ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಲ)

ಲಾಲಿಸಿದಳು ಮಗನ ಯಶೋದೆ

 

ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ |ಪ|

 

ಅರಳೆಲೆ ಮಾಂಗಾಯಿ ಬೆರಳಿಗುಂಗುರವಿಟ್ಟು

ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ |೧|

 

ಬಾಲಕನ ಕೆನೆವಾಲ ಮೊಸರನೀವೆ

ಲೀಲೆಯಿಂದಲಿ ಎನ್ನ ತೋಳ್ಮೇಲ್ಮಲಗೆಂದು |೨|

 

ಮುಗುಳುನಗೆಯಿಂದ ಮುದ್ದು ತಾ ತಾರೆಂದು

ಜಗದೊಡೆಯನ ಶ್ರೀ ಪುರಂದರ ವಿಠಲನ ||೩||

 

ಲಂಗೋಟಿ ಬಲು ಒಳ್ಳೆಯದಣ್ಣ

 

ಲಂಗೋಟಿ ಬಲು ಒಳ್ಳೇದಣ್ಣ

ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣ |ಪ|

 

ಬಡವರಿಗಾಧಾರವಣ್ಣ ಈ ಲಂಗೋಟಿ

ಭೈರಾಗಿಗಳ ಭಾಗ್ಯವಣ್ಣ

ಕಡುಕಳ್ಳರಿಗೆ ಗಂಡ ಮಾಡಿಸುತ್ತಗಳ ಮಿಂಡ

ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ |೧|

 

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ

ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು

ಅತಿಶಯವಿದೆ ಆಂಜನೇಯ ನಾರದರಿಗೆ

ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ |೨|

 

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ

ಪೊಡವಿಯೊಳ್ ಯಾಚಕರಿಗೆ ನೆರವು 

ದೃಢ ಭಕ್ತ ಬಲಿಚಕ್ರವರ್ತಿಗಾಗಿ ನಮ್ಮ

ಒಡೆಯ ಶ್ರಿ ಪುರಂದರ ವಿಠಲ ಧರಿಸಿದಂಥ |೩|


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023