ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಯ)

ಯದುಕುಲನಂದನನ ನೋಡುವ

ಯದುಕುಲನಂದನನ ನೋಡುವ ಬಾಲೆ ಲಲಿತಾಂಗಿ ||ಪ||

ಹದಿನಾಲ್ಕು ಜಗವ ಪೊರೆವ ನೀಲಮೇಘಾಂಗನ ||ಅ||

 

ಬಿಗಿದುಟ್ಟು ಕನಕಾಂಬರ ಕಾಂಚಿಯ ದಾಮನ| ನಗುಮುಖದ ಶ್ರೀಧರನ |

ಅಗಣಿತ ಗುಣನಿಧಿ| ಜಗವ ಮೋಹಿಪ ಕೃಷ್ಣನ ||೧||

 

ಸಣ್ಣ ಪೊಂಗೊಳಲೂದುತ|ಸಣ್ಣ ಸನ್ನೆ ಮಾಡುತ|

ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||೨||

 

ಮಂದಹಾಸಮುಖಾಂಬುಜ| ಪೊಂದಿದಂಥ ಗಂಧ ಕಸ್ತೂರಿ ತಿಲಕ|

ಬಂದ ನಮ್ಮ ಪುರಂದರವಿಠಲ| ಇಂದಿರೇಶ ಯದುನಂದನನ ನೋಡುವ||೩||

 

ಯಮನೆಲ್ಲೊ ಕಾಣನೆಂದು 

ಯಮನೆಲ್ಲೊ ಕಾಣನೆಂದು ಹೇಳಬೇಡ ||ಪ||

ಯಮನೇ ಶ್ರೀರಾಮನು ಸಂದೇಹ ಬೇಡ ||ಅ||

 

ನಂಬಿದ ವಿಭೀಷಣಗೆ ರಾಮನಾದ| 

ನಂಬದಿದ್ದ ರಾವಣಗೆ ಯಮನಾದ ||೧||

 

ನಂಬಿದ ಅರ್ಜುನಗೆ ಬಂಟನಾದ | 

ನಂಬದಿದ್ದ ಕೌರವಗೆ ಕಂಟಕನಾದ ||೨||

 

ನಂಬಿದ ಉಗ್ರಸೇನಗೆ ಮಿತ್ರನಾದ | 

ನಂಬದಿದ್ದ ಕಂಸನಿಗೆ ಶತ್ರುವಾದ||೩||

 

ನಂಬಿದ ಬಾಲಕನಿಗೆ ಹರಿಯಾದ|

ನಂಬದಿದ್ದ ಅವನ ಪಿತಗೆ ಅರಿಯಾದ||೪|

 

ನಂಬಿದವರ ಸಲಹುವ ನಮ್ಮ ದೊರೆಯು|

ಅಂಬುಜಾಕ್ಷ ಪುರಂದರವಿಠಲರಾಯ ||೫||

 

ಯಶೋಧೆ ನಿನ್ನ ಕಂದಗೆ

ಯಶೋಧೆ ನಿನ್ನ ಕಂದಗೆ ಏಸು ರೂಪವೆ||ಪ||

ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ||ಅ||

 

ಹಸುಗಳ ಕರೆವಲ್ಲಿ ಹಲವು ರೂಪ ತೋರುವ| 

ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ | 

ಮೊಸರ ಕಡೆಯುವಲ್ಲಿ ಮುಂದೆತಾ ನಿಂತಿರುವ| 

ಹಸನಾಗಿ ಮೋಸಮಾಡಿ ಬೆಣ್ಣೆಯ ಮೆಲುವ||೧||

 

ಒಬ್ಬರ ಮನೆಯಲ್ಲಿ ಮಲಗಿ ತಾನಿರುವ| 

ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ |

ಒಬ್ಬರಮನೆಯಲ್ಲಿ ರತಿಕ್ರೀಡೆಯಾಡುತಿರುವ|

ಒಬ್ಬರ ಮನೆಯಲ್ಲಿ ಪುಟಿ ಚೆಂಡನಾಡುವ||೨||

 

ಹಿಂದೆತಾನಿಂದಿರುವ ಮುಂದೆ ಹೋಗುತ್ತಿರುವ |

ಇಂದು ಮುಖಿಯರ ಕೂಡೆ ಸರಸವಾಡುತಿರುವ|

ಬಂದು ನೋಡೆ ಯಶೋಧೆ ಬಣ್ಣದ ಮಾತಲ್ಲ | 

ನಂದಗೋಪನ ಕಂದ ಪುರಂದರ ವಿಠಲ ||೩||

 

ಯಾಕೆ ನಿರ್ದಯನಾದೆಯೋ

 

ಯಾಕೆ ನಿರ್ದಯನಾದೆಯೋ ಹರಿಯೆ  ||ಪ||

 

ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ  ||ಅ ಪ||

 

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು 

ಹಿಂಗದೆ ಪ್ರಹ್ಲಾದನಪ್ಪಿಕೊಂಡೆ 

ಮಂಗಳಪದವಿತ್ತು ಮನ್ನಿಸಿದ ಆವ ನಿನಗೆ 

ಬಂಗಾರವೆಷ್ಟು ಕೊಟ್ಟನು ಪೇಳೂ ಹರಿಯೆ ||೧||

 

ಸಿರಿದೇವಿಗೆ ಹೇಳದೆ ಸೆರಗುಸಂವರಿಸದೆ 

ಗರುಡನ ಮೇಲೆ ಗಮನವಾಗದೆ 

ಭರದಿಂದ ನೀ ಬಂದು ಕರಿಯನುದ್ದರಿಸಿದೆ

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ  ||೨||

 

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ 

ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ 

ಭಜನೆಗವರೇ ಹಿತರೆ ನಾ ನಿನಗೆ ಅನ್ಯನೆ 

ತ್ರಿಜಗಪತಿ ಸಲಹೆನ್ನ ಪುರಂದರವಿಠಲ  ||೩||

 

 

ಯಮದೂತರಿನ್ನೇನು ಮಾಡುವರು

ಯಮದೂತರಿನ್ನೇನು ಮಾಡುವರು ಪೇಳೋ | ರಮೆಯರಸನೆ ನಿನ್ನ ಅರಕೆಯುಳ್ಳವರಿಗೆ || ಪ||

 

ಮಂಡಲದೊಳೊಬ್ಬ ಜಾರ ಸ್ತ್ರೀಯಳು ತನ್ನ | ಗಂಡನರಿಕೆಯಿಂದ ವ್ಯಭಿಚಾರಗೈಯೆ |

ಮಂಡಲಪತಿಯು ಶೋಧಿಸಿ ಹಿಡಿದೆಳೆತಂದು | ಬಂಡು ಮಾಡಲು ಬೆದರುವಳೆ ಕೇಳೆಲೋ ಹರಿ ||೧||

 

ಕಳವಿನ ಒಡವೆಯ ಒಡೆಯಗೆ ಪಾಲೀವ | ಕಳ್ಳಬಂಟ ಕನ್ನ ಕೊರೆಯುತ್ತಿರೆ |

ಕಳವು ಮಾಡಿದನೆಂದು ಹಿಡಿದೆಳೆತಂದರೆ ತಂಅವಾರನೇನು ಮಾಡುವನು ಕೇಳೆಲೋ ಹರಿ||೨||

 

ಮನವಚನದಲಿ ಮಾಡಿದ ಪುಣ್ಯ ಪಾಪಗಳ | ನಿನಗರ್ಪಿಸುವೆ ಕಾಲಕಾಲದಲಿ | 

ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವ | ಎನಗೊಬ್ಬರೇನು ಮಾಡುವರು ಕೇಳೆಲೋ ಹರಿ ||೩||

 

ಯಲ್ಲಾಮ್ಮನಲ್ಲವೆ ಸಿರಿದೇವಿ ಎಲ್ಲಾರಮ್ಮನಲ್ಲವೆ

ಯಲ್ಲಾಮ್ಮನಲ್ಲವೆ ಸಿರಿದೇವಿ ಎಲ್ಲಾರಮ್ಮನಲ್ಲವೆ || ಪ ||

ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ||ಅ ಪ ||

 

ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಲು ||

ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳ ತೀರುವಂತೆ ಮಾಡಿದ ||೧||

 

ಅಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಮಾತಾ ||

ಸಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||೨||

 

ಎರಡೋಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀವರ ಯೋಗ್ಯತೆಯಂತೆ ಪಾಲಿಸುತಿಪ್ಪಳು ||

ಪರಮ ಪುರುಷ ನಮ್ಮ ವಿಜಯ ವಿಠಲನ್ನ | ಕರಣದಿಂದಲಿ ಅನಂತ ಕಲ್ಪಕೆ ನಿತ್ಯ||೩||

 

ಯಮನೇ ದುರಿತೋಪ ಶಮನೇ

ಯಮನೇ ದುರಿತೋಪ ಶಮನೇ ||ಪ|| 

ಕರ್ಮ ಪರಿಹರಿಸಲು ಖಳದಮನೆ ದಯವಂತೆ ||ಅ|| 

 

ಶರಣೆಂಬೆ ತನ ಪಾದಾಂಬುರುಹ ಯುಗಳಿಗೆ ದಿವಾ| ಕರತನಯೆ ಸಪ್ತಸಾಗರ ಭೇಧಿನೀ |

ಹರಿತೋಷ ಲಾಭ ಸುಂದರಿ ಸುಭೆಗೆ ನಿನ್ನ ಸಂ|ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ||೧||

 

ಮಕರಾದಿ ಮಾಸದಲಿ ವಿಖನಸಾವರ್ತ ದೇ|ಶಕೆ ಬಂದು ವಿಜ್ಞಾನಭಕುತಿಯಿಂದಾ|

ತ್ರಿಕರಣ ಶುದ್ಧಿಯಲಿ ಸಕೃತಸ್ನಾನವ ಗೈಯೆ| ಸಕಲಸುಖವಿತ್ತು ದೇವಕೀ ಸುತನ ತೋರಿಸುವೆ ||೨||

 

ಕನಕಗರ್ಭಾವೆನಿಪ ದೇಶದಲಿ ಸ|ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವ ಪಾದ್ಯಗೆ 

ವಿಮಲ ಮುನಿಯಂತೆ ನಿರುತ ಕುಂ|ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ||೩||

 

ಜಮದಗ್ನಿ ಮುಖ್ಯಸಂಯಮಿಗಳನುದಿನದಿ ಆ|ಶ್ರಮವ ತ್ರಿವೇಣಿ ಸಂಗಮದಿ ರಚಿಸಿ|

ತಮ ತಮ್ಮೊಳಗೆ ರಮಣಾರಮಣ ದಾಮೋದರನ | ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು ||೪||

 

ಪಿಂಗಳಾಧಿಷ್ಟತೆ ಶುಭಾಂಗಿ ಸುಮನವಿತ್ತು | ಕಂಗೊಳಿಸು ಎನ್ನಂತರಂಗದಲಿ ತುಂಬ ಸುಮಹಿಮ ಜಗನ್ನಾಥವಿಠ್ಠಲನ ಸುಗು|ಣಂಗಳ ತುತಿಪುದಕೆಮಂಗಳ ಮತಿಯನೀಯೇ ||೫||

 

ಯಂತ್ರ ದೊರಕಿತು ಎನಗೆ

ಯಂತ್ರ ದೊರಕಿತು ಎನಗೆ|ಯಂತ್ರ ದೊರಕಿತು ||ಪ||

ಯಂತ್ರವಾಹಕ ನಾರಾಯಣನ ಅಂತರಂಗದಿ ನೆನೆಉವಂಥ ||ಅ||

 

ಆಸೆಯಿಂದ ಮುಳುಗೋದಲ್ಲ ಕ್ಲೇಶಬಟ್ಟು ತಿರುಗೋದಲ್ಲ|

ವಾಸುದೇವ ಕೃಷ್ಣನೆಂಬ ಶಾಶ್ವತವಾದ ದಿವ್ಯನಾಮ  ||೧||

 

ಹಾಸಬಹುದು ಹೊಡೆಯಬಹುದು ಸೂಸಿ ಒದಲ ತುಂಬಬಹುದು |

ದಾಸರನ್ನು ಬಿಡದೆ ಪೊರೆವ ಶ್ರೀಶನೆಂಬ ದಿವ್ಯನಾಮ||೨||

 

ಒಂದು ಬಾರಿ ಸ್ಮರಿಸಿದರೆ ಇಂದು ಕೋಟಿ ಯಜ್ಞಫಲವು|

ಇಂದಿರೇಶ ಪುರಂದರ ವಿಠವನೆಂಬ ದಿವ್ಯನಾಮ||೩||

 

 

ಯದುಕುಲನಂದನನ ನೋಡುವ

ಯದುಕುಲನಂದನನ ನೋಡುವ ಬಾಲೆ ಲಲಿತಾಂಗಿ ||ಪ||

ಹದಿನಾಲ್ಕು ಜಗವ ಪೊರೆವ ನೀಲಮೇಘಾಂಗನ ||ಅ||

 

ಬಿಗಿದುಟ್ಟು ಕನಕಾಂಬರ ಕಾಂಚಿಯ ದಾಮನ| ನಗುಮುಖದ ಶ್ರೀಧರನ |

ಅಗಣಿತ ಗುಣನಿಧಿ| ಜಗವ ಮೋಹಿಪ ಕೃಷ್ಣನ ||೧||

 

ಸಣ್ಣ ಪೊಂಗೊಳಲೂದುತ|ಸಣ್ಣ ಸನ್ನೆ ಮಾಡುತ|

ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||೨||

 

ಮಂದಹಾಸಮುಖಾಂಬುಜ| ಪೊಂದಿದಂಥ ಗಂಧ ಕಸ್ತೂರಿ ತಿಲಕ|

ಬಂದ ನಮ್ಮ ಪುರಂದರವಿಠಲ| ಇಂದಿರೇಶ ಯದುನಂದನನ ನೋಡುವ||೩||

 

ಯಮನೆಲ್ಲೊ ಕಾಣನೆಂದು 

ಯಮನೆಲ್ಲೊ ಕಾಣನೆಂದು ಹೇಳಬೇಡ ||ಪ||

ಯಮನೇ ಶ್ರೀರಾಮನು ಸಂದೇಹ ಬೇಡ ||ಅ||

 

ನಂಬಿದ ವಿಭೀಷಣಗೆ ರಾಮನಾದ| 

ನಂಬದಿದ್ದ ರಾವಣಗೆ ಯಮನಾದ ||೧||

 

ನಂಬಿದ ಅರ್ಜುನಗೆ ಬಂಟನಾದ | 

ನಂಬದಿದ್ದ ಕೌರವಗೆ ಕಂಟಕನಾದ ||೨||

 

ನಂಬಿದ ಉಗ್ರಸೇನಗೆ ಮಿತ್ರನಾದ | 

ನಂಬದಿದ್ದ ಕಂಸನಿಗೆ ಶತ್ರುವಾದ||೩||

 

ನಂಬಿದ ಬಾಲಕನಿಗೆ ಹರಿಯಾದ|

ನಂಬದಿದ್ದ ಅವನ ಪಿತಗೆ ಅರಿಯಾದ||೪|

 

ನಂಬಿದವರ ಸಲಹುವ ನಮ್ಮ ದೊರೆಯು|

ಅಂಬುಜಾಕ್ಷ ಪುರಂದರವಿಠಲರಾಯ ||೫||

 

ಯಶೋಧೆ ನಿನ್ನ ಕಂದಗೆ

ಯಶೋಧೆ ನಿನ್ನ ಕಂದಗೆ ಏಸು ರೂಪವೆ||ಪ||

ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ||ಅ||

 

ಹಸುಗಳ ಕರೆವಲ್ಲಿ ಹಲವು ರೂಪ ತೋರುವ| 

ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ | 

ಮೊಸರ ಕಡೆಯುವಲ್ಲಿ ಮುಂದೆತಾ ನಿಂತಿರುವ| 

ಹಸನಾಗಿ ಮೋಸಮಾಡಿ ಬೆಣ್ಣೆಯ ಮೆಲುವ||೧||

ಒಬ್ಬರ ಮನೆಯಲ್ಲಿ ಮಲಗಿ ತಾನಿರುವ| 

ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ |

ಒಬ್ಬರಮನೆಯಲ್ಲಿ ರತಿಕ್ರೀಡೆಯಾಡುತಿರುವ|

ಒಬ್ಬರ ಮನೆಯಲ್ಲಿ ಪುಟಿ ಚೆಂಡನಾಡುವ||೨||

 

ಹಿಂದೆತಾನಿಂದಿರುವ ಮುಂದೆ ಹೋಗುತ್ತಿರುವ |

ಇಂದು ಮುಖಿಯರ ಕೂಡೆ ಸರಸವಾಡುತಿರುವ|

ಬಂದು ನೋಡೆ ಯಶೋಧೆ ಬಣ್ಣದ ಮಾತಲ್ಲ | 

ನಂದಗೋಪನ ಕಂದ ಪುರಂದರ ವಿಠಲ ||೩||

 

 

ಯತಿಕುಲ ಶಿರೋರನ್ನ - ಪತಿತ ಜನ ಪಾವನ್ನ

ಯತಿಕುಲ ಶಿರೋರನ್ನ - ಪತಿತ ಜನ ಪಾವನ್ನ | 

ಮತಿ ವಿಕಳ ನಾದೆನ್ನ - ಉದ್ಧರಿಸೋ ರನ್ನ||ಪ||

 

ಸರಿದ್ಯಮುನೆ ಕೂಲಸ್ಥ - ವರ ಪರಾಶರ ಭವನೆ| ವಿರಚಿಸುತ ಬಹುಗ್ರಂಥ - ತೋರ್ದೆ ಸತ್ಪಂಥ |

ವರಕುವರ ಶುಕಮುನಿಗೆ - ಒರೆದು ಶ್ರೀ ಭಾಗವತ | ಶರನ ಜನ ಭವ ಜನಿತ - ದುಃಖಗಳಹರ್ತಾ||೧||

 

ಗೋವುಗಳುದ್ಗೀಥ - ಗೋವಿಂದಾಂ ಪತಿ ಖ್ಯಾತ | ಪಾದಿನಾಮದ ಹರ್ತ - ಲೋಕಕರ್ತಾ|

ನೋವಿಲ್ಲದವನೆ ಗುರು - ಗೋವಿಂದ ವಿಠಲ ಹರಿ | ಭಾವದಲಿ ತವರೂಪ -  ಕೋರ್ವೆ ಬಹುರೂಪ ||೨||

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023