ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಗ)

ಗಣಪತೇ ಎನ್ನ ಪಾಲಿಸೋ

 

ಗಣಪತೇ ಎನ್ನ ಪಾಲಿಸೋ - ಗಂಭೀರಾ||ಪ||

 

ಪಾರ್ವತಿ ನಂದನ ಸುಂದರ ವದನ ಶರ್ವಾದಿ ಸುರವಂದ್ಯ ||೧||

 

ಆದಿ ಪೂಜಿತ ನೀನು ಮೋದ ಭಕುತರಿಗಿತ್ತು ಮಾಧವನಲಿ ಮನ ಸದಾ ನಿಲಿಸು ನೀ||೨||

 

ಪಂಕಜ ನಯನ ವೆಂಕಟ ವಿಠಲನ ಕಿಂಕರನೆನಿಸೆನ್ನ ಶಂಕರ ತನಯನೆ ||೩||

 

ಗುಮ್ಮನ ಕರೆಯದಿರೆ

 

ಗುಮ್ಮನ ಕರೆಯದಿರೆ ಅಮ್ಮ ನೀನು |ಪ|

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು 

ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ | ಅ.ಪ.| 

 

ಹೆಣ್ಣುಗಳಿರುವಲ್ಲಿಗೆ ಪೋಗಿ ಅವರ

ಕಣ್ಣು ಮುಚ್ಚುವುದಿಲ್ಲವೆ

ಚಿಣ್ಣರಾ ಬಡಿಯೆನು, ಅಣ್ಣನ ಬೈಯ್ಯೆನು

ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ್ಲ |೧| 

 

ಬಾವಿಗೆ ಪೋಗೆ ಕಾಣೆ ಅಮ್ಮ ನಾನು 

ಹಾವಿನೊಳಾಡೆ ಕಾಣೆ 

ಆವಿನ ಮೊಲೆಯೂಡೆ ಕರುಗಳ ಬಿಡೆನೋಡೆ

ದೇವರಂತೆ ಒಂದು ಥಾವಿಲಿ ಕೊಡುವೆ |೨|

 

ಮಗನ ಮಾತನು ಕೇಳಿ ಗೋಪೀದೇವಿ

ಮುಗುಳುನಗೆ ನಗುತ 

ಜಗದೊಡೆಯನ ಶ್ರೀ ಪುರಂದರವಿಠಲನ 

ಬಿಗಿದಪ್ಪಿಕೊಂಡಳು ಮೋಹದಿಂದಲಾಗ |೩| 

 

ಗುರುಪುರಂದರದಾಸರೆ

 

ಗುರುಪುರಂದರದಾಸರೆ ನಿಮ್ಮ 

ಚರಣಕಮಲವ ನಂಬಿದೆ |ಪ| 

ಗರ್ವ ರಹಿತನ ಮಾಡಿ ಎನ್ನನು

ಪೊರೆವ ಭಾರವು ನಿಮ್ಮದೇ |ಅ.ಪ.| 

 

ಒಂದು ಅರಿಯದ ಮಂದಮತಿ ನಾ 

ನೆಂದು ನಿಮ್ಮನು ವಂದಿಪೆ

ಇಂದಿರೇಶನ ತಂದು ತೋರಿಸಿ

ತಂದೆ ಮಾಡೆಲೊ ಸತ್ಕೃಪೆ |೧|

 

ಮಾರಜನಕನ ಸನ್ನಿಧಾನದಿ

ಸಾರಗಾನವ ಮಾಡುವ

ನಾರದರೆ ಈ ರೂಪದಿಂದಲಿ 

ತೋರಿ ದರುಶನ ನೀಡುತಾ | ೨| 

 

ಪುರಂದರಾಲಯ ಘಟ್ಟದೊಳಗೆ

ನಿರುತ ಧನಗಳ ಗಳಿಸಲು

ಪರಮಪುರುಷನು ವಿಪ್ರನಂದದಿ

ಕರವ ನೀಡಿ ಯಾಚಿಸೇ | ೩| 

 

ಗುರು ರಾಘವೇಂದ್ರರ ಚರಣ

 

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮರಿಸುವ ಮನುಜರಿಗೆ  |ಪ|

ಕರೆಕರೆಗೊಳಿಸುವ ದುರಿತ ದುಷ್ಕ್ರುತವೆಲ್ಲ  ಕರಿಯು ಸಿಂಹನ ಕಂಡ ತೆರನಾಗುವುದಯ್ಯ |ಅ.ಪ| 

 

ಗುರು ಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ 

ಹರ ಧರಿಸಿದ  ಶಶಿಯಂತುದಿಸಿ ಪರಮತ ತಿ – 

ಮಿರಕ್ಕೆ ತರಣಿಕಿರಣನೆನಿಸಿ ಪಿರಿದು

ಮೆರೆವ ಸಿರಿ ರಾಮನರ್ಚಕರಾದ |೧| 

 

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ

ಪರಮೇಷ್ಟಿ ಮರುತರೆ ಗುರುಗಳೆಂದು 

ಗರುಡಶೇಷ ರುದ್ರ ಸಮರೆಂದು ಸ್ಥಾಪಿಸಿ 

ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ  |೨| 

 

ಅಂಧಕರಿಗೆ ಚಕ್ಷು ವಂದ್ಯರಿಗೆ ಸುರತರು 

ಬಂದಬಂದವರಭೀಷ್ಟಗಳನಿತ್ತು 

ಒಂದಾರುನೂರುವತ್ಸರ ವೃಂದಾವನದಲ್ಲಿ

ಚೆಂದಾಗಿ ನಿಂದು ಮೆರೆವ ಕೃಪಾಸಿಂಧು ದೇವಾಂಶರ  |೩|

 

ರಾ ಎನ್ನೆ ದುರಿತರಾಶಿಗಳ ದಹಿಸುವ 

ಘ – ಎನ್ನೆ ಘನಜ್ಞಾನ ಭಕುತಿ ಈವ 

ವೇಂ ಎನ್ನೆ ವೇಗದಿ ಜನನಮರಣ ದೂರ 

 

 

ಗುರುವಿನ ಗುಲಾಮನಾಗುವ ತನಕ 

 

ಗುರುವಿನ ಗುಲಾಮನಾಗುವ ತನಕ 

ದೊರೆಯದಣ್ಣ ಮುಕುತಿ

ಪರಿ ಪರಿ ಶಾಸ್ತ್ರವನೇಕವನೋದಿ 

ವ್ಯರ್ಥವಾಯ್ತು ಭಕುತಿ |ಪ|

 

ಆರು ಶಾಸ್ತ್ರವ ಓದಿದರಿಲ್ಲ ಮೂ

ರಾರು ಪುರಾಣವ ಮುಗಿಸಿದರಿಲ್ಲ

ಸಾರಿ ಸಜ್ಜನರ ಸಂಗವ ಮಾಡದೆ 

ಧೀರನಾಗಿ ತಾ ಮೆರೆದರೆ ಇಲ್ಲ |೧|

 

ಕೊರಳೊಳು ಮಾಲೆ ಧರಿಸಿದರಿಲ್ಲ 

ಬೆರಳೊಳು ಜಪಮಣಿ ಎಣಿಸಿದರಿಲ್ಲ

ಮರುಳನಂತೆ ಶರೀರಕೆ ಬೂದಿಯ

ಒರಸಿಕೊಂಡು ತಾ ತಿರುಗಿದರಿಲ್ಲ |೨|

 

ನಾರಿಯ ಭೋಗ ಅಳಿಸಿದರಿಲ್ಲ 

ಶರೀರಕೆ ಸುಖವ ಬಿಡಿಸಿದರಿಲ್ಲ

ನಾರದವರದ ಶ್ರೀ ಪುರಂದರವಿಠಲನ 

ಮರೆಯದೆ ಮನದೊಳು ಬೆರೆಯುವತನಕ |೩| 

 

 

ಗೋಪಿಯ ಭಾಗ್ಯವಿದು 

 

ಗೋಪಿಯ ಭಾಗ್ಯವಿದು 

ಶ್ರೀಪತಿ ತಾ ಶಿಶುರೂಪಿನಲಿರುವುದು |ಪ| 

ಕಡುಮುದ್ದುರಂಗನ ತೊಡೆಯಮೇಲೆತ್ತುತ 

ಜಡೆಯ ಹೆಣೆದು ಹೂಮುಡಿಸಿ ಬೇಗ

ಬಿಡದೆ ಮುತ್ತಿನ ಚಿಂದರಳೆಲೆಯನು 

ಸಡಗರದಿಂದಲಂಕರಿಸಿದಳು |೧| 

ನಿತ್ಯನಿರ್ಮಲನಿಗೆ ನೀರನೆರೆದು ತಂ

ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ 

ಮುತ್ತು ಕೊಟ್ಟು ಬಲುವಿಧದಿಂದಾಡಿಸಿ

ಅರ್ತಿಯಿಂದಲಿ ತಾ ತೂಗಿದಳು |೨| 

ದೃಷ್ಟಿತಾಕೀತೆಂದಿಟ್ಟು ವಿಭೂತಿಯ

ತಟ್ಟೆಯೊಳಾರತಿಗಳ ಬೆಳಗಿ 

ಥಟ್ಟನೆ ಉಪ್ಪುಬೇವು ನಿವಾಳಿಸಿ 

ತೊಟ್ಟಿಲೊಳಿಟ್ಟು ತಾ ತೂಗಿದಳು |೩| 

ಎನ್ನಯ ರನ್ನನೆ ಸುಮ್ಮನಿರೋ ದೊಡ್ಡ

ಗುಮ್ಮನು ಬರುವನು ಅಳಬೇಡ 

ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು

ಬೊಮ್ಮನ ಪಿತನ ತಾ ತೂಗಿದಳು |4|

ಮಾಧವ ಜೋ ಮಧುಸೂದನ ಜೋ ಜೋ 

ಯಾದವರಾಯ ಶ್ರೀ ರಂಗನೆ ಜೋ 

ಆದಿಮೂರುತಿ ನಮ್ಮ ಪುರಂದರವಿಠಲನ 

ಆದರದಿಂದ ತಾ ತೂಗಿದಳು |೫| 

 

 

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ    ರಾಗ : ಆನಂದ ಭೈರವಿ, ತಾಳ:ಆದಿ

 

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ

ಗಿಳಿಯು ಪಂಜರದೊಳಿಲ್ಲ |ಪ|

ಅಕ್ಕ ನಿನ್ನ ಮಾತ ಕೇಳಿ ಚಿಕ್ಕದೊಂದು ಗಿಳಿಯ ಸಾಕಿದೆ

ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ |೧|

 

ಆಟಕೊಂದು ಗಿಳಿಯ ಸಾಕಿದೆ ಮುತ್ತಿನ ಹಾರವ ಹಾಕಿದೆ

ಮುತ್ತುಕೊಂಡು ಗಿಳಿಯು ತಾನು ಎತ್ತಲೋಡಿ ಹೋಯಿತಯ್ಯೋ |೨|

 

ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು

ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ |೩|

 

ಮುಪ್ಪಾಗದ ಬೆಣ್ಣೆಯನ್ನು  ತಪ್ಪದೇ ನಾ ಹಾಕಿ ಸಾಕಿದೆ

ಒಪ್ಪದಿಂದ ಗಿಳಿಯು ಈಗ ತೆಪ್ಪನೆ ಹಾರಿ ಹೋಯಿತಯ್ಯೋ |೪|

 

ರಾಮ ರಾಮ ಎಂಬ ಗಿಳಿಯು ಕೋಮಲ ಕಾಯದ ಗಿಳಿಯು

ಸಾಮಜ ಪೋಷಕ ತಾನು ಪ್ರೇಮದಿ ಸಾಕಿದ ಗಿಳಿಯು |೫|

 

ಒಂಭತ್ತು ಬಾಗಿಲ ಮನೆಯು ತುಂಬಿದ ಸಂದಣಿ ಇರಲು

ಕಂಬ ಮುರಿದು ಡಿಂಭ ಬಿದ್ದು ಅಂಬರಕ್ಕೆ ಹಾರಿ ಹೋಯಿತು |೬|

 

ಅಂಗೈಯಲ್ಲಾಡುವ ಗಿಳಿಯು ಮುಂಗೈ ಮೇಲಿನ ಗಿಳಿಯು

ರಂಗ ಪುರಂದರ ವಿಠಲನಂಥ ರಂಗದೊಳಿಹ ಗಿಳಿಯು |೭|

 

 

 

 

 

  ಗೋವಿಂದ ನಿನ್ನ ನಾಮವೆ ಚೆಂದ

ಗೋವಿಂದ ನಿನ್ನ ನಾಮವೆ ಚೆಂದ

 

ಅಣು ರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ

ನಿರ್ಮಲಾತ್ಮಕನಾಗಿ ಇರುವುದೇ ಆನಂದ ||ಅ ಪ||

 

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ

ಈ ಪರಿ ಮಹಿಮೆಯ ತಿಳಿಯುವುದೆ ಆನಂದ ||ಅ ಪ||

 

ಪರಮ ಪುರುಷ ಶ್ರೀ ಪುರಂದರ ವಿಠಲ

ಹಿಂಗಡ ದಾಸರ ಸಲಹುವುದೆ ಆನಂದ ||ಅ ಪ||

 

ಗಂಗಾತೀರದ ಮನೆ

ಗಂಗಾತೀರದ ಮನೆ ನಮ್ಮದು| ಕಾಶಿ| ಬಿಂದುಮಾಧವನಲ್ಲಿ ಇರುವುದು  ನಮ್ಮನೆ ಪಂಚಾ||ಪ||

ಆವಾವ ಕಾಲದ ಆನಂದರಮನೆ| ತಾವರೆ ತಲಿತದ ನದಿಯ ಮನೆ|| ಆವಾಗ ಕಮಲಜ ಅವತರಿಸಿದ ಮನೆ| ಆ ವೇದಂಗಳಿಗೆಲ್ಲ ತೌರುಮನೆ ಪಂಚಾ|| 1 ||

ಚಿತ್ರವಳಿದಲ್ಲಿಯ ಮನೆ ಚಿನ್ಮಯಾರೂಪದ ಮನೆ| ನಿತ್ಯಲೋಕಾಗಳ ರಕ್ಷಿಸುವ ಮನೆ|| ಭಕ್ತಜನರನೆಲ್ಲ ಉದ್ಧರಿಸಿದ ಮನೆ| ಮುಕ್ತಿ ಸಾಯುಜ್ಯಕೆ ಕಡೆಯಿಲ್ಲ ಮನೆ ಪಂಚಾ||2||

ಹಂಗಿಲ್ಲದ ಮನೆ ಹಾದಿಯ ಬಿಡದೆ ಹಾಲು| ಗಂಗಿಯವದು ರಕ್ಷಿಸುವ ಮನೆ|| ಮೂ| ರಮ್ಗನೆರುಳ್ಳ ಮುಕ್ತಿ ಸಾಧನಕಿನ್ನು ಇಂಧಾ| ಕಂಗಳ ಪುನ್ಯಕಿನ್ನು ಕಡೆಯಿಲ್ಲ ಮನೆ ಪಂಚಾ||3||

ಧ್ವಜವಜ್ರಾಂಕಿತರೇಖಾ ಶಂಖ ಚಕ್ರದ ಮನೆ| ನಿಜ ಸುವರ್ಣರೇಖಾ ತೋರುವ ಮನೆ|| ಗಜರಾಜಗೊಲಿದಂಥ ಗರುದವಾಹನನಾದ ಇಂಥಾ| ಕಂಗಳ ಪುಣ್ಯಕಿನ್ನು ಕಡೆಯಿಲ್ಲ ಮನೆ ಪಂಚಾ||4||

ದ್ವಜವಜ್ರಾಂಕಿತರೇಖಾ ಶಂಖ ಚಕ್ರದ ಮನೆ| ನಿಜ ಸುವರ್ಣರೇಖಾ ತೋರುವ ಮನೆ|| ಗಜರಾಜಗೋಲಿದಂಥ ಗರುಡವಾಹನಾದ ಇಂಥಾ| ಮೂಜಗ ತ್ರೈಲೋಕ್ಯ ಮಾಡಿದ ಮನೆ ಪಂಚಾ ||5|| 

ಪರಮ ಪವಿತ್ರ ಚರಿತ್ರತೀರ್ಥರ ಮನೆ| ಪರಬರಬ್ರಹ್ಮ ರಥಕೆ ಸಾಧನದ ಮನೆ|| ಪರಮಾತ್ಮನಾಗಿ ಶ್ರೀ| ವರನಾದ ಪುರಂದರವಿಠಲನ ಮನೆ ಪಂಚಾ||6|| 

 

ಗಂಗಾದಿ ಸಕಲ

ಗಂಗಾದಿ ಸಕಲ ತೀರ್ಥಂಗಳಿಗತಧಿಕ| ಶ್ರೀಹರಿಯ ನಾಮ|| 

ಹಿಂಗದೆ ನೆನೆವರ್ಗೆ ಮಂಗಳ ಫಲವೀವ| ಹರಿಯ ನಾಮ| ||ಪ|| 

 

ಸ್ನಾನ ಜಪಂಗಳ ಸಾಧಿಸದವನಿಗೆ| ಹರಿಯ ನಾಮ|| 

ಜ್ಞಾನವನರಿಯದ ಮೂಧಾತ್ನನಿಗೆ  ಇದು| ಹರಿಯ ನಾಮ ||1||

 

ವೇಧಶಾಸ್ತ್ರಂಗಳನೋಡದ ಮನುಜಗೆ| ಹರಿಯ ನಾಮ|| 

ಸಾಧನಗಳ ನಾಲ್ಕು ಸಾಧಿಸದವನಿಗೆ|| ಹರಿಯ ನಾಮ||೨||

 

ಕಾಲನ ದೂತರ ತರಿದು ಬಿಸುದುವುದು| ಹರಿಯ ನಾಮ|| 

ಲೋಲ ಶ್ರೀ ಪುರಂದರ ವಿಠಲನ ಒಲುಮೆಗೆ|| ಹರಿಯ ನಾಮ||೩||

 

ಗಜವದನ ಬೇಡುವೆ

 

ಗಜವದನ ಬೇಡುವೆ| ಗೌರಿತನಯ ||ಪ|| 

ತ್ರಿಜಗ ವಂದಿತನೆ ಸುಜನರ ಪೊರೆವನೆ||ಅ||

 

ಪಾಶಂಕುಶಧರ ಪರಮಪವಿತ್ರ ಮೂಷಿಕವಾಹನ ಮುನಿಜನ ಪ್ರೇಮ||1||

 

ಮೊದದಿನಿನ್ನಯ ಪಾದವ ತೋರೋ ಸಾಧುವಂದಿತನೆ ಆದರದಿಂದಲೆ||೨||

 

ಸರಸಿಜನಾಭ ಶ್ರೀಪುರಂದರ ವಿಠಲನ| ನಿರತ ನೆನೆಯುವಂತೆ ದಯಮಾಡೋ||೩||

 

 

ಗಾಜುಗನಾಡುತಲಿರ್ದನು

 

ಗಾಜುಗನಾಡುತಲಿರ್ದನು ನಮ್ಮ ರಂಗ ||ಪ|| 

ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು||ಅ||

 

ಒಂದನ್ನೇ ಹಾರಿಸಿದ| ವೇಗದಿ ಮ| ತ್ತೊಂದರಲಿ ತಾ ಬಡೆದ|| 

ಒಂದೆ ಬಾರಿಗೆ ಎಲ್ಲಾ ಗಜುಗವ ಗೆಲಿದನು||1||

 

 ಬಚ್ಚಿಟ್ಟ ಗಜ್ಜುಗವ | ಹುಡುಕೆಂದು| ಅಚ್ಚುತ  ನಗುತ ನಿಂತ||

ಮುಚ್ಚಿಟ್ಟ ಗಜುಗವು ದೊರಕಲಿಲ್ಲವೂ ಎಂದ ||೨||  

 

ಕಾಕಾಚಿ ------ಯಿತು | ಎನುತಲಿ ರಂಗ| 

ಆಕಾಶವನು ತೋರಿದ ಗಜುಗವ ನಿಮಗೆ ತರುವೆ ಎಂದ||೩||

 

 ಗಾಜುಗ ಗಿದಗಳನೆಕ| ತೋರಿದವಯ್ಯ| ಗಾಜುಗ ಗೊಂಚಲುಗಳನೆಕ|| 

ಗಜುಗದ ಗಂಟುಗಳ್ ಕಚ್ಚಿದರು ಮಕ್ಕಳು ಕೂಡ ಸಂಭ್ರಮ ಮಾತು ||4||

 

ಭೂಮ್ಮನ ಪಡೆದಂಥ| ಚಿಕ್ಕ ಕೂಸು| ಅಮ್ಮನೇ ತೊಡೆಯ ಮೇಲೆ| 

ಗಮ್ಮನೆ  ಮಲಗಿದ ಆಟಂಗಳನೆ  ಬಿಟ್ಟು||6|| 

 

ಸುರರು ವಂದಿಸಿ ನಿಲ್ಲಲು| ಯಕ್ಷ ಕಿನ್ನರರು| ಸ್ವರವೆತ್ತಿ ಸ್ತುಥಿಗೈಯ್ಯಲು|| 

ದೊರೆ ತಂದೆ ಪುರಂದರ ವಿಠಲನು ಒಪ್ಪಿದ||೭||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023