ಉಗಾಭೋಗ (ಸ)
ಸತತ ಗಣನಾಥ ಸಿದ್ದಿಯಾನೀವ ಕಾರ್ಯದಲಿ
ಸತತ ಗಣನಾಥ ಸಿದ್ದಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತೀ ದೇವಿ II ಪ II
ಮುಕುತಿ ಪಥಕೆ ಮನವೀವ ಮಹಾರುದ್ರ ದೇವರು
ಹರಿ ಭಕುತಿ ದಾಯಾಕಳು ಭಾರತೀ ದೇವಿ
ಯುಕುತಿ ಶಾಸ್ತ್ರಗಳಲ್ಲ ವನಜಸ೦ಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು II ೧ II
ಗತಿ ಪಾಲಿಸುವ ನಮ್ಮ ಪವಮಾನನು
ಚಿತ್ತದಲಿ ಆನಂದ ಸುಖವನೀವಳು ರಮಾ
ಭಕ್ತಜನರೊಡೆಯ ನಮ್ಮ ಪುರ೦ದರ ವಿಠಲನು
ಸತತ ಇವರಲಿ ನಿ೦ತು ಈ ಕೃತಿಯ ನಡೆಸುವನು II ೨ II