ಸುಳಾದಿ (ಈ)
||ಆದಿತಾಳ||
ಈತನ ಸೇವಿಸಲು ಪಾತಕಗಳಳಿವವು | ಭೂತಪ್ರೇತ ಪಿಶಾಚಾದಿಗಳು ಪೋಪವು |
ಈತನ ಸೇವನೆಯಿಂದ ಜ್ಞಾನ ಸಂತಾನವಕ್ಕು | ಈತನ ಪಾದೋದಕದಿಂದ ರೋಗ
ಪರಿಹಾರ | ಈತನ ಪ್ರಸಾದದಿಂದ ಗಾತರ ಪುನಿತವಯ್ಯ | ಈತನ ನಂಬಿದ
ಮನುಜನು ಪಡೆವಾಭಿಷ್ಟ | ಈತನಲ್ಲಿಗೆ ಬಾರದಾತನೆ ಮಹಾ ಭ್ರಷ್ಟ | ಸೋತುಮ
ಗುರುವೆಂದು ಆತುಮ ಸಮರ್ಪಿಸಲು | ಪ್ರೀತಿಯಿಂದಲವನ ಕರ
ಪಿಡಿದುದ್ಧರಿಸುವ | ಜಾತರೂಪ ಸಮಭಾಂಗ ಪಾತಕಾರಿ ವಾತದೂತ |
ಭೂತಳದೊಳಗೆ ಯತಿನಾಥ ರಾಘವೇಂದ್ರ ಪ್ರೀತ | ಭೂತ ಭಾವನಾಭಿನವ
ಪ್ರಾಣೇಶವಿಠಲನ | ಮಾತು ಮಾತಿಗೆ ನೆನೆವಾತುರ ಮತಿಯನೀಯೋ ||
||ಆದಿತಾಳ||
ಈತನ ಭಜಿಸಲು ಯಾತನೆಗಳು ಇಲ್ಲ | ಈತನ ಸೇರಲು ಯಾತರ ಭೀತಿಯು |
ಈತನ ಹೊರೆತಿನ್ನು ದಾತರು ನಮಗಿಲ್ಲ | ಈತನೆ ರಕ್ಷಕ ಈತನೆ ತಾಯಿ ತಂದೆ |
ಈತನೆ ಸದ್ಗುರು ಈತನೆ ಗತಿಪ್ರದ | ಈತನೆ ಮೂಕಗೆ ಮಾತು ನುಡಿಸಿದಾತ |
ಈತನ ಭಕ್ತಿಗೆ ಸೋತು ಎರಡು ವ್ಯಾಳೆ | ವಾತಾಂತರ್ಗತ ನಮ್ಮ ಶ್ಯಾಮಸುಂದರ
ವಿಠಲ | ಪ್ರೀತಿಯಿಂದಿವರಿಗೆ ಮೃಷ್ಟಾನ್ನವುಣಿಸಿದ ||
||ಜತೆ||
ಈ ಮಹಾಮಹಿಮರ ಪ್ರೇಮ ಪಡೆವರನ್ನ |
ಶ್ಯಾಮ ಸುಂದರ ವಿಠಲ ಸ್ವಾಮಿ ಸತತ ಪೊರೆವ ||
||ಜತೆ||
ಈಸು ಪದಗಳನೊಮ್ಮೆ ನೆನಸಿದ ಮನುಜನ್ನ |
ದಾಸರ ಪೊರೆದಂತೆ ಪೊರೆವ ವಿಜಯ ವಿಠ್ಠಲ ||