ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಒ)

||ಧೃವತಾಳ||

ಒಂದು ದಿವಸ ನಾರಂದ ಮುನೀಶ್ವರ ನಂದಗೋಪನ ಕಂದ ಇಂದಿರಾರಮಣನ |

ಸಂದರುಶನ ಮಾಡಿ ಬಂದ ಹರಿ ವರ್ಷ | ವೆಂದೆಂಬೊ ಖಂಡ

ದೊಳಾನಂದಗಾಯನದಿಂದ | ನಿಂದು ನರ ಮೃಗಗೆ ವಂದಿಸಿ ತೆರಳುತಿರೆ | ಅಂದು

ಪ್ರಹ್ಲಾದನು ದ್ವಂದ್ವ ಪಾದಕ್ಕೆರಗಿ | ಇಂದು ದ್ವಾರಕಾಪುರದಿಂದ ಪೊರಟು ನಡೆ |

ತಂದ ವಾರ್ತೆ ಎನಗೊಂದುಸುರಲಿಲ್ಲ ದೀನ | ಬಂಧು ಎನಿಸಿಕೊಂಬ ವೃಂದಾರಕ 

ಮುನಿ | ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ | ಬಿಂದುಗಳುದುರಿಸುತ ನಂದ

ನಂದನ ಚರಿತೆ ಒಂದೊಂದು ಪೇಳಲದರಿಂದ ಮೈಮರೆದು ಹೋ | ಎಂದು ಶಿರವ

ದೂಗಿ ಮುನಿಗೆ ಎರಗಿ | ಕಂಧರ ಬಾಗಿ ನಾನೆಂದಿಗೆ ಕೃಷ್ಣನ | ವಂದಿಸುವೆ ನೆನಲು

ಮಂದಹಾಸದಿಂದ | ಮಂದರೋದ್ಧರ ವಿಜಯ ವಿಠಲ ಯಶೋದೆ | ಕಂದನ 

ಲೀಲೆಯಾನಂದ ಪೇಳೆನೆ ಮುನಿ | ಅಂದು ವಿವರಿಸಿದ ಅಂದವಾಗಿ ನಲಿದು ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023