ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಎ)

||ತ್ರಿವಿಡಿತಾಳ||

ಎರಡನೆ ಯುಗದಲ್ಲಿ ಖರಕ್ರವ್ಯಾದನು | ಕರಿಕರ್ಣನು ಘೋರ ತಪವಗೈದು |

ಸರಸಿಜ ಸಂಭವನೊಲಿಸಿ ಮೆಚ್ಚಿಸಿ ತಾನು | ವರವ ಯಾಚಿಪ ಸಮಯದಿಯವನ |

ಅರಿಯಾಳು ಮಾಡಿದೆ ಮತಿಭ್ರಂಶಗೈಸಿದೆ | ನಿರುತ ನಿದ್ರೆಯ ಬೇಡ್ವ ತೆರ ಮಾಡಿದೆ |

ಸುರ ಸಜ್ಜನರಿಗೆಲ್ಲಾ ಹರುಷವ ಬೀರಿದೆ | ಪರಮ ಸಮರ್ಥಳೆ ಶರಣು ಶರಣು |

ಸುರವಂದ್ಯಭಿನವ ಪ್ರಾಣೇಶವಿಠಲನ | ಚರಣ ವಾರಿಜ ಭೃಂಗೆ ದೀನ 

ದಯಾಪಾಂಗೆ ||

 

 

||ಅಟ್ಟತಾಳ||

ಎರಡನೆ ಯುಗದಲ್ಲಿ ತರುಚರ ರೂಪದಿ | ಧರೆಯೊಳಗುದಿಸಿದೆ ರಾಮ

ಸೇವಕನಾದೆ | ಶರಧಿಯ ಲಂಘಿಸಿ ಬರಮ ಪುರವಪೊಕ್ಕು | ಧರಿಜ ದೇವಿಯ

ಕಂಡು ರಾಮಾಂಗುಲಿ ಇತ್ತು | ಹರಿ ಕುಶಲರುಹಿ ತಾ ಸಂತಸ ಬೀರಿದೆ | ಹರುಷ

ಮನವ ಕೀಳಿ ಕ್ರವ್ಯಾಧರ ಸೀಳಿ | ಅರಿಪುರ ದಹಿಸಿದ ಪರಮ ಸಮರ್ಥನೆ | ತರುಚರ

ಹನುಮನೆ ಚರಣಕೆ ವಂದನೆ | ಎರಡೊಂದು ಯುಗದಲ್ಲಿ ಕುರುಕುಲ ಸಂಜಾತ |

ಮುರಹರ ಕೃಷ್ಣನ ಚರಣ ಸೇವಕನೀತ | ದುರುಳ ದೈತ್ಯರ ದುಷ್ಟ ಕುರುಗಳನಳಿಸುತ |

ಧರಿಭಾರ ವಿಳುಹಿದೆ ಸುರಗಣ ಪೂಜ್ಯನೆ ಮುನಿಜನಗೇಯನೆ | ಮುರಹರ

ಅಭಿನವ ಪ್ರಾಣೇಶ ವಿಠಲನ | ಚರಣ ಸೇವಕ ಹನುಮ ಭೀಮ ಮಧ್ವಾರ್ಯ ||

 

ಆದಿತಾಳ

 

ಎತ್ತ ಪೋದರೇನು ಎತ್ತ ನಿಂತರೇನು

ಚಿತ್ತಬಂದಂತೆ ಚಿಗಿದಾಡಿದರೇನು

ಚಿತ್ತದಲಿ ಹರಿಯ ಕಾಂಬವ ಭಕುತರಿಗೆ 

ಮತ್ತೆ ಇತ್ರ ಜನರವರಿಗೆ ಸರಿಯೆ

ಮತ್ತೆ ವ್ಯಾಘ್ರವ ನೋಡಿ ನರಿ ಸುಟ್ಟುಕೊಂಡಂತೆ

ಚಿತ್ತಕ್ಕೆ ಬಂದ ಪರಿಪರಿಗಣನೆಯೇನೊ

ಉತ್ತಮೋತ್ತಮ ನಮ್ಮ ಗೋಪಾಲವಿಠಲನ 

ಚಿತ್ತಾನುಸಾರ ನಡೆದವರೆ ಧನ್ಯರೊ 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026