ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ವಸೂಲಿ(ಹಾಸ್ಯ)

picture

ಒಂಟಿಯಾಗಿ ಕಾಲ್ನಡಿಗೆ ಪ್ರಯಾಣ ಬಳಸಿದ್ದ ಗುಂಡನ ದಾರಿಗೆ ಅಡ್ಡವಾಗಿ ಒಬ್ಬ ಸಣಕಲು ದರೋಡೆಗಾರ ಪಿಸ್ತೂಲ್ ಹಿಡಿದು ನಿಂತ "ಎತ್ತೋ ದುಡ್ಡು, ಬಿಚ್ಚೋ ವಾಚು" ಅಂದ.ಅದಕ್ಕೆ ಗುಂಡ "ತಗೋಳಪ್ಪ ದುಡ್ಡು,ಆದರೆ ನನಗೊಂದು ಉಪಕಾರ ಆಗಬೇಕಲ್ಲಾ." ಎಂದ.ಅದಕ್ಕೆ ಕಳ್ಳ ರೇಗಿ ಹೇಳಿದ"ಏನದು ನನ್ನಿಂದ ಉಪಕಾರ?" ಎನ್ನಲು ಗುಂಡ "ನನ್ನ ಹೆಂಡತಿಗೆ ನನ್ನಲ್ಲಿದ್ದ ದುಡ್ಡು ಕಳ್ಳತನ ಆಯ್ತು ಅಂದರೆ ನನ್ನ ಮೇಲೆ ನಂಬಿಕೇನೇ ಇಲ್ಲ, ಅದಕ್ಕೆ ನನ್ನ ಟೊಪ್ಪಿಗೆ ನಿನ್ನ ಪಿಸ್ತೂಲ್ ನಿಂದ ಒಮ್ಮೆ ಶೂಟ್ ಮಾಡು" ಅಂದ. ಅದಕ್ಕೆ ಆ ದರೋಡೆಕಾರ "ಅಷ್ಟೇ ತಾನೆ"ಎಂದು, ಢಂ! ಎಂದು ಟೋಪಿಗೊಂದು ಗುಂಡು ಹಾರಿಸಿದ.ಗುಂಡ ಅಷ್ಟಕ್ಕೇ ಸುಮ್ಮನಾಗಲಿಲ್ಲ "ಅರೆರೆ ಹಾಗೇ ಈ ನನ್ನ ಕೋಟಿಗೂ ನಾಲ್ಕಾರು ಗುಂಡು ಹಾರಿಸು" ಎಂದ. ಆದರೆ ಆ ಕಳ್ಳ ಎರಡು ಗುಂಡು ಹಾರಿಸಿ ಸುಮ್ಮನಾದ.ಗುಂಡ "ಹೂ ಇನ್ನೂ ಒಂದೆರೆಡು ತೂತುಗಳು ಬೀಳಲೀ" ಎಂದ. ಅದಕ್ಕೆ ಕಳ್ಳ "ನನ್ನಲ್ಲಿ ಇದ್ದ ಬುಲೆಟ್ ಎಲ್ಲಾ ಖಾಲಿ ಆಗಿದ" ಅಂದ.  ತಕ್ಷಣ ಗುಂಡ "ನನಗೂ ಅದೇ ಬೇಕಿತ್ತು , ಎಲ್ಲಿ ಕೊಡು ನನ್ನ ದುಡ್ಡು, ಜೊತೆಗೆ ಈ ಟೊಪಿ ಕೋಟಿಗೂ ನಿನ್ನ ಹತ್ರ ಇರೋದನ್ನು ಕೊಡು ಇಲ್ಲದಿದ್ದ್ರೆ ಇಲ್ಲೇ ಈ ಛತ್ರಿಯಲ್ಲೇ ನಿನ್ನ ಚುಚ್ಚಿಚುಚ್ಚಿ ಸಾಯಿಸಿ ಬಿಡ್ತೀನಿ" ಎಂದು ಹೆದರಿಸಿ ಎಲ್ಲಾ ವಸೂಲಿ ಮಾಡಿಕೊಂಡೇ ಮನೆಗೆ ಹೊರಟ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025