ಬೇಳೆ ಬೋಂಡಾ
ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ತೊಗರೀ ಬೇಳೆ
- ಒಂದು ಲೋಟ ಕಡಲೇ ಬೇಳೆ
- ಒಂದು ಲೋಟ ಉದ್ದಿನ ಬೇಳೆ
- ಹನ್ನೆರಡು ಹ.ಮೆ.ಕಾಯಿ
- ಒಂದು ಚೂರು ಶುಂಠಿ
- ಎರಡು ಕಂತೆ ಕೊತ್ತಂಬರಿ
- ಒಂದು ಕಂತೆ ಪುದೀನಾ ಸೊಪ್ಪು
- ಒಂದು ಚಮಚ ಉಪ್ಪು
- ಚಿಟಿಕೆ ಇಂಗು,
- ಕರಿಯಲು ಅರ್ಧ ಕಿಲೋ ಎಣ್ಣೆ
ಮಾಡುವ ವಿಧಾನ
- ಎಲ್ಲಾ ಬೇಳೆಗಳನ್ನು ನಾಲ್ಕು ಘಂಟೆ ನೀರಿನಲ್ಲಿ ನೆನೆಸಿ
- ನೆನೆದ ಬೇಳೆಗೆ ಇಂಗು,ಹ.ಮೆ.ಕಾಯಿ,ಶುಂಠಿ,,ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳೀ
- ರುಬ್ಬಿದ ಹಿಟ್ಟಿಗೆ ಕೊತ್ತಂಬರಿ,ಪುದೀನಾ ಸಣ್ನಗೆ ಹೆಚ್ಚಿ ಕಲಸಿ
- ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆ ಅಥವಾ ಬೋಂಡದ ಆಕಾರದಲ್ಲಿ ತಟ್ಟಿ ಕರಿಯುವುದು