ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಇ)

||ಅಟ್ಟತಾಳ||

ಇಪ್ಪತ್ತು ಒಂದು ಕುಭಾಷ್ಯವ ರಚಿಸಿರೆ ಒಪ್ಪದಿಂದಲಿ ಗೆದ್ದು ಅವರವರ ಮಹಾ |

ದರ್ಪವ ತಗ್ಗಿಸಿ ದಶ ದಿಕ್ಕು ಪೊಗಿಸಿ ಕಂ | ದರ್ಪ ಜನಕನು ಸ್ವತಂತ್ರ ಗುಣ ಪೂರ್ಣ

ಅಪ್ಪಾರ ಮಹಿಮನು ಸಾಕಾರ ಸತ್ಪುರುಷ | ತಪ್ಪದೆ ತ್ರಿಲೋಕಕ್ಕೊಡೆಯ

ಜಗಜ್ಜೀವ | ನಪ್ಪನು ಸರ್ವಾಂತರಂಗದೊಳಗೆ ಬಿಡ | ದಿಪ್ಪ ವಿಶ್ವಮೂರುತಿ

ವಿಲಕ್ಷಣರೂಪ | ಸರ್ಪಶಯನ ನಮ್ಮ ವಿಜಯ ವಿಠಲರೇಯ | ಮುಪ್ಪಿಲ್ಲದ ದೈವ

ಅಜಭವ ಸುರವಂದ್ಯಾ ||

 

 

||ತ್ರಿವಿಡಿತಾಳ||

ಇವರ ಸಂದರುಶನ ಭವಬಂಧ ಮೋಚನಾ | ಇವರ ಚರಣಧ್ಯಾನ ಗಂಗಾ ಸ್ನಾನ |

ಇವರನ್ನ ಸಾರಿದರೆ ಜವನ ನಂಜಿಕೆಯಿಲ್ಲ | ಇವರ ಕವನ ಸ್ತವನ ಶ್ರವಣದಿಂದಾ |

ಪವನ ಸಚ್ಛಾಸ್ತ್ರದ ಪ್ರವಚನ ಫಲವಕ್ಕು | ಇವರಿಂದ ಸ್ಥಳ ಕಾಶಿ ರಾಮೇಶ್ವರಾ|

ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು | ಇವರಂದ ವಚನವ ನಡೆಸುವರೂ |

ಇವರಿಲ್ಲಿರಲು ಬಿಟ್ಟು ಅವನಿಸುತ್ತಿದರವಗೆ | ಲವಲೇಶವಾದರೂ ಪುಣ್ಯವಿಲ್ಲಾ |

ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು | ತವಕದಿ ಕರಪಿಡಿದು ಸಲಹುವ

ಸಂತತಾ |

 

 

||ಧೃವತಾಳ||

ಇಂದು ಮುಖಿಯೆ ನಿನ್ನ ಸಂದರುಶನದಿಂದಾ | ನಂದವಾಯಿತು ಅರವಿಂದ ನಯನೆ |

ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ | ಸುಂದರವಾದ ರೂಪದಿಂದ ಬಂದು |

ಮಂದಹಾಸದಿಂದ ಮಾತನಾಡಿದರಿಂದ | ಬೆಂದು ಪೋದವೆನ್ನ ತ್ರಿವಿಧ ತಾಪ |

ಇಂದಿರೆ ಈ ರೂಪದಿಂದ ತೋರಿದಳು | ಬಂಧುವೆನಿಪ ಲೋಕ ಗುರು ಸತಿಯೊ |

ಕಂದುಕಂಧರ ನಾದ ದೇವನ್ನ ರಾಣಿಯೊ | ಇಂದ್ರಾಣಿ ಮೊದಲಾದಿ

ಜನರೋರ್ವಳೊ | ಮಂದಾಕಿನಿಯೊ ಇದರೊಳೊಂದರಿಯೆ ಕರುಣ | ಸಿಂಧುವೆ

ನಿನ್ನ ಪದಕೆ ನಮೋ ನಮೋ | ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು |

ಪೊಂದಿಪ್ಪ ಕಾರಣದಿಂದ ನಿನ್ನ | ಅಂದವಾದ ರೂಪ ಕ್ರಿಯೆಗಳನ್ನು ತಿಳಿದು | ವಂದಿಸಿ

ವರಗಳ ಬೇಡಲಿಲ್ಲ | ಇಂದಿರೆ ರಮಣನ ಬಂಧಕ ಶಕುತಿಯು | ಮಂದನಾದವ

ನಾನು ಮೀರುವನೇ | ಕಂದನ ಅಪರಾಧ ವೆಣಿಸದಲೆ ನೀನು | ಅಂದವಚನವನ್ನು

ಸತ್ಯಮಾಡಿ | ಬಂಧು ನೆನಿಸಿಕೊಂಬ ಗುರು ವಿಜಯ ವಿಠ್ಠಲನ್ನ |

ಎಂದೆಂದಗಲದಲಿಪ್ಪ ವರವನೀಡು ||

 

||ಮಟ್ಟತಾಳ||

ಇದೇ ವೈಕುಂಠಾ ಇದೇ ಶ್ವೇತದ್ವೀಪಾ | ಇದೇ ಅನಂತಾಸನ ಇದೇ ಗೋಕುಲವು |

ಇದೇ ವೃಂದಾವನ ಇದೇ ದ್ವಾರಾವತಿ | ಇದೇ ನಮ್ಮಾ ಯದುಪತಿ ಇಪ್ಪ ನಗರ |

ಇದೇ ನಮ್ಮ ತಿರುಮಲಾ ವಿಜಯವಿಠಲ ನಿಪ್ಪಾ ಸಂಭ್ರಮವೋ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022