ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಜ)

 

||ತ್ರಿವಿಡಿತಾಳ||

ಜನಕ ನಾಮಕಳಾದ ವನಿತೆ ಭೂಸುತೆ ಸೀತೆ | ಇನಕುಲೇಶನ ರಾಣಿ ಕಲ್ಯಾಣಿಯೇ |

ಕನಕ ಜಿಂಕೆಯ ನೆವದಿಂದ ಕ್ರವ್ಯಾದರ | ಹನವನ ಗೈಸಿದೆ ಇನಿಯನಿಂದ| ಘನವಾದ

ಭೂಭಾರ ಇಳುಹಿ ಸುರರ ಕಾಯ್ದೆ | ಘನ ಕರುಣಾಂಬುಧಿ ಮುನಿವಂದ್ಯಳೆ |

ಘನ ಶ್ಯಾಮ ಅಭಿನವ ಪ್ರಾಣೇಶ ವಿಠಲನ | ಅನುಗ್ರದಿ ಅಜ ಭವರ ಸೃಜಿಪ 

ಅಕ್ಷರಳೆ ||

 

||ಧೃವತಾಳ||

ಜಗದ ಪಾವನ್ನದ ಗೋಸುಗವಾಗಿ ಸುರಮುನಿ | ನಗಧರನನ್ನೆ ಭಜಿಸಿ ಸುಗುಣದಲ್ಲಿ

ಮಿಗೆ ಮಾನವರಾಗಿ ಭೂಸುರ ಗರ್ಭದಲ್ಲಿ ಬಂದು | ಅಘದೂರರಾಗಿ ಬಲು

ಪಸರಿಸುತ್ತ | ಅಗಣಿತ ಜ್ಞಾನ ಭಕುತಿ ವೈರಾಗ್ಯ ಪರರಾಗಿ | ಜಗಧರಸುತೆ ಬಳಿಯ 

ಪಂಚಕೂಟ | ನಗ ಪಂಪಾ ನಿಧಿಯಲ್ಲಿ ವಾಸವಾಗಿ ನಿತ್ಯ | ಜಗದಗುರು 

ವ್ಯಾಸರಾಯರಲ್ಲಿ | ಬಗೆ ಬಗೆಯಿಂದಲಿ ವಿಶ್ವಾಸವನ್ನುಯಿಟ್ಟು | ಯುಗಳ ಕರವ

ಮುಗಿದು ಮುದದಿಂದಲಿ | ಜಗದ ಪಾಲಕ ನಮ್ಮ ವಿಜಯ ವಿಠ್ಠಲನ ಉಪಾ |

ಸಿಗನಾಗಿ ವಿಷಯದಲ್ಲಿ ಸಿಗದೆ ಹರುಷದಲಿ ||

 

 

||ಅಟ್ಟತಾಳ||

ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ನೀನೆ | ಜಾಗರೂಕನಾಗಿ | ಜೀವನ ಪಾಲಿಸಿ |

ಭಾಗತ್ರಯದಲ್ಲಿ ವಿಭಾಗ ಮಾಡುವಿ | ನಾಗಭೂಷಣಾದಿ ಸುರರಿಗೆ ಜೀವನ | ಸಾಗರ

ಮೊದಲಾದ ಸಕಲರಲ್ಲಿ ವ್ಯಾಪ್ತ | ನಾಗರಾಜನ ಅಂಗುಟದಿ ಮೀಟಿದ ಶಕ್ತ |

ಯುಗಾದಿಕೃತುನಾಮ ಗುರು ವಿಜಯ ವಿಠಲರೇಯನ | ಯೋಗವ ಪಾಲಿಸಿ 

ಭವದೂರ ಮಾಡೋದು ||

 

||ಜತೆ||

ಜಯಾ ಮಯಾ ಕೃತಿ ಶಾಂತಿ ಮಹಾಲಕ್ಷ್ಮೀ ದೇವಿಯೇ |

ಜಯನಾಮ ಅಭಿನವ ಪ್ರಾಣೇಶ ವಿಠ್ಠಲನ ಪ್ರೀಯೆ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022