಸ ಕದ್ರಿ ವೇಯಾ ಭೂಷಾ | ಭದ್ರ ಮೂರ್ತ್ಯಾಭಿನವ ಪ್ರಾಣೇಶ

ವಿಠಲನ | ಅದ್ರಿ ಭಕುತಿಯ ನೀಡು ಮಾದ್ರಿಜಾಗ್ರಜ ಗುರುವೇ ||

 

 

||ಜತೆ||

ಅಜನಾಮಭಿನವ ಪ್ರಾಣೇಶ ವಿಠಲನ |

ನಿಜ ದಾಸ ನೆಂದೆನಿಸು ಸುಜನ ಪೋಷಕಳೆ ||

 

 

||ಆದಿತಾಳ||

ಅಘಹರನಿಚ್ಛೆಯ ಬಗೆಯನು ಅರಿಯುತ | ಭೃಗುಪದ ಘಾತದ ನೆವದಿ ಅಗಲಿ

ಬಂದು | ಜಗದೊಳು ಕೊಲ್ಹಾಪುರದಲಿ ನೆಲೆಸಿದೆ | ನಗ ಪನ್ನಗನೊಳು

ಮೃಗನರನಿರುತಿರೆ | ಗಗನೇಶರಾಜನ ಮಗಳಾಗಿ ಜನಿಸಿದೆ | ನಿಗಮಾವತಿ

ಪದ್ಮಾವತಿ ಪರಿಣಯ | ನಗಧರ ಮದುವೆಯ ವಿಭವದಿ ಮಾಡಿಸಿ |

ಯುಗ ಎರಡೊಳಗಿತ್ತ ನುಡಿ ಪೂರೈಸಿದೆ | ಅಗಣಿತ ಮಹಿಮಳೆ ವಿಹಗವ ರೂಢಳೆ |

ಜಗಪತಿ ಅಭಿನವ ಪ್ರಾಣೇಶ ವಿಠ್ಠಲನ | ಹಗಲಿರುಳು ಸ್ಮರಿಪ ಭಾಗ್ಯವ

ನೀಡು ತಾಯೆ ||

 

 

||ಮಟ್ಟತಾಳ||

ಅಸುಪತಿ ಶ್ರೀಮಧ್ವಕಸವರ ಪೀಠಸ್ಥ | ವಸುಧೇಂದ್ರರ ಕರ ಬಿಸಜೋದ್ಭವನೀತ |

ವಸುಧಿಜಾಪತಿ ಪಾದನಿಶ ಧೇನಿಸುವಾತ | ಶ್ವಸನ ಮತದ ಯಶವ ದಶದಿಶ

ಪಸರಿಸಿದ ಅಸಮ ಮಹಿಮ ಗುರುವೆ ನತಜನ ಸುರತರುವೆ | ಋಷಭಾಭಿನವ

ಪ್ರಾಣೇಶವಿಠಲ ನಾಮಾ | ರಸನೇಂದ್ರಿಯದಲ್ಲಿ ಹಸನಾಗಿ ನಿಲ್ಲಿಸೋ ||

 

 

||ಅಟ್ಟತಾಳ||

ಅಜ ಸತ್ಯ ಲೋಕಾಧಿಪತ್ಯವನ್ನು ಮಾಡಿ ದಿಗ್ವಿಜಯ ಮಾಡಲು ಪುರಕೆ | ನಿಜ

ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಳರ

ನಾಳಿದಾ | ನಿಜ ವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯ ಸಾರಥಿ ಪಾದ 

ರಜದ ಮಹಾತ್ಮೆಯಿಂದ | ಗಜವೈರಿ ಭಂಜನ ವಿಜಯ ವಿಠಲನ್ನ ಭಜನೆಯ

ಗೈಯುತ ಬಹುಕಾಲದಿ | ಋಜುಗಣ ಪಂಕ್ತಿಯೊಳಗೆ ಕುಳಿತಾ | ನಿಜ ನಿರ್ಮಲ

ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮನವುಳ್ಳ | ಸುಜನ ಶಿರೋಮಣಿ

ವಾದಿರಾಜನು ತಾ | ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ | ಅಜಪದಕೆ

ಸಲ್ವನು ಲೇಶ ಸಂಶಯ ಬೇಡಿ | ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿ ||

 

||ಮಟ್ಟತಾಳ||

ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ | ಸರಸಿಜ ಗದೆ ಮುದ್ಗರ ಚಾಪ

ಮಾರ್ಗಣ | ವರ ಅಭಯ ಮುಸಲ ಪರಿ ಪರಿ ಆಯುಧವ | ಧರಿಸಿ ಮೆರೆವ

ಲಕುಮಿ ಸರಸಿಜ ಭವ ರುದ್ರ | ಸರುವ ದೇವತೆಗಳ ಕರುಣಾಪಾಂಗದಲ್ಲಿ |

ನಿರೀಕ್ಷಿಸಿ ಅವರವರ ಸ್ವರೂಪ ಸುಖವ ಕೊಡುವ | ಸಿರಿ ಭೂಮಿ ದುರ್ಗೆ

ಸರವೋತ್ತಮ ನಮ್ಮ ವಿಜಯ ವಿಠಲನಂಘ್ರಿ | ಪರಮ ಭಕುತಿಯಿಂದ ಸ್ಮರಿಸುವ 

ಜಗಜ್ಜನನಿ ||

 

||ಅಟ್ಟತಾಳ||

ಅನುಭವವಾದ ಮಾತನು ಪೇಳುವೆನು ಕೇಳಿ | ಮನಸ್ಸಿನ ಕೌಟಿಲ್ಯವನ್ನು

ಬಿಟ್ಟಾದರದಿಂದಾ | ಗುಣವಂತ ಗುರುದಯವನು ಪಡಿಯದೆ ಕೆಟ್ಟಾ | ಮನುಜ

ಜನ್ಮದಕ್ಕಿಂತ ಕತ್ತೆಯಾದರೆ ಲೇಸು | ಗುಣ ಪೂರ್ಣಗುರು ಬಾದರಾಯಣ ವಿಠಲ |

ಆತನ ಕಡೆ ನೋಡಾ ಆಕಡೆ ಸುಳಿದಾಡ ||

 

||ಆದಿತಾಳ||

ಅಸುರರ ಪುಣ್ಯವನ್ನು ಭಕುತರಿಗಿತ್ತವರ | ಅಸಮೀಚೀನ ಕರ್ಮ ದನುಜರಿ

ಗುಣಿಸುವಿ | ಈಶನೆ ಗತಿಯೆಂದು ನೆರೆನಂಬಿದವರಿಗೆ | ಸುಸಮೀಚೀನವಾದ

ಮೋದಗಳೀವಿ ನಿತ್ಯ | ವಸುಧಿಯ ಭಾರವನ್ನು ಧರಿಸಿ ತ್ರಿಕೋಟಿಯ |

ಸುಶರೀರಗಳಿಂದ ಬಹಿರಾವರಣದಲ್ಲಿ ವಾಸವಾಗಿ | ಸಕಲ ಭೂತ ಹೃತ್ಕಮಲದಲಿ

ನಿಂದು | ಬಿಸಜಜಾಂಡವನ್ನು ಪೊರೆವ ಕರುಣಿ ನೀನು | ಅಸಮನೆನಿಪ ಗುರು

ವಿಜಯ ವಿಠ್ಠಲರೇಯ | ವಶನಾಗುವನು ನಿನ್ನ ಕರುಣದಿ ಆವಕಾಲ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022