ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಉ)

ಉದ್ದರಿಸೊ ಮಹಾರಾಯ ಮಧ್ವಾಂತರ್ಗತ

     ಉದ್ದರಿಸೊ ಮಹಾರಾಯ ಮಧ್ವಾಂತರ್ಗತ ಉದ್ಧವ ಪ್ರೀಯ | ಬಿದ್ದಿಹೆ ಸಂಸಾರಾಬ್ಧಿಯೊಳಗೆ ತಾನೆದ್ದೆನೆಂದರೆ ಪದ್ಧತಿ ಕಾಣೆನ್ನುದ್ಧರಿಸೊ ಮಹಾರಾಯ | ಕರ್ಮಕಾಲಫಲ ಊರ್ಮಿಯೊಳಗೆ ನಾ | ನಿರ್ಮಲ ಕಾಣೆನೊ ಶರ್ಮವ ಕೊಟ್ಟನ್ನುದ್ಧರಿಸೊ | ಚಿನ್ನವ ಬಿನ್ನಪ ಮನಕೆ ತಂದು | ಬನ್ನತರಿಪ ಪಥವನ್ನು ತೋರಿಸೆನ್ನುದ್ಧರಿಸೊ | ದಾಸರ ಬಿನ್ನಪ ಎನ್ನ ದೇ ತಂದೆ | ವಾಸುದೆವದೂರಿ ಈ ಸಮಯದಿ ಎನ್ನುದ್ಧರಿಸೊ ||

 

ಉತ್ತಮೋತ್ತಮ ದೈವ

     ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ | ಮತ್ತೆ ಅನ್ಯ ದೈವನಾರಿಸಲ್ಯಾತಕೆ ||ಧ್ರುವ|| ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ | ಚಿತ್ತಚಂಚಲವಾಗುವ ಸಂದೇಹವ್ಯಾತಕೆ | ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೊರಲಿಕ್ಕೆ | ಮತ್ತೆ ಆವ್ಹಾನ ವಿಸರ್ಜನವ್ಯಾತಕೆ | ವಾಸವಾಗಿ ಯೆನ್ನಾತ್ಮದೊಳು ನೀನೆ ಎನ್ನ ಈಶನಾಗಿರಲಿಕ್ಕೆ | ಸೋಶಿಲೆ ಅನೇಕ ವೇಷ ದೋರುವುದ್ಯಾತಕೆ ||೨|| ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ| ಬಿನುಗುದೈವದ್ಹಂಗು ತಾ ಇನ್ನೊಂದು ಯಾತಕೆ |

ಮನದ ಮಂಗಳನಾಗಿ ನೀ ಮಹಿಪತಿಗೆ ಭಾಸುರಲಿಕ್ಕೆ | ಅನುಭವಕ್ಕನುಮಾನ ಮಾದುವುದ್ಯಾತಕೆ ||೩||

ಉ೦ಬುವ ಬನ್ನಿರೋ ಆನಂದದೂಟವ

     ಉ೦ಬುವ ಬನ್ನಿರೋ ಆನಂದದೂಟವ | ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ||ಧ್ರುವ|| ಬಡಿಸಿಹಿದು ನೋಡಿ ಅನೇಕ ಪರಿಯಲಿ | ಎಡಬಲಕೆ ನೋಡಲಾಗದಾನಂದ ಘನಲೀಲೆ ||೧|| ಇಡಿದು ತುಂಬಿದೇ ನಿಧಾನದೂಟವು | ನೋಡಲಿಕ್ಕೆ ತೃಪ್ತಿಗೈಸುತ್ತಿಹುದು ನೋಟವು ||೨|| ಬೇಡಿಸಿಕೊಳ್ಳದೆ ಬಡಸುತಿಹ್ಯನು | ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು ||೩||

ಉದಯವಾಯಿತು  ಹೃದಯ ಕಮಲದೊಳಗೆ

     ಉದಯವಾಯಿತು  ಹೃದಯ ಕಮಲದೊಳಗೆ ||ಧ್ರುವ|| ಗುರುಕರುಣಾನಂದಬೋಧ ಅರುಣೋದಯವಾಯಿತು | ಸ್ಮರಣಿಗರವು ದೊರೆಯಿತು ಹರಿಯು ಚರಣದ ||೧|| ಸಂಯಜ್ನಾನದ ಪ್ರಭೆ ಸಂಯವಾಗಿದೋರಿತು | ತಾಮಸನಿದ್ರೆ ಹರಿಯಿತು ತಿಮಿರಾಂಧದ ||೨|| ಥಳಥಳಿಸುವ ರವಿಕೋಟಿ ಬೆಳಗಾಯಿತು | ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ ||೩|| ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಫಲ | ಉದಯವಾಯಿತದ್ರುಷ್ಟವು ಸದೃಷ್ಟವಾಗಿ ||೪||

ಸದ್ಗತಿ ಸುಖವಿದು ಸದೋದಿತವಾಯಿತು | ಸಾಧಿಸಿ ಮಹಿಪತಿಗೆ ಸದ್ಗುರು ಕೃಪೆಯು ||೫||

ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ

     ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ | ಪದುಮನಾಭನ ಸತಿ ಉದ್ಧರಿಸೆನ್ನನೆಂದು | ಉದಕವೆರೆದು ನಮಸ್ಕರಿಸಿ ವಂದಿಸುತಲಿ | ಸುಧೆಯ ಸುರರಿಗಿತ್ತ ಧನ್ವಂತರಿ ನಯನದಿ | ಉದಿಸಿದೆ ಆನಂದ ಅಶ್ರುಗಳಿಂದಲಿ | ಮದಗರ್ವ ಬಿಡಿಸೆನ್ನ ಶುದ್ಧಿಯನ್ನೆ ಮಾಡಿ | ಹೃದಯದಿ ಹರಿಯ ತೋರಿ ರಕ್ಷಿಸೆಂದೆನಲು | ಸದ್ದಿಲ್ಲದೆ ಪೊರೆವ ಗೋಪಾಲಕೃಷ್ಣವಿಠಲ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022