ಬಾಳೇ ಸಣ್ಣಪ್ಪ
ಬೇಕಾಗುವ ಸಾಮಗ್ರಿಗಳು
- ಬೆಳ್ತಿಗೆ ಅಕ್ಕಿ ಎರಡು ಲೋಟ
- ಬೆಲ್ಲದ ಪುಡಿ ಎರಡೂವರೆ ಲೋಟ
- ಇಡೀ ಅರಳು ಎರಡು ಲೋಟ
- ಬಾಳೆಹಣ್ಣು ಎರಡು
- ಕಾಯಿತುರಿ ಒಂದು ಲೋಟ
- ಎರಡು ಚಿಟಿಕೆ ಉಪ್ಪು
- ಕರಿಯಲು ಎಣ್ಣೆ
ಮಾಡುವ ವಿಧಾನ
- ಅಕ್ಕಿಯನ್ನು ತೊಳೆದು ಅರ್ಧಗಂಟೆ ನೆನೆಸಿ
- ನೀರನ್ನು ಬಸಿದು, ಅರಳು ಕಾಯಿತುರಿ ಬಾಳೆಹಣ್ಣು ಹಾಕಿ ಸಣ್ಣಗೆ ರುಬ್ಬಿ
- ಕೊನೆಯಲ್ಲಿ ಬೆಲ್ಲ ಉಪ್ಪು ಹಾಕಿ ತಿರುವಿ
- ನಿಂಬೇಗಾತ್ರದ ಉಂಡೆ ಮಾಡಿ ಎಣ್ಣೆಯಲ್ಲಿ ಕರೆಯಿರಿ
*** ಇದನ್ನು ಹಲಸಿನ ಹಣ್ಣಿನಲ್ಲಿ ಮಾಡಿದರೆ ಹಲಸಿನ ಸಣ್ಣಪ್ಪ ಆಗುತ್ತದೆ
*** ಒಂದೆರಡು ಕರಿಎಳ್ಳನ್ನು ಹುರಿದು ಹಿಟ್ಟಿಗೆ ಬೆರೆಸಿದರೆ ಇನ್ನೂ ಚೆನ್ನ