ಸರ್ವಜ್ಞ (ಎ)
"ಎರೆಯಲ್ಲೊಲ್ಲದ ಲೋಭಿ |ಕರೆಯಲೊಲ್ಲದ ಆವು |
ಬರೆಗಾಲ ಪಯಣ, ಇವು ಮೂರು, ತನ್ನ ತಾ |
ನಿರಿದು ಕೊಂಡಂತೆ ಸರ್ವಜ್ಞ |"
"ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ |
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ ||"
"ಎತ್ತಗಿ ತೊತ್ತಾಗಿ | ಹಿತ್ತಲದ ಗಿಡನಾಗಿ |
ಮತ್ತೆ ಪಾದದ ಕೆರನಾಗಿ ಗುರುವಿನ |
ಹತ್ತಲಿರು ಎಂದ ಸರ್ವಜ್ಞ ||"
ಎಂತರಸು ಒಲಿದರೂ | ಮಂತ್ರಿಯ ಹಗೆ ಹೊಲ್ಲ ! |
ಎಂತಕ್ಕುಮರಸು ಮುನಿದಿಹರೆ ? ಆ ಮಂತ್ರಿ |
ಆಂತಕ್ಕ ನಕ್ಕು ! ಸರ್ವಜ್ಞ |
ಎಲ್ಲ ಆಶೆಯ ಬಿಟ್ಟ | ರಿಲ್ಲಿಯೇ ಕೈಲಾಸ |
ಎಲ್ಲವನು ಬಯಸಿ ಭ್ರಮಿಸಿದಡೆ ನರಕ ತಾ |
ನಿಲ್ಲಿಯೇ ನೋಡ ! ಸರ್ವಜ್ಞ |
"ಎದ್ದು ಮಾತಾಡಿದಿರು | ಎದ್ದೆದ್ದು ನಿಲ್ಲದಿರು |
ಇದ್ದ ಮಾನಿಸರ ಜರಿಯದಿರು , ಓಲಗದೊ |
ಳಿದ್ದಾಗ ನೀನು ! ಸರ್ವಜ್ಞ |"
ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ |
ತೊಡೆಕಂಬವಿಲ್ಲ ಗಗನಕ್ಕೆ, ದೇವರಲಿ |
ಕುಲಭೇದವಿಲ್ಲ ಸರ್ವಜ್ಞ |