ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಧ)

||ಅಟ್ಟತಾಳ||

ಧರಿಭಾರ ವಿಳುಹಲು ಶಿರಿಯರಸನು ತಾನು | ವರ ರಘುರಾಮ ನಾಮದಿ

ಧರೆಯೊಳು ಪುಟ್ಟಿ | ಹರಿ ಪೀಠ ಯುವರಾಜ್ಯವೇರುವ ಸಮಯದಿ | ಸುರರ

ಮೊರೆಯ ಕೇಳಿ ಹರಿ ಇಚ್ಛೆಯರಿತು | ಮಂಥರಿಗೆ ದುರ್ಮತಿ ಇತ್ತು ಸುರಕಾರ್ಯ

ಮಾಡಿದೆ | ಹರಿ ಶಿರಿ ರಾಮರು ವನವಾಸ ಕೈಕೊಂಡು | ಖರ ಕ್ರವ್ಯಾದರ ತರಿದು

ಪುರಕೆ ಬಂದು | ಹರಿ ವಿಷ್ಠರೇರಲು ಪರಮಾನಂದವು | ಸರುವರಿಗಾಗುವ

ತೆರ ಮಾಡಿದೆ ತಾಯೇ | ಕರುಣ ಮಹಾರ್ಣವೇಚಾರಂತೆ ನಮೋ ನಮೋ |

ಕರುಣಾಳು ಅಭಿನವ ಪ್ರಾಣೇಶ ವಿಠಲನ |

ಚರಣ ದಾಸ್ಯವನಿತ್ತು ಪರಿಪಾಲಿಸಮ್ಮ ||

 

 

||ಅಟ್ಟತಾಳ||

ಧಾರಣಿಸುರರ ಉದ್ಧಾರಗೋಸುಗವಾಗಿ | ಮೂರೆಂಟು ಈರಾರು ಚಾರು

ಲಕ್ಷಣವುಳ್ಳ | ಭಾರತಿ ಪತಿಯಂತೆ ತೋರುವ ಕಾಯುವ | ಶೌರಿಕಥಾಮೃತ

ಸಾರಸುಗ್ರಂಥವ | ತಾ ರಚಿಸಿದ ಉಪಕಾರವು ವರ್ಣಿಸ | ಲಾರಿಂದ ಸಾಧ್ಯವು

ಪಾರಾಯಣ ಪ್ರತಿ ವಾರ ಬಿಡದೆ ಮಾಡೆ ಸಾರಲೇನು ಸಂ | ಸಾರ ಶರಧಿಯಿಂದ

ಪಾರಾಗಿ ಸದ್ಭಕುತಿ | ಪಾರಮಾರ್ಥಿಕ ಜ್ಞಾನ ವೈರಾಗ್ಯ ಪಡೆವುತ | ನಾರದನಮಿತ

ಶ್ರೀ ಶ್ಯಾಮ ಸುಂದರನ ಹೃ | ದ್ವಾರಿಜದೊಳು ಕಂಡು ಸೂರೆಗೊಂಬುವ ಸುಖ ||

 

 

||ತ್ರಿವಿಡಿತಾಳ||

ಧನ್ಯ ನಾನಾದೆನೋ ದಾನವರಿಯಾ ಕಂಡು | ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ |

ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ | ಬೆನ್ನು ತೋರಿದವಯ್ಯಾ

ಬೀಳುವಾದರಿಯಾದೆ | ಅನ್ಯ ದೇವರಿಗೆ ಶಿರಬಾಗಿ ಶಿರಬಾಗಿ ಶ | ರಣು

ಶರಣೆನ್ನಿರೋ ಆವಾವ ಕಾಲದಲ್ಲಿ | ರನ್ನ ಕೈಸೇರಲು ಗಾಜುಮಣಿ ಬಯಸುವನೆ |

ತನ್ನಿಂದ ತಾ ವಲಿದು ವಿಜಯವಿಠಲ ಕರ | ವನ್ನು ಪಿಡಿಯೆ ಎನಗೆ ಇನ್ನು ಯಾತರ ಭೀತಿ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025