ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಆ)

||ಅಟ್ಟತಾಳ||

ಆರುಮೊಗನ ಪೆತ್ತ ಚಾರು ಚರಿತ್ರನೆ | ಮೂರಧಿಕ ಶಾರೀರ ವರ್ಣನೆ 

ಧಾರುಣಿಯೊಳು ಲಿಂಗಾಕಾರದಿ ಪೂಜ್ಯನೆ | ಘೋರ ನಿಸ್ಸಾರ ಸಂಸಾರದೊಳಗೆ

ಬಿದ್ದು | ಆರೆಂಟು ಅರಿಗಳ ಮೀರಿದೆ ಉಪಟಳ | ಆರಲಾರೆನು ದೇವಾ

ಪಾರುಗಾಣಿಸು ಭವ | ಮಾರ ಶರವ ಹರಿ ಮಾರದೇವನ ವೈರಿ | ಈರ ಪಿತನಭಿನವ 

ಪ್ರಾಣೇಶ ವಿಠಲನ | ಚಾರು ದಾಸ್ಯವನೀಯೋ ಶಿವ ಮಹಾದೇವ ||

 

 

||ಆದಿತಾಳ||

ಆವಾವ ಜನ್ಮದಲಿ ಅರ್ಚಿಸಿದೆನೋ ನಿನ್ನ | ಆವಾವ ಕಾಲದಲ್ಲಿ ಅನುಗ್ರಹಿಸಿದ

ವರವು | ಈ ವಿದ್ಯಮಾನವಾದ ಜನುಮದಲೊಮ್ಮೆಗನ್ನ | ದೇವಿಯೇ ನಿನ್ನ ಪಾದ

ಸಾರಿದವನಲ್ಲ | ಗೋವತ್ಸನ್ಯಾಯದಿಂದ ನಿನಗೆ ನೀನು ಬಂದು | ಆವದು ಬೇಡಿದ

ವರಗಳ ನೀವೆನೆಂದು | ಸುವಾಣಿಯಿಂದ ಎನ್ನ ಆವರಿಸಿದ ನಿನ್ನ | ಔದಾರ್ಯ

ತನಕಿನ್ನು ಆವದಾವದು ಸಮ | ಶ್ರೀವತ್ಸಲಾಂಛನ ಗುರು ವಿಜಯ ವಿಠ್ಠಲನ್ನ |

ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ||

 

 

||ಧೃವತಾಳ||

ಆನಂದ ಪರಿಪೂರ್ಣ | ಶ್ರೀರಂಗನೊಲಿಸಿದ ಮಾನವಿ ರಾಯರ ಶಿಷ್ಯೋತ್ತಮರಾದ

ಮೌನಿ ಶ್ರೀ ಪ್ರಾಣೇಶದಾಸರ ಪ್ರಪೌತ್ರ | ಮಾನಿನಿ ಭಾರತಾಂಬ

ವಿಜಯರಾಯರ ಪುತ್ರ | ಜ್ಞಾನಿ ಕೋಸಿಗಿ ಪ್ರಭುಗುರುಜಗನ್ನಾಥ ಛಾತ್ರ |

ಮೌನಿಸುಗುರು ವರದೇಂದ್ರ ಚರಣಾರ್ಚಕ | ಜಾನಕೀಶ ಅಭಿನವ ಪ್ರಾಣೇಶ

ವಿಠಲನ | ಸಾನುರಾಗದಿ ಪಡೆದ ದಾಸ ಆನಂದ ||

 

 

||ಆದಿತಾಳ||

ಆ ಮಹಾಮದದಿಂದ ಭ್ರಾಮಕ ತ್ರಯದಿಂದ | ಸೀಮೆ ಗಾಣದ ಲೋಭ 

ಮತ್ಸರದಂಭದಿಂದ | ತಾಮಸಿವರನಾದ ಪಾಮರ ನಾನಯ್ಯ | ಭಾಮಾ ಕಾಂಚನ 

ಮೇಣ್ ಭೂಮಿಯ ಚಿಂತನ | ಯಾಮ ದಿವಸ ಕಾಲ ಹೋಮವಾಯಿತು ಸ್ವಾಮಿ |

ಭೀಮ ಪ್ರಿಯಭಿನವ ಪ್ರಾಣೇಶ ವಿಠಲನ | ನೇಮದಲರ್ಚಿಪ ಧೀಮಂತ ನತಿ 

ಶಾಂತನೆ ||

 

||ತ್ರಿವಿಡಿತಾಳ||

ಆರುಮೊಗನ ಪೆತ್ತ ಚಾರು ಚರಿತ್ರಳೆ | ವಾರಣಾರಿ ವೃಷಿಭ ಶ್ಯಂದನಳೆ | ಶ್ರೀರಜ

ಪತಿ ರಾಮ ನಾಮ ಮಂತ್ರವ ಜಪಿಸಿ | ಸರ್ವಮಂಗಳೆಯಾದ ಶರ್ವಾಣಿಯೆ

ನಾರಿಯರಾಭಿಷ್ಟ ಪೂರೈಸುತವರಿಗೆ | ವೀರಪತಿವ್ರತಧರ್ಮ ಮರ್ಮವ ತೋರ್ದ |

ವಾರಿಜನಯನೆ ಮಂಗಳ ಗೌರಿಯೇ | ಮಾರಮಣಭಿನವ ಪ್ರಾಣೇಶ ವಿಠಲನ |

ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022