ಅವರೇಕಾಯಿ ಟೊಮೊಟೋ ಭಾತ್
ಬೇಕಾಗುವ ಸಾಮಗ್ರಿಗಳು
- ಅಕ್ಕಿ1ಪಾವು
- ಹಸಿ ಅವರೇಕಾಳು1ಪಾವು
- ಟೊಮೊಟೋ 5
- ಈರುಳ್ಳಿ 3-4
- ಒಣಮೆಣಸಿನ ಕಾಯಿ 8-10
- ಗರಂ ಮಸಾಲ 1ಚಮಚ
- ಗಸಗಸೆ 1ಚಮಚ
- ಬಿಳಿ ಎಳ್ಳು1ಚಮಚ
- ಶುಂಟಿ 2ಗೋಲಿ ಗಾತ್ರ
- ಕೊತ್ತಂಬರಿ ಸೊಪ್ಪು 1ಕಂತೆ
- ತೆಂಗಿನ ತುರಿ 1ಬಟ್ಟಲು
- ಎಣ್ಣೆ 40 ಗ್ರಾಂ
- ಉಪ್ಪು 1-2 ಚಮಚ
ಮಾಡುವ ವಿಧಾನ
- ಮೆಣಸಿನ ಕಾಯಿ,ಎಳ್ಳು,ಗರಂ ಮಸಾಲ ಒಟ್ಟಿಗೆ ಹುರಿದು ನುಣ್ಣಗೆ ರುಬ್ಬಿಕೊಳ್ಳಿ
- ಪಾತ್ರೆಯಲ್ಲಿ ಎಣ್ಣೆಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿ,ಟೊಮೋಟೊ ಹಾಕಿ ಬಾಡಿಸಿ
- ನಂತರ ಅವರೇಕಾಯಿ ಸ್ವಲ್ಪನೀರು ಸೇರಿಸಿ ಕುದಿಸಿ ಬೇಯಿಸಿ
- ಅದಕ್ಕೆ ನೆನೆಸಿಟ್ಟ ಅಕ್ಕಿಗೆ ರುಬ್ಬಿದ ಮಸಾಲೆ,ಉಪ್ಪು ಸೇರಿಸಿ ಸುರಿದು ಅಕ್ಕಿ ಬೇಯುವ ವರೆಗೂ ಬೇಯಿಸಿ
- ಮೇಲೆ ಎರಡು ಚಮಚ ತುಪ್ಪ,ಕೊತ್ತಂಬರಿ ಉದುರಿಸಿ ಬಿಸಿಯಿರುವಾಗಲೇ ತಿನ್ನಲು ಕೊಡಿ