ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಭ)

||ಆದಿತಾಳ||

ಭಾಸುರ ಚರಿತಳೆ ಭೂಸುರ ವಿನುತಳೆ | ಸಾಸಿರ ನಾಮನ ತೋಷದಿ ಭಜಿಪಳೆ |

ವಾಸವಾದಿ ದಿವಿಜೇಶ ಗಣಾರ್ಚಿತೆ | ದಾಶರಥಿ ಹರಿ ವಾಸುದೇವ ಪದ |

ಸಾಸಿರ ಪತ್ರದಿ ದೃಢ ಭಕುತಿಯ ಕೊಡು | ಮೇಷಾಭಿನವ ಪ್ರಾಣೇಶ ವಿಠಲನ |

ದಾಸ್ಯತನವನಿತ್ತು ಪೋಷಿಸುವದೆಮ್ಮಾ ||

 

||ತ್ರಿವಿಡಿತಾಳ||

ಭೂತದೊಳು ಮಹಾಪಾತಕಿ ನಾನಯ್ಯ | ಘಾತಕನು ಇತ್ತ ಮಾತು ತಪ್ಪುವನಯ್ಯ |

ಆತುಮ ಭವ ಶಿವರಾತಿಯೆ ಶರದಿಂದ | ನೀತಿ ತೊರೆದು ವಂಶಖ್ಯಾತಿ ಮರೆದು | 

ಸೀತಾಂಶು ಮುಖಿಯರ ಪ್ರೀತಿ ಚಿಂತನೆಯಲ್ಲಿ | ಬಾತುಕೋಳಿಯ ತೆರ ತಿರುಗಿದೆನು

ದೇವ | ಮಾತು ಮಾತಿಗೆ ಎನ್ನ ಪೊಗಳಿಕೆ ಪೇಳುತ | ಖ್ಯಾತಿ ಕಾಮುಕನಾಗಿ ಕಾರ್ಯ

ಮಾಡುವೆನಯ್ಯಾ | ಈ ತೆರವಾಗಿದೆ ಎನ್ನಯ ಸ್ಥಿತಿಗತಿ | ಭೀತನಾಗಿರುವೆನು

ಕರುಣಿಸಯ್ಯ | ಸೀತಾಧವಭಿನವ ಪ್ರಾಣೇಶ ವಿಠಲನ | ದೂತಾಗ್ರಣಿ ಎನ್ನ ಮಾತು 

ಲಾಲಿಸು ಜೀಯಾ ||

 

||ಅಟ್ಟತಾಳ||

ಭರಿತ ಕ್ರೋಧದಿಂದ ಪರವಶನಾಗುತ | ಥರ ಥರ ನಡುಗುತ ಜರಿವೆನು

ಸುಜನರ | ಪರಮ ವೈಷ್ಣವರ ಧರಣಿ ದೇವತೆಗಳ | ಹರಿದಾಸರ ನಿಂದ್ಯ

ನಿರುತದಿಗೈಯುತ | ಖರನಂತೆ ಭುವಿಯೊಳು ಚರಿಸುತಿರುವೆನಯ್ಯ |

ಉರುತರವಾದಂಥ ದುರಿತರಾಶಿಯು ಬಾಯ್ | ತೆರೆದು ಬರುತಲಿದೆ

ಉರಿಯ ನಾಲಿಗೆ ಚಾಚಿ | ಬರುತಲಿದೆ ನೋಡು ಕರಿಮೋರೆ ಕೆಂಜೆಡೆ |

ಧರಿಸಿ ಬರುತಲಿದೆ ಭರದಿಂದ ಬರುತಿದೆ | ಪರಿಹಾರೋಪಾಯವನ್ನರಿಯದೆ

ಬಳಲುವೆ | ವರಲುವೆ ಹಾಯೆಂದು ಚೀರುವೆ ಭೋರೆಂದು | ಪೊರೆವರನ್ಯರ

ಕಾಣೆ ಕರಗಳ ಜೋಡಿಸಿ | ಶರಣು ಬಂದಿರುವೆನು ಗುರುರಾಜ ರಕ್ಷಿಸು |

ಶರಣನ ಪಿಡಿಕೈಯ | ವರದೇಂದ್ರ ಗುರುರಾಯ | ಮುರಗೇಡಿಯಭಿನವ

ಪ್ರಾಣೇಶವಿಠಲನ | ಚರಣವಾರಿಜ ಭೃಂಗನತದಯಾಪಾಂಗ ||

 

 

||ತ್ರಿವಿಡಿತಾಳ||

ಭರತ ಖಂಡವ ಚರಿಸಿ ದುರ್ವಾದಿಗಳ ಜಯಿಸಿ | ಮರುತ ಮತಾಂಬುಧಿ ವಿಸ್ತರಿಸಿ |

ಪರಿಮಳ ತಂತ್ರದೀಪಿಕೆ ಯಾದಿಗಳ ರಚಿಸಿ | ಹರಿಮತ ದರ್ಶನ ತಿರುಳ ತಿಳಿಸಿ |

ನಿರುತದಿ ಪ್ರವಚನ ಪಾಠಗಳನು ಪೇಳಿ | ಧರಿಸುರರಿಗೆ ಧರ್ಮ ಮರ್ಮವರುಹಿ |

ಪರಿಸರ ಶ್ರೀ ಮಧ್ವಮುನಿ ಮತ ಸಿಂಧುವ | ಧರೆಯೊಳು ಮೆರೆಸಿದ ಗುರುರಾಜನೆ |

ತುರುಕ ಭೂಪತಿಯಿಂದ ವರಹಜ ತೀರದ | ವರಕ್ಷೇತ್ರ ಮಂಚಾಲಿ ಗ್ರಾಮ ಪಡೆದು

ಶಿರಿ ರಘುಪತಿ ಚರಣಾರ್ಚನೆ ಗೈಯುತ | ಹರುಷದಿ ನೆಲೆಸಿದಿ | ಸುಕ್ಷೇತ್ರದಿ

ಶಿರಿವರ ಅಭಿನವ ಪ್ರಾಣೇಶವಿಠಲನ ಚರಣ ವಾರಿಜ ಭೃಂಗ ಶರಣಾಂತರಂಗ |

 

||ಜತೆ||

ಭಾಗ್ಯನಗರದಿಂದ ಸಗ್ಗವ ಸೇರಿದ |

ಭಾರ್ಗವಾಭಿನವ ಪ್ರಾಣೇಶವಿಠಲನ ಪಾದ ||

 

 

||ಅಟ್ಟತಾಳ||

ಭರತ ಖಂಡದಿ ಸರ್ವ ತೀರ್ಥಯಾತ್ರೆಗಳ | ನಾರಾಯಣ ಬದರಿಯ ಶ್ರೀಕೃಷ್ಣ

ಉಡುಪಿಯ | ತಿರುಪತಿದೇವನ ದರುಶನಪಡೆಯುತ | ಮರಳಿಬಂದು

ಸ್ವಗ್ರಾಮದಿನೆಲೆಸಿದ | ಗುರುವರದೇಂದ್ರರ ಸೇವೆಗೈಯುತ | ಸಿರಿಪ್ರಾಣೇಶವಿಠಲ

ವಿರಚಿತ ಶ್ರೀಕೃಷ್ಣ ಲೀಲಾಮೃತ | ಸರ್ವದಪಾಡುತ ಗೃಹಕೃತ್ಯ ಮಾಡುತ್ತ |

ವರುಷಕಾಲ ಪರಿಯಂತ ಪಡೆದನು | ವರರಥವೇರಿದ ಗುರುಗಳ ದರ್ಶನ |

ಶರಧರ ಅಭಿನವ ಪ್ರಾಣೇಶವಿಠಲನ ಚರಣವಾರಿಜ ಭೃಂಗ ದೀನದಯಾಪಾಂಗ ||

 

||ಆದಿತಾಳ||

ಭಕ್ತಿಗೆಲ್ಲಿ ಸರಿಗಾಣೆ | ಮುಕ್ತಿಗೆಲ್ಲಿ ಸರಿಗಾಣೆ | ಮುಕ್ತಾರ್ಥ ಹರಿ ಪಾದಾಸಕ್ತರಾಗಿ

ಧೇನಿಸುತ್ತ ರಕ್ತಾಕ್ಷಿ ವತ್ಸರದ ಅರ್ಕವಾರಯಿಂದು ಕ್ಷಯ | ಶುಕ್ಲ ಪುಷ್ಯಮಾಸದಿ

ಉದ್ಯುಕ್ತರಾಗಿ ಪುಷ್ಪಕದಿ ವ್ಯಕ್ತವಾಗಿ ಪೊಳೆದು ಮಧುರೋಕ್ತಿಯಲ್ಲಿ ತರಣಿಯಂತೆ |

ಮುಕ್ತಿಗೆ ಸಾಗಿದರು ವಿರಕ್ತಿ ಮಾರ್ಗವನ್ನು ಪಿಡಿದು | ಮುಕ್ತ ಮುಕ್ತಾಶ್ರಯ ನಮ್ಮ 

ವಿಜಯ ವಿಠ್ಠಲರೇಯನ | ಶಕ್ತನೆಂದು ಪೊಗಳಿ ಬಲುರಿಕ್ತರಿಗಾಧಾರವಿತ್ತು ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022