Most Viewed
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಸುಗಮ ಗಾನ ಸಮಾಜSugama Gaana Samaja
ಕಿರು ಪರಿಚಯ
Introduction
ನಮ್ಮ ದೈನಂದಿನ ದಿನಗಳಲ್ಲಿ ಆಗುವ ಆಯಾಸ, ಒತ್ತಡ ಅಥವಾ ಬೇಸರಗಳನ್ನು ನೀಗಿಸಿಕೊಳ್ಳಲು ಹೊಸ ಹುರುಪು ಪಡೆಯಲು,ಬಹಳಷ್ಟು ಮಂದಿ ತಮಗರಿವಿಲ್ಲದೇ ಕಂಡುಕೊಳ್ಳುವ ಒಂದು ಹಾದಿಯಂದರೆ ತಮಗೆ ತಾವೇ ಹಾಡಿಕೊಳ್ಳುವುದು. ತಮ್ಮ ಮೆಚ್ಚಿನ ಗೀತೆಗಳನ್ನು ಗಾಯಕರ ಧ್ವನಿ,ಧಾಟಿ ಅನುಕರಿಸಿಕೊಂಡು ಹಾಡುತ್ತಾ ಮೈಮರೆಯುವುದುಂಟು. ಹಾಗೇ ಪಕ್ವವಾಗುವುದೂ ಉಂಟು.ಆದರೆ ಅಲ್ಲಿ ಚಿತ್ರಗೀತೆಗಳದೇ ಪ್ರಾಧಾನ್ಯತೆ.
ಹಾಗೇ ಹಲವಾರು ಜನಪದ,ಭಾವಗೀತೆ , ಭಕ್ತಿಗೀತೆ ಹಾಗೂ ನಾಡಗೀತೆ , ದೇಶಭಕ್ತಿ ಗೀತೆಗಳನ್ನು ಆಯ್ದು , ಸಿಡ್ನಿಯ ಕನ್ನಡ ಸಮುದಾಯದಲ್ಲಿನ ಸಾಕಷ್ಟು ನುರಿತ ಗಾಯಕರನ್ನು ಆಹ್ವಾನಿಸಿ ಅವರೊಡನೆ ಎಲೆಮರೆಯ ಕಾಯಾಗಿಯೇ ಅಡಗಿರುವ ಗಾಯಕರನ್ನೂ ಹೊರಸೆಳೆಯುವ ಪ್ರಯತ್ನವೇ ಸುಗಮ ಗಾನ ಸಮಾಜ ಎಂಬ ವೇದಿಕೆಯ ಮೂಲ ಉದ್ದೇಶ .
ಪ್ರತಿ ಮೂರು ತಿಂಗಳಿಗೊಮ್ಮೆ ಸೇರಿ ಸರ್ವರಿಗೂ ಸಮವಾದ ಸದವಕಾಶ ನೀಡಿ ವರುಷಕೊಮ್ಮೆ ನಮ್ಮ ನಾಡಹಬ್ಬವಾದ ಮೈಸೂರು ದಸರಾವನ್ನು ವೈಭವ - ವಿಶಿಷ್ಟಗಳಿಂದ , ಮನರಂಜನಾ ಸಂಜೆಯೊಂದಿಗೆ ಆಚರಿಸಿ ಕನ್ನಡವನ್ನು ಉಳಿಸಿ ಬೆಳೆಸುವ ದೊಡ್ಡ ಕನಸು ಹೊತ್ತಿರುವ ಸಣ್ಣ ಗುಂಪು ನಮ್ಮದು..
ಸಿಡ್ನಿಯ ಕನ್ನಡಿಗರೇ ನೀವೆಲ್ಲರೂ ಬನ್ನಿ ನಿಮ್ಮವರನ್ನೂ ಕರೆತನ್ನಿ
ನಿಮಗೆ
ಕ್ಯಾರೆಯೋಕಿ
ಜೊತೆ ಹಾಡುವ
ಅಭ್ಯಾಸ ಇದೆಯೇ ?
ಅಥವಾ
ಕನ್ನಡ ಹಾಡುಗಳನ್ನು
ಕೇಳುವ - ಕಲಿಯುವ
ಆಸಕ್ತಿ ಇದೆಯೇ ?
ಹಾಗಿದ್ದಲ್ಲಿ
ಬೇಗ ನಮ್ಮನ್ನು
ಸಂಪರ್ಕಿಸಿ,
Frequently Asked Questions
ಕ್ಯಾರೆಯೋಕಿ ಅಂದ್ರೆ ?
ಒಂದು ಹಾಡಿನ ಹಿನ್ನೆಲೆ ಗಾಯನವನ್ನು ಹೊರತು , ಸಂಗೀತ ವಾದ್ಯಗಳ ಮತ್ತು ಹಾಡಿನ ದೃಶ್ಯಗಳ ಟ್ರ್ಯಾಕ್ ನೊಂದಿಗೆ ನಮ್ಮ ಧ್ವನಿಗೂಡಿಸಿ ಹಾಡಿ ಆನಂದಿಸುವ ಮನರಂಜನಾ ವಿಧಾನ . ಶಾಸ್ತ್ರೀಯ ಸಂಗೀತದ ಗಂಧವಿಲ್ಲದಿದ್ದರೂ ತಾಳ, ಶ್ರುತಿ ಹಾಗೂ ಅನುಕರಣೆ ಅರಿತವರಿಗೆ ಬಹಳ ಸುಲಭವಿದು .
ಈ ಧ್ವನಿಸುರುಳಿಗಳು ಸಿಗುವುದಾದರೂ ಎಲ್ಲಿ?
ಸದ್ಯಕ್ಕೆ ಸ್ಥಳಿಯ ಕನ್ನಡಿಗರಿಗೆ ಇದು ಲಭ್ಯವಿದ್ದು , ಪ್ರಪಂಚದೆಲ್ಲೆಡೆ ಸಿಗುವ ಸೌಲಭ್ಯ ಕಲ್ಪಿಸುವ ಯೋಜನೆ ಮುಂದಿದೆ . ಅಷ್ಟೇ ಅಲ್ಲದೆ ಕರ್ನಾಟಕದ ಯಾವುದೇ ಪ್ರಸಿದ್ಧ ಆಡಿಯೋ ಅಂಗಡಿಗಳಲ್ಲಿಯೂ ಇದುಮಾರಾಟಕ್ಕಿರುವುದು . ಬೆಂಗಳೂರಿನ ಸುಪ್ರಸಿದ್ಧ ಕುಹೂ ಕುಹೂ ಸಂಸ್ಥೆ ಕನ್ನಡಿಗರಿಗೆ ನೀಡುತ್ತಿರುವ ಒಂದು ಉತ್ತಮ ಕೊಡುಗೆ ಇದು.