ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಋ)

ಋತುಮತಿ ಬಿಡು

     ಋತುಮತಿ ಬಿಡು ಬಿಡು ಸೆರಗ| ನೀ| ಋತುವಾದರೆ ನಾ ರತಿ ಕೊಡಬರುವೆ|| ಅಣ್ಣಯ್ಯ ಕೃಷ್ಣ ಬಿಡೊ ಸೆರಗ| ನಾ| ಅಣ್ಣನಲ್ಲವೆ ನಿನ್ನ ಅಣ್ಣನ ಭಾವ ||೧|| ಭಾವಯ್ಯ ಕೃಷ್ಣ ಬಿಡೊ ಸೆರಗ | ನಾ|ಭಾವನಲ್ಲವೆ ನಿನ್ನ ಭಾವನ ತಮ್ಮ|| ತಮ್ಮಯ್ಯ ಕೃಷ್ಣ ಬಿಡೊ ಸೆರಗ| ನಾ| ತಮ್ಮನಲ್ಲವೆ ನಿನ್ನ ತಮ್ಮನ ಬೀಗ ||೨||  ಬೀಗಯ್ಯ ಕೃಷ್ಣ ಬಿಡೊ ಸೆರಗ| ನಾ| ಬೀಗನಲ್ಲವೆ ನಿನ್ನ ಬೀಗನ ಬೀಗ|| ಮಾವಯ್ಯ ಕೃಷ್ಣ  ಬಿಡೊ ಸೆರಗ| ನಾ| ಮಾವನಲ್ಲವೆ ನಿನ್ನ ಮಾವನ ಮಗನು ||೩|| ಕಂದಯ್ಯ ಕೃಷ್ಣ ಬಿಡೊ ಸೆರಗ| ನಾ| ಕಂದನಲ್ಲವೆ ನಿನ್ನ ಕಂದನ ತಂದೆ ಗಂಡಯ್ಯ ಕೃಷ್ಣ ಬಿಡೊ ಸೆರಗ ನಾ| ಗಂಡನಲ್ಲವೆ ನಿನ್ನ ಗಂಡನ ಮಿಂಡ ||೪|| ಅರಸಯ್ಯ ಕೃಷ್ಣ ಬಿಡೊ ಸೆರಗ| ನಾ| ಅರಸನಲ್ಲವೆ ನಿನ್ನ ಸರಸಕ್ಕೆ ಬಂದೆ|| ಗೊಲ್ಲರ ಗೋಕುಲದೊಳಗೆ| ಎನ್ನ|| ಪುಲ್ಲಲೋಚನ ಶ್ರೀಪುರಂದರವಿಠಲ ||೫||

 

 

ಋಷಿಗಳ ಋಣ ಪೂರ್ವಾಶ್ರಮದಿಂದ

     ಋಷಿಗಳ ಋಣ ಪೂರ್ವಾಶ್ರಮದಿಂದ ಪರಿಹಾರ ಶ್ರೀ - | ದಶರ ಋಣ ಮೆಧಾದಿಗಳು ಮಾಡೆ | ಅಸು ಸಂಬಂಧಿಗಳ ಋಣ ಗೃಹಸ್ತಾಶ್ರಮದಲಿ | ಪುಸಿಯಲ್ಲ ತಿದ್ದಿ ಹೋಗುವುದು ಸಿದ್ಧ | ವಸುಧೆಯೊಳಗೆ ಒಂದು ಕಾಸು ಕೊಟ್ಟವನ ಋಣ | ವಸುಧೆಯಲ್ಲ ತಿರುಗೆಪೋಗದಯ್ಯಾ | ಪಶುಪಾಲ ಅವ್ಯಯಾತ್ಮ ವಿಜಯವಿಠಲ ರಂಗ | ಬಸುರೊಳು ಪೊಗಲಿಟ್ಟು ಬೆಸಸದೆ ಬಿಡದಯ್ಯ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023