ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಹ)

||ಅಟ್ಟತಾಳ||

ಹರಿಸರ್ವೋತ್ತುಮನೆಂಬ ಸ್ಥಿರವಾದ ಜ್ಞಾನವ | ಕರುಣಿಸು ಕರುಣಿಸು ಶೆರಗೊಡ್ಡಿ

ಬೇಡುವೆ | ದುರುಳ ದಾನವರಂತೆ ಪರಮೇಶ ಶಿವನೆಂದು | ಪೆರಧರ ಪರನೆಂದು

ನುಡಿಸದಿರೆಂದೆಂದು | ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |

ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ | ಸಿರಿವರ ಅಭಿನವ ಪ್ರಾಣೇಶ

ವಿಠಲನ | ಚರಣವಾರಿಜ ಭೃಂಗೆ ದೀನ ದಯಾಪಾಂಗೆ ||

 

||ಆದಿತಾಳ||

ಹರಿಸರ್ವೋತ್ತಮನೆಂಬ ಸ್ಥಿರಜ್ಞಾನವಿರಲಮ್ಮ | ಮರುತ ಜೀವೋತ್ತಮನೆಂಬ

ಬುದ್ಧಿಯಿರಲಮ್ಮ | ಹರ ತಾರಕ ಗುರುವೆಂಬ ಮತಿಯಿರಲಮ್ಮ |

ಗುರು ಮಧ್ವಮತದಲ್ಲಿ ದೃಢ ಭಕ್ತಿಯಿರಲಮ್ಮ | ಸಿರಿಯರಸಭಿನವ ಪ್ರಾಣೇಶ 

ವಿಠಲನ್ನ | ಹಿರಿಯ ಸೊಸೆಯೇ ನಿನ್ನ ಕರುಣವಿರಲಮ್ಮ ||

 

||ತ್ರಿವಿಡಿತಾಳ||

ಹುಟ್ಟಿದನು ವಾಸುದೇವ ನೆಂಬೊ ನಾಮದಲಿ | ಸೃಷ್ಟಿಗೆ ಮಧ್ವಮುನಿ

ಎನಿಸಿಕೊಂಡು | ಕುಟ್ಟಿದಾನದ್ವೈತಮತ ಕೋಲಾಹಲಮಾಡಿ | ವೈಷ್ಣವ ಮತವನು

ಉದ್ಧರಿಸೀ | ವಿಷ್ಣು ಸರ್ವೋತ್ತಮ ನಹುದೆಂದು ಸ್ಥಾಪಿಸಿ | ಶಿಷ್ಟರಿಗೆ ವೇದ ಸುಧೆಯ 

ಗರೆದೂ | ವೈಷ್ಣವಾಚಾರ್ಯರ ಮತವಿಡಿದು ಬದುಕೋದು | ಪುಷ್ಟಿನಾಮ ವಿಜಯ

ವಿಠ್ಠಲಗೆ ಬಲು ಪ್ರೀತಿ ||

 

||ಆದಿತಾಳ||

ಹನುಮಾವತಾರಕೆ ಕಾಲಯಮ ಎನಿಸಿದಾ | ಮಣಿಮಾನಾಸುರನಾದಾ

ಭೀಮಾವತಾರಕ್ಕೆ | ಮುನಿ ಮಧ್ವರಾಯನಾಗೆ ಭಣಗು ಸಂಕರಾನಾದ |

ಜನಿಸಿದನು ವೈರವನ್ನು ಜನುಮ ಮೂರರಲ್ಲಿ ಬಿಡದೆ | ಅನಿಲ ದೇವನ ಕೂಡ

ಶೆಣಿಸಿ ಸಂಕಟ ಬಟ್ಟು | ಅನುವ ಕಾಣದಲೆ ತಮಸಿನಲ್ಲೀಗ ಬಳಲುತಿಪ್ಪಾ |

ಫಣಿನಾಮ ವಿಜಯ ವಿಠ್ಠಲ ಹನುಮನ ಮತದಂತೆ | ಮನುಜೋತ್ತಮ

ಕಡೆಮೊದಲು ಮನದಂತೆ ಫಲವೀವಾ ||

 

||ಮಟ್ಟತಾಳ||

ಹರಿ ಹೃನ್ಮಂದಿರಳೆ ಹರಿ ಚರಣಾರ್ಚಕಳೆ | ಅರಿಧರ ಗದ ಪದ್ಮ ಆಯುಧ ಆಭರಣ |

ವರ ಚಾಮರ ವ್ಯಜನ ಸತ್ತಿಗೆ | ಪರಿಯಾಂಕಾಂಬರ ಸದ್ಮಗಳಾಗಿ ಪ್ರಾಂತದಲ್ಲಿ ನೆಲೆಸಿ |

ನಿರುತದಿ ಶ್ರೀಹರಿಯ ಪರಿಚರ್ಯವ ಮಾಳ್ಪ | ಸಿರಿದೇವಿಯೆ ನಿನ್ನ

ಧನ್ಯತೆಗೆಣೆಗಾಣೆ | ಅರಿಧರ ಅಭಿನವ ಪ್ರಾಣೇಶವಿಠಲನ | ಚರಣದೂಳಿಗವಿತ್ತು

ಪರಿಪಾಲಿಸಮ್ಮ ||

 

||ತಾಳ ಝಂಪೆ||

ಹರಿಯೆ ಸರ್ವೋತ್ತಮ ಸಾಕಾರ ಸ್ವಾತಂತ್ರ | ಪರಿಪೂರ್ಣ ಆನಂದ ಗಿರಿರಾಜ

ಗೋವಿಂದ | ಹರಿಶಯನ ಹರಿವಾಹ ಹರಿಯಾಸ್ಯನರದೇಹ | ಹರಿಜಾತರಕ್ಷಕ

ಹರಿಜಾತ ಶಿಕ್ಷಕ | ಹರಿಕಾಲಿಮರ್ದನ ಧರಗೋವರ್ಧನ | ಹರಿಪದಧುನಿಪೆತ್ತತಿರಿ

ವಿಕ್ರಮ | ಸಿರಿವಿಧಿ ಭವಮುಖ ಸುರಕರಪೂಜಿತ | ಹರಿನಿಭಾಂಗನೆ ದೇವ

ಹರಿಜಾಧವ | ಕರುಣಾಸಾಗರ ನಿನ್ನ ಸ್ಮರಣೆ ಮಾತ್ರದಿ ಸಕಲ | ದುರಿತಪರಿಹಾರವು

ಸತ್ಯಸತ್ಯ | ಕರಿರಾಜ ದ್ರೌಪದಿ ಧರಿಸುರಜಾಮಿಳ | ತರಳ ಪ್ರಹ್ಲಾದ ಧ್ರುವರಿದಕೆ ಸಾಕ್ಷಿ

ಕರಕರಿಸಂಸಾರ ಶರಧಿಯೊಳಗೆ ಬಿದ್ದು | ವರಲುತ್ತಿರುವೆ ಭವತರಣಿದೇವ | ಕರುಣಿ

ನಿನ್ನಯ ಪಾದ ರಜಪೊಂದಿರುವೆನು | ಕರವ ಪಿಡಿವುದಯ್ಯ ಬರಮನಯ್ಯಾ |

ಶರಣಜನಮಂದಾರ ಮರುತಹೃನ್ಮಂದಿರ ಸಿರಿಯಭಿನವಪ್ರಾಣೇಶವಿಠಲ ಪಾಹಿ ||

 

 

||ತಾಳ ತ್ರಿವಿಡಿ||

ಹರಿಚರಗಿರಿಧರ ಹರಿಯಾಕ್ಷಸಂಹರ | ಹರಿಶಯನಾಸುರಕಾಲ ತರಳಪಾಲ |

ಹರಿಹಯಾವರಜನೆ ಪರಶುಧರನೆ ರಾಮ | ಹರಿವಂಶ ಪ್ರಖ್ಯಾತ ರಘುರಾಮನೆ |

ಹರಿಸುತಗೊಲಿದು ಗೀತಾಮೃತವುಣಿಸದೆ | ತಿರಿಪುರಾಸುರರಘ್ನ ಬುದ್ಧ ದೇವ |

ತುರಗವೇರಿ ಸರ್ವದುರುಳರ ಹರಿಸಿದ | ಧುರಧೀರಗಂಭೀರ ಕಲ್ಕಿದೇವ |

ಶರಣರಿಗೋಸುಗ ಹತ್ತಾವತಾರವ | ಧರಿಸಿದೆಯಭಿನವಪ್ರಾಣೇಶವಿಠಲ ||

 

 

||ತ್ರಿವಿಡಿತಾಳ||

ಹರಿಯ ಪಾದಕ್ಕೆರಗಿ ವರ ಪ್ರಹ್ಲಾದನು | ಎರಡೊಂದು ಮಾರ್ಗದಲ್ಲಿ ಕೃಷ್ಣನ

ಮೂರುತಿಯ | ಪರಿ ಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು | ಸುರಮುನಿಗೆರಗಿ

ನಿಂದಿರಲಾಗಿ ನಾರದ | ಕರುಣದಿಂದಲಿ ಉತ್ತರವ ಪೇಳಿದನಾನೀ | ಧರೆಯೊಳು

ಜನಿಸುವ ವರವ ಪಡೆದು ಇಪ್ಪೆ | ಪರಮ ಭಾಗವತರ ವರ ಮಣಿಯೆ ನೀನು

ಧಾರುಣಿಯೊಳಗವತರಿಸಿ ಅಧಿಕವಾದ | ಮರುತ ಮತದೊಳಗೆ ಚರಿಸಿ ಕೃಷ್ಣನ

ಪೂಜೆ | ನಿರುತ ಬಿಡದೆ ಮಾಡಿ ಹರುಷಬಡೆಂದೆನಲು ಕರುಣ ವಾರಿಧಿ ನರಹರಿ

ವಿಜಯ ವಿಠಲನ್ನ | ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ ||

 

||ಮಟ್ಟತಾಳ||

ಹರಿಯೆ ಗುಣಶೂನ್ಯ ಹರಿಯೆ ನಿರಾಕಾರ | ಹರಿಯು ಧೊರೆಯು ಅಲ್ಲ ಹರಿ

ಪರತಂತ್ರ | ಹರಿಯು ದುರ್ಬಲನು ಹರಿಗೆ ಎಂಟು ಗುಣ | ಹರಿಯು ತಾನೆಂದು

ತಾರತಮ್ಯವೆನದೆ | ಧರೆಯೆಲ್ಲ ಮಿಥ್ಯಾ ಪರಿ ಪರಿ ಕರ್ಮಗಳು | ಹರಿತಾನೇ ಪುಟ್ಟಿ

ಚರಿಸುವ ಲೀಲೆಯಲಿ | ನರ ನಾನಾ ಜನ್ಮ ಧರಿಸಿ ತೋರುವನೆಂದು | ದುರುಳ

ದುರ್ಮತದವರು ಸರಿ ಸರಿ ಬಂದಂತೆ | ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ |

ತಿರುಗುತಿರೆ ಇತ್ತ ಸುರರು ಕಳವಳಿಸಿ | ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು

ಮರುತ ದೇವನೆ ಅವತರಿಸಿದ ಹರುಷದಲ್ಲಿ | ಕರುಣಾಕರ ಮೂರ್ತಿ ವಿಜಯ 

ವಿಠಲರೇಯ | ಪರನೆಂದು ಸಾರಿ ಧರೆಯೊಳಗೆ ಮೆರೆದಾ ||

 

 

||ಮಟ್ಟತಾಳ||

ಹರಸೂರಿಗೆ ಬಂದು ದಾಸಗೃಹದಿ ನಿಂತು | ಗುರುಗಳ ಸೇವಿಸುತ ಓದು ಬರಹ

ಕಲಿತು | ಸರಸ್ವತಿಯನು ಒಲಿಸಿ ನ್ಯಾಯವಾದಿ ಎನಿಸಿ | ಕಾರ್ಯಕುಶಲನೆನಿಸಿ

ಭರದಿ ಧನವ ಗಳಿಸಿ | ಭರತಖಂಡ ಚರಿಸಿ ಸರ್ವತೀರ್ಥಕ್ಷೇತ್ರ |

ಹರಕಾಶಿ ಮುಖ್ಯ ರಾಮೇಶ್ವರ ಯಾತ್ರೆ | ತಿರುಪತಿ ಶ್ರೀ ಉಡುಪಿ

ಯಾತ್ರೆಗಳನು ಮುಗಿಸಿ | ತಿರುಗಿ ಬಂದು ಪುರಕೆ ಗುರುಗಳ ಸನಿಹದಲಿ |

ಶಿರಿವರ ಅಭಿನವ ಪ್ರಾಣೇಶ ವಿಠಲನ | ಕರುಣದಿಂದಿರುತಿರ್ದ

ಹನುಮಂತರಾಯ ||

 

||ತ್ರಿವಿಡಿತಾಳ||

ಹರಿದಾಸ ಕೋಸಗಿ ಗುರು ಜಗನ್ನಾಥರ | ಚರಣ ಕಮಲಗಳನು ಸೇವಿಸಿ |

ಹರಿಯಾಂಕಿತ ಸುಂದರವಿಠಲನೆಂದು | ಗುರುತು ಪಡೆದು ಹರಿದಾಸನೆನಿಸಿ |

ಹರಿ ವಾಯು ಗುರುಗಳ ತುತಿಗಳ ರಚಿಸುತ್ತಾ | ಹರುಷದಿ ತುತಿಸಿ | ಭಜಿಸಿ

ನರ್ತಿಸಿ | ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ | ಶರಧಿ ನಾವಿಕನಾಗಿ

ಶ್ರಮವಹಿಸಿ | ಭರದಿಂದ ಸಾಹಿತ್ಯ ಅಣಿಮುತ್ತು ತೆಗೆಯುತ್ತ |

ಧರಿಸುರ ಸುಜನಕೆ ಹರುಷಗರೆದೆ | ಹರಿನಾಮ ಅಭಿನವ ಪ್ರಾಣೇಶ

ವಿಠಲನ ಕರುಣದಿಂ ಹರಿದಾಸ ಚರಿತೆ ಪಸರಿಸಿದೆ ||

 

||ತ್ರಿವಿಡಿತಾಳ||

ಹರಿದಾಸಸಾಹಿತ್ಯ ವಾಙ್ಮಯ ಬೆಳಸಿದ | ಕರ್ನಾಟಕ ಮಾತೆಯ ಅಚ್ಚು ಮೆಚ್ಚಿನ

ಪುತ್ರ | ದರಹಸಿತಾನಂದ ಭರಿತ ವಕ್ತ್ರ | ಸರಸ ಕವನಗಳ ಪದ್ಯ ಸುಳಾದಿಗಳ |

ಸರಸಯಮಕ ಪ್ರಾಸ ಬಂಧುರ ಪದಗಳ | ಚರಿತೆಯುಗಾಭೋಗ ಕನ್ನಡ ಸಾಂಗತ್ಯ |

ವಿರಚಿಸಿ ಸುಜನಕೆ ಹರುಷವಗರೆದ | ಗುರುವರ ನಿಮ್ಮಯ ಉಪಕಾರ ಸುಜನರು |

ಮರೆಯರು ಮರೆಯರು ಕರುಣಾರ್ಣವ | ಶಿರಿವರ ಅಭಿನವ ಪ್ರಾಣೇಶ ವಿಠಲನ |

ಚರಣ ಸರಸಿಜಭೃಂಗ ದೀನದಯಾಪಾಂಗ ||

 

 

||ಧೃವತಾಳ||

ಹರಿದಾಸ ಹರಿಪದ ಹರಸೂರಯಾಮೀರ | ಹರಿದಾಸ ಕುಲರತ್ನ

ಪ್ರಾಣೇಶದಾಸಾರ್ಯ | ವರಪುತ್ರ ಸುಚರಿತ್ರ ಧರಿನಾಥ ದಾಸ ಛಾತ್ರ | ವರದೇಂದ್ರ

ಯತಿಗಳ ಚರಣಾರ್ಚಕ | ಅರಿಷಡ್ ವರ್ಗವಿರಾಮ ಗುರುಭಕ್ತಿ ನಿಸ್ಸೀಮ |

ಹರಿದಾಸ ಪ್ರಾಣೇಶ ಚರಣಾಬ್ಜ ಮಧುಕರ | ಹರಿದಾಸ ರಾಘವ ಮನಮಂದಿರ |

ನರಹರಿ ಅಭಿನವ ಪ್ರಾಣೇಶ ವಿಠಲನ | ಚರಣದೊಲುಮೆಯ ಗಳಿಸಿ ಮೆರೆದ

ದಾಸಾರ್ಯ ||

 

 

||ತ್ರಿವಿಡಿತಾಳ||

ಹಿರಿಯರಪ್ಪಣೆಯಂತೆ ಮಾನವಿರಾಯರ | ಚರಣ ಕಮಲಗಳ ಯಜಿಸಿ ಭಜಿಸಿ |

ಹರುಷದಿಂದೆರಡಾರು ವತ್ಸರ ಪರ್ಯಂತ ಗುರುಗಳ ಸೇವಿಸಿ ಒಲುಮೆಗಳಿಸಿ |

ಮರುತಾಗಮಗಳ ಸರ್ವಮೂಲಗಳ | ಹರಿಭಾಗವತಗಳ ಧರ್ಮಗಳಾ |

ಹರುಷದಿಂ ಪಠಿಸುತ ಮರ್ಮಗಳರಿಯುತ | ಗುರುಗಳ ಕರುಣದಿ ವಿಜ್ಞಾನಿ

ಎನಿಸುತ | ಧರೆಯೊಳು ವಿಭವದಿ ಮೆರೆದ ಧೀರಾ | ಗುರುಗಳಣತಿಯಂತೆ ಮರಳಿ

ಪುರಕೆ ಬಂದು | ಹಿರಿಯರಿಂದ ಹರಿದಾಸ್ಯ ಪಡೆದು | ಹರಿಯಾಂಕಿತ ಗುರು

ಪ್ರಾಣೇಶ ವಿಠಲನೆಂದು ಹರಿದಾಸ ಹರಿವಿಷ್ಟರದಿ ರಾಜಿಸಿ | ಸರಸ ಕವನಗಳ

ವಿರಚಿಸಿ | ಹರಿವಾಯು ಗುರುಗಳ ತುತಿಸಿ ಭಜಿಸಿ ನರ್ತಿಸಿ | ಗುರು ವರದೇಂದ್ರರ 

ಚರಣ ಸುಮಾರ್ಚಿಸಿ | ದರುಶನ ಪಡೆದ ಶ್ರೀ ಗುರುಸೇವಕನೆ ಹರಿನಾಮಾ

ಅಭಿನವ ಪ್ರಾಣೇಶ ವಿಠಲನ | ಚರಣಾರಾಧಕ ಗುರು ಪ್ರಾಣೇಶಾರ್ಯ ||

 

||ಧೃವತಾಳ||

ಹರಿದಾಸ ಚತುಷ್ಟಯ ಪುರುಷ ತೃತೀಯರಾದ | ತುರುಪಾಲ ದಾಸರ ಚರಿತೆ

ತಿಳಿದಷ್ಟು ಬರೆಯುವೆ | ಶಿರಿ ಹರಿ ಮರುತರ ದಯದಿಂದ | ಗುರು ವರದೇಂದ್ರರ

ಪರಮಾನುಗ್ರಹದಿಂದ | ವರದೇಶದಾಸರ ಕರುಣದಿಂದ | ಮುರಹರನಾಜ್ಞದಿ ಕರಿ

ಕಂಧರಿಯೊಳು | ಪುರ ದಧಿಶಿಲೆಯಲ್ಲಿ ಪುಟ್ಟಿ | ಪೆರೆ ಶುಕ್ಲನಂತೆ ಬೆಳೆದ ಭಾಗಣ್ಣನು |

ದುರುಳ ಭಾಗದೇಯಾರು ಚರಚರಾಸ್ತಿ ಯನಪ | ಹರಿಸಿ ದೂಡಲು ಬಂದು

ಸಂಕಾಪುರದಿ | ಮರುತದೇವನ ಆಶ್ರಯದಲ್ಲಿ ನೆಲೆಸಿಹ | ಶಿರಿವರ ಅಭಿನವ

ಪ್ರಾಣೇಶ ವಿಠಲನ ದಯದಿ ||

 

 

||ಅಟ್ಟತಾಳ||

ಹರಿದಾಸರು ನಿತ್ಯ ಹರಿ ಮತ ದರ್ಶನ | ಪ್ರಮೇಯ ಪ್ರಮಾಣ ವಾಕ್ಯಗಳೆಲ್ಲವ |

ಸರಸವಾದ ಕನ್ನಡ ನುಡಿಯಲ್ಲಿ ಪದ್ಯ | ವರ ಸುಳಾದಿಗಳಿಂದ ಅರುಹುತ ಸಂತತ |

ಪರಮ ಭಾಗವತ ಧರ್ಮವ ಬೀರುತ್ತ | ಹರಿದಾಸ್ಯ ಪಥವನ್ನು ತೋರುತ್ತ ಸಾರುತ್ತ |

ಹರಿಕಥಾ ರಸ ಸುಧೆ ಸುರಿಸಿ ಭೂಸುರ ಪಾ | ಮರ ಜನರಿಗೆ ಗೈದ

ಉಪಕಾರಾಕ್ಕೆಣೆಗಾಣೆ | ಭರತ ಖಂಡವನೆಲ್ಲಾ ಚರಿಸಿ ಅನತರನು | ದ್ಧರಿಸಿದ

ಕರುಣಾಳು ಗೋಪಾಲದಾಸರೇ | ಶರಣೆಂಬೆ ಶರಣೆಂಬೆ ನಿಮ್ಮಯ ಚರಣಕ್ಕೆ |

ತುರುಪಾಲದಾಸರ ಹರಿಕಥಾಸಮಯದಿ ಪರಿಸರದೇವನು ತರುಚರ ರೂಪದಿ |

ವರರೌಪ್ಯ ಪೀಠದಿ ಶೋಭಿಪ ನಿತ್ಯದಿ | ಧರಿಸುರ ರೈಜಿಯರೊಮ್ಮೆ ಕಂಡಿರುವರು |

ತಿರಲಿಂಗ ದೇಶದ ಮಾಯಿಯ ಜೈಸಿದ | ನರತುತಿ ಮಾಡದಿರಿ ಎಂದುಹೇಳಿ ಕಳಿಸಿದ |

ಗುರುಗಳ ವಿಜಯರ ಚರಣಾರಾಧನೆಯಿಂದ ಉರಗ ಪರ್ವತದಲ್ಲಿ ಧರಿನಾಥರಿಗೆ

ತಮ್ಮ | ಶರಕರಿ ವತ್ಸರ ಆಯುಷ್ಯವೆರೆದರು | ಪರಮ ಸುತ್ಯಾಗಕ್ಕೆ ಕರ್ಣ ತಲೆ

ಬಾಗಿದ | ತುರುಪಾಲದಾಸರ ಚರಿತೆಗೆ ನಮೋ ನಮೋ | ತುರುಪಾಲಾಭಿನವ

ಪ್ರಾಣೇಶ ವಿಠಲನ ಚರಣ ಕಿಂಕರನೆನಿಸಿ ಮೆರೆದ ಗುರುದೇವ ||

 

||ಆದಿತಾಳ||

ಹರಿ ಸರ್ವೋತ್ತಮಾ ವಾಯು ಜೀವೊತ್ತಮಾ | ಸಿರಿ ವಿಧಿ ಭವ ಮುಖ್ಯ ಸುರರೆಲ್ಲಾ

ದಾಸರು | ಸಿರಿ ವಿಧಿ ಶಿವರೆಲ್ಲಾ ಹರಿಯಾಧೀನರು | ಸರ್ವ ಸುರರು

ತಾರತಮ್ಯದಿಂದೂನರು | ತಾರತಮ್ಯ ಪಂಚ ಭೇಧವು ಸತ್ಯವು ಮರುತ ಮತದ 

ಸಿದ್ಧಾಂತವು ನಿತ್ಯದಿ | ಪರತತ್ವವನ್ನು ಬೀರುತ ಸಾರುತ | ಧರೆಯೊಳು ಹರಿಮತ

ಧ್ವಜವನು ಮೆರೆಸಿದ | ಗುರುವರ ವಿಜಯರೆ ಕರುಣಿಗಳರಸರೆ | ಹರಿ ಅಭಿನವ

ಪ್ರಾಣೇಶ ವಿಠಲನ ಕರುಣಾಪಾತ್ರನೆ ಸುಚರಿತ್ರ ಸುಪವಿತ್ರ ||

 

||ಜತೆ||

ಹರಿಯ ವಿಹಾರಕ್ಕೆ ಆವಾಸನೆನಿಸುವಿ |

ಗುರುವಿಜಯ ವಿಠ್ಠಲನ್ನ ಸುಪ್ರೀತ ಘನದೂತ ||

 

 

||ಆದಿತಾಳ||

ಹರಿದು ಎಂತನ್ನರಿಯದ ನರರಿಗೆ | ಶರಣ ಜನರಿಗೆ ಬಲು ಮರಳು ಕಾಣೋ

ಪಾಂಡುರಂಗಾ | ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ | ಸಿರಿಧರ ಪತಿ

ವಿಜಯವಿಠಲಾ |ಗುರು ಪುರಂದರನ ಪ್ರೀಯಾ ||

 

 

||ಧೃವತಾಳ||

ಹರಿದಾಸವಂಶದಲ್ಲಿ ಧರೆಸುರಜನುಮವ | ಧರಿಸಿ ಬಂದೆನು ನಾನು

ಮುರಮರ್ದನ | ಸರಸಿಜಾಸನಕುಲಾಚರಣೆ ತೊರೆದು ಹಾಳು | ಹರಟೆಯೊಳ್

ದಿನಕಳೆದೆ ಪರಶುಧರನೆ | ಅರಿಯಾರುಜನರಿಂದ ಎರಡಾರುಮದದಿಂದ |

ಪರಿಪರಿ ಬಳಲುವೆ ಕರುಣಾ ಸಿಂಧು | ನಿರುತ ನಿಮ್ಮಯ ನಾಮ ಸ್ಮರಿಸುವ ದಾಸರ |

ಜರೆದು ಮತ್ಸರಿಸುವೆ ಗರುವದಿಂದ ಧರಣಿ | ತರುಣಿಮೇಣ್ ಪುರುಟ

ಚಿಂತನೆಯಲ್ಲಿ | ಉರುತರ ದುಃಖಾಗ್ನಿ ಶರಧಿಭವದಿ ಸಿಲುಕಿ | ಒರುಲುತ

ತೊಳಲುವೆ ನರಕಾಂತಕ | ಪೊರೆವರನ್ಯರ ಕಾಣೆ ಶರಣು ಬಂದಿರುವೆನು |

ಪರಿಪಾಲಿಸು ಜೀಯಾ ಮರುತನೊಡೆಯ | ಉರಗತಲ್ಪ ಭಿನವಪ್ರಾಣೇಶವಿಠಲ

ತವ | ಚರಣಕಿಂಕರನೆನಿಸು ತುರುಪಾಲ ಸಿರಿಲೋಲ ||

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025