ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಪ)

||ಮಟ್ಟತಾಳ||

ಪುಂಡರೀಕ ನಯನೆ ಪುಂಡರೀಕಗಮನೆ | ಪುಂಡರೀಕ ವಾಣಿ ಪುಂಡರೀಕಪಾಣಿ |

ಅಂಡಜ ಶಿಖರಥಳೆ ಅಂಡಜ ಸುತವಹಳೆ | ಪಂಡರ ಅಭಿನವ ಪ್ರಾಣೇಶ ವಿಠಲನ |

ಬಂಡುಣಿ ಎನಿಸು ಮಧ್ವದನದೊಳು ನೆಲೆಸು ||

 

 

||ಮಟ್ಟತಾಳ||

ಪರಿಸರ ನೀನಿರಲು ಹರಿ ತಾನಿರುತಿಹನು | ಇರದಿರೆ ತಾನಿರನು ಈ ನುಡಿಶೃತಿ ಸಿದ್ಧ |

ಕರಣ ನಿಯಾಮಕನೆ | ನೀದಯ ತೋರಲು ಕರುಣಿಸುವನು ಶ್ರೀಶ ಹೀಗಿದೆ

ಸಿದ್ಧಾಂತ | ಸುರವಂದ್ಯ ಅಭಿನವ ಪ್ರಾಣೇಶ ವಿಠಲನ | ಚರಣದೂಳಿಗಕಾರ

ಗುರು ವೃಕೋದರನೆ ||

 

 

||ತಾಳ ಅಟ್ಟ||

ಪತಿತಮಾನವಾಗಿ ಸತತ ದುರ್ವಿಷಯದಿ | ರತನಾಗಿರುವೆ ನಾನು ಕ್ಷಿತಿಯೊಳು

ಖರನಂತೆ | ಅತಿ ಮಂದಮತಿಯಾಗಿ ತೊಳಲುತ್ತಿರುವನೆಯ್ಯ | ವೃತತಿಜಾಸನ

ಕುಲಾಚರಣೆ ತೊರೆದು ಮಧ್ವ | ಮತದ ತತ್ವಗಳ ಮರ್ಮಗಳರಿಯದೆ |

ಪತಿತಮಾನವನಾದೆ ಸಲಹಯ್ಯ ಸಲಹಯ್ಯ | ಪತಿತ ಪಾವನನೆಂಬ ಬಿರುದು

ನಿನ್ನದು ದೇವ | ಕೃತಿಪತಿಯಭಿನವ ಪ್ರಾಣೇಶ ವಿಠಲ ||

 

 

||ತ್ರಿವಿಡಿತಾಳ||

ಪ್ರಾಣೇಶದಾಸರ ಜ್ಞಾನಭಕ್ತಿಗೆ ವಲಿದು | ಸಾನುರಾಗದಲಿಲ್ಲಿ ನೆಲಿಸಿದ ಗುರುದೇವ |

ಕ್ಷೋಣಿಯೋಳ್ಲಿಂಗಸೂರು ಕರುಣಿಕ ವಂಶವ | ಮಾಣದೆ ಪೊರೆಯಲು ಬಂದ

ಕರುಣಿ | ಆನತ ಜನಮನಾಭಿಷ್ಟವ ಸಲಿಸುವ | ದೀನ ದಯಾಳು ಸಜ್ಜನ

ಗೇಯನ | ಜಾನಕೀಶಾಭಿನವ ಪ್ರಾಣೇಶವಿಠಲನ | ಪ್ರಾಣ ಪದಕನಾದ

ಮೌನಿ ಮಾನದ ದಾನಿ ||

 

 

||ಜತೆ||

ಪ್ರಹ್ಲಾದನೇ ವ್ಯಾಸ ಮುನಿಯೇ ರಾಘವೇಂದ್ರ |

ರಹುದೆಂದು ಭಜಿಸಿರೋ ವಿಜಯ ವಿಠಲ ವೊಲಿವಾ ||

 

||ಮಟ್ಟತಾಳ||

ಪೇರ್ಮೆ ಇಂದಲಿ ವಿಶ್ವಾಕರ್ಮನಿಂದಲಿ ಅಂದು | ನಿರ್ಮಿತವಾಗಿದ್ದ ನಿರ್ಮಲ 

ಶರೀರ | ಧರ್ಮಬೋಧಕ ರಾಮಾ ನಿರ್ಮಯನೆ ಚ | ತುರ್ಮೊಗ ನಿತ್ಯ ನಿಷ್ಕರ್ಮ

ಭಾವದಲ್ಲಿ | ನಿರ್ಮತ್ಸರನಾದ ವಿಜಯವಿಠಲರೇಯನ | ನಿರ್ಮಲ ಚಿತ್ತದಲ್ಲಿ 

ಅರ್ಚನೆ ಮಾಡಿದನೋ ||

 

 

||ಆದಿತಾಳ||

ಪರಗತಿಬೇಕಾದ ಪುರುಷರು ಪರತರ | ಗುರು ಪಾದಾಶ್ರಯ ನಿರತರಾದ ವರ

ಮಂದಿರ | ಬಾಕುಳಿತನ ಧರಿಸಿ ಆದರದಿ ಅವರ | ಪರಿವಾರವನುಸರಿಸಿ ಆಜ್ಞಾ

ಮೀರದತಿ | ಜರಿದಪಹಾಸ ಮಾಡದೆ ಪರಮ ಸಂತೋಷ ತಾಳಿ | ಕೊರಗುವ

ಮಾತಾಡೆ ಕೊರತೆ ಮನಕ್ಕಿಲ್ಲಾದೆ | ಪರಿಚರಿಸುತಲೀರೆ ಪರಮ ಪ್ರೀತಿಯಿಂದ |

ಶಿರಿಗುರು ಅಜಗುರು ಸಕಲ ಜಗದ್ಗುರು | ಶಿರಿ ಬಾದರಾಯಣ ವಿಠಲ |

ಕರುಣದರುಶನ ಕೊಡುವನು ಮನಮಂದಿರದೊಳು ||

 

 

||ಆದಿತಾಳ||

ಪರಿಸರ ಶ್ರಿಕುಪ್ಪಿಭೀಮನ ತೇರಿಗೆ | ಎರಡು ಎರಡು ಪಾಷಾಣ ಗಾಲಿಗಳ |

ಗುರು ವರದೇಂದ್ರರಿಗೆ ರಜತ ಕವಚವನ್ನು | ವರ ಜಯತೀರ್ಥರಿಗತಿ ಸುಂದರ

ರಥ | ಗುರು ಮಾನವಿ ಪ್ರಭುವಿಗೆ ತಾತ್ವಿಕರಥ | ನಿರ್ಮಿಸಿ ಶಾಶ್ವತ ಯಶವನ್ನು

ಗಳಿಸಿದೆ | ಶರಧರ ಅಭಿನವ ಪ್ರಾಣೇಶವಿಠಲನ | ಚರಣ ವಾರಿಜ ಭೃಂಗ ದೀನ

ದಯಾಪಾಂಗ||

 

 

||ಧೃವತಾಳ||

ಪೂರ್ವಜನ್ಮದ ಸುಕೃತ ಪುಣ್ಯ ಸಾಧನದಿಂದ | ಕಾರ್ಪರಾಧೀಶ ನರಹರಿಯ

ದಯದಿ | ಸರ್ವಜೀವೊತ್ತಮ ಮರುತನ ಕರುಣದಿ | ರಾಘವೇಂದ್ರ ವರದೇಂದ್ರರ

ದಯದಿ | ಧಾರುಣಿನಾಥ ಶ್ರೀ ಮಾನವಿ ಪ್ರಭುಗಳಾ | ಸಾರ ವಾತ್ಸಲ್ಯ ಕರುಣಾ

ಕೃಪಾದಲಿ | ನಾರಸಿಂಹಭಿನವ ಪ್ರಾಣೇಶ ವಿಠಲನ | ಚಾರುದಾಸ್ಯವ ಪಡೆದ

ಶ್ಯಾಮಸುಂದರ ಗುರುವೆ ||

 

 

||ಧೃವತಾಳ||

ಪೊಂದಿ ಭಜಿಸು ಸತತ ವಂದೇ ಮನದಿ ಸ್ತಂಭ | ಮಂದಿರ ಮಾನವಿ

ದಾಸಾರ್ಯರಾ | ಮಂದ ಮಾನವ ಕೇಳೋ ವಂದಿಸಿ ಸೇವಿಪರ | ಬಂಧನ

ಪರಿಹರಿಸಿ ಮನದಭೀಷ್ಟಾ | ತಂದು ಕೊಡುವುದಕ್ಕೆ ಮಂದಾರ ಕುಜದಂತೆ|

ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ | ಛಂದಾಗಿ ಇವರು ದಯದಿ ಕಣ್ದೆರೆದು

ನೋಡಿದರೆ | ಬೆಂದು ಪೋಪವು ದೋಷ ವೃಂದವೆಲ್ಲಾ | ಕಂದನು ಮಾಡಿದ ಕುಂದು

ಕ್ಷಮಿಸಿ ತಾಯಿ | ತಂದೆ ಸಲಹುವಂತೆ ರಕ್ಷಿಸುವರೋ | ಹಿಂದೆ ಪ್ರಹ್ಲಾದ

ಶಲ್ಯನೆಂದೆನಿಸುತ ಪು | ರಂದರ ಗುರು ಸ್ವಾದಿರಾಜರ ಪ್ರೀತಾ | ಸಿಂಧೂರ ವರದ

ಶ್ಯಾಮಸುಂದರನಾಜ್ಞದಿ | ಇಂದುವಿನಂತೆ ಮೂಡಿ ಪುನಹ ಜಗದಿ ||

 

 

||ತ್ರಿವಿಡಿತಾಳ||

ಪೃಥ್ವಿಪನರಿಕೆಯ ನಾಲಿಸಿ ಬೇಗನೆ | ಉತ್ತನೂರಿಗೆ ಬಂದು ನೆಲಸಿದನು |

ಚಿತ್ತಜನಯ್ಯನ ಗಿರಿ ವೆಂಕಟೇಶನ | ತುತಿಸುತಾಕ್ಷಣ ಸೇವೆಗೈಯುತಲಿ | ನಿತ್ಯ

ಜನರಿಗೆ ಭವಿಷ್ಯವ ಪೇಳುತ್ತ | ಸತ್ಯ ಕಥಾಮೃತ ಸುರಿಸುತಲಿ | ಭೃತ್ಯರಿಗುಣಿಸುತ್ತ

ಅವರ ಮನ ತಣಿಸುತ್ತ | ನಿತ್ಯನೂತನ ಮಹಿಮೆ ತೋರುತಲಿ | ಹತ್ತಿ ಕುದುರೆಯ

ಬಂದು ‘ಅಲೆನಾಹಿ’ ಎಂದು ಕತ್ತುರಿ ಚಲುವನ ಅಣತಿಯಂತೆ | ತೆತ್ತಿಗರೊಡನೆ

ಪಂಢರ ಪುರವ ಕಂಡು ಯಜಿಸಿ | ಉತ್ತರ ದೇಶದ ಯಾತ್ರೆಯ ಸಮಯದೀ

ಸೋತ್ತಮ ಗುರುಗಳ ಕಂಡು ನಮಿಸಿ | ಸೋತ್ತಮ ಭೃಗುಮುನಿ ವಿಜಯದಾಸರ

ಒಲಿಸಿ | ತುತಿಸಿ ಉಪದೇಶಾಂತರವ ಗ್ರಹಿಸಿ | ಸತ್ಯ ಗೋಪಾಲವಿಠಲ

ದಾಸರಾದರು | ಸತ್ಯಾಭಿನವ ಪ್ರಾಣೇಶವಿಠಲನ ದಯದಿ ||

 

 

||ತ್ರಿವಿಡಿತಾಳ||

ಪುರಂದರದಾಸರು ಇರುಳು ಸ್ವಪ್ನದಿ ಬಂದು | ಕರೆದೊಯಿದು ಇವರನ್ನು ಹರಿಕಾಶಿಗೆ

ಗುರು ವೇದವ್ಯಾಸರ ಸಮ್ಮುಖದಿವರಿಗೆ | ಹರಿದಾಸ ದೀಕ್ಷೆಯನಿತ್ತು ಹರಸಿ |

ಪರಮ ಹರುಷದಿಂದ ವಿಜಯಾಂಕಿತವಿತ್ತು | ಮರಳಿ ಕಳುಹಿದರು ಪುರ ಕಾಶಿಗೆ |

ತ್ವರಿತ ಜಾಗೃತರಾಗಿ ಕನಸಿನ ಪರಿ ನೆನೆದು ಹರುಷಾತಿಶಯದಿಂದ

ರೋಮಾಂಚಿತರಾಗಿ | ಗುರುಗಳ ಸ್ಮರಿಸುತ ತುತಿಸಿ ನಮಿಸಿ | ಹರಿ

ವಿಶ್ವನಾಥನಿಗೆರಗಿ ಸ್ತೋತ್ರಗಳಿಂದ | ಹರನ ಭಜಿಸಿ ಸೇವಿಸಿ ನಯದಿ | ಸರಸ ಕವನ

ಪದ ಸುಳಾದಿ ಪದ್ಯಂಗಳ | ಪರಮೇಯ ತಾತ್ವಿಕ ಗೂಢಾರ್ಥಗರ್ಭಿತ| ಪರಮ

ವಿಸ್ಮಯಕಾರ ಕವನಂಗಳ | ವಿರಚಿಸಿ ಶರ ಪಂಚ ಸಹಸ್ರ ಸುಳಾದಿ | ಭರತ

ವರ್ಷದಲೆಲ್ಲಾ ಚರಿಸುತ ಸಂತತ | ಹರಿಯೇ ಸರ್ವೋತ್ತಮಾ ವಾಯು

ಜೀವೋತ್ತಮಾನೆಂಬೋ | ಪರಮೋಚ್ಛ ಸಿದ್ಧಾಂತ ಬೀರುತಲಿ | ಹರಿ ಕೀರ್ತನೆ ಗೈದು

ಧರ್ಮ ಭಾಗವತ | ಭರತ ಖಂಡದಲ್ಲೆಲ್ಲಾ ಬೀರುತಲಿ | ಧರಿಸುರ ನತರಿಗೆ ಸಾರಿದ

ರಹಸ್ಯವ | ಅರುಹುತ ಹರಿದಾಸ್ಯ ದೀಕ್ಷೆ ನೀಡಿ | ಶರಣರುದ್ಧರಿಸಿದ ಕರುಣ 

ಮಹಾರ್ಣವ | ಹರಿದಾಸವರ್ಯನೆ ಶರಣು ಶರಣು | ಶರಣ ಜನ ಸುರಧೇನು

ದುರುಳ ಜನ ತಿಮಿರಭಾನು | ಕರುಣಾಳು ಅಭಿನವ ಪ್ರಾಣೇಶ ವಿಠಲನ |

ಚರಣಾನುಗ್ರಹ ಪಡೆದ ಹರಿದಾಸವರ್ಯ ||

 

 

||ರೂಪಕತಾಳ||

ಪವನ ಮತವನುಸರಿಸಿ ನವವನವನುಧರಿಸಿ | ಶ್ರವಣ ಮನನ ಧ್ಯಾನವನು

ಅಂಗೀಕರಿಸಿ | ಅವನಿಯೊಳಗೆ ಹೀನ ದೈವವ ನಿರಾಕರಿಸಿ | ಜವನ ದೂತರಿಗೆ

ಭಯವನೆಲ್ಲ ತೋರಿಸಿ | ಭವ ರೋಗಗಳು ಪರಾಭವ ಮಾಡಿಸಿ ದೂರಿರಿಸಿ |

ಕವಿಗಳ ಮನದ ತಾಪವನು ಪರಿಹರಿಸಿ | ಕವನಕ್ಕೆ ಸರಿಯಿಲ್ಲೆಂದವನಿಯೊಳಗೆ

ಮೆರಸಿ | ಕವಿತಾ ಜನರ ಪ್ರೀಯ ವಿಜಯ ವಿಠ್ಠಲರೇಯ | ದಿವಿಜಾದ್ಯರೊಳು

ದೈವವೆಂದು ಪತಿಕರಿಸಿ | ಸವಿನುಡಿಯಿಂದ ನಮ್ಮನ್ನೆಲ್ಲ ಉದ್ಧರಿಸಿ ||

 

 

 

||ಝಂಪೆತಾಳ||

ಪಂಚದ್ವಾರಗಳಿಂದ ಪಂಚವಪುಷಗಳಿಂದ | ಪಂಚರೂಪದ ಧ್ಯಾನ ಮಾಳ್ಪ ನಿನ್ನ |

ಪಂಚಮುಖ ಮೊದಲಾದಮರರೆಲ್ಲರು ನಿ |ಶ್ಚಂಚಲದಿ ಭಜಿಸುತಿರೆ ಅವರವರ |

ವಾಂಛಿತಗಳ ನಿತ್ತು ಪೊರೆವ ಮುಖ್ಯಪ್ರಾಣ ದ್ವಿ | ಪಂಚಕರಣಕೆ ಮುಖ್ಯ ಮಾನಿ ನೀನೆ

ಪಂಚರೂಪಗಳಿಂದ ಪಂಚಗ್ನಿಗತನಾಗಿ | ಪಂಚವ್ಯಾಪರಗಳ ಮಾಳ್ಪದೇವ | ಪಂಚ

ಪರ್ವದಲ್ಲಿಪ್ಪ ಪಂಚ ಪಂಚಮರರು | ಸಂಚರಿಸುವರಯ್ಯಾ ನಿನ್ನಿಂದಲಿ | ಪಂಚ

ಭೇದಗಳರಹಿ ಶುದ್ಧ ಶಾಸ್ತ್ರಗಳಿಂದ ಪ್ರ | ಪಂಚ ಸಲಹಿದ ವಿಮಲ ಉಪಕಾರಿಯ 

ನಿ | ಷ್ಕಿಂಚನರ ಪ್ರೀಯ ಗುರುವಿಜಯ ವಿಠ್ಠಲರೇಯನ | ಮಿಂಚಿನಂದದಿ ಎನ್ನ 

ಮನದಿ ನಿಲಿಸು ||

 

||ತ್ರಿವಿಡಿತಾಳ||

ಪಾಲಸಾಗರಶಾಯಿ ಮೂಲೋಕದೊಡಯನೆ | ವ್ಯಾಲಮರ್ದನಗೋಪಾಲಬಾಲಾ |

ಲೋಲಲೋಚನಿಯರ ಮೇಳವಬಯಸುತ್ತ | ಕೀಳುಮಾನವನಂತೆ ಬಾಳಿದೆನೋ

ದೇವ ತಾಳಂಕಾನುಜ ನಿನ್ನ ಬಾಲಕನುಪಟಳ | ಭಾಳವಾಗಿದೆ ಸ್ವಾಮಿ ತಾಳಲಾರೆ |

ಏಳಲಮಾಡದೆ ಪಾಲಿಸು ಕರುಣದಿ | ಕಾಳಿರಮಣ ಹೃದಯಾಲಯನೆ |

ಕಾಲಭಿನವಪ್ರಾಣೇಶವಿಠಲ ನಿನ್ನ | ಊಳಿಗವನು ನೀಡು ಮೇಲುಕರುಣದಿ

ನೋಡು ||

 ||ಜತೆ||

ಪ್ರಾಣಗತಿ ಬಂದರು ಮಧ್ವಮತ ಬಿಡದಿರಿ |

ಪ್ರಾಣಧೃತನಾಮ ನಮ್ಮ ವಿಜಯ ವಿಠ್ಠಲಗರ್ಪಿಸೋ ||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022