Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ- ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಬೀ.ಚಿ ಚಟಾಕೆಗಳು
- 20ಕ್ಕೆ ಸುಂದರನಾಗಿಯೂ, 30ಕ್ಕೆ ಧೃಡಕಾಯನಾಗಿಯೂ ,40ಕ್ಕೆ ಧನಿಕನಾಗಿಯೂ 50ಕ್ಕೆ ಜ್ಞಾನಿಯಯಾಗದವನು ಮುಂದೇನಾದರೂ ಸುಂದರ,ಧೃಡಕಾಯ, ಧನಿಕ ಅಥವಾ ಜ್ಞಾನಿಯಾದರೆ ಅದು ಅವನ ಜಾಣತನದಿಂದಲ್ಲ ಇತರರ ದಡ್ಡತನದಿಂದ
- ***
- ತಂದೆ: ಯಾವೋನೋ ಅವ್ನು ಲೆಕ್ಕದಲ್ಲಿ ನೂರಕ್ಕೆ ಹತ್ತೇ ಹತ್ತೆ?ಎಲ್ಲಿದಾನೋ ಅವ್ನು! ಮಗ: ಅದೇ ನಾನೂ ಕೇಳ್ಬೇಕೂ ಅಂದ್ಕೊಂಡೆ,ನಡಿರೀಪ್ಪ ನಂಗೊತ್ತು ಮೇಷ್ಟ್ರ ಮನೆ.
- ***
- ಪ್ರಶ್ನೆ ಮೀನಿನ ಬಲೆ ಹೇಗೆಮಾಡ್ತಾರೆ ?
- ಉ: ಅದೇನ್ ಮಹ ತೂತುಗಳನ್ನೆಲ್ಲಾ ದಾರದಿಂದ ಸೇರಿಸಿ ಕಟ್ಟಿದರೆ ಸುಲಭ ಅಷ್ಟ.
***
- ಕೆಲವು ಹೆಣ್ಣು ಮಕ್ಕಳಿಗೆ 25 ವರ್ಷ ವಯಸ್ಸಾದರೂ ಮದುವೇನೇ ಆಗಲ್ಲಾ! ಇನ್ನೂ ಕೆಲವರಿಗೆ ಮದುವೆ ಆಗೋವರೆಗೂ 25 ವರ್ಷ ಅಗೋದೇ ಇಲ್ಲ !
- ***
- ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ.... ಮೊಟ್ಟಮೊದಲ ಮಗನಿಗೆ ಕಟ್ಟಕಡೆಯ ಮಗು ದೂರದ ಸಂಬಂಧಿ...ಹೌದೋ ಅಲ್ಲವೋ!
- ***
- ಬರೀ ಒಳ್ಳೆಯ ಹವಾ ಬೇಕು ಅನ್ನೋರು ಸ್ವರ್ಗಕ್ಕೇ ಹೋಗಬೇಕು, ಸಂತೋಷ ಬೇಕು, ಜಾಲಿಯಾಗಿ ನಗುನಗುತ್ತಾ ಮಜವಾಗಿ ಇರಬೇಕು ಅನ್ನೋರು ನರಕಕ್ಕೇ ಬರಬೇಕು.
- ***
- ಬರೀ ಹಣದಿಂದ ಸುಖ ಇಲ್ಲ ಅಂತ ಹೇಳೋರು ಯಾರು ಗೊತ್ತಾ? ಹೆ....ಚ್ಚು ಹಣ ಇದ್ದೂ, ಖರ್ಚು ಮಾಡಕ್ಕೆ ಬರದೇ ಇರೋರು ಮಾತ್ರ !
- ***
- ಆ ಭಗವಂತನು ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ , ಆದರೆ ಬರೀ ಮೋಸಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ !
ಸುಗಮ ಹಾಸ್ಯSugama Haasya
ಕಿರು ಪರಿಚಯ
Introduction
ನಮ್ಮ ಸುಗಮ ಹಾಸ್ಯ ತಂಡದಲ್ಲಿ ಹತ್ತಾರು ಕಲಾವಿದರು ಇದ್ದು, ಆಗಿಂದಾಗ್ಗೆ ಸೇರಿ ನಗುನಗುತ್ತಾ ನಗಿಸಿ, ನಲಿಸಿ, ನೋವ ಮರೆಸುವ, ನೂತನ ಸ್ಪೂರ್ತಿ ನೀಡುವ, ನವನವೀನ ಗುಂಪು ಇದು. ನವರಸಗಳಲ್ಲೊ೦ದಾದ ಹಾಸ್ಯವೇ ಇಲ್ಲಿನ ಮೂಲ ವಸ್ತು.
ನಗುವಿನಿಂದ ಮುಖಕ್ಕೆ ಮೆರಗು, ಮನಕ್ಕೆ ಮುದ, ದೇಹಕ್ಕೆ ಆರೋಗ್ಯ, ನಕ್ಕರೆ ಅದೇಸ್ವರ್ಗ. ಇಂಥಾ ನಗು ಅನುಭವಿಸಲು ಬೇಕು ಹಾಸ್ಯ ! ಎಲ್ಲಿದೆ? ಎಲ್ಲಿದೆ ಈ ಹಾಸ್ಯ? ಬನ್ನಿ, ಈ ಪುಟವನ್ನು ಒಮ್ಮೆ ತಿರುವು ಹಾಕಿ, ನಿಮಗೂ ಹಾಸ್ಯದ ಅನುಭವ ಅಥವಾ ಹಾಸ್ಯ ಚಟಾಕಿಗಳು ತಿಳಿದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಿರಿ.
ಈವರಗೆ, ಸಿಡ್ನಿಯ ಕನ್ನಡಿಗರ ಬೇರೂರಾದ ಲಿವರ್ ಪೂಲ್ ನಲ್ಲಿ ನಡೆದ ಹಾಸ್ಯ ಸಂಜೆ ಕಾರ್ಯಕ್ರಮಗಳಿಂದಾಯ್ದ ಕೆಲವು ಭಾವ ಚಿತ್ರಗಳೂ ಹಾಗು ಆಯ್ದ ನಗೆ ಗುಳಿಗೆಗಳನ್ನು ಕೆಳಗೆ ಕಾಣಬಹುದು.
ಕೆಲವು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ
Click here for few photos
ಜೋಕಿನ
ಗಳದಲ್ಲಿ ಜಾರೋಣ ಬನ್ನಿ.....
J
KES...J
KES....J
KES....
ತಂದೆ ಮಗಳ ಮದುವೆ ಬಗ್ಗೆ ವಿಚಾರಿಸುತ್ತಿದ್ದ.ಅವಳ ಕೈಲಿದ್ದ ಫೋಟೊ ನೋಡಿ ತಂದೆ”ಅವನ ಬಳಿ ಸಾಕಷ್ಟು ದುಡ್ಡು ಇದೆಯಾ?”ಎಂದ ಅದಕ್ಕೆ ಮಗಳು”ಹೋಗಪ್ಪ ಈ ಹಾಳು ಗಂಡಸರೇ ಹೀಗೆ ಅವನೂ ಹೀಗೇ ಕೇಳ್ತಾನೆ,ನಿಮ್ಮಪ್ಪನ ಬಳಿ ಸಾಕಷ್ಟು ದುಡ್ಡು ಇದೆಯಾ?” ಅಂತ!!!
ಹಲ್ಲು:ಎಲೈ ನಾಲಗೆಯೇ ಹುಶಾರ್, ನಾನು ಒಮ್ಮೆ ನಿನ್ನನ್ನ ಜೋರಾಗಿ ಪ್ರೆಸ್ ಮಾಡಿದ್ರೆ ನೀನು ಕತ್ತರಿಸಿ ಹೋಗ್ತೀಯಾ!
ನಾಲಗೆ:ನಾನು ಒಂದು ತಪ್ಪು ಮಾತಾಡಿದರೆ ನೀನೂ ಸೇರಿ ಮೂವತ್ತೆರಡೂ ಆಚೆ ಬರ್ತೀರಾ ಹುಶಾರ್
ಪೋಲೀಸ್: ಈ ರಸ್ತೆ ದುರಸ್ತಿಯಲ್ಲಿದೆ,ಅಪಘಾತ ವಲಯ, ನಿಧಾನವಾಗಿ ಚಲಿಸಿ ಅಂತ ಬೋರ್ಡ್ ಇತ್ತಲ್ಲ ಏನಾಯ್ತು?
ಗುಂಡ:ಬೋರ್ಡ್ ಹಾಕಿದಮೇಲೆ ಯಾವ್ದೂ ಅಪಘಾತ ಅಗಲಿಲ್ಲ ಇನ್ನ್ಯಾಕೆ ಸುಮ್ನೆ ವೇಸ್ಟ್ ಅಂತ ಕಿತ್ತಾಕಿಬಿಟ್ಟೆ.
ಹುಡುಗ:ನಾನು ನಿನ್ನ ಫೋಟೊ ತೆಗೀಲಾ?
ಹುಡುಗಿ:ಯಾಕೆ?
ಹುಡುಗ:ಸುಮ್ನೆ ನನ್ನ ಮಗುವಿಗೆ ನಿನ್ನಮ್ಮ ಯೌವ್ವನದಲ್ಲಿ ಎಷ್ಟು ಸುಂದರವಾಗಿದ್ದಳು ಅಂತ ತೋರಿಸೋಕ್ಕೆ.
ಗರ್ಭಿಣಿ ಹೆಣ್ಣನ್ನು ಕಂಡ ಮಗುವೊಂದು’ಆಂಟಿ ನಿಮ್ಮ ಹೊಟ್ಟೇಲಿ ಏನಿದೆ?” ಅದಕ್ಕೆ ಆಕೆ”ಮುದ್ದಾದ ಮಗು ಇದೆ”ಅಂದಳು.ಅದು ಮುದ್ದಾದ ಮಗು ಆದರೆ ಅದ್ಯಾಕೆ ಅದನ್ನ ತಿಂದುಬಿಟ್ರಿ?”ಅನ್ನಬೇಕೇ
ಹುಡುಗ ದೇವರಲ್ಲಿ ಬೇಡಿಕೊಂಡ “ನನಗೆ ಒಂದು ಕೆಲಸ,ಜೇಬುತುಂಬ ದುಡ್ಡು ಹಾಗೂ ದೊಡ್ಡ ಗಾಡಿ,ಅದರ ತುಂಬಾ ಹುಡುಗಿಯರು ಇರಬೇಕು” ಎಂದು.ಮುಂದಕ್ಕೆ ಹೇಳುವುದರ ಒಳಗೆ ದೇವರು ತಥಾಸ್ತು ಎಂದ.ಹುಡುಗ ಕಂಡಕ್ಟರ್ ಆಗಿಹೋದ.
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?
ಅಪ್ಪ:ಅದು ನಿಂಗೆ ಹೇಗೆ ಗೊತ್ತು?
ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ನೋಡ್ತಿದ್ದೀನಿ!
ವೆಂಕಮ್ಮ: ರೀ ಸಾವಿತ್ರಮ್ಮ ನಮ್ಮ ಮಗಳು exam ಸಮಯದಲ್ಲಿ ಟಿವಿ,ಫೋನ್,ಕಂಪ್ಯೂಟರ್ ಯಾವುದನ್ನೂ ಮುಟ್ಟಲಿಲ್ಲ
ಸಾವಿತ್ರಮ್ಮ:ಅದೇನ್ ಮಹಾ ಬಿಡಿ ನನ್ನ ಮಗ ಪುಸ್ತಕಾನೇ ಮುಟ್ಟಲಿಲ್ಲ
ಗುಂಡಣ್ಣ;ಏನಂತ ಮದುವೆ ಮಾಡ್ಸಿದ್ಯಯ್ಯಾ ನನ್ನ ಸೊಸೆ ಮದುವೆಯ ಮಾರನೆ ದಿನಾನೇ ವಾಂತಿ ಮಾಡಿದ್ಳು?
ಬ್ರೋಕರ್:ಅದೇ ನಾನು ಹೇಳ್ಳಿಲ್ವಾ ಹುಡ್ಗೀಗೆ 21 ವರ್ಷ, 3 ತಿಂಗಳು ಅಂತ.
ಅಜ್ಜ: ಲೋ ಗುಂಡ ನಿಮ್ಮ ಮೇಷ್ಟ್ರು ಬರ್ತಿದ್ದಾರೆ ಬಚ್ಚಿಟ್ಕೋ
ಗುಂಡ:ಮೊದಲು ನೀನು ಬಚ್ಚಿಟ್ಕೋ ಮೊನ್ನೆ ನೀನು ಸತ್ತೆ ಅಂತ ಶಾಲೆಗೆ ಚಕ್ಕರ್ ಹಾಕಿದ್ದೆ.
ಗುಂಡ:ಏನಯ್ಯ ಪಾಂಡು ನಿಮ್ಮ ಮನೇಲಿ 25 ಜನ,ಫಾಮಿಲಿ ಪ್ಲಾನಿಂಗ್ ನವರು ಬರಲೆ ಇಲ್ವಾ?
ಪಾಂಡು;ಬಂದಿದ್ರು,ಸ್ಕೂಲು ಅಂದ್ಕೊಂಡು ವಾಪಸ್ ಹೋದ್ರು.
ತಂದೆ:ಮಗೂ ನಿನಗೆ ಪಾಕೆಟ್ ಮನಿ ಅಂತ ಐನೂರು ರೂ ಕೊಟ್ರೆ ಏನು ಮಾಡ್ತೀಯಾ?
ಮಗ:ನಿನ್ನ ನಂಬೋಕ್ಕಾಗಲ್ಲ ಮೊದಲು ಎಣಿಸಿ ನೋಡ್ತೀನಿ.
ಗೆಳೆಯ:ನೆನ್ನೆ ಎಲ್ಲಿಗೋ ಹೋಗಿದ್ದೆ?
ಕಂಜೂಸ್ ಗೆಳೆಯ:ಹುಡುಗಿ ಜೊತೆ ಫಿಲ್ಮ್ ಗೆ.
ಗೆಳೆಯ:ಎಷ್ತು ಖರ್ಚಾಯ್ತು?
ಕಂಜೂಸ್ ಗೆಳೆಯ:ಐನೂರು
ಗೆಳೆಯ:ಹಾ ಅಷ್ಟೊಂದಾ!
ಕಂಜೂಸ್ ಗೆಳೆಯ:ಅವಳ ಹತ್ರ ಇದ್ದದ್ದೇ ಅಷ್ಟು
Newton ನ ನಾಲ್ಕನೇ ನಿಯಮ: ಏನೇ ಆದರೂ ಲೂಸ್ ಮೋಶನ್ನನ್ನು ಸ್ಲೋಮೋಶನ್ ನಲ್ಲಿ ಮಾಡಲು ಸಾಧ್ಯವಿಲ್ಲ
ನನಗೆ ಗೊತ್ತು ನಿಮಗೆ ಚೆನ್ನಾಗಿ ಕನ್ನಡ ಬರುತ್ತೆ ಅಂತ.ಅದಕ್ಕೆ ಒಂದು ಟೆಸ್ಟ್
“ನಾರಿ ನುರಿ ಕೋರಿ ತಿರಿ ಮರಿರಿ”
ಇದರಲ್ಲಿ ಪ್ರತಿ ಪದದ ಕೊನೆಯ ಅಕ್ಷರ ತೆಗೆದು ಹೇಳಿ...
ಕನ್ನಡಾನುವಾದ
1. have a nice day - ತಗೋ ಒಳ್ಳೆ ದಿನ.
2. what's up? - ಏನಿದೆ ಮೇಲೆ?
3. keep in touch - ಮುಟ್ಟುತ್ತಾ ಇರು
ಮಾಡ್ರನ್ ಕಾಲ
ಮಂತ್ರಿ:ಪ್ರಭು ಯುದ್ಧಕ್ಕೆ ರೆಡಿಯಾಗಿ ಅಂತ ಪಕ್ಕದ ರಾಜ್ಯದವರಿಂದ ಮೆಸೇಜ್ ಬಂದಿದೆ.ಏನು ಮಾಡೋದು?
ರಾಜ:ಮೆಸೇಜ್ ಸೆಂಡಿಂಗ್ ಫೈಲ್ಡ್ ಅಂತ ರಿಪ್ಲೈ ಕಳಿಸು
ವನಜಮ್ಮ:ಏನು ಅನ್ಯಾಯ ಇದೂ ಸರಸ್ವತಮ್ಮಾ ಮಲ್ಲೇಶ್ವರಮ್ ನಲ್ಲಿ ಇವತ್ತು 17ಸಲ ಕರಂಟ್ ಹೋಯ್ತಂತೆ
ಸರಸ್ವತಮ್ಮ: ಯಾಕ್ರಿ ಅನ್ಯಾಯ ವನಜಮ್ಮ 16ಸಲ ವಾಪಸ್ ಬಂತಲ್ಲ,ಅದು ನ್ಯಾಯ ತಾನೆ?
ಕಂಡಕ್ಟರ್:ರೀ ಸ್ವಾಮೀ ದಿನಾ ಪಾಸು ಪಾಸು ಅಂತಿದ್ದೋರು ಟಿಕೆಟ್ ಚೆಕ್ಕಿಂಗ್ ಬಂದಾಗ ಯಾಕೆ ಪಾಸ್ ಅವರಿಗೆ ತೋರಿಸ್ಲಿಲ್ಲ?
ಪ್ರಯಾಣಿಕ:ಅಯ್ಯೋ ಪಾಸ್ ಇದ್ದರೆ ತಾನೆ!!!
ಸೇಲ್ಸ್ ಮ್ಯಾನ್:ಸಾರ್ ನಿಮಗೆ ಪೌಡರ್ ಬೇಕಾ?
ಗುಂಡ:ಯಾರಿಗೆ ಇದು?
ಸೇಲ್ಸ್ ಮ್ಯಾನ್:ಇಲಿಗಳಿಗೆ ಸಾರ್
ಗುಂಡ:ಬೇಡ ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ಸ್ ಟಿಕ್ ಕೇಳಬಹುದು....
ಗುಂಡ:ನಿನಗೆ ಎಷ್ಟು ಮಾರ್ಕ್ಸ್ ಬಂತು?
ತಿಮ್ಮ: 99%
ಗುಂಡ:ಅಬ್ಬ ಅಷ್ಟರಲ್ಲಿ ಮೂರುಜನ ಪಾಸ್ ಆಗಬಹುದಿತ್ತು
ಸರ್ಕಾರಿ ನೌಕರ ಡಾಕ್ಟರ್ ಬಳಿ ಹೋಗಿ "ಡಾಕ್ಟರೇ ನನಗೆ ಸಂಪೂರ್ಣ ಸ್ಟ್ರೆಸ್ ಆಗಿ ಹೋಗಿದೆ ಏನಾದರೂ ಸಹಾಯ ಮಾಡಿ"ಎಂದ. ಅದಕ್ಕೆ ವೈದ್ಯ ಆತನ ಎಲ್ಲ ವಿವರ ಕೇಳಿ "ನೀವು ರಜದಲ್ಲಿ ಮನೆಗೆಲಸ ಜಾಸ್ತಿ ಮಾಡಿದ್ದೀರಿ,ನಿಮಗೆ ಪೂರ್ತಿ ವಿಶ್ರಾಂತಿ ಬೇಕಾಗಿದೆ ಆದಷ್ಟು ಬೇಗ ಕೆಲಸಕ್ಕೆ(ಸರ್ಕಾರಿ) ವಾಪಸ್ ಹೋಗಿ ಎಲ್ಲ ಸರಿ ಹೋಗತ್ತೆ" ಅನ್ನಬೇಕೆ
ಮಾನಸಿಕ ಚಿಕಿತ್ಸೆ ನೀಡುವ ವೈದ್ಯರ (psychiatrist) ಸೆಕ್ರೆಟರಿ ಕೋಣೆಯೊಳಗೆ ಬಂದು ಹೇಳಿದಳು’ಡಾಕ್ಟ್ರೇ ಹೊರಗೆ ಕಾಯ್ತಾ ಇರೋ ಒಬ್ಬಾತ ತಾನು invisible ಅಂತ ಹೇಳ್ತಿದ್ದಾನೆ" ಅಂದಳು. ಅದಕ್ಕೆ ಡಾಕ್ಟರ್ ಹೊರಕ್ಕೆ ಬಂದು "ಯಾರದು? ಯಾರೂ ಕಾಣ್ತಾ ಇಲ್ಲವಲ್ಲಾ?"ಅಂದ ತಕ್ಷಣ ರೋಗಿ "ನಾನು?"ಅನ್ನಬೇಕೆ. ಆಗ ಡಾಕ್ಟರ್ ಶಾಂತವಾಗಿ "(ಹಂಗೆ) ಬಾ ಒಳಗೆ"
ದೆಹಲಿಗೆ ಬಂದಿದ್ದ ಓರ್ವ ಪ್ರವಾಸಿಗ ಕಾರ್ ಬಾಡಿಗೆಗೆ ತೆಗೆದುಕೊಂಡು ನಗರ ಪ್ರದಕ್ಷಿಣೆ ಹೊರಟ.ಪಾರ್ಲಿಮೆಂಟ್ ಬಳಿಗೆ ಬಂದಾಗ ಫೋಟೊ ತೆಗೆಯಲು ಮೆಟ್ಟಿಲು ಏರಿ ಹೋಗಬೇಕಾಯಿತು. ಸರಿ ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ಬದಿಯಲ್ಲೇ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು’ಸ್ವಾಮೀ ನಾನು ಫೋಟೋ ತೆಗೆದು ಬರುವ ವರೆಗೂ ಈ ನನ್ನ ಕಾರ್ ಕಾವಲು ಕಾಯ್ತೀರಾ" ಅಂದ.ಅದಕ್ಕೆ ಆತ "ರೀ ನನ್ನನ್ನ ಯಾರೆಂದು ತಿಳಿದಿದ್ದೀರಿ? ನಾನು ಈ ಪಾರ್ಲಿಮೆಂಟ್ ಸದಸ್ಯ ಗೊತ್ತಾ" ಅದಕ್ಕೆ ಪ್ರವಾಸಿ ಹೇಳಿದ "ಗೊತ್ತಿರಲಿಲ್ಲ ಸ್ವಾಮೀ ಆದರೂ ನನಗೆ ನಿಮ್ಮ ಮೇಲೆ ನಂಬಿಕೆ ಇದೆ,ಸ್ವಲ್ಪ ಇಲ್ಲೇ ಇರಿ" ಎಂದು ಹೊರಟೇ ಬಿಟ್ಟ.
ಗುಂಡ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದ ಹೆಸರು...ಗುಂಡ....ವಿಳಾಸ.....ವಯಸ್ಸ್ಸು......ವಿದ್ಯೆ.....ಅನುಭವ....ಎಲ್ಲಾ ಭರ್ತಿ ಮಾಡಿದ ಕಡೆಯಲ್ಲಿ salary expected....ಅಂತಿತ್ತು.ಅಲ್ಲಿ ಏನೂ ಬರೆಯಲು ತೋಚದೆ Yes ಎಂದು ಬರೆದ
ಸರ್ದಾರ್ ಕನ್ನಡಕದ ಅಂಗಡಿಗೆ ನುಗ್ಗಿದ.ಡಿಸ್ಪ್ಲೇ ಇಟ್ಟಿದ್ದ ಒಂದು ಕನ್ನಡಕ ತೆಗೆದುಕೊಂಡು "ಗ್ಲಾಸ್ ಕಾಕ್ಕೊಂಡ್ರೆ ಚೆನ್ನಾಗಿ ಓದಬಹುದಂತೆ ಹೌದಾ?"ಅಂದ. ಸೇಲ್ಸ್ ಮನ್ ಹೌದು ಎಂದು ಮತ್ತೊಂದು ಲೇಟೆಸ್ಟ್ ಫ್ರೇಮ್ ತೋರಿಸಿದ.ಅದನ್ನು ಧರಿಸಿ "ಏನದು ಇಂಗ್ಲೀಶಿನಲ್ಲಿ ಬರೆದಿರುವುದು ಅಲ್ಲಿ" ಅಂದ. "ಅದು buy 1 ger 1 free, ಯಾಕೆ ಇನ್ನೂ ಸರಿಯಾಗಿ ಕಾಣ್ತಾ ಇಲ್ವ?" ಎಂದ ಸೇಲ್ಸ್ ಮನ್."ಹಂಗಲ್ಲ ನಾನು ಸ್ಕೂಲೀಗೆ ಹೋದವನಲ್ಲ," ಅನ್ನಬೇಕೆ.
ಒಬ್ಬ ಸರ್ದಾರ್ ಮತ್ತೊಬ್ಬ ಸರ್ದಾರನನ್ನು ಕೇಳಿದ "ಅಕಸ್ಮಾತ್ ನಿನ್ನ ನಾಯಿಯ ಬಾಲ ಕತ್ತರಿಸಿ ಹೋದರೆ ಏನು ಮಾಡುವೆ?" ಅದಕ್ಕೆ ಆ ಮತ್ತೊಬ್ಬ ಜಾಣನಂತೆ ತಕ್ಷಣ ಹೇಳಿದ"ರೀ ಟೈಲ್ ಶಾಪ್ ಇದೆಯಲ್ಲಾ?"
ಪ್ರವಾಸಕ್ಕೆ ಹೊರಟಿದ್ದ ಇಬ್ಬರು ಸರ್ದಾರರು ರೈಲಿನಲ್ಲಿ ಬಹಳ ಹೊತ್ತು ಮಾತನಾಡುತ್ತಾ ಎಲ್ಲಾ ವಿಶಯ ಮುಗಿಸಿ ಸ್ವಲ್ಪಹೊತ್ತು ಮೌನವಾರದು. ಏನಾದರೂ ಮಾತಾಡಬೇಕೆನಿಸಿ ಒಬ್ಬ "ಅರೆ ನಿನ್ನ ಸಾಕ್ಸ್ ಎರಡೂ ಬೇರೆ ಬೇರೆ ಬಣ್ಣವಿದೆ?" ಅಂದ. ಅದಕ್ಕೆ ಆತ "ಅದೇನ್ ಮಹಾ ಇದೇ ಥರದ್ದು ಮನೇಲೂ ಒಂದು ಪೇರ್ ಇದೆ"ಅಂದ
ಸಂಟ ಬಂಟ ಡಬಲ್ ಡೆಕ್ಕರ್ನಲ್ಲಿ ಪ್ರಯಾಣ ಮಾಡಲು ಹತ್ತಿದರು.ಬಂಟ ಕೆಳಗಿನ ಮಹಡಿಯಲ್ಲಿ ಕುಳಿತಿರಲು ಸಂಟ ಮೇಲೆ ಹೋಗಿ ಗಾಬರಿಯಿಂದ ಕೆಳಗೆ ಓಡಿ ಬಂದ.ಏನಾಯಿತೆಂದು ಕೇಳಲು "ಸದ್ಯ ಇಲ್ಲೇ ಇರೋಣ ಮೇಲಿನ ಬಸ್ಸಿಗೆ ಡ್ರೈವರ್ರೇ ಇಲ್ಲ ಹಂಗೇ ಹೋಗ್ತಿದೇ !"
ಗುಂಡ ಡಾಕ್ಟರಿಗೆ ಫೋನ್ ಮಾಡಿ"ಡಾಕ್ಟರೇ ಹೆಂಡತಿ ತುಂಬು ಗರ್ಭಿಣಿ ಹೊಟ್ಟೆ ತುಂಬಾ ನೋಯ್ತಾ ಇದೆ, ಕಾನ್ಟ್ರಾಕ್ಷನ್ ಪ್ರತಿ ಎರಡು ನಿಮಿಶಕ್ಕೊಮ್ಮೆ ಆಗ್ತಿದೆ"ಅಂದ. ಅದಕ್ಕೆ ಡಾಕ್ಟರ್ ‘ಇದು ಅವರ ಮೊದಲ ಮಗೂನಾ?’ ಎಂದ. ಗುಂಡ ರೇಗಿದ "ಸ್ವಾಮೀ ನಾನು ಆಕೆ ಗಂಡ ನನ್ನನ್ನೇ ಹಿಂಗೆ ಕೇಯ್ತೀರಾ"
ಗಂಡ ಹೆಂಡಿರ ಜಗಳ ಗಂಡ" ನಾನು ಹೊರಟು ಹೋದರೆ ನನ್ನಂಥಾ ಗಂಡ ಹುಡುಗಿದರೂ ನಿನಗೆ ಸಿಕ್ಕಲ್ಲ ನೋಡ್ತಿರು" ಹೆಂಡ್ತಿ "ನಿನ್ನಂಥಾ ಗಂಡನ್ನ ಹುಡುಕೋದಾದ್ರೂ ಯಾರು?"
"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ ಆಹ್ವಾನನೋ ತಿಳೀ ಲಿಲ್ಲ" ಎಂದ
ಬಾಲಕಿ ಒಬ್ಬಳು ಚರ್ಚ್ನಲ್ಲಿ ಕಣ್ಮುಚ್ಚಿ ’ದೇವರೇ ಮಾಸ್ಕೋನಾ ಚೈನಾ ದೇಶದ ರಾಜಧಾನಿಯನ್ನಾಗಿ ಮಾಡಪ್ಪಾ"ಎಂದು ಪದೇ ಪದೇ ಜೋರಾಗಿ ಬೇಡುತ್ತಿದ್ದಳು.ಆಕೆಯ ಅಕ್ಕ ಕಾರಣ ಕೇಳಲು "ನೆನ್ನೆ ಪರೀಕ್ಷೆಯಲ್ಲಿ ಮಾಸ್ಕೋ ಚೈನಾದ ರಾಜಧಾನಿ ಎಂದು ಬರೆದಿರುವೆ"ಎಂದಳು.
ಕಾಡಿನಲ್ಲಿ ಹುಲಿಗೆ ಮದುವೆ ಆಗುತಿರಲು ಇಲಿಯೊಂದು ಹರುಶದಿಂದ ಕುಣಿಯುತ್ತಿತ್ತು.ಮೊಲವೊಂದು ಕಾರಣ ಕೇಳಲು "ನನ್ನ ಅಣ್ಣನಿಗೆ ಮದುವೆ"ಎಂದಿತು.ಅದಕ್ಕೆ ಮೊಲ "ನೀನ್ಯಾವಾಗ ಹುಲಿಗೆ ತಮ್ಮನಾದೆ" ಎನ್ನಲು."ನಮ್ಮ ಅಮ್ಮ ಹೇಳ್ತಾರೆ ನಾನೂ ಮದುವೆಗೆ ಮುಂಚೆ ಹುಲಿ ಆಗಿದ್ನಂತೆ."
ಹೆಂಡತಿ ಕಾವಲಿಯ ಮೇಲೆ ದೋಸೆ ಹಾಕುತ್ತಿರಲು ಗಂಡ ಅಲ್ಲಿಗೆ ಬಂದು"ಏಯ್ ಸ್ವಲ್ಪ ತಾಳು ಬಿಸಿ ಆಗ್ಲಿ,ಈಗ ಹಾಕು ಎಣ್ಣೆ ಹಾಕು ಸರಿಯಾಗಿ ಹಿಟ್ಟು ಕಲಕಿ ಕಲಕಿ ಸೌಟು ಸುರಿ,ತಿರುವು, ಹಾಗೆ, ಅಲ್ಲ ನಿಧಾನ ,ತಟ್ಟೆ ಮುಚ್ಚು,ತಾಳು ತಟ್ಟೆ ತೆಗಿ, ಇಲ್ಲ ಇನ್ನೂ ಆಗಿಲ್ಲ, ಈಗ ಸರಿಯಾಗಿ ಕೆಂಪಗೆ ಆಗಿಲ್ಲ ಗರಿಗರಿ ಆಗಬೇಕು...."ಹೆಂದತಿಗೆ ರೇಗಿತು"ಏನ್ರಿ ಯಾವತ್ತೂ ದೋಸೆನೇ ಮಾಡಿಲ್ವ ನಾನು ಹೀಗೆ ಟೀಚ್ ಮಾಡ್ತಿದ್ದೀರಾ" ಅದಕ್ಕೆ ಗಂಡ"ನಾನು ಡ್ರೈವ್ ಮಾಡುವಾಗ ದಿನಾ ನೀನು ನನಗೆ....ಎದೇ ರೀತಿ ಅಲ್ವಾ ಟೀಚ್ ಮಾಡೋದು"ಅಂದ.
ಆಸ್ಟ್ರೇಲಿಯಾಕೆ ಕಾಲಿಟ್ಟ ಘಳಿಗೆ ಅದು ಏರ್ಪೋರ್ಟ್ ನಲ್ಲಿ ಕಸ್ಟಂ ಆಫೀಸರ್ ಪಾಸ್ಪೋರ್ಟ್ ಸ್ಟಾಂಪ್ ಮಾಡುವ ಮುನ್ನ "ಓಹ್ ಯು ಕಂ ಟು ಡೈ" ಅಂದ.ಅದಕ್ಕೆ ನಾನು "no sir I come to live"ಅಂದೆ.ಆಮೇಲೆ ತಿಳೀತು ಅದು"U come today"ಅಂದು.
ನಾನೂ ನನ್ನ ಹೆಂಡತಿ ಶಾಪಿಂಗ್ ಹೋದಾಗ ಕಾರ್ ಪಾರ್ಕ್ ಮಾಡುತ್ತಿರಲು ಮತ್ತೊಂದು ಕಾರಿನಿಂದ ಇಳಿದ ಗಂಡ ಓಡಿ ತಕ್ಷಣ ಇನ್ನೊಂದು ಬದಿಯ ಬಾಗಿಲು ತೆರೆದು ತನ್ನ ಹೆಂಡತಿಯನ್ನು ಇಳಿಯಲು ಸಹಾಯ ಮಾಡಿದ್ದನ್ನು ಕಂಡ ನನ್ನ ಹೆಂಡತಿ"ನೋಡ್ರಿ ಅವನನ್ನ ಹೆಂಡತಿ ಮೇಲೆ ಅದೆಷ್ಟು ಪ್ರೀತಿ" ಅಂದ್ಳುಅದಕ್ಕೆ ನಾನು ಹೀಳಿದೆ"ವಿಷಯ ಹಾಗಲ್ಲ ಕಣೇ ಇಲ್ಲ ಹೆಂಡತಿ ಅಥವಾ ಕಾರು ಎರಡರಲ್ಲಿ ಒಂದಾದ್ರೂ ಹೊಸತಿರಬೇಕು" ನನ್ನಾಕೆ ನಕ್ಕು ಸುಮ್ಮನಾದಳು.
ಅಪ್ಪ: ಲೋ ತಿಮ್ಮ ನಾಯಿ ಬಾಲಕ್ಕೆ ಯಾಕೋ ಪೈಪ್ ಹಾಕ್ತಾ ಇದ್ದೀಯಾ,ಅದು ಯಾವತ್ತೂ ನೆಟ್ಟಗೆ ಆಗೋಲ್ಲ
ತಿಮ್ಮ:ಅದಕ್ಕೇ ಅಪ್ಪ ಪೈಪ್ ಸೊಟ್ಟ ಮಾಡ್ತಾ ಇದ್ದೀನಿ
ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ
ಪ್ರೀತಿ:ಯಾಕೆ ಗುಂಡ ನನ್ನ ಹತ್ರ ಮಾತೇ ಆಡ್ತಾ ಇಲ್ಲ
ಗುಂಡ: ನೀನೇ ಹೇಳಿದ್ಯಲ್ಲ?ಪ್ರೀತಿಗಿಂತ ಸ್ನೇಹಾನೇ ಶಾಶ್ವತ ಅಂತ.....ಅದಕ್ಕೆ ನಿನ್ನ ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ
ಗುಂಡ ಮಧ್ಯ ರಾತ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ,ಪೋಲೀಸ್ ಅವನನ್ನು ತಡೆದು”ಏನಯ್ಯಾ ರಾತ್ರಿ 12ಘಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ?ಏರೋಪ್ಲೈನ್ ಹತ್ತಿಸಬೇಕಾ?
ಗುಂಡ: ಅಯ್ಯೋ ಬೇಡಾ ಸಾರ್ ಯಾವುದಾದ್ರೂ ಒಂದು ಆಟೋ ಹತ್ತಿಸಿಬಿಡಿ ದಮ್ಮಯ್ಯಾ ಅಂತೀನಿ
ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ
ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ
ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ?
ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ?
ಪೋಲೀಸ್:ನೀನು ಯಾವಾಗ್ಲೂ ಅವರ ಮನೇಲೇ ಯಾಕೆ ಕಳ್ಳತನ ಮಾಡ್ತಿದ್ಯಾ
ಕಳ್ಳ:ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್, ಲಾಯರ್ ಇರ್ತಾರಲ್ಲ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ
ಗುಂಡ ಪೋಲೀಸ್ ಸ್ಟೇಷನ್ ಮುಂದೆ ನಿಂತು ಸುಸು ಮಾಡ್ತಿದ್ದ
ಪೋಲೀಸ್:ಏ ಗುಂಡ ಸ್ಟೇಷನ್ ಮುಂದೆ ಹೀಗೆ ಸುಸು ಮಾಡಿದ್ರೆ ಹಿಡ್ಕೊಂದ್ ಬಿಡ್ತೀನಿ ಹುಷಾರ್
ಗುಂಡ: ಹಿಡ್ಕೊಂಡ್ ಹೋಗಿ ಸಾರ್ ಸುಮ್ಮನೆ ವೇಸ್ಟ್ ಆಗ್ತಿದೆ
ಗುಂಡ ಮತ್ತು ತಿಮ್ಮ ಕಾಡಿನಲ್ಲಿ ಹೋಗುತ್ತಿದ್ದರು.ಎದುರಿಗೆ ಒಂದು ಹುಲಿ ಬಂದಿತು.ಗುಂಡ ಅದರ ಕಣ್ನಿಗೆ ಮಣ್ಣು ಎರಚಿ ಓಡಲು ಶುರುಮಾಡಿದ.ಅಲ್ಲೇ ನಿಂತಿದ್ದ ತಿಮ್ಮನನ್ನು "ಏ ತಿಮ್ಮ ಬೇಗ ಓಡು" ಅಂದ.ಅದಕ್ಕೆ ತಿಮ್ಮ"ನಾನೇಕೆ ಓಡಲಿ ಮಣ್ಣು ಎರಚಿದ್ದು ನೀನು ಅಲ್ವಾ?
ಅಪ್ಪ: ಲೋ ಗುಂಡ ಪರೀಕ್ಷೆ ಯಾಕೋ ಬರೀಲಿಲ್ಲ?
ಗುಂಡ:ಪೇಪರ್ ತುಂಬಾ ಟಫ್ ಆಗಿತ್ತು ಅಪ್ಪ.
ಅಪ್ಪ:ಪರೀಕ್ಷೆನೇ ಬರೀಲಿಲ್ಲ ಟಫ್ ಅಂತ ಅದು ಹೇಗೆ ಗೊತ್ತಾಯ್ತು?
ಗುಂಡ:ನೆನ್ನೇನೇ ಪೇಪರ್ ಲೀಕ್ ಆಗಿತ್ತು ಅಪ್ಪಾ...
ಅಪ್ಪ:ಊರಲ್ಲಿ ರಜದಲ್ಲಿ ಏನು ಮಾಡ್ತಿದ್ದೆ?
ಗುಂಡ:ನಮ್ಮಪ್ಪಂಗೆ ಸಹಾಯ ಮಾಡ್ತಿದ್ದೆ
ಅಪ್ಪ:ನಿಮ್ಮಪ್ಪ ಏನ್ ಮಾಡ್ತಿದ್ರು?
ಗುಂಡ:ಏನೂ ಕೆಲಸ ಇರೋಲ್ಲ ಸುಮ್ಮನೆ ಇರ್ತಿದ್ರು....
ಗುಂಡ:ಟ್ರೈನ್ ನಲ್ಲಿ ನಿದ್ದೇನೇ ಮಾಡಕ್ಕಾಗಲಿಲ್ಲ,ಯಾಕೇಂದ್ರೆ ಅಪ್ಪರ್ ಬರ್ತ್ ಸಿಕ್ಕಿತ್ತು
ತಿಮ್ಮ:ಆದ್ರೆ ನೀನು ಯಾಕೆ ಬದಲಾಯಿಸಿಕೊಳ್ಳಲಿಲ್ಲ?
ಗುಂಡ:ಬದಲಾಯಿಸಿಕೊಳ್ಳಕ್ಕೆ ಕೇಳೋಣಾ ಅಂದ್ರೆ ಅಲ್ಲಿ ಯಾರೂ ಇರಲಿಲ್ಲ.
ಗುಂಡ:ನಾನು ಮದುವೆಯಾಗಿ ಸುಖವಾಗಿರೋಣಾ ಅಂತಿದ್ದೀನಿ
ತಿಮ್ಮ;ನೀನು ತುಂಬಾ ತಮಾಷೆಯಾಗಿ ಮಾತಾಡ್ತೀಯಪ್ಪ....
ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ?
ಅಪ್ಪ: ಇಲ್ಲಾ ಕಣೋ,ಯಾಕೆ?
ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು?
ಪಾಂಡು:ಸ್ವಾಮೀ ನನ್ನ ಹೆಂಡತಿ ಕಾಣೆಯಾಗಿದ್ದಾಳೆ
ಸ್ಟೇಷನ್ ಮಾಸ್ಟರ್: ಇದು ರೈಲ್ವೇ ಸ್ಟೇಷನ್ ಪೋಲೀಸ್ ಸ್ಟೇಷನ್ ಅಲ್ಲ
ಪಾಂಡು:ಏನು ಮಾಡ್ಲೀ ಸ್ವಾಮೀ ನನಗೆ ಬಹಳ ಸಂತೋಷ ಆಗ್ತಿದೆ ಏಲ್ಲಿ ಹೋಗ್ಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ.
ತಿಮ್ಮ: ನೀನು ಕೋಪ ಕಂಟ್ರೋಲ್ ಮಾದಲು ಕಲ್ತಿದ್ದೀಯಾ?
ಗುಂಡ:ಓಹೋ ಕಲ್ತಿದ್ದೀನಿ
ತಿಮ್ಮ:ನನ್ನ ಮೇಲೆ ನಿನಗೆ ತುಂಬಾ ಕೋಪ ಬಂದರೆ ಏನು ಮಾಡ್ತೀಯಾ?
ಗುಂಡ:ಟಾಯ್ಲೆಟ್ ಕ್ಲೀನ್ ಮಾಡ್ತೀನಿ
ತಿಮ್ಮ:ಅದರಿಂದ ನಿನಗೇನು ತೃಪ್ತಿ ಸಿಗತ್ತೆ?
ಗುಂಡ:ನಾನು ಟಾಯ್ಲೆಟ್ ಕ್ಲೀನ್ ಮಾಡೋದು ನಿನ್ನ ಟೂತ್ ಬ್ರಶ್ ನಿಂದ!!!!!
ತಿಮ್ಮ:ನನಗೆ ತುಂಬಾ ಕೆಮ್ಮು ಕಣೋ
ಗುಂಡ:ನೀನು ವಿಸ್ಕೀ ಕುಡಿ
ತಿಮ್ಮ:ವಿಸ್ಕೀ ಕುಡಿದ್ರೆ ಕೆಮ್ಮ ಹೋಗತ್ತಾ?
ಗುಂಡ: ಅರೆ ಯಾಕೋ ಹೋಗಲ್ಲಾ, ಅದನ್ನ ಕುಡಿದ್ರೆ ಹಣಹೋಗತ್ತೆ,ನೆಮ್ಮದಿ ಹೋಗತ್ತೆ,ಮರ್ಯಾದೆ ಹೋಗತ್ತೆ,ನಾಚಿಕೆ ಹೋಗತ್ತೆ ಇವೆಲ್ಲಾ ಹೋಗತ್ತೆ ಅಂದ್ಮೇಲೆ ಕೆಮ್ಮು ಯಾವ ಮಹಾ
ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು
ಹುಡುಗ;ನೀನು ಇಷ್ಟು ಸುಂದರವಾಗಿದ್ದೀಯ ಸ್ನಾನ ಮಾಡುವಾಗ ಏನ್ ಹಾಕ್ಕೋತ್ಯಾ?
ಹುಡುಗಿ:ನಾನೂ......ಬಾಗಿಲು ಹಾಕ್ಕೊಂಡ್ ಮಾಡ್ತೀನಿ
ನಿರ್ದೇಶಕ:ನೀವು ಹತ್ತನೇ ಮಹಡಿಯಿಂದ ಸ್ವಿಮ್ಮಿಂಗ್ ಪೂಲ್ ಗೆ ಧುಮುಕಬೇಕು
ಹೀರೋ;;ಆದರೆ ನನಗೆ ಈಜು ಬರೋಲ್ಲ
ನಿರ್ದೇಶಕ: ಹೆದರಬೇಡಿ ಅದರಲ್ಲಿ ನೀರು ಇರೋಲ್ಲ!!!!!
ಮಗ: ಅಪ್ಪ ನಾನು ಗಾಂಧೀಜಿ ಥರ ಆಗಬೇಕು
ಅಪ್ಪ:ಆಗೂ ಬೇಡ ಅಂದವರ್ಯಾರು
ಮಗ:ಹಾಗಿದ್ರೆ ಅವರು ಹನ್ನೆರಡನೇ ವಯಸ್ಸಿಗೇ ಮದುವೆ ಆದರು.....ನಾನೂ ಆಗುವೆ
ಗುಂಡ:ಕವಿತಗೂ-ಪ್ರಬಂಧಕ್ಕೂ ವ್ಯತ್ಯಾಸವೇನು?
ತಿಮ್ಮ:ಗೆಳತಿಯರ ಬಗ್ಗೆ ಮಾತನಾಡಿದರೆ ಕವಿತೆ ಅಂತಾರೆ.ಹೆಂಡತಿ ಬಗ್ಗೆ ಮಾತನಾಡಿದರೆ ಅದು ಪ್ರಬಂಧವಾಗಬಹುದೇನೋ
ಕನ್ನಡದ ಮೊದಲ ಮೂಕೀ ಚಿತ್ರ ಯಾವುದು?
ಗುಂಡ: ಚಿತ್ರ ಮೂಕಿಯಾಗಿದ್ದರೆ ಕನ್ನಡ ಅಂತ ಹೇಗೆ ಗೊತ್ತಾಗತ್ತೆ ಸಾರ್ ?
ಪತ್ರಕರ್ತ : ನಿಮ್ಮ ಚಿತ್ರದ ಬಿಡುಗಡೆ ಬಗ್ಗೆ ಏನು ಹೇಳ್ತೀರಾ?
ನಿದೇಶಕ : ಕೆಲವರಿಗೆ ಇಷ್ಟವಾಗಿದೆ... ಕೆಲವರಿಗೆ ಇಲ್ಲ.....
ಪತ್ರಕರ್ತ : ನಿಮ್ಮ ಮಾತಿನ ಅರ್ಥ?
ನಿರ್ದೇಶಕ : ನಮಗೆ ಇಷ್ಟವಾಗಿದೆ.... ಪ್ರೇಕ್ಷಕರಿಗೆ ಇಲ್ಲ.....
ತಿಮ್ಮ: ಎನೋ.... ಗುಂಡ ಮನೆ ಖಾಲಿ ಮಾಡಿ ಹೋಗ್ತಿದ್ದೀಯಂತೆ?
ಗುಂಡ : ಹೌದು ತಿಮ್ಮ
ತಿಮ್ಮ : ಸರಿ ಬಿಡು ನಾನೂ ಬಹಳ ದಿನದಿಂದ ಖಾಲಿ ಮಾಡ್ಬೇಕೂ ಅಂದ್ಕೊಂಡಿದ್ದೆ
ಗುಂಡ : ಮತ್ತೆ ನೀನು ಯಾವಾಗ ಖಾಲಿ ಮಾಡೋದು?
ತಿಮ್ಮ : ಇಲ್ಲ ಬಿಡು ನೀನು ಖಾಲಿ ಮಾಡಿಯಾಯ್ತಲ್ಲ, ಇನ್ನು ನಾನ್ಯಾಕೆ ಮಾಡಲಿ
ಬಾಸ್ - ನಮಗೆ ಒಬ್ಬ ಜವಾಬ್ದಾರಿಯುತ ನೌಕರ ಬೇಕಾಗಿದೆ
ಗುಂಡ - ಹಾಗಿದ್ರೆ ನಾನೇ ಅದಕ್ಕೆ ಲಾಯಕ್ಕು ಸ್ವಾಮಿ, ನನ್ನ ಹಿಂದಿನ ಕೆಲಸದಲ್ಲಿ ಎಲ್ಲಾ ತಪ್ಪಿಗೂ ನಾನೆ ಜವಾಬ್ದಾರಿ ಅಂತಿದ್ರು....ಊ..
ಬಾಸ್ - ಕೆಲಸ ಅರಸಿ ಬಂದವನನ್ನು ಒಂದು ಹಕ್ಕಿಯ ಕಾಲಿನ ಚಿತ್ರ ತೋರಿಸುತ್ತಾ'ಅದರ ಹೆಸರು ಏನು'' ಎಂದು ಕೇಳಿದ
ಗುಂಡ - ನನಗೆ ಗೊತ್ತಿಲ್ಲ ಸಾರ್
ಬಾಸ್ - ನೀನು ರಿಜೆಕ್ಟ್ , ನಿನ್ನ ಹೆಸರೇನು?
ಗುಂಡ -ನನ್ನ ಕಾಲುಗಳನ್ನು ನೋಡಿ ತಿಳ್ಕೊಳ್ಳಿ
ಹೆಂಡತಿ - ರೀ ನಿಮ್ಮ ತಲೇಲಿ ಬರೀ ಗೊಬ್ಬರಾನೇ ತುಂಬಿದೆ.
ಗಂಡ - ಮತ್ಯಾಕೆ ಅದನ್ನೇ ತಿಂತೀಯಾ?
ಒಬ್ಬ ಹೆಂಗಸು ಡೋರ್ ಬೆಲ್ ರಿಪೇರಿ ಮಾಡಲು ನಾಲ್ಕು ದಿನ ತಡವಾಗಿ ಬಂದ ಸಂಟಾನನ್ನು ಯಾಕ್ರೀ ನಾಲ್ಕು ದಿನ ಲೇಟ್ ಎಮ್ದು ಪ್ರೆಶ್ನಿಸಲು ಆತ "ನಾನು ದಿನಾ ಬರ್ತಿದ್ದೆ ಅಮ್ಮಾವ್ರೆ ಆದರೆ ಕಾಲಿಂಗ್ ಬೆಲ್ ಒತ್ತಿದರೆ ಯಾರೂ ಬಾಗಿಲು ತೆಗಿಯುತ್ತಿರಲಿಲ್ಲ " ಅನ್ನಬೇಕೇ
ಗಿರಾಕಿ - ನೀವು ಪ್ರತೀ ಶುಕ್ರವಾರ ಯಾಕೆ ಹೋಟೆಲ್ ಗೆ ರಜ ಕೊಡ್ತೀರಾ?
ಮಾಲೀಕ- ಹೌದು ನಾವು ಪ್ರತಿ ಶುಕ್ರವಾರ ಪಾತ್ರೆ, ಲೋಟ, ತಟ್ಟೆ, ಚಮಚ ಎಲ್ಲಾ ತೊಳೀ ಬೇಕಲ್ಲಾ
ಕರೆಂಟ್ ಹೋದಮೇಲೆ ಸಂಟ ತನ್ನ ಹೆಂಡತಿಗೆ ’ಲೇ ಸ್ವಲ್ಪ ಫಾನ್ ಹಾಕು’ ಅಂದ.ಅದಕ್ಕೆ ಆತನ ಹೆಂಡತಿ ” ಅಯ್ಯೋ ನಿಮ್ಮ ಬುದ್ಧಿಗೆ ಅಷ್ಟು, ಫ್ಯಾನ್ ಹಾಕಿದ್ರೆ ದೀಪ ಆರಿ ಹೋಗಲ್ವಾ’
ಗಂಡ ಹೆಂಡತಿ ಜೊತೆ ದಾರಿಯಲ್ಲಿ ಹೋಗುತ್ತಿರಲು ಅಲ್ಲಿ ಒಂದು ಕತ್ತೆ ಬಂದಿತು.ಆಗ ಹೆಂಡತಿ ಗಂಡನಿಗೆ ’ ನೋಡಿ ನಿಮ್ಮ ನಂಟರು ಬಂದ್ರು ”ಅಂದಳು.ಅದಕ್ಕೆ ತಕ್ಷಣ ಗಂಡ ’ ನಮಸ್ಕಾರ ಮಾವ” ಎಂದ
ಜೈಲಿನಲ್ಲಿದ್ದ ಸಂಟ ಜೈಲರ್ ಗೆ ” ಚಿಕ್ಕವನಾಗಿದ್ದಾಗ ನನ್ನಪ್ಪನ ಮಾತು ಕೇಳಿದ್ದರೆ ಈವತ್ತು ನನಗೆ ಈ ಗತಿ ಬರ್ತಿರ್ಲಿಲ್ಲ.
ಅದಕ್ಕೆ ಜೈಲರ್ ’ ಏನಂದ್ರು ನಿಮ್ಮಪ್ಪ.
ಸಂಟ ” ಅರೆ ನಂಗೇನು ಗೊತ್ತು, ಹೇಳಿದ್ನಲ್ಲಾ ಆಗಲೇ ಅವರು ಹೇಳಿದ್ದು ನಾನು ಕೇಳಿಲ್ಲಾಂತ
ಒಬ್ಬ ಹುಡುಗಿ ಶಾಲೆಗೆ ಲೇಟಾಗಿ ಬಂದಳು.ಟೀಚರ್ ಯಾಕೆಂದು ಕೇಳಲು ’ಒಬ್ಬ ನನ್ನ ಹಿಂದೇನೇ ಬರುತ್ತಿದ್ದ ” ಟೀಚರ್:ಅದಕ್ಕೆ ನೀನೇಕೆ ಲೇಟಾಗಿ ಬಂದೆ?
ಹುಡುಗಿ:ಸಾರ್ ಅವನು ಬಹಳ ನಿಧಾನವಾಗಿ ನಡೀತಿದ್ದ
‘ರಾಮನು ಮರದಿಂದ ಬಿದ್ದ ’ ಇದು ಯಾವ ಕಾಲ ಎಂದು ಕೇಳಿದರು ಟೀಚರ್ ಗುಂಡ: "ರಾಮನಿಗೆ ಬಹಳ ಕೆಟ್ಟಕಾಲ ಸಾರ್"
ಸಂಟ: ಏನೋ ಮಾಡ್ತಿದ್ದೀಯಾ ಬಂಟ
ಬಂಟ: ಮಗನ ವಾಯ್ಸ್ ರೆಕಾರ್ಡ್ ಮಾಡ್ತಿದ್ದೀನಿ
ಸಂಟ: ಯಾಕೆ ?
ಬಂಟ: ದೊಡ್ಡವನಾದ ಮೇಲೆ ಅದರ ಅರ್ಥ ಕೇಳೋಕ್ಕೆ
ಆತ:ನೀನು ನನ್ನ ಮೂರನೇ ಹೆಂಡ್ತಿ ಹಾಗೇ ಇದ್ದೀಯಾ..... ಆಕೆ:ಹಾಗಾದರೆ ನಿನಗೆ ಎಷ್ಟು ಹೆಂಡತೀರು ?.....ಆತ: ಇಬ್ಬರು
ಸಂಟ ಕೆಲಸದವನಿಗೆ ‘ಹೋಗಿ ಗಿಡಗಳಿಗೆ ನೀರು ಹಾಕು’......ಆಳು: ಆಗಲೆ ಮಳೆ ಬರ್ತಾ ಇದೆ ಸ್ವಾಮೀ........ಸಂಟ: ಮಳೆ ಬಂದ್ರೆ ಏನಂತೆ ಛತ್ರಿ ಹಿಡ್ಕೊಂಡು ಹಾಕು.
ಸಂಟ: ನೆನ್ನೆ ರಾತ್ರಿ ಕಳ್ಳ ಬಂದು ನನ್ನ ಮನೆಯಲ್ಲಿ ಎಲ್ಲಾ ದೋಚಿಕೊಂಡು ಹೋದ
ಬಂಟ: ಆದ್ರೆ ನಿನ್ನ ಹತ್ರ ಗನ್ ಇತ್ತಲ್ಲ?
ಸಂಟ:ಅದನ್ನ ನಾನು ಬಚ್ಚಿಟ್ಟಿದ್ದೇಪ್ಪ ಸಧ್ಯ ಇಲ್ಲದಿದ್ದ್ರೆ ಅದನ್ನೂ ಕಳ್ಕೋತಿದ್ದೆ
ಸಂಟ:ಲೋ ಬಂಟ ಚತ್ರಿ ತೂತಾಗಿದೆ ಹೊಸಾದು ತೊಗೊಳ್ಳೋ
ಬಂಟ: ಅರೆ ಇರ್ಲಿ ಬಿಡೋ ಮಳೆ ನಿಂತು ಹೋಗೋದು ಹೇಗೆ ಗೊತ್ತಾಗಬೇಕು ಹೇಳು
ಬಾಸ್: ಸಂಟ ನಮ್ಮ ಆಫೀಸಲ್ಲಿ ಯಾವ ಕೆಲಸಾನೂ ನಿನಗೆ ಕೊಡಲು ಆಗುವುದಿಲ್ಲ, sorry ಬೇರೆ ಕೆಲಸ ನೋಡ್ಕೋ ಹೋಗು.
ಸಂಟ: ಸಾರ್ ದಯವಿಟ್ಟು ನನ್ನನ್ನ ಅಪಾಯಿಂಟ್ ಮಾಡ್ಕೊಳ್ಳಿ ಕೆಲಸ ಏನೂ ಯಾವತ್ತೂ ಕೇಳಲ್ಲ
ಗುಂಡ: ಲೇ ಪುಂಡ I‘m going ಅಂದ್ರೆ ಏನೋ......ಪುಂಡ:ನಾನು ಹೊಗ್ತೀನಿ..........ಗುಂಡ: ಎಲ್ಲಿಗೆ ಹೋಗ್ತೀಯ ನಿಲ್ಲೋ,ಒಂದು ಪ್ರೆಶ್ನೆ ಕೇಳಿದ್ರೆ ತಕ್ಷಣ ಹೀಗೆ ಹೋಗೋದಾ?
ಗುಂಡ: ಈವತ್ತು ನಾನು ನಿದ್ದೆ ಮಾಡಲ್ಲ ಕಣೋ........ಪುಂಡ: ಯಾಕೇ?......ಗುಂಡ: ನೆನ್ನೆ ನನ್ನ ವೈರಿ ಜೊತೆ ಜಗಳ ಆಡಿದೆ.....ಪುಂಡ: ಅದಕ್ಕೆ ?........ಗುಂಡ: ಇವತ್ತು ಮತ್ತೆ ಅವನು ಅವನ ಕಡೆ ಗ್ಯಾಂಗ್ ಕರ್ಕೊಂಡು ಬಂದ್ರೆ?
ಎಲ್ಲಾ ನೋಟ್ ಮೇಲೆ ಗಾಂಧೀ ಯಾಕೆ ನಾಗ್ತಾ ಇರ್ತಾರೆ?.......ಅತ್ತರೆ ನೋಟು ವದ್ದೆ ಆಗತ್ತೆ ಅದಕ್ಕೆ
ಸರದಾರ್ ಒಬ್ಬ ಇಪ್ಪತ್ತು ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಕೊಂಡ. ಅದೃಷ್ಟಕ್ಕೆ ಇಪ್ಪತ್ತು ಕೋಟಿ ರೂ ಲಾಟರಿಯಲ್ಲಿ ಗೆದ್ದ. ಲಾಟರಿ ಡೀಲರ್ ಆತನಿಗೆ ತೆರಿಗೆ ನಂತರ ಹದಿನಾಲ್ಕು ಕೋಟಿ ಕೊಟ್ಟ.ಕೋಪಗೊಂಡ ಸರ್ದಾರ್ ಹೇಳಿದ ‘ ಪೂರಾ ಇಪ್ಪಾತ್ತು ಕೋಟಿ ಕೊಟ್ಟರೆ ಸರಿ ಇಲ್ಲದ್ದಿದ್ದರೆ ನನ್ನ ಇಪ್ಪಾತ್ತು ರೂಪಾಯಿ ವಾಪಸ್ ಕೊಡು’ ಅಂದ!!!
ಪೋಸ್ಟ್ ಮ್ಯಾನ್: ನಾನು ಐದು ಮೈಲಿ ಪ್ರಯಾಣ ಮಾಡಿ ಈ ಪತ್ರ ತಂದಿದ್ದೇನೆ.
ಸರ್ದಾರ್:ಅಷ್ಟು ದೂರದಿಂದೇಕೆ ಬಂದೆ? ಪೋಸ್ಟ್ ಮಾಡಬಹುದಿತ್ತಾಲ್ಲಾ?
ಸರ್ದಾರ್ ಮತ್ತು ಅವನ ಹೆಂಡತಿ ಹೋಟೆಲ್ ನಲ್ಲಿ ಕಾಫಿ ಆರ್ಡರ್ ಮಾಡಿದರು.ಕಾಫಿ ಟೆಬಲ್ ಗೆ ಬಂದ ತಕ್ಷಣ ಸರ್ದಾರ್ ತನ್ನ ಹೆಂಡತಿಗೆ ಹೇಳಿದ "ಬೇಗ ಬೇಗ ಕುಡಿ" ಅದಕ್ಕೆ ಹೆಂಡತಿ "ಯಾಕೆ ?".ಸರ್ದಾರ್ ತಟ್ಟನೆ ಹೇಳಿದ "ಬಿಸಿ ಕಾಫಿ 5 ರೂ,ಕೋಲ್ಡ್ ಕಾಫಿಗೇ 10 ರೂ....ಹೂ ಬೇಗ"
ಡೈವರ್ಸ್ ಗೆ ಅರ್ಜಿ ಹಾಕಿದ್ದ ಸರ್ದಾರನಿಗೆ ನ್ಯಾಯಾಧೀಶ ಕೇಳಿದ "ನಿನಗಿರುವುದು ಮೂರು ಮಕ್ಕಳು ನೀನು ಆಸ್ತಿ ಹೇಗೆ ಭಾಗ ಮಾಡುವೆ?" ಅದಕ್ಕೆ ಸರ್ದಾರ್ "ಓಕೆ ನಾವು ಮುಂದಿನ ವರ್ಷ ಆರ್ಜಿ ಹಾಕ್ತೀವಿ" ಅನ್ನೋದೇ
ಒಬ್ಬ ಸರ್ದಾರನನ್ನು ಆತನ ಗೆಳೆಯ ಕೇಳಿದ "ಅರೆ! ಮನಮೋಹನ್ ಸಿಂಗ್ ಯಾಕೆ ಸಂಜೆ ವೇಳೆ ಮಾತ್ರ ಜಾಗಿಂಗ್ ಹೋಗ್ತಾರೆ?".ಸರ್ದಾರ್ ಉತ್ತರಿಸಿದ" ಅರೆ ಭಾಯ್ ಅವರು PM ಅಲ್ವಾ AM ಅಲ್ಲಾನೋಡು ಅದಕ್ಕೇ"ಅಂದು ನಕ್ಕ
ಸರ್ದಾರ್ ಕನ್ನಡಿಯ ಮುಂದೆ ಕಣ್ಣು ಮುಚ್ಚಿ ನಿಂತಿದ್ದ. ಅದಕ್ಕೆ ಆತನ ಹೆಂಡತಿ "ಅರೆ ಅದೇನ್ ಅಷ್ಟು ಹೊತ್ತಿನಿಂದ ಕನ್ನಡಿ ಮುಂದೆ?" ಅದಕ್ಕೆ ಸರ್ದಾರ್ "ನಾನು ನಿದ್ದೆ ಮಾಡುವಾಗ ಹೇಗೆ ಕಾಣ್ತೀನಿ ಅಂತ ನೋಡ್ತಿದ್ದೀನಿ ಡಿಯರ್"
ಸಂಟ:ನೀನು ನನಗೆ ದ್ರೋಹ ಮಾಡಿದೆ
ಬಂಟ:ಇಲ್ಲ ನಾನು ನಿನಗೆ ಬರೀ ರೇಡಿಯೋ ಮಾರಿದೆ ಅಷ್ಟೆ
ಸಂಟ:ಆದ್ರೆ ಲೇಬಲ್ ಮೇಲೆ Made In Japan ಅಂತ ಬರೆದಿದೆ ಆದರೆ ರೇಡಿಯೋ ಆನ್ ಮಾಡಿದರೆ ಇದು ಆಲ್ ಇಂಡಿಯಾ ರೇಡಿಯೋ ಅಂತ ಹೇಳ್ತಾರೆ?" ಅನ್ನೋದೇ
ಸರ್ದಾರ್ ಬ್ಯಾಂಕ್ ಕೆಲಸಕ್ಕೆ interview ಗೆ ಹೋದ.ಅಲ್ಲಿ "cyclone ಅಂದ್ರೆ ಏನು?" ಅಂದರು. ಅದಕ್ಕೆ ಸರ್ದಾರ್ ನಕ್ಕು "cyclone ಒಂದು ಸಣ್ಣ ಸಾಲ ಸೈಕಲ್ ಕೊಂಡುಕೊಳ್ಳಲು" ಅಂದ
ಸರ್ಕಾರಿ ನೌಕರನು ಡಾಕ್ಟರ್ ಬಳಿ ಹೋಗಿ "ಡಾಕ್ಟರೇ ನನಗೆ ಸಂಪೂರ್ಣ ಸ್ಟ್ರೆಸ್ ಆಗಿ ಹೋಗಿದೆ, ಏನಾದರೂ ಸಹಾಯ ಮಾಡಿ"ಎಂದ. ಅದಕ್ಕೆ ವೈದ್ಯ ಆತನ ಎಲ್ಲ ವಿವರ ಕೇಳಿ "ನೀವು ರಜದಲ್ಲಿ ಮನೆಗೆಲಸ ಜಾಸ್ತಿ ಮಾಡಿದ್ದೀರಿ,ನಿಮಗೆ ಪೂರ್ತಿ ವಿಶ್ರಾಂತಿ ಬೇಕಾಗಿದೆ ಆದಷ್ಟು ಬೇಗ ಕೆಲಸಕ್ಕೆ(ಸರ್ಕಾರಿ) ವಾಪಸ್ ಹೋಗಿ ಎಲ್ಲ ಸರಿ ಹೋಗತ್ತೆ" ಅನ್ನಬೇಕೆ
ಮಾನಸಿಕ ಚಿಕಿತ್ಸೆ ನೀಡುವ ವೈದ್ಯರ (psychiatrist) ಸೆಕ್ರೆಟರಿ ಕೋಣೆಯೊಳಗೆ ಬಂದು ಹೇಳಿದಳು "ಡಾಕ್ಟ್ರೇ ಹೊರಗೆ ಕಾಯ್ತಾ ಇರೋ ಒಬ್ಬಾತ ತಾನು invisible ಅಂತ ಹೇಳ್ತಿದ್ದಾನೆ" ಅಂದಳು. ಅದಕ್ಕೆ ಡಾಕ್ಟರ್ ಹೊರಕ್ಕೆ ಬಂದು "ಯಾರದು? ಯಾರೂ ಕಾಣ್ತಾ ಇಲ್ಲವಲ್ಲಾ?"ಅಂದ ತಕ್ಷಣ ರೋಗಿ "ನಾನು?"ಅನ್ನಬೇಕೆ. ಆಗ ಡಾಕ್ಟರ್ ಶಾಂತವಾಗಿ "(ಹಂಗೆ) ಬಾ ಒಳಗೆ"
ದೆಹಲಿಗೆ ಬಂದಿದ್ದ ಓರ್ವ ಪ್ರವಾಸಿಗ ಕಾರ್ ಬಾಡಿಗೆಗೆ ತೆಗೆದುಕೊಂಡು ನಗರ ಪ್ರದಕ್ಷಿಣೆ ಹೊರಟ.ಪಾರ್ಲಿಮೆಂಟ್ ಬಳಿಗೆ ಬಂದಾಗ ಫೋಟೋ ತೆಗೆಯಲು ಮೆಟ್ಟಿಲು ಏರಿ ಹೋಗಬೇಕಾಯಿತು. ಸರಿ ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ಬದಿಯಲ್ಲೇ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು "ಸ್ವಾಮೀ ನಾನು ಫೋಟೋ ತೆಗೆದು ಬರುವ ವರೆಗೂ ಈ ನನ್ನ ಕಾರ್ ಕಾವಲು ಕಾಯ್ತೀರಾ" ಅಂದ.ಅದಕ್ಕೆ ಆತ "ರೀ ನನ್ನನ್ನ ಯಾರೆಂದು ತಿಳಿದಿದ್ದೀರಿ? ನಾನು ರಾಜಕಾರಣಿ ಈ ಪಾರ್ಲಿಮೆಂಟ್ ಸದಸ್ಯ ಗೊತ್ತಾ" ಅದಕ್ಕೆ ಪ್ರವಾಸಿ ಹೇಳಿದ "ಗೊತ್ತಿರಲಿಲ್ಲ ಸ್ವಾಮೀ, ಆದರೂ ನನಗೆ ನಿಮ್ಮ ಮೇಲೆ ನಂಬಿಕೆ ಇದೆ,ಸ್ವಲ್ಪ ಇಲ್ಲೇ ಇರಿ" ಎಂದು ಹೊರಟೇ ಬಿಟ್ಟ.
ಗುಂಡ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದ. ಹೆಸರು - ಗುಂಡ,....ವಿಳಾಸ.....,ವಯಸ್ಸ್ಸು......,ವಿದ್ಯೆ.....,ಅನುಭವ......,ಎಲ್ಲಾ ಭರ್ತಿ ಮಾಡಿದ. ಕಡೆಯಲ್ಲಿ salary expected....ಅಂತಿತ್ತು.ಅಲ್ಲಿ ಏನೂ ಬರೆಯಲು ತೋಚದೆ Yes ಎಂದು ಬರೆದ
ಸರ್ದಾರ್ ಕನ್ನಡಕದ ಅಂಗಡಿಗೆ ನುಗ್ಗಿದ.ಡಿಸ್ಪ್ಲೇ ಇಟ್ಟಿದ್ದ ಒಂದು ಕನ್ನಡಕ ತೆಗೆದುಕೊಂಡು "ಗ್ಲಾಸ್ ಕಾಕ್ಕೊಂಡ್ರೆ ಚೆನ್ನಾಗಿ ಓದಬಹುದಂತೆ ಹೌದಾ?"ಅಂದ. ಸೇಲ್ಸ್ ಮನ್ "ಹೌದು" ಎಂದು ಮತ್ತೊಂದು ಲೇಟೆಸ್ಟ್ ಫ್ರೇಮ್ ತೋರಿಸಿದ.ಅದನ್ನು ಧರಿಸಿ "ಏನದು ಇಂಗ್ಲೀಶಿನಲ್ಲಿ ಬರೆದಿರುವುದು ಅಲ್ಲಿ?" ಅಂದ. "ಅದು buy 1 get 1 free, ಯಾಕೆ ನಿಮಗೆ ಇನ್ನೂ ಸರಿಯಾಗಿ ಕಾಣ್ತಾ ಇಲ್ವ?" ಎಂದ ಸೇಲ್ಸ್ ಮನ್."ಹಂಗಲ್ಲ ನಾನು ಎಂದೂ ಸ್ಕೂಲೀಗೇ ಹೋದವನಲ್ಲ," ಅನ್ನಬೇಕೆ.
ಒಬ್ಬ ಸರ್ದಾರ್ ಮತ್ತೊಬ್ಬ ಸರ್ದಾರನನ್ನು ಕೇಳಿದ "ಅಕಸ್ಮಾತ್ ನಿನ್ನ ನಾಯಿಯ ಬಾಲ ಕತ್ತರಿಸಿ ಹೋದರೆ ಏನು ಮಾಡುವೆ?" ಅದಕ್ಕೆ ಆ ಮತ್ತೊಬ್ಬ ಜಾಣನಂತೆ ತಕ್ಷಣ ಹೇಳಿದ"ರೀ ಟೈಲ್ ಶಾಪ್ ಇದೆಯಲ್ಲಾ?"
ಪ್ರವಾಸಕ್ಕೆ ಹೊರಟಿದ್ದ ಇಬ್ಬರು ಸರ್ದಾರರು ರೈಲಿನಲ್ಲಿ ಬಹಳ ಹೊತ್ತು ಮಾತನಾಡುತ್ತಾ ಎಲ್ಲಾ ವಿಶಯ ಮುಗಿಸಿ ಸ್ವಲ್ಪಹೊತ್ತು ಮೌನವಾರದು. ಏನಾದರೂ ಮಾತಾಡಬೇಕೆನಿಸಿ ಒಬ್ಬ "ಅರೆ ನಿನ್ನ ಸಾಕ್ಸ್ ಎರಡೂ ಬೇರೆ ಬೇರೆ ಬಣ್ಣವಿದೆ?" ಅಂದ. ಅದಕ್ಕೆ ಆತ "ಅದೇನ್ ಮಹಾ ಇದೇ ಥರದ್ದು ಮನೇಲೂ ಒಂದು ಪೇರ್ ಇದೆ"ಅಂದ
ಸಂಟ ಬಂಟ ಡಬಲ್ ಡೆಕ್ಕರ್ನಲ್ಲಿ ಪ್ರಯಾಣ ಮಾಡಲು ಹತ್ತಿದರು.ಬಂಟ ಕೆಳಗಿನ ಮಹಡಿಯಲ್ಲಿ ಕುಳಿತಿರಲು ಸಂಟ ಮೇಲೆ ಹೋಗಿ ಗಾಬರಿಯಿಂದ ಕೆಳಗೆ ಓಡಿ ಬಂದ.ಏನಾಯಿತೆಂದು ಕೇಳಲು "ಸದ್ಯ ಇಲ್ಲೇ ಇರೋಣ ಮೇಲಿನ ಬಸ್ಸಿಗೆ ಡ್ರೈವರ್ರೇ ಇಲ್ಲ ಹಂಗೇ ಹೋಗ್ತಿದೇ !"
ಗುಂಡ ಡಾಕ್ಟರಿಗೆ ಫೋನ್ ಮಾಡಿ"ಡಾಕ್ಟರೇ ಹೆಂಡತಿ ತುಂಬು ಗರ್ಭಿಣಿ ಹೊಟ್ಟೆ ತುಂಬಾ ನೋಯ್ತಾ ಇದೆ, ಕಾನ್ಟ್ರಾಕ್ಷನ್ ಪ್ರತಿ ಎರಡು ನಿಮಿಶಕ್ಕೊಮ್ಮೆ ಆಗ್ತಿದೆ"ಅಂದ. ಅದಕ್ಕೆ ಡಾಕ್ಟರ್ "ಇದು ಅವರ ಮೊದಲ ಮಗೂನಾ?" ಎಂದ. ಗುಂಡ ರೇಗಿದ "ಸ್ವಾಮೀ ನಾನು ಆಕೆ ಗಂಡ ನನ್ನನ್ನೇ ಹಿಂಗೆ ಕೇಯ್ತೀರಾ"
ಗಂಡ ಹೆಂಡಿರ ಜಗಳ ಗಂಡ" ನಾನು ಹೊರಟು ಹೋದರೆ ನನ್ನಂಥಾ ಗಂಡ ಹುಡುಗಿದರೂ ನಿನಗೆ ಸಿಕ್ಕಲ್ಲ ನೋಡ್ತಿರು" ಹೆಂಡ್ತಿ "ನಿನ್ನಂಥಾ ಗಂಡನ್ನ ಹುಡುಕೋದಾದ್ರೂ ಯಾರು?"
"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ, ಆಹ್ವಾನನೋ ತಿಳೀ ಲಿಲ್ಲ" ಎಂದ
ಬಾಲಕಿ ಒಬ್ಬಳು ಚರ್ಚ್ನಲ್ಲಿ ಕಣ್ಮುಚ್ಚಿ "ದೇವರೇ ಮಾಸ್ಕೋನಾ ಚೈನಾ ದೇಶದ ರಾಜಧಾನಿಯನ್ನಾಗಿ ಮಾಡಪ್ಪಾ"ಎಂದು ಪದೇ ಪದೇ ಜೋರಾಗಿ ಬೇಡುತ್ತಿದ್ದಳು.ಆಕೆಯ ಅಕ್ಕ ಕಾರಣ ಕೇಳಲು "ನೆನ್ನೆ ಪರೀಕ್ಷೆಯಲ್ಲಿ ಮಾಸ್ಕೋ ಚೈನಾದ ರಾಜಧಾನಿ ಎಂದು ಬರೆದಿರುವೆ"ಎಂದಳು.
ಕಾಡಿನಲ್ಲಿ ಹುಲಿಗೆ ಮದುವೆ ಆಗುತಿರಲು ಇಲಿಯೊಂದು ಹರುಶದಿಂದ ಕುಣಿಯುತ್ತಿತ್ತು.ಮೊಲವೊಂದು ಕಾರಣ ಕೇಳಲು "ನನ್ನ ಅಣ್ಣನಿಗೆ ಮದುವೆ"ಎಂದಿತು.ಅದಕ್ಕೆ ಮೊಲ "ನೀನ್ಯಾವಾಗ ಹುಲಿಗೆ ತಮ್ಮನಾದೆ" ಎನ್ನಲು."ನಮ್ಮ ಅಮ್ಮ ಹೇಳ್ತಾರೆ ನಾನೂ ಮದುವೆಗೆ ಮುಂಚೆ ಹುಲಿ ಆಗಿದ್ನಂತೆ."
ಹೆಂಡತಿ ಕಾವಲಿಯ ಮೇಲೆ ದೋಸೆ ಹಾಕುತ್ತಿರಲು ಗಂಡ ಅಲ್ಲಿಗೆ ಬಂದು"ಏಯ್ ಸ್ವಲ್ಪ ತಾಳು ಬಿಸಿ ಆಗ್ಲಿ,ಈಗ ಹಾಕು ಎಣ್ಣೆ ಹಾಕು ಸರಿಯಾಗಿ ಹಿಟ್ಟು ಕಲಕಿ ಕಲಕಿ ಸೌಟು ಸುರಿ,ತಿರುವು, ಹಾಗೆ, ಅಲ್ಲ ನಿಧಾನ ,ತಟ್ಟೆ ಮುಚ್ಚು,ತಾಳು ತಟ್ಟೆ ತೆಗಿ, ಇಲ್ಲ ಇನ್ನೂ ಆಗಿಲ್ಲ, ಈಗ ಸರಿಯಾಗಿ ಕೆಂಪಗೆ ಆಗಿಲ್ಲ ಗರಿಗರಿ ಆಗಬೇಕು...."ಹೆಂದತಿಗೆ ರೇಗಿತು"ಏನ್ರಿ ಯಾವತ್ತೂ ದೋಸೆನೇ ಮಾಡಿಲ್ವ ನಾನು ಹೀಗೆ ಟೀಚ್ ಮಾಡ್ತಿದ್ದೀರಾ" ಅದಕ್ಕೆ ಗಂಡ"ನಾನು ಡ್ರೈವ್ ಮಾಡುವಾಗ ದಿನಾ ನೀನು ನನಗೆ....ಎದೇ ರೀತಿ ಅಲ್ವಾ ಟೀಚ್ ಮಾಡೋದು"ಅಂದ.
ಪ್ರಾಯದ ಹುಡುಗಿ ಅರ್ಧ ಗಂಟೆ ಫೋನಿನಲ್ಲಿ ಮಾತು ಮುಗಿಸಿ ರಿಸೀವರ್ ಕೆಳಗಿಟ್ಟ ನಂತರ ಅವಳ ತಂದೆ ಹೇಳಿದ"ಅರೆ ಪರವಾಗಿಲ್ವೇ ಈದಿನ ಬರೀ ಅರ್ಧ ಗಂಟೆನಾ ಕೊರೆದದ್ದು ಭೇಶ್"ಎಂದ. ಅದಕ್ಕೆ ಹುಡುಗಿ"ಅಪ್ಪಾ ಅದು ರಾಂಗ್ ನಂಬರ್" ಅನ್ನಬೇಕೇ. ಬೆಪ್ಪಾದ ಅಪ್ಪ.
ಡಿಂಗ್ ಡಾಂಗ್ ಬಾಗಿಲಿನ ಕಾಲಿಂಗ್ ಬೆಲ್ ಸದ್ದು.ಮನೆಯಾಕೆ ಬಾಗಿಲು ತೆರೆದು ಕೇಳಿದಳು"ಯಾರು ಬೇಕಿತ್ತು?"ಬಾಗಿಲು ತಟ್ಟಿದವ ಹೇಳಿದ "ನಾನು ಮೇಡಂ ನಿಮ್ಮ ಪಿಯಾನೋ ಟ್ಯೂನ್ ಮಾಡಲು ಬಂದಿದ್ದೇನೆ" ಎಂದ. "ಆದರೆ ನಾನು ನಿನ್ನನ್ನು ಬರಲು ಹೇಳಲಿಲ್ಲವಲ್ಲಾ"ಎಂದಳು ಆಕೆ.ಅದಕ್ಕೆ ಉತ್ತರವಾಗಿ"ಹೌದು ನೀವಲ್ಲ ಪಕ್ಕದ ಮನೆಯವರು ಕಳಿಸಿದ್ದಾರೆ"
ಅಕೌನ್ಟೆಂಟ್ ಒಬ್ಬ ರಾತ್ರಿ ನಿದ್ದೆ ಬಾರದೆ ಕಷ್ಟ ಪಡುತ್ತಿದ್ದ.ತಕ್ಷಣ ಒಂದು ಉಪಾಯ ಹೊಳೆಯಿತು.ಹೆಂಡತಿಯನ್ನು ಎಬ್ಬಿಸಿ "ಡಾರ್ಲಿಂಗ್ ನಿಮ್ಮ ಆಫೀಸಿನ ವಿಷಯ ಹೇಳು ಅಂದ"ಸ್ವಲ್ಪ ಹೊತ್ತಿಗೆ ಗೊರಕೆ ಶಬ್ಧ.
ಇಬ್ಬರು ವಕೀಲರು ಒಂದು ಹೋಟೆಲಿಗೆ ಹೋಗಿ ಬೈಟು ಕಾಫಿ ಆರ್ಡರ್ ಮಾಡಿ ತಾವು ತಂದಿದ್ದ ತಿಂಡಿಯ ಪೊಟ್ಟಣ ಬಿಚ್ಚಿದರು.ಅಷ್ಟರಲ್ಲಿ ಹೋಟೆಲ್ ಮಾಲೀಕ ಬಂದು"ಸ್ವಾಮಿ ಅಲ್ಲಿ ಬೋರ್ಡ್ ಓದಿ "you cannot bring your own food and eat in" ಮೊದಲೇ ಹೇಳಿ ಕೇಳಿ ವಕೀಲರು ಅವರು ತಕ್ಷಣ ತಾವು ತಂದಿದ್ದ ಪೊಟ್ಟಣ ಬದಲಾಯಿಸಿಕೊಂಡು ತಿನ್ನಲು ಶುರು ಮಾಡಿದರು.ಮಾಲೀಕ ತಲೆ ಕೆರೆದುಕೊಂಡು ಹೊರಟು ಹೋದ.
ತರಲೆ ಪೈಲೆಟ್ ಒಬ್ಬ ಪ್ರತಿಸಲ ಲ್ಯಾಂಡಿಂಗ್ ಸಮಯದಲ್ಲಿ ಕಂಟ್ರೋಲ್ ರೂಂ ಗೆ ಏನಾದರೂ ತರಲೆ ಮಾಡುತ್ತಿದ್ದ.ಮೊದಲೇ ಭಯೋತ್ಪಾದಕರ ಕಾಟ ಹೆಚ್ಚಾಗಿದ್ದ ಸಮಯವದು.ಅಂದು ಲ್ಯಾಂಡ್ ಮಾಡುವ ಸಮಯಕ್ಕೆ ಬಂದಾಗ ತನ್ನ ದ್ವನಿ ಬದಲಿಸಿ "ನಾನ್ಯಾರು ಗೆಸ್ ಮಾಡು" ಎಂದ ಆಗಾಗಲೇ ಸಾಕಷ್ಟು ಅರಿತಿದ್ದ ಕಂಟ್ರೋಲರ್ ಟವರ್ ಹಾಗು ನಿಲ್ದಾಣದ ದೀಪ ಆರಿಸಿ ಉತ್ತರಿಸಿದ "ನೀನೆಲ್ಲಿದ್ದೀಯಾ ಗೆಸ್ ಮಾಡು ಎಂದ"
ಗುಂಡ ಹಜಾಮನ ಬಳಿಹೋಗಿ "ಹೇರ್ ಕಟ್ ಗೆ ಎಷ್ಟು?" ಎಂದ ಹಜಾಮ:"20 ರೂಪಾಯಿ" ಗುಂಡ:"ಶೇವಿಂಗ್ ಗೆ?" ಹಜಾಮ:"10 ರೂಪಾಯಿ" ಗುಂಡ:"ಹಾಗಾದರೆ ಇಡೀ ತಲೇಗೇ ಶೇವಿಂಗೇ ಮಾಡಿ" ತಲೆಯನ್ನು ಸವರಿಕೊಳ್ಳುತ್ತಾ
ಕೊಲೆ, ಸುಲಿಗೆ, ರೇಪ್ ಮಾಡಿದ್ದ ಖದೀಮನಿಗೆ ನ್ಯಾಯಾಲಯ ಎಲೆಕ್ಟ್ರಿಕ್ ಕುರ್ಚಿಯಲ್ಲಿ ಕೂಡಿಸಿ ವಿದ್ಯುತ್ ಹರಿಸಿ ಪ್ರಾಣ ತೆಗೆಯುವ ಶಿಕ್ಷೆ ಕೊಟ್ಟಿತು. ಆ ಕೆಲಸ ಮಾಡುವ ಮೊದಲು ಅಂದರೆ ಆತ ಸಾಯುವ ಮುನ್ನ ಕಡೇಯದಾಗಿ ಹೇಳಲು ಏನಾದರೂ ಇದೆಯಾ ಎಂದು ಕೇಳಿದಾಗ ಆತ ”ನನಗೆ ಕರೆಂಟ್ ಅಂದರೆ ಭಯ ನೀವೂ ನನ್ನ ಕೈ ಹಿಡಿದುಕೊಳ್ತೀರಾ?” ಅನ್ನಬೇಕೇ
ವಿಪರೀತ ಖಾಯಿಲೆಯಾಗಿ ಆಪರೇಶನ್ ಕೋಣೆಯ ಹಾಸಿಗೆಯಲ್ಲಿ ಮಲದಿದ್ದ ಗುಂಡ ಸರ್ಜನ್ ಶಸ್ತ್ರಚಿಕಿತ್ಸೆ ಶುರುಮಾಡಲು ಬಂದಾಗ ”ಡಾಕ್ಟರೇ ಇದಾದ ನಂತರ ನಾನು ಉಳಿಯುವ ಚಾನ್ಸಸ್ ಎಷ್ಟು ಎಂದ” ಡಾ: ಖಂಡಿತ ನೀವು ಉಳೀತೀರ. ಗುಂ:ಅದು ಹೇಗೆ ಅಷ್ಟು ಖಂಡಿತವಾಗಿ ಹೇಳ್ತೀರಾ? ಡಾ:”ಈ ಆಪರೇಶನ್ ನಲ್ಲಿ 10ಕ್ಕೆಒಂದೇ ಸಕ್ಸಸ್ ಆಗೋದು, ನೆನ್ನೆ ತಾನೆ ಒಂಭತ್ತನೆಯವ ಸತ್ತ”
ಗುಹೆಯೊಂದಕ್ಕೆ ಪ್ರವಾಸಿಗರನ್ನು ಗೈಡ್ ಕರೆದು ಕೊಂಡು ಹೊರಟಿದ್ದ. ಒಬ್ಬ ಪ್ರವಾಸಿಗ ”ಇಲ್ಲಿ ಬಹಳ ಬಾವುಲಿಗಳು ಇವೆಯಂತೆ ಹೌದಾ” ಗೈಡ್: ”ತುಂಬಾ ಇತ್ತು ಆದರೆ ಈಗ ಒಂದೂ ಇಲ್ಲ......” ಪ್ರ:”ಅಬ್ಬ ಸಧ್ಯ” ಗೈಡ್: ”ಹಾವುಗಳು ಅವನ್ನೆಲ್ಲಾ ತಿಂದು ಹಾಕಿದವು” ಪ್ರ:”ಆ...!”
ಹುಡುಗಿಯೊಬ್ಬಳು ಸರ್ದಾರನ ಅಂಗಡಿಗೆ ಬಂದು ನಾಚಿಕೆಯಿಂದ ”ನನಗೊಂದು ಅಂಡರ್ ವೇರ್ ತೋರಿಸಿತ್ತೀರಾ” ಅಂದಳು. ಉತ್ತರವಾಗಿ ಸರ್ದಾರ್ ಮತ್ತಷ್ಟು ನಾಚಿಕೆಯಿಂದ ಹೇಳಿದ”ಈಗ ಎಲ್ಲರ ಮುಂದೆ ಬೇಡ ಸಂಜೆ ಏಳರ ನಂತರ ಬನ್ನಿ”ಎಂದನು ಮಂದಕ್ಕೆ ನೀವೇ ಊಹಿಸಿ...
ಹೆಂಡತಿ: ಅಲ್ಲ್ಲಾರೀ ನಿಮಗೆ ಮದುವೆ ಆಗಿರೋದು ಜ್ಞಾಪಕ ಇದೆ ತಾನೆ? ಮತ್ತೆ ಹುಡುಗಿಯರನ್ನ ಯಾಕೆ ಹಾಗೆ ನೋಡೋದು? ಗಂಡ: ಅಂದರೆ? ನೀನ್ ಹೇಳೋದು ಡಯಟ್ ಮಾಡೋವಾಗ ಮೆನೂ ಕೂಡಾ ನೊಡೋದೂ ತಪ್ಪಾ !
ಕಟಕಟೆಯಲ್ಲಿ ನಿಂತಿದ್ದ ತಪ್ಪಿತಸ್ತನನ್ನು ಕೇಳಲಾಯಿತು ”ನೀನು ಏನು ತಪ್ಪು ಮಾಡಿದೆ? ನ್ಯಾಯಾಲಯಕ್ಕೆ ಬರಲು ಕಾರಣವೇನು?” ಎಂದರು ನ್ಯಾಯಾಧೀಶರು.ಏನಿಲ್ಲಾ ಸ್ವಾಮಿ ಶಾಪಿಂಗ್ ಮಾಡಿದೆ”ಅಂದ,,,,,, ”ಅರೆ ಬರೆ ಶಾಪಿಂಗ್ ಮಾಡಿದ್ದಕ್ಕೆ ನಿನ್ನನ್ನು ಹಿಡಿದು ತಂದರಾ?”ಅದಕ್ಕೆ ಗುಂಡ ”ಕ್ಷಮಿಸಿ ಸ್ವಾಮಿ ”ಅದೂ....ಅಂಗಡಿ ಬಾಗಿಲು ಹಾಕಿದ ಮೇಲೆ” ಎಂದಾಗ ನ್ಯಾಯಾಧೀಶರ ಹುಬ್ಬೇರಿತು..
ಗುಂಡನಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು.ಮುಂದಿನ ದಿನವೇ ಬ್ಯಾಂಕ್ ಗೆ ಹೋಗಿ ತನ್ನ ಖಾತೆ ಮುಚ್ಚಿದ. ಕ್ಲರ್ಕ್ ಕಾರಣ ಕೇಳಲು ಗುಂಡ ಬ್ಯಾಂಕ್ ನಲ್ಲಿದ್ದ ಬೋರ್ಡ್ ತೋರಿಸಿದ. ಅಲ್ಲಿ ” ನಿಮ್ಮ ಕನಸು ನನಸಾಗುವ ಕಾಲ ಬಂದಿದೆ” ಎಂದಿತ್ತು.
ಸತ್ತು ದೇವಲೋಕಕ್ಕೆ ಹೋದ ಗುಂಡ ಬ್ರಹ್ಮನನ್ನು ಪ್ರಶ್ನಿಸಿದ ”ಮಹಿಳೆಯರನ್ನೇಕೆ ಸುಂದರವಾಗಿ ಮಾಡಿದೆ ಪ್ರಭು?” ಅದಕ್ಕೆ ಬ್ರಹ್ಮನು” ನಿನ್ನಂಥವರು ಮದುವೆಯಾಗೆಂದು” ಗುಂಡ”ಆದ್ರೆ ಅವರನ್ನು ಮೂರ್ಖರನ್ನಾಗೇಕೆ ಮಾಡಿದೆ?” ಅದಕ್ಕುತ್ತರವಾಗಿ ಬ್ರಹ್ಮ”ನಿನ್ನಂಥವರನ್ನು ಪ್ರೀತಿಸಬೇಕಲ್ಲಾ ಅದಕ್ಕೆ” ಅಂದ.
ರಂಗ ಫೋನ್‌ನಲ್ಲಿ ಮಾತನಾಡುತ್ತಿದ್ದ.. .
ಗುಂಡ: ಯಾರೊಂದಿಗೆ ಮಾತಾಡ್ತಿದ್ದೆ?
ರಂಗ: ಹೆಂಡತಿ ಜತೆ.
ಗುಂಡ: ಅಷ್ಟೊಂದು ಪ್ರೀತಿಯಿಂದ...?
ರಂಗ: ನಿನ್ನ ಹೆಂಡತಿ..!
ಪದೇ ಪದೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನ್ನನ್ನು ನ್ಯಾಯಾಧೀಶರು ”ಮತ್ತೆ ಮತ್ತೆ ಇಲ್ಲಿಗೆ ಬರಲು ನಾಚಿಕೆ ಆಗಲ್ವಾ” ಎಂದರು.ಅದಕ್ಕೆ ಆ ಕಳ್ಳ ”ನೀವು ದಿನಾ ಬರ್ತೀರಾ" ಅನ್ಬೇಕೇ.....
ಸರದಾರನ ಹೆಂಡತಿ ಈಜುವ ಕೊಳಕ್ಕೆ ಟೂ ಪೀಸ್ ಧರಿಸಿ ಹೋದ.ಅಲ್ಲಿದ್ದ ಕೋಚ್ ”ಟೂ ಪೀಸ್ ನಿಷೇಧ ಇದೆ” ಅಂದ.ಅದಕ್ಕೆ ಆಕೆ ” ಸರಿ ಹಾಗಾದರೆ ಒನ್ ಪೀಸ್ ಆಗಬಹುದಾ? ಯಾವುದನ್ನು ತೆಗಿಯಲಿ?” ಅಂದಾಗ ಕೋಚ್ ಬಿಟ್ಟ ಬಾಯಿ ಮುಚ್ಚಲೇ ಇಲ್ಲ
ಸರ್ದಾರ್ ಕಾರಂಜಿಯ ಮುಂದೆ ನಿಂತು ಅದರೊಳಕ್ಕೇ ಉಚ್ಚೆ ಮಡುತ್ತಿದ್ದ.ಪೋಲೀಸ್ ಅಲ್ಲಿಗೆ ಬಂದು ”ಥೂ ಆ ನಿನ್ನ .....ಒಳಗೆ ಹಾಕು” ಎಂದ.ಅಂತೆಯೇ ಮುಚ್ಚಿ ಜಿಪ್ ಹಾಕಿಕೊಂಡ.ನಂತರ ಪೋಲೀಸ್ ದೂರ ಹೋದಾಗ ಸರ್ದಾರ್ ಕೂಗಿ ಹೇಳಿದ.ಲಾ ಲ ಲಾ ಲ ಒಳಗೇನೋ ಹಾಕಿದೆ ಆದರೆ ಉಚ್ಚೆ ನಿಲ್ಲಿಸಲೇ ಇಲ್ಲ, ನಿಂಗೆ ಗೊತ್ತಾಗಲೇ ಇಲ್ಲ ಹ್ಹ ಹ್ಹ ಹ್ಹಾ.....
ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಸರ್ದಾರ್ ಕೈಯಲ್ಲಿ ದೊಡ್ಡ ಊಟದ ಡಬ್ಬ ಹಿಡಿದು ಹೊರಟಿದ್ದ.ಆತನ ಗೆಳೆಯ ಎಲ್ಲಿಗೆ ಹೊರಟಿರುವೆ ಎಂದು ಕೇಳಲು.ಆತ್ಮ ಹತ್ಯೆ ಮಾಡಿಕೊಳ್ಳಲು ಹಳಿಯ ಕಡೆ ಹೊರಟಿರುವೆ”ಎಂದ.”ಆದರೆ ಊಟ ಯಾರಿಗೆ?” ಎನ್ನಲು ಸರ್ದಾರ್ ಹೇಳಿದ”ಅಕಸ್ಮಾತ್ ಟ್ರೈನ್ ತಡವಾಗಿ ಬಂದರೆ ನಾನು ಹಸಿವಿನಿಂದ ಸಾಯಬಾರದಲ್ಲವೇ” ಅನ್ನುವುದೇ
ಜುರಾಸಿಕ್ ಪಾರ್ಕ್ ಸಿನಿಮಾ ನೋಡಲು ಗುಂಡ ಗೆಳೆಯರೊಡನೆ ಹೋಗಿದ್ದ.ಡೈನೋಸರ್ ಪರದೆಯ ಮೇಲೆ ಬರುತ್ತಿದ್ದ ಹಾಗೆ ಗುಂಡ ಹೆದರಿ ಅಳಲು ಆರಂಭಿಸಿದ.ಗೆಳೆಯರು”ಅಯ್ಯಾ ಗುಂಡ ಇದು ಸಿನಿಮಾ ನಿಜವಲ್ಲ” ಎಂದು ಸಮಾಧಾನ ಹೇಳಿದರು ಗುಂಡ ಅಳುವುದು ನಿಲ್ಲಿಸದೇ ಹೇಳಿದ ”ಇದು ಸಿನಿಮಾ ಅಂಥ ನಂಗೊತ್ತು ನಿಮಗೆ ಗೊತ್ತು ಹಾಳಾದ್ದು ಆ ಡೈನೋಸೋರ್ಗೆ ಗೊತ್ತಿರಬೇಕಲ್ಲಾ”
ಹುಬ್ಬಳ್ಳಿಯಲ್ಲಿ ಗಣಪತಿ ಹಬ್ಬಕ್ಕೆ ಚಂದಾ ವಸೂಲಿಗೆ ಬಂದ ಹುಡುಗರು ಮನೆಯ ಬಾಗಿಲಲ್ಲಿದ್ದ ಬಾಲಕನನ್ನು ”ನಿಮ್ಮ ಫಾದರ್ ಇದ್ದಾರೇನಲ ಯಪ್ಪ? ಸ್ವಲ್ಪ ಕರಿ ಮತ್ತ” ಹುಡುಗ ಹೇಳಿದ ”ಇಲ್ರೀ”.... ”ಹೋಗ್ಲಿ ಮದರ್?”...”ಇಲ್ರೀ”.....ಹೋಗ್ಲಿ ”ಬ್ರದರ್ ಇದ್ದರಾ?”.....”ಅದಾರ್ರಿ ಆದ್ರೆ ಬರಾಂಗಿಲ್ಲ”.....”ಯಾಕೆ?”.....”ತೊಟ್ಟಿಲಲ್ಲಿ ಮಲಗಿದ್ದಾರ್ರಿ”
ಸಾಲಗಾರ ಸೋಮಣ್ಣ ಬ್ಯಾಂಕ್ ಗೆ ಪರ್ಮನೆಂಟ್ ಗಿರಾಕಿ”ಸಾಮೀ ಕುರಿ ಸಾಲ,ಹಸು ಸಾಲ,ಬಾವಿ ಸಾಲ,ಪಂಪ್ ಸಾಲ,ಬರಗಾಲ ಸಾಲ,ಬೀಜ ಸಾಲ,ಗೊಬ್ಬರ ಸಾಲ”ಇದು ಬಿಟ್ಟು ಬೇರೇ ಯಾವ್ದಾದ್ರೂ ಸಾಲ ಐತಾ”ಅಂತ ಕೇಳಿದ.ಅದಕ್ಕೆ ಬ್ಯಾಂಕ್ ಮ್ಯಾನೇಜರ್ ಅದೆಲ್ಲಾ ಮೊದಲು ತೀರಿಸು,ಇನ್ಯಾವ್ದೂ ಸಾಲ ಇಲ್ಲ ಹೋಗು” ಎಂದ.ಅದಕ್ಕೆ ಸೋಮಣ್ಣ”ಓಗ್ಲೀ ಯಾವ್ದಾದ್ರೂ ಮನ್ನ ಆಗೋ ಸಾಲ ಐತಾ?” ಅಂದ.
ತಿಮ್ಮ ಬೇಸಿಗೆಯ ಉರಿ ಬಿಸಿಲಿನಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿರಲು,ಪಕ್ಕದಲ್ಲಿದ್ದ ಸ್ಮಶಾನದಮಧ್ಯೆ ಒಂದು ಶಾರ್ಟ್ ಕಟ್ ಕಾಣಿಸಿತು.ಸರಿ ಬೆಳಗಿನ ಹೊತ್ತು ಏನೂ ಆಗದು,ಬಿಸಿಲು ಬೇನೆ ಬೇರೆ ತಾಳಲಾರದೆ ಸ್ಮಶಾನದ ಮಧ್ಯೆ ಅಡ್ಡದಾರಿ ಹಿಡಿದ.ನಿರ್ಜನ ಪ್ರದೇಶ,ಬೀಸುತ್ತಿದ್ದ ಗಾಳಿ,ನೆತ್ತಿ ಸುಡುವ ಸೂರ್ಯ ಎಲ್ಲಾದರೂ ಸ್ವಲ್ಪ ರೆಸ್ಟ್ ತಗೊಂಡು ಮುಂದೆ ಸಾಗುವ ಎಂದು ಒಂದು ಮರದಡಿಯಲ್ಲಿದ್ದ ಕಟ್ಟೆಯ ಮೇಲೆ ಮುದುಗನೊಬ್ಬ ಕುಳಿತಿದ್ದುದನ್ನು ಕಂಡು ಅವನ ಪಕ್ಕದಲ್ಲಿ ಕುಳಿತ.ಸುಮ್ಮನೆ ಮೂಕನಂತೆ ಕೂಡುವುದಾದರೂ ಹೇಗೆ”ಏನ್ ಸೆಕೆನಪ್ಪಾ” ಅಂದ,ಅದಕ್ಕೆ ಆಮುದುಕ ಹೌದು ಒಳಗೆ ಇನ್ನೂ ಧಗೆ ಅದಕ್ಕೆ ಸ್ವಲ್ಪ ಹೊತ್ತು ಹೊರಗೆ ಬಂದೆ” ತಕ್ಷಣ ತಿಮ್ಮ ಪರಾರಿ!
ಡಯಟ್ಟು,ವ್ಯಾಯಾಮ ಏನು ಮಾಡಿದರೂ ತೂಕ ಇಳಿಸಲಾರದೆ ಅತಿಯಾದ ಮೈಭಾರವನ್ನೂ ಎತ್ತಲಾರದೆ ಗುಂಡ ಆತ್ಮಹತ್ಯೆಯೇ ಕಡೆಯದಾರಿ ಎಂದು ನಿರ್ಧರಿಸಿ ಎತ್ತರದ ಮಹಡಿಯ ಮೇಲಿಂದ ಧುಮುಕಿದ.ಕಣ್ಣು ಬಿಟ್ಟಾಗ ಡಾಕ್ಟರನ್ನು ಕಂಡು”ನಾನಿನ್ನೂ ಬದುಕಿದ್ದೀನಾ?”ಎಂದ.ಅದಕ್ಕೆ ಡಾಕ್ಟರ್ ”ಹೌದಪ್ಪಾ,ಆದರೆ ನೀನು ಯಾರ ಮೇಲೆ ಬಿದ್ದೆಯೋ ಆ ನಾಲ್ವರೂ ಸತ್ತರು”
”ಹಲೋ”...”ಹಲ್ಲೋ ನಾನೂ ರೀ ”...”ಹಾ”.....”ಇವತ್ತು ಶಾಂತಲ ಸಿಲ್ಕ್ ಹೌಸ್ನಲ್ಲಿ ಸೇಲ್ ಇದೆಯಂತೆ”....”ರಾಂಗ್ ನಂಬರ್”
ಸಂಗೀತ ಪಾಠಕ್ಕೆ ತಪ್ಪಿಸಿಕೊಳ್ಳಲು ಗುಂಡ ಮೇಡಂ ಗೆ ಫೋನ್ ಹಚ್ಚಿದ”ಹಲೋ,ನನ್ನ ಮಗನಿಗೆ ಈವತ್ತು ಮೈ ಸರೀಇಲ್ಲ ಅವನು ಸಂಗೀತಕ್ಕೆ ಬರಕ್ಕಾಗಲ್ಲ”.....”ಯಾರು? ಯಾರು ಮಾತಾಡ್ತಿರೋದು?......ಗಾಬರಿಯಿಂದ ಗುಂಡ ”ನಾನು ಮೇಡಂ,ಅಲ್ಲ ಅಲ್ಲ ನಮ್ಮಪ್ಪ”ಎಂದು ಸಿಕ್ಕಿ ಬಿದ್ದ.
ಶಾಲೆ ಇನ್ಸ್ಪೆಕ್ಷನ್ ಗೆ ಬಂದ ಅಧಿಕಾರಿಗಳು ಮಕ್ಕಳನ್ನು ಕುರಿತು ”ಎಂಟ್ ಎಂಟ್ಲ ಎಷ್ಟು” ಅಂದರು,ಅದಕ್ಕೆ ಒಬ್ಬ ಹುಡುಗ”148 ಸಾರ್”ಅಂದ.”ಏನ್ರೀ ಮೇಷ್ಟ್ರೇ ಇದೇನಾ ನೀವು ಹೇಳ್ಕೊಟ್ಟಿರೋದ” ಅಂದ್ರು ಅಧಿಕಾರಿಗಳು.ಅದಕ್ಕೆ ಆ ಮೇಷ್ಟ್ರು” ಅಯ್ಯೋ ಸಾರ್ ನಾನು ಈ ಶಾಲೆಗೆ ಬಂದಾಗ 2468 ಅಂತ ಹೇಳ್ತಿದ್ರೂ, ಚೆನ್ನಾಗಿ ಹೊಡೆದೂ ಬಡಿದು ಈಗ 148 ಇಳಿಸಿದ್ದೀನಿ”ಎಂದು ಜಾರಿಕೊಂಡರು.
ಪುಡಾರಿ ಪಾಪಣ್ಣ ಭಲೇ ಮಾತುಗಾರ.ಭಾಷಣ ಮಾಡುವುದೆಂದರೆ ಸಾಕು ಕೇಳುಗರಿಗೆ ಅಚ್ಚರಿಯೇ ಸರಿ.ಒಮ್ಮೆ ಒಂದು ಊರಿನಲ್ಲಿ ಭಾಷಣ ಮಾಡುವಾಗ”ಮಾನ್ಯರೇ ಈ ಊರಿನ ಚೇರ್ಮನ್ ಸಾಹೆಬರೂ ನಾನೂ ಚಡ್ಡಿ ದೋಸ್ತ್,ನಾವಿಬ್ರೂ ಒಂದೇ ತಟ್ಟೇಲಿ ಊಟ ಮಾಡ್ತಿದ್ವಿ”ಅಂದ.ಚೇರ್ಮನ್ ಪಕ್ಕದಲ್ಲಿ ಕುಳಿತಿದ್ದವರು”ಹೌದಾ ಸಾರ್” ಎಂದರು ಅದಕ್ಕೆ ಚೇರ್ಮನ್ ”ನಿಜ ಆದರೆ ನಾನು ಮೊದಲು ಊಟ ಮಾಡಿ ಆಮೇಲೆ ಅವನು ಮಾಡುತ್ತಿದ್ದ,ಯಾಕೇಂದ್ರೆ ತಟ್ಟೆ ತೊಳೆಯೋ ಗೋಜೇ ಇರಲ್ಲ ಅದಕ್ಕೆ”
ಡಾಗ್ ಶೋ ಒಂದರಲ್ಲಿ ಬಹುಮಾನ ಪಡೆದವರನ್ನು ಟಿವಿ ಸಂದರ್ಶನಕ್ಕೆಂದು ಮಾತನಾಡಿಸುತ್ತಿದ್ದರು.”ಕಂಗ್ರಾಜುಲೇಶನ್ಸ್ ಸಾರ್ ನಿಮ್ಮ ನಾಯಿಗಳು ಅದೆಷ್ಟು ಮುದ್ದಾಗಿವೆ,ಇವುಗಳ ಹೆಸರು?.......”ಸುಪ್ರೀತ,ಸುಮಂಗಲ,ಸುಜಾತ,ಸುಮಲತ,ಸಂಗೀತ”......ವಾವ್ ಚೆನ್ನಾಗಿವೆ ಹೆಸರುಗಳು,ಅಂದಹಾಗೆ ತಮ್ಮ ಹೆಸರು?....”ಟಾಮಿ”
”ಹೌದೂ ಹುಡ್ಗೀಗೆ ಸರ್ಕಾರೀ ಕೆಲಸ,ಅಡುಗೆ ಮಾಡಕ್ಕೆ ಬರತ್ತೆ, ಹಾಡು, ಹಸೆ ಎಲ್ಲಾದ್ರಲ್ಲೂ ನಿಸ್ಸೀಮಳಂತೆ? ಒಳ್ಳೆ ಮನೆತನ ಬೇರೆ ಅದ್ಯಾಕೆ ಲಲಿತಮ್ಮಾವರೇ ಆ ಹೆಣ್ಣು ನಿಮ್ಮ ಮಗನಿಗೆ ಬೇಡಾ ಅಂದ್ರಂತೆ?” ಹೀಗೆ ಒಂದೇ ಸಮನೆ ಪ್ರಶ್ನೆ ಹಾಕುತ್ತಿದ್ದ ಪಕ್ಕದಮನೆಯಾಕೆಗೆ ಲಲಿತಮ್ಮ ಹೇಳಿದ್ದು ಒಂದೇ ಕಾರಣ” ಅಯ್ಯೋ ಅದಷ್ಟೇ ಅಲ್ಲ ಹುಡುಗೀಗೆ ಕರಾಟೇನೂ ಬರತ್ತಂತೆ,ಅದಕ್ಕೆ ಒಪ್ಪಲಿಲ್ಲ”
ಮನೆಕೆಲಸದ ಆಳಾದ ತಿಮ್ಮ ಒಮ್ಮೆ ಮನೆ ಯಜಮಾನಿ ಸೀರೆ ಉಡುತ್ತಿರುವಾಗ ಬಾಗಿಲುತಟ್ಟದೇ ಒಳಗೆ ನುಗ್ಗಿದ.ಆಕೆಯ ಅದೃಷ್ಟಕ್ಕೆ ಆಗಷ್ಟೇ ಸೀರೆ ಉಟ್ಟಿದ್ದು ಮುಗಿದಿತ್ತು.ಹೇಗಾದರೂ ಇರಲಿ ಮುಂದೆ ಎಂದೂ ಹೀಗಾಗರೆ ಇರಲಿ ಎಂದು ಆಕೆ ”ಏನೋ ತಿಮ್ಮಾ, ಸ್ವಲ್ಪ ನೋಡ್ಕೊಂಡು ತಾನೆ ಒಳಗೆ ಬರಬೇಕೂ?”ಎನ್ನುವಷ್ಟರಲ್ಲಿ ತಿಮ್ಮ”ಊ ಅಮ್ಮಾರೇ ಎಲ್ಲಾ ನೋಡ್ದೆ ನೀವು ಸೀರೆ ಪೂರ್ತಿ ಉಟ್ಟಾದಮೇಲೆ ಬಾಗಿಲು ತೆಗೆದು ಒಳಗೆ ಬಂದೆ ಅಮ್ಮಾರೆ” ಅನ್ಬೇಕಾ !
ಸರ್ದಾರ್ ಒಬ್ಬ ಅಡುಗೆ ಮನೆಗೆ ನುಗ್ಗಿ ಸಕ್ಕರೆಡಬ್ಬ ತೆಗೆದು ಒಮ್ಮೆ ಅದನ್ನು ನೋಡಿ ಮುಚ್ಚಿಟ್ಟ, ಇದನ್ನು ಆತನ ಹೆಂಡತಿ ಗಮನಿಸಿದಳು.ಮಾರನೇ ದಿನವೂ ಅದೇ ರೀತಿ ಮಾಡಿದ. ಹೀಗೇ ದಿನಾ ಸಕ್ಕರೆ ಡಬ್ಬಿ ತೆಗೆದು ನೋಡುತ್ತಿರಲು ಹೆಂಡತಿ ಕಾರಣ ಕೇಳಿದಳು ಅದಕ್ಕೆ ಸರ್ದಾರ್ ಹೇಳಿದ” ಡಾಕ್ಟರ್ ದಿನಾ ಸುಗರ್ ಲೆವೆಲ್ ಚೆಕ್ ಮಾಡಲು ಹೇಳಿದ್ದಾರೆ ಚಿನ್ನಾ” ಅನ್ನಬೇಕೇ...
ಒಂದು ಕಚೇರಿಯಲ್ಲಿ ಓರ್ವ ಮುಸ್ಲಿಂ, ಓರ್ವ ಮದ್ರಾಸಿ ಮತ್ತೊಬ್ಬ ಸರ್ದಾರ್ ತಮ್ಮ ಊಟದಸಮಯದ್ದಿ ತಾವು ತಂದ ಡಬ್ಬಿ ತೆಗೆದು ದಿನಾ ಅದೇ ತಿಂದು ತಿಂದು ಬೇಸರವಾಗಿ ಒಂದು ನಿರ್ಧಾರಕೆ ಬಂದರು.ನಾಳೆ ದಿನ ಮತ್ತೆ ಅದೇ ತಿಂಡಿ ನಮ್ಮ ಡಬ್ಬಿಯಲ್ಲಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಂದುಕೊಂಡರು.ಸರಿ ಮಾರನೇ ದಿನ ಮೂವರೂ ಆತ್ಮ ಹತ್ಯೆ ಮಾಡಿಕೊಂಡರು.ಕಾರಣ ತಿಳಿದ ಅವರಹೆಂಡತಿಯರು ಅಳುತ್ತಾ ಹೇಳಿದರು. ಮುಸ್ಲಿಂ: ” ಮಟನ್ ಬಿಟ್ಟು ಬೇರೆ ಬೇಕು ಅಂದಿದ್ದರೆ ಕಳಿಸುತ್ತಿದ್ದೆ,ಯಾಕೆ ಹೀಗೆ ಮಾಡಿದರೋ... ಅಲ್ಲಾ...” .....ಮದ್ರಾಸಿ:” ನನಕೆ ದಿನಾ ಇಡ್ಲಿ ವಾಂಡ ಅಂದಿದ್ದರೆ ವೇರೆ ಕಲ್ಸ್ತಾಇರ್ತಿದ್ದೆ ಅರೆ... ಆಂಡವನೇ...” ಎನ್ನಲು ಸರ್ದಾರನ ಹೆಂಡತಿ ”ಅರೆ ನನ್ನ ಗಂಡ ಯಾಕೆ ಸತ್ತ ಅಂತ ನನಗೆ ಗೊತ್ತೇ ಆಗ್ಲಿಲ್ಲ, ದಿನಾ ಅವರೇ ಡಬ್ಬಿ ಕಟ್ಟಿಕೊಂಡು ಹೋಗ್ತಿದ್ರು....ಅಯ್ಯಯ್ಯೋ...”
3 ಸರ್ದಾರ್ ಗಳು ಕಚೇರಿಯಿಂದ ತಮ್ಮ ಬಾಸ್ ಗೆ ತಿಳಿಯದ ಹಾಗೆ ಗುಪ್ತವಾಗಿ ಬೇಗ ಮನೆಗೆ ಹೋಗಲು ಸಂಚು ಮಾಡಿದರು.ಅದರಂತೆ ಒಂದುದಿನ ಎಲ್ಲರೂ ಬೇಗ ಹೊರಟರು. ಒಬ್ಬನು ಮನೆಗೆ ಹೋಗಿ ಮನೆಕೆಲಸ ಮಾಡಿ ರೆಸ್ಟ್ ಪಡೆದು ಟೀ ಕುಡಿದು ಅರಾಮವಾಗಿ ಕಳೆದನು, ಇನ್ನೊಬ್ಬನು ವ್ಯಾಯಾಮ ಮಾಡಿ ಹೆಂಡತಿಯೊಡನೆ ಸುತ್ತಾಡಿ ಹಾಯಾಗಿ ಕಳೆದನು, ಮತ್ತೊಬ್ಬನು ಮೆಲ್ಲಗೆ ಮನೆಗೆ ಬಂದು ತನ್ನ ರೂಮಿನಲ್ಲಿ ತನ್ನ ಹೆಂಡತಿಯ ಜೊತೆ ತನ್ನ ಬಾಸ್ ಚಕ್ಕಂದ ಆಡುತ್ತಿರುವುದನ್ನು ನೋಡಿ ಹಾಗೇ ಸದ್ದಾಗದ ಹಾಗೆ ಬಾಗಿಲು ಮುಚ್ಚಿ ಹೊರಗೆ ಹೋದನು. ಮರುದಿನ ಎಲ್ಲರೂ ಹೇಗಿತ್ತು ನೆನ್ನೆ ಇಂದೂ ಕಚೇರಿಗೆ ಬಂಕ್ ಹೊಡೆಯೋಣವಾ ಎಂದಾಗ ಆ ಕಡೇಯ ಸರ್ದಾರ್ ಹೇಳಿದ” ಬೇಡಪ್ಪ ನೆನ್ನೆ ಇನ್ನೇನು ಸ್ವಲ್ಪದ್ರಲ್ಲೆ ಸಿಕ್ಕಾಕೊಂಡು ಬಿಡ್ತಿದ್ದೆ, ನೀವು ಬೇಕಾದ್ರೆ ಹೋಗಿ” ಅಂದ.
ಅಮೇರಿಕಾದಲ್ಲಿ ಒಬ್ಬ ಪುಟ್ಟ ಬಡ ಬಾಲಕ ತನಗೆ $100 ಹಣ ಬೇಕೆಂದು ದೇವರಿಗೇ ಪತ್ರ ಬರೆದ.ಅಂಚೆಯವರು ಆ ಪತ್ರದ ಮೇಲೆ ”To the God,USA' ಎಂದು ಬರೆದಿದ್ದ ಕಾರಣ ಏನೂ ಮಾಡಲು ತೋಚದೆ ಜಾರ್ಜ್ ಬುಶ್ ಗೆ ಕಳಿಸಿದರು.ಬುಶ್ ಕನಿಕರದಿಂದ $5 ಪತ್ರದ ಜೊತೆಯಲ್ಲಿಟ್ಟು ಜವಾಬು ಕಳಿಸಿದ.From White House ಎಂದು ಬರೆದಿದ್ದ ಆ ಪತ್ರವನ್ನು ತೆರೆದು $5 ಇದ್ದುದನ್ನು ಕಂಡು ಬಾಲಕ ಹೀಗೆಂದು ರಿಪ್ಲೈ ಬರೆದ ”ಓ ದೇವಾ $100 ಕಳಿಸಿದ್ದಕ್ಕೆ ಧನ್ಯವಾದಗಳು, ಆದರೆ ಈ White Houseನಲ್ಲಿರುವ ಲುಚ್ಚಾಗಳು 95% ಮುರಿದು ಕಳಿಸಿದ್ದಾರೆ”
ತಿಮ್ಮ ವೈದ್ಯರ ಬಳಿ ಹೋಗಿ” ಡಾಕ್ಟರೇ ನನಗೆ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವಾಗ್ತಿದೆ,ಸ್ವಲ್ಪ ಪರೀಕ್ಷೆ ಮಾಡಿ”ಎಂದ.ವೈದ್ಯರು ತಪಾಸಣೆ ಮಾಡುತ್ತಾ ”ಎಲ್ಲಿ ನಿನ್ನ ಮೊಣಕೈ ಮುಟ್ಟು” ಎನ್ನಲು ಗುಂಡ ಮುಟ್ಟುತ್ತಾ ”ಅಯ್ಯೋ” ಅಂದು ನೋವಿನಿಂದ ಕೂಗಿದ.ಅನಂತರ ಎಲ್ಲಿ ನಿನ್ನ ತಲೆ ಮುಟ್ಟು” ಮತ್ತೆ ಅದೇ ಕೂಗು.ಸರಿ ಡಾಕ್ಟರ್ ಗುಂಡನ ಇಡೀ ಮೈಯಿಯ ಎಕ್ಸ್ ರೇ ತೆಗೆದು”ಗುಂಡ ನಿನ್ನ ನೋವಿಗೆ ಕಾರಣ ತಿಳಿಯಿತು”ಎಂದರು.ಕಾತರದಿಂದ ಗುಂಡ ಏನೆಂದು ಕೇಳಲು”ನಿನ್ನ ಕೈ ಬೆರಳು ಮುರಿದಿದೆ”ಎಂದರು.
ಸಿಕ್ಕವರಿಗೆಲ್ಲ್ಲಾ ಕೆಲಸ ಕೊಡಿಸ್ತೀನಿ ಅಂತ ಹೇಳಿ ಲಂಚ ಪಡೆದು ಮೋಸಮಾಡುತ್ತಿದ್ದ ಪುಡಾರಿಯೊಬ್ಬ.ಕಾಲ್ ಮೇಲೆ ಕಾಲ್ ಹಾಕಿಕೊಂಡು ಕುಳಿತಿದ್ದ ಪುಡಾರಿ ತಿಮ್ಮ ತನ್ನ ಆಫೀಸಿನೊಳಗೆ ಬಂದದ್ದನ್ನು ಕಂಡು ನಾಟಕ ಮಾಡುವ ಸಲುವಾಗಿ ಫೋನ್ ಹಿಡಿದು”ಸರಿ ಬನ್ನಿ ನಿಮಗೆ ಯಾವ ಕೆಲಸ ಬೇಕು ಎಲ್ಲಿ ಬೇಕು ಅಂತ ಹೇಳಿ ಕೆಲಸ ಗ್ಯಾರಂಟಿ ಸರ್ಕಾರಿ ಅಫೀಸ್ ಕೆಲಸಕ್ಕೆ 1ಲಕ್ಷ ,ಬೇರೆ ಬೇರೆ ಕೆಲಸಕ್ಕೆ....”ಅನ್ನುವಷ್ಟರಲ್ಲಿ ತಿಮ್ಮ ಮಧ್ಯೆ ತಲೆ ಹಾಕಿ”ಸಾರ್ ಅದೂ...” ಪುಡಾರಿ ”ಏ ತಾಳಯ್ಯ ಸಾಹೇಬರ ಹತ್ರ ಮಾತಡ್ತಿದ್ದೇನೆ”ಎಂದು ಬಾಯಿ ಮುಚ್ಚಿಸಿದ,ಹೀಗೇ ನಾಲ್ಕಾರು ಬಾರಿ ತಿಮ್ಮ ಮಧ್ಯೆ ಸಾರ್ ಸಾರ್ ಎನ್ನುತಿರಲು ಪುಡಾರಿ ರೇಗಿ ಕೇಳಿದ”ಏನಯ್ಯಾ? ಏನು ಬಂದದ್ದು?” ಅಂದ.ಅದಕ್ಕೆ ತಿಮ್ಮ ”ನಾನು ನಿಮ್ಮ ಫೋನ್ ರಿಪೇರಿ ಮಾಡಲು ಬಂದವ”ಎನ್ನಬೇಕೆ.
ಊರಿಂದೂರಿಗೆ ವರ್ಗಾವಣೆ ಆಗುತ್ತಿದ್ದ ಬ್ರಹ್ಮಚಾರಿ ಉಪಾಧ್ಯಾಯನೊಬ್ಬನಿಗೆ ಸಿಹಿತಿಂಡಿ ಎಂದರೆ ಬಹಳ ಇಷ್ಟ. ಆತನು ಹಳ್ಳಿಯಲ್ಲಿ ಹಬ್ಬದ ಮಾರನೇ ದಿನಾ ಮಕ್ಕಳು ಮನೆಯಿಂದ ಸಿಹಿತಿಂಡಿ ತರುವುದನ್ನೇ ಕಾಯ್ದು ಕುಳಿತಿರುತ್ತಿದ್ದನು. ಎಲ್ಲಾ ಮಕ್ಕಳು ತಂದರೂ ಒಮ್ಮೆಯಾದರೂ ಸಿಹಿತಿಂಡಿ ತರದ ತಿಮ್ಮ ಒಮ್ಮೆ ಒಂದು ಹಳೇ ಚೊಂಬಿನಲ್ಲಿ ಪಾಯಸ ಹಿಡಿದು ತಂದನು.ಅದನ್ನು ಕಂಡು ಆಶ್ಚರ್ಯ ಸಂತೋಷಗಳಿಂದ ಮಾಸ್ತರು”ಏನಯ್ಯಾ ಇವತ್ತು ಮಾಸ್ತರಿಗೆ ಪಾಯಸ ತಂದಿದ್ದೀಯಾ,ಏನು ವಿಶೇಷ ಎಂದು ಪ್ರಶ್ನಿಸಲು ತಿಮ್ಮ ಹೇಳಿದ”ಏನಿಲ್ಲ ಮಾಷ್ಟ್ರೆ ನಮ್ಮನೆ ನಾಯಿಗೆ ಇಟ್ವಿ ಅದು ತಿನ್ನಲಿಲ್ಲ ಅದಕ್ಕೇ ತಂದೆ”ಎಂದ.ಮಾಸ್ತರಿಗೆ ರೇಗಿ ಚೊಂಬನ್ನು ನೆಲಕ್ಕೆ ಅಪ್ಪಳಿಸಿದರು.ಚೊಂಬು ಜಜ್ಜಿ ಹೋಯಿತು.ತಿಮ್ಮ ಗೊಳೋ ಎಂದು ಅಳಲಾರಂಭಿಸಿದ.ಮಾಸ್ತರು ”ನಾಯಿಗಿಟ್ಟ ಪಾಯಸ ತಂದು ಈಗ ಅಳ್ತಾ ಇದ್ದೀಯಾ”ಎಂದರು.ಅದಕ್ಕೆ ತಿಮ್ಮ ”ಅದಕ್ಕಲ್ಲಾ ಮೇಷ್ಟ್ರೆ ಆ ಚೊಂಬು ನಮ್ಮಣ್ಣನ ಪಾಯಖಾನೇದು”ಎನ್ನಬೇಕೇ...
ಮಗನು ಶಾಲೆಯಿಂದ ತಂದ ಮನೆಕೆಲಸವನ್ನು ತಂದೆ ತಾಯಂದಿರೇ ಮಾಡಿ ಮುಗಿಸಿ ಕಳಿಸುತ್ತಿದ್ದರು.ಒಮ್ಮೆ ಮಗನು ಶಾಲೆಯಿಂದ ಬಂದೊಡನೇ ರೇಗಿದ”ಅಪ್ಪಾ ಅಮ್ಮಾ ನೀವು ಈ ದಿನ ಹೋಂ ವರ್ಕ್ ಸರಿಯಾಗೇ ಮಾಡಿಲ್ಲ”
ಮೊದಲಬಾರಿ ವಿಮಾನದಲ್ಲಿ ಕುಳಿತ ತಿಮ್ಮ ಕಿಟಯಿಯಿಂದ ಹೊರಗೇ ನೋಡುತ್ತಿದ್ದ.ವಿಮಾನ ಯಂತ್ರಗಳು ಶುರುವಾಗುತ್ತಲೇ ಮೈ ಜುಂ ಎಂದಿತು ಗುಂಡನಿಗೆ,ಮೊದಲ ಅನುಭವ ಹೇಗಿರಬಹುದೆಂಬ ಕುತೂಹಲ ಆತಂಕ,”ವಾವ್, ಗೆಳೆಯ ಹೇಳಿದ್ದು ನಿಜ ಜನರೆಲ್ಲಾ ಇರುವೆ ಕಂಡ ಹಾಗೆ ಕಾಣ್ತಿದ್ದರೆ ನಿಜ”ಎಂದ ತಕ್ಷಣ ಪಕ್ಕದಲ್ಲಿದ್ದವ ”ಅದು ನಿಜವಾಗಲೂ ಇರುವೇನೇ ವಿಮಾನ ಇನ್ನೂ ಹಾರೇ ಇಲ್ಲ” ಎಂದ.
ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋಗಿದ್ದ ತಿಮ್ಮ ಮತ್ತವನ ಹೆಂಡತಿ ತಿಮ್ಮಿ ಬೆಳಿಗ್ಗೆ ಕಾಫಿ ಕುಡಿಯಲು ಹೋಟೆಲ್ ಗೆ ಹೋದರು.ಹೋಟೆಲಿನವರನ್ನು ವಿಚಾರಿಸಲೆಂದು ತಿಮ್ಮ ” ನಿಮ್ಮ ಹೋಟೆಲ್ನಲ್ಲಿ ಏನೇನಿದೆ” ಅಂದ.ಅದಕ್ಕೆ ಮಾಣಿ” ನೋಡಿ ಸ್ವಾಮಿ ಬೆಳಿಗ್ಗೆ 6-11ತಿಂಡಿ,ಮಧ್ಯಾಹ್ನ11-4 ಊಟ,ಸಂಜೆ4-7 ತಿಂಡಿ, ರಾತ್ರಿ 7-10 ಘಂಟೆ ವರೆಗೆ ಊಟ ಸಿಗ್ತದೆ” ಎಂದ.ತಕ್ಷಣ ತಿಮ್ಮಿ ”ಅಯ್ಯೋ ಹಾಗಾದ್ರೆ ನಾವು ಊರು ನೋಡೋದ್ ಯಾವಾಗಾ?”ಎಂದಳು.
ಊರಿನಲ್ಲಿ ಭೀಕರ ಭೂಕಂಪ, ಬಿರುಗಾಳಿ,ಪ್ರವಾಹ,ಕುಂಭ್ದ ದ್ರೋಣ ಮಳೆ,ಸಿಡಿಲು,ಗುಡುಗು ತಡೆಯಲಾರದೆ ತಂದೆ ಮಗನಿಗೆ ಹೇಳಿದ ಈ ಊರಿನಲ್ಲಿ ಇನ್ನು ಬದುಕಲು ಸಾಧ್ಯವಿಲ್ಲ ನೀನು ಸ್ವಲ್ಪ ಕಾಲ ಮಾವನ ಮನೆಗೆ ಹೋಗು ಎಂದು ಕಳಿಸಿಕೊಟ್ಟ.
ಕೆಲವೇ ದಿವಸಗಳಲ್ಲಿ ಮಾವನಿಂದ ಒಂದು ಪತ್ರ ಬಂದಿತು”ಭೀಕರ ಭೂಕಂಪ, ಬಿರುಗಾಳಿ,ಪ್ರವಾಹ,ಕುಂಭ್ದ ದ್ರೋಣ ಮಳೆ,ಸಿಡಿಲು,ಗುಡುಗು ಎಲ್ಲಾ ನಮ್ಮೂರಿಗೇ ಕಳಿಸಿ,........ಆದರೆ ನಿಮ್ಮ ಮಗನನ್ನು ನೀವೇ ನೋಡಿಕೊಳ್ಳಿ”
ಮೊಬೈಲ್ ಗೂ ಹೆಂಡತಿ ಇರುವ ಕಾಮನ್ ಫಾಕ್ಟರ್ ಏನು? ....... ”ಸ್ವಲ್ಪ ತಡ ಮಾಡಿದ್ರೆ ಒಳ್ಳೆ ಮಾಡೆಲ್ ಸಿಕ್ತಿತ್ತೇನೋ!”ಅನ್ಸತ್ತೆ
ಸರ್ದಾರ್ ಒಬ್ಬ ಗ್ರಂಥಾಲಯದಲ್ಲಿ ಕಥೆ ಓದಲು ಒಂದು ದಪ್ಪವಾದ ಪುಸ್ತಕ ಹಿಡಿದು ಎಲ್ಲಾ ಪುಟಗಳನ್ನು ಓದಿ ಮುಗಿಸೇ ಬಿಟ್ಟ.
ನಂತರ ಮನಸ್ಸಿನಲ್ಲೇ ಅಂದುಕೊಂಡ”ಅರೆ ಇದೇನ್ ಕಥೇಗಿಂತ ಬರೀ ಹೆಸರುಗಳೇ ಜಾಸ್ತಿ ಇದೆ”ಅಂತ..... ಅಷ್ಟರಲ್ಲಿ ಲೈಬ್ರೇರಿಯನ್ ಆ ಪುಸ್ತಕ ಕಸಿದು”ಇಲ್ಲಿದೆಯಾ ನಾನು ಆವಾಗ್ಲಿಂದ ಹುಡುಕುತ್ತಿದ್ದೆ ಈ ಯಲ್ಲೋ ಪೇಜಸ್ ನ”
ಸರ್ದಾರ್ ಉಡುಪಿ ಹೋಟೆಲ್ ಗೆ ಹೋಗಿ ದೋಸೆ ಆರ್ಡರ್ ಮಾಡಿ ಬರೀ ಪಲ್ಯ ತಿಂದು ದೋಸೆ ಬಿಟ್ಟ,ನಂತರ ಒಂದು ಸಮೋಸ ಆರ್ಡರ್ ಮಾಡಿ ಅದರಲ್ಲಿದ್ದ ತರಕಾರಿ ಪಲ್ಯ ಮಾತ್ರ ತಿಂದು ಮಿಕ್ಕಿದ್ದು ಬಿಟ್ಟ,ವಡೆ ಆರ್ಡರ್ ಮಾಡಿ ಗರಿಗರಿ ಎನ್ನುವ ಮೇಲಿನ ಪದರ ಬಿಡಿಸಿ ಒಳಗಿದ್ದ ಮೃದುವಾದ ಭಾಗ ಮಾತ್ರ ತಿಂದ.
ಕುತೂಹಲ ತಡೆಯಲಾರದೆ ಮಾಣಿ ಕೇಳಿದ ”ಯಾಕೆ ಸಾರ್ ಹೀಗೆ ಮಾಡ್ತಿದ್ದೀರಿ?”ಎಂದು.ಅದಕ್ಕೆ ಸರ್ದಾರ್”ನನಗೆ ಆರೋಗ್ಯ ಸರಿ ಇಲ್ಲ, ಡಾಕ್ಟರ್ ಹೇಳಿದ್ದಾರೆ ಹೊರಗಡೆ ತಿಂಡಿ ತಿನ್ನ ಬೇಡ ಅಂತ”
ರೀ ನಾನು ದೂರ ಹೋದಾಗ ಕಳೆದು ಹೋದ್ರೆ?....ಪೇಪರ್ನಲ್ಲಿ ಹಾಕಿಸ್ತೀನಿ.....”ಏನಂತ?”....... ”ಎಲ್ಲೇ ಇರು ಹೇಗೇ ಇರು ಅಲ್ಲೇ ಹಾಯಾಗಿರು ಅಂತ”.
ಭಗವಂತನಿಗೆ ಯಾವಾಗ ಕೋಪ ಬರುತ್ತದೆ?
ಮದುವೆಗೆ ಮುಂಚೆನೇ ಯುವತಿ ಗರ್ಭಿಣಿಯಾಗಿ ”ದೇವ್ರೆ ಏನಪ್ಪಾ ಮಾಡ್ಬಿಟ್ಟೆ ನೀನು”ಅಂದಾಗ
ಮದುವೆಗೆ ಮುಂಚೆನೇ ಯುವತಿ ಗರ್ಭಿಣಿಯಾಗಿ ”ದೇವ್ರೆ ಏನಪ್ಪಾ ಮಾಡ್ಬಿಟ್ಟೆ ನೀನು”ಅಂದಾಗ
ನಾನು ನನ್ನಾಕೆ ೨೦ವರ್ಷ ಸುಖವಾಗಿದ್ವು...... ಆಮೇಲೆ? ........ಮದುವೆ ಆದ್ವು
`ರೀ ಸ್ವರ್ಗದಲ್ಲಿ ಗಂಡ ಹೆಂಡತೀನಾ ಒಟ್ಟಿಗೆ ಇರಕ್ಕೆ ಬಿಡಲ್ವಂತೆ?`'........`ಅದಕ್ಕೆ ಅದನ್ನ ಸ್ವರ್ಗ ಅನ್ನೋದು'
`ಪ್ರಿಯೇ ನಾವು ಈಗಷ್ಟೇ ಮದುವೆ ಆಗಿದ್ದೇವೆ ನನಗೆ ಬರೋ ಸಂಬಳ ಸಾಕಗುತ್ತಾ?'....`ಖಂಡಿತ ಸಾಕಪ್ಪ ಆದರೆ ನಿಮ್ ಖರ್ಚಿಗೆ ಏನ್ ಮಾಡೋದು?'
”ಏನಮ್ಮಾ ನಿನ್ನ ಯಜಮಾನ ಚೆನ್ನಗಿದ್ದನಾ?'
`ಏನ್ರಿ ನಮ್ಮ ಯಜಮಾನ್ರನ್ನ ಏಕವಚನದಲ್ಲಿ ಮಾತಾಡಿಸ್ತೀರಾ?'
”ಹೋಗ್ಲೀ ನಿಮ್ಮ ಯಜಮಾನರೆಲ್ಲಾ ಚೆನ್ನಾಗಿದ್ದಾರಾಮ್ಮ?'
`ಏನ್ರಿ ನಮ್ಮ ಯಜಮಾನ್ರನ್ನ ಏಕವಚನದಲ್ಲಿ ಮಾತಾಡಿಸ್ತೀರಾ?'
”ಹೋಗ್ಲೀ ನಿಮ್ಮ ಯಜಮಾನರೆಲ್ಲಾ ಚೆನ್ನಾಗಿದ್ದಾರಾಮ್ಮ?'
`ಹಲೋ ಚಿನ್ನ,ಇವತ್ತು ಏನು ಅಡುಗೆ ಮಾಡಿದ್ದೀಯ?'...ರೇಗಿದ್ದ ಹೆಂಡತಿ ಹೇಳಿದಳು”ಪಾಷಾಣ”.....
`ಸರಿ ಹಾಗದರೆ ನನಗೆ ಕಾಯಬೇಡ ನೀನೇ ಊಟ ಮಾಡು,ಸೆಕ್ರೆಟರಿ ಜೊತೆ ಹೊರಗೆ ಹೋಟೆಲ್ಗೆ ಹೋಗ್ತಿದ್ದೀನಿ'
`ಸರಿ ಹಾಗದರೆ ನನಗೆ ಕಾಯಬೇಡ ನೀನೇ ಊಟ ಮಾಡು,ಸೆಕ್ರೆಟರಿ ಜೊತೆ ಹೊರಗೆ ಹೋಟೆಲ್ಗೆ ಹೋಗ್ತಿದ್ದೀನಿ'
ಆತ-ಡಾರ್ಲಿಂಗ್ ನನಗೋಸ್ಕರ ಏನ್ ಬೇಕಾದ್ರೂ ಬಿಡ್ತೀಯಾ?
ಆಕೆ-ಓ
ಆತ-ಅಪ್ಪ ಅಮ್ಮ?
ಆಕೆ-ಓ ಖಂಡಿತ
ಆತ-ಅಣ್ಣ ತಮ್ಮ?
ಆಕೆ-ಓ
ಆತ-ಅಕ್ಕ ತಂಗಿ?
ಆಕೆ-ಓ
ಆತ-ಊಟ ತಿಂಡಿ?
ಆಕೆ-ಓ
ಆತ-ದಾರಾವಾಹಿ?
ಆಕೆ-ನಾಲಿಗೆ ಬಿಗಿ ಹಿಡಿದು ಮಾತನಾಡು
ಕುಡುಕನೊಬ್ಬ ಪ್ರತಿಬಾರಿ ಡ್ರಿಂಕ್ಸ್ ಆರ್ಡರ್ ಮಾಡುವ ಮೊದಲು ತನ್ನ ಕಿಸೆಯಲ್ಲಿ ಒಮ್ಮೆ ನೋಡಿ ನಂತರ ಆರ್ಡರ್ ಮಾಡುತ್ತಿದ್ದ.ಗೆಳೆಯನೊಬ್ಬನು ಇದನ್ನು ನೋಡಿ ಕಾರಣ ಕೇಳಿದ.ಅದಕ್ಕೆ ಕುಡುಕ”ನನ್ನ ಕಿಸೆಯಲ್ಲಿರುವ ಲಾಯರ್ ಪ್ರಾಮಾಣಿಕವಾಗಿ ಕಂಡ ತಕ್ಷಣ ಆರ್ಡರ್ ನಿಲ್ಲಿಸುತ್ತೇನೆ ಎಂದ.
ಇಬ್ಬರು ಲಾಯರ್ಗಳು ಕೋರ್ಟಿನ ಊಟದ ಕೋಣೆಯಲ್ಲಿ ಮದ್ಯಾಹ್ನ ಭೋಜನ ಮಾಡುತ್ತಿರಲು ತಟ್ಟನೆ ಒಬ್ಬ ಮೇಲೆದ್ದು” ಅಯ್ಯೋ ನನ್ನ ಲಾಕರ್ ಬೀಗ ಹಾಕುವುದನ್ನೇ ಮರೆತಿದ್ದೇನೆ” ಎಂದ.ಅದಕ್ಕೆ ಮತ್ತೊಬ್ಬ ಅದಕ್ಕೇಕೆ ಗಾಬರಿ ನಾನಿಬ್ಬರೂ ಇಲ್ಲೇ ಇದ್ದೀವಿ ಇನ್ನೇಕೆ ಭಯ”ಎನ್ನಲು ಸಮಾಧಾನವಾಗಿ ಊಟ ಮಾಡಲು ಕುಳಿತ.
ಒಬ್ಬ ಲಾಯರ್ ಮನೆಯ ನಾಯಿ ಒಂದು ಮಾಂಸದಂಗಡಿಗೆ ನುಗ್ಗಿ ತುಂಡು ಮಾಂಸವನ್ನು ಕಸಿದು ತಿಂದಿತು.ಆ ವ್ಯಾಪಾರಿ ಲಾಯರ್ ಬಳಿ ಬಂದು”ಸ್ವಾಮೀ ಒಬ್ಬರ ಮನೆ ನಾಯಿ ಅಂಗಡಿಗೆ ನುಗ್ಗಿ ಮಾಂಸ ಕದ್ದು ತಿಂದರೆ ಆ ನಾಯಿಯ ಯಜಮಾನರು ದಂಡ ಕೊಡಬೇಕಾಗುತ್ತದೆ,ಹೌದೋ ಅಲ್ಲವೋ?”ಎಂದ ಪ್ರಶ್ನಿಸಿದ.ಅದಕ್ಕೆ ಲಾಯರ್ ”ಖಂಡಿತವಾಗಿ ಹೌದು” ಎಂದ.ಅದಕ್ಕೆ ಆ ಮಾಂಸದ ವ್ಯಾಪಾರಿ ”ಹಾಗಾದರೆ ನಿಮ್ಮ ಮನೆ ನಾಯಿ ನಮ್ಮ ಅಂಗಡಿಗೆ ಬಂದು ಹಾಗೆ ಮಾಡಿದೆ,ನೀವು ಇಪ್ಪತು ರೂಪಾಯಿ ಕೊಡಿ” ಎಂದ.ಲಾಯರ್ ಮರು ಮಾತಾಡದೆ ಹಣ ಕೊಟ್ಟ. ಎರಡು ವಾರಗಳ ನಂತರ ವ್ಯಾಪಾರಿಗೆ ಇಂದು ಬಿಲ್ ಬಂದಿತ್ತು"ಲಾಯರ್ ಕನ್ಸಲ್ಟೇಶನ್ ಗಾಗಿ 100 ರೂ” ಎಂದು.
ಲಾಯರ್ ಒಬ್ಬನು ತನ್ನ ಗಿರಾಕಿಯನ್ನು ಕರೆದು ಹೇಳಿದನು" ನೋಡಯ್ಯಾ ನೀನು ಮುಂದಿನ ತಿಂಗಳಿನಿಂದ 318 ಡಾಲರ್ 28 ಸೆಂಟ್ ಕಟ್ಟಬೇಕು"ಎಂದ.ಅದಕ್ಕೆ ಆ ಬಡವ "ಇದೇನ್ ಸಾರ್ ಇದು ಒಳ್ಳೆ ಕಾರ್ ಪೇಮೆಂಟ್ ಥರ ಇದೆ" ಎಂದ.ಅದಕ್ಕೆ ಲಾಯರ್ "ಹೌದಯ್ಯ ಈಗ ಆ ಕಾರ್ ನಂದು" ಅನ್ನಬೇಕೇ..
ಮಂತ್ರಿಯೊಬ್ಬನಿಗೆ ಇದ್ದ ಹಲ್ಲುಗಳನ್ನೆಲ್ಲಾ ವೈದ್ಯರು ಕಿತ್ತರು. ಚುನಾವಣೆ ಸಮಯ ಬೇರೆ,ಪ್ರತಿದಿನ ಭಾಷಣ ಮಾಡಲೇಬೇಕು. ಮೊದಲದಿನ ಪ್ಲಾಸ್ಟಿಕ್ ಹಲ್ಲುಗಳನ್ನು ಧರಿಸಿ ಕಷ್ಟಪಟ್ಟು 10ನಿಮಿಶ ಮಾತಾಡಿದ,ಮರುದಿನ 20 ನಿಮಿಶ,ಮುಂದಿನ ದಿನ ಅರ್ಧ ಘಂಟೆ......ಮತ್ತೊಂದು ದಿನ ಮಾತಾಡುವುದನ್ನು ನಿಲ್ಲಿಸಲು ಆಗಲೇ ಇಲ್ಲ.ನಾಲ್ಕಾರು ಘಂಟೆಯ ಬಳಿಕ ಗೆಳೆಯರೊಬ್ಬರು ಕಾರಣ ಕೇಳಲು ಆ ದಿನ ಮಂತ್ರಿ ಮರೆತು ತನ್ನ ಹೆಂಡತಿಯ ಹಲ್ಲುಗಳನ್ನು ಧರಿಸಿದ್ದು ತಿಳಿಯಿತು.
ಗುಂಡ ತನ್ನಹೆಂಡತಿಗೆ ಕಿವುಡಾಗಿದೆ ಎಂದು ಡಾಕ್ಟರ್ ಬಳಿ ಹೇಳಿದ.ಡಾಕ್ಟರ್ ಹಾಗಿದ್ದರೆ ಮೊದಲು ಖಚಿತಮಾಡಿಕೊಳ್ಳಲು ಉಪಾಯ ಹೇಳಿದ. ಅದರಂತೆ ಮನೆಗೆ ಬಂದ ಕೂಡಲೇ ಗುಂಡ "ಲೇ ಇವತ್ತು ಏನು ಅಡಿಗೆ?"ಎಂದು ಕೂಗಿದ,ಉತ್ತರವಿಲ್ಲ.ಮತ್ತೆ ಒಂದೆರೆಡು ಹೆಜ್ಜೆ ಮುಂದೆ ಸಾಗಿ "ಇವತ್ತು ಏನೇ ಅಡಿಗೆ ?"ಎಂದ,ಊ ಹೂ ಉತ್ತರ ಬರಲಿಲ್ಲ. ಮನೆಯ ಒಳಗೆ ಹೋದ,ಅಡುಗೆ ಮನೆಗೂ ಹೋದ,ಕಡೆಗೆ ಹತ್ತಿರಕ್ಕೆ ಹೋಗಿ ಕೂಗಿದ ಹೆಂಡತಿ ಜೋರಾಗಿ ಕೂಗಿ ಹೇಳಿದಳು "ಬದನೇಕಾಯಿ ವಾಂಗೀಭಾತ್ ಅಂತ 9ಸಲ ಹೇಳಾಯ್ತು ನೀವು ಮೊದಲು ಯಾವ್ದಾದ್ರೂ ಡಾಕ್ಟ್ರತ್ರ ಕಿವಿ ತೋರಿಸಿ" ಅದಕ್ಕೆ ಗುಂಡ"ಆ ಏನಂದೆ?"
ಗೆಳೆಯನನ್ನು ಆಸ್ಪತ್ರೆಯಲ್ಲಿ ನೋಡಲು ಹೋದ ಗುಂಡ ನರ್ಸ್ ನನ್ನು ಕರೆದು ಕೇಳಿದ."ಅಲ್ಲಾ ಅದ್ಯಾಕೆ ನೀವು ಎದೆ ಮೇಲೆ ಹಿಂಭಾಗದಲ್ಲಿ ಅಷ್ಟೊಂದು ಪಿನ್ ಗಳನ್ನ ಚುಚ್ಚಿಕೊಂಡಿದ್ದೀರಿ " ಅದಕ್ಕೆ ನರ್ಸ್ ಕೇಳಿದಳು"ಏನಿಲ್ಲಾ ಡಾಕ್ಟರ್ ಗಳನ್ನ ದೂರ ಇಡೋಕೆ"
ಗುಂಡ:ನಾನು ಕಾಫಿ ಕುಡಿಯುವಾಗಲೆಲ್ಲಾ ನನ್ನ ಕಣ್ಣಿಗೆ ಏನೋ ಚುಚ್ಚಿದಹಾಗೆ ನೋವಾಗುತ್ತದೆ" ಡಾಕ್ಟರ್:" ಚಮಚವನ್ನು ತೆಗೆದು ಕುಡಿಯಿರಿ ಎಲ್ಲ ಸರಿ ಹೋಗುತ್ತದೆ"
” ರೋಗಿ: ಡಾಕ್ಟರ್ ಡಾಕ್ಟರ್ ನನಗೆ ಎಲ್ಲಾ ಎರಡೆರೆಡು ಕಾಣುತ್ತಿದೆ
ಡಾಕ್ಟರ್: ಹೌದಾ ಎಲ್ಲಿ ಆ ಕುರ್ಚಿಯಲ್ಲು ಕೂತ್ಕೋಳ್ಳಿ
ರೋಗಿ: ಯಾವುದು ಎಡಗಡೆದೋ,ಬಲಗಡೆದೋ.....
ರೋಗಿ:ಡಾಕ್ಟರ್ ನನಗೆ ಮಂಡಿ ನೋವಿದೆ
ಡಾಕ್ಟರ್: ಹಾಗಿದ್ದರೆ ನೀವು ದಿನಾ 8 ಕಿ.ಮೀ ದೂರ ನಡೆಯಬೇಕು
ವಾರದಬಳಿಕ ರೋಗಿ ಡಾಕ್ಟರಿಗೆ ಫೋನ್ ಹಚ್ಚಿ:ಡಾಕ್ಟರ್ ಈಗ ನಾನು ರಾಮನಗರದಲ್ಲಿ ಇದ್ದೇನೆ ಇನ್ನೂ ಎಷ್ಟು ದಿನ ಹೀಗೇ ನಡೀಬೇಕು?
ರೋಗಿ: ಡಾಕ್ಟರ್ ಎಲ್ಲರೂ ನನ್ನನ್ನು ನಿರ್ಲಕ್ಷ ಮಾಡುತ್ತಾರೆ
ಡಾಕ್ಟರ್:next please
ರೋಗಿಯೊಬ್ಬ ಕೆಂಪಗಾದ ಕಿವಿಗಳ ನೋವನ್ನು ತಾಳಲಾರದೆ ಡಾಕ್ಟರ್ ಬಳಿಗೆ ಓಡಿ ಬಂದ.
ಡಾಕ್ಟರ್:ಏನಾಯ್ತಪ್ಪಾ? ಹೇಗಾಯ್ತು?
ರೋಗಿ:ಡಾಕ್ಟರೇ ನಾನು ಐರನ್ ಮಾಡೋವಾಗ ಫೋನ್ ಬಂತು ಫೋನ್ ಬದಲು ಇಸ್ತ್ರಿ ಪೆಟ್ಟಿಗೆ ನನ್ನ ಕಿವಿಗೆ ಒತ್ತಿದೆ.
ಡಾಕ್ಟರ್:ಛೆ ಪಾಪ,ಆದರೆ ಎರಡೂ ಕಿವಿಗೆ ಹೇಗಾಯ್ತು
ರೋಗಿ:ಸ್ವಲ್ಪ ಸಮಯಬಿಟ್ಟು ಆ ಬಡ್ಡಿ ಮಗ ಮತ್ತೆ ಫೋನ್ ಮಾಡ್ದ
ರೋಗಿ:ಡಾಕ್ಟರ್ ನನಗೆ ಮರೆವಿನ ರೋಗ ಬಂದಂತಿದೆ
ಡಾಕ್ಟರ್: ಸರಿ ಯಾವಾಗಿನಿಂದ ಬಂದಂತಿದೆ?
ರೋಗಿ: ಯಾವ ರೋಗದ ಬಗ್ಗೆ ಕೇಳಿದಿರಿ ನೀವು?
ದಂತ ವೈದ್ಯ:ಏ ಮುಖ ಯಾಕ್ರಿ ಹಾಗೆ ಮಾಡ್ತೀರಿ ನನ್ನಿನ್ನೂ ನಿಮ್ಮನ್ನ ಮುಟ್ಟೇ ಇಲ್ಲ
ರೋಗಿ: ನೀವು ನನ್ನ ಪಾದದ ಮೇಲೆ ಕಾಲು ಇಟ್ಟೀದ್ದೀರ ಸಾರ್
ಡಾಕ್ಟರ್ : ಏನ್ರೀ ನಿಶ್ಯಕ್ತಿಗೇ ಅಂತ ಕೊಟ್ಟ ಟಾನಿಕ್ ಎಕೆ ಕುಡೀಲಿಲ್ಲ?
ರೋಗಿ : ಡಾಕ್ಟರ್ ಕ್ಷಮಿಸಿ ನನ್ನಿಂದ ಅದರ ಮುಚ್ಚಳ ತೆಗೆಯೋಕೇ ಆಗಲಿಲ್ಲ
ತಿಮ್ಮ : ಯಾಕೆ ಅಳ್ತಿದ್ದೀಯಾ ?
ಗುಂಡ : ನನ್ನ ಒಬ್ಬ ಗೆಳೆಯನ ಮುಖದ ಪ್ಲಾಸ್ಟಿಕ್ ಸರ್ಜರಿಗಾಗಿ ಹತ್ತು ಲಕ್ಷ ರೂಪಾಯಿ ಸಾಲ ಕೊಟ್ಟೆ
ತಿಮ್ಮ : ಏನಾಯಿತು ಈಗ ? ಕೈ ಕೊಟ್ಟು ಓಡಿ ಹೋದ್ನ ?
ಗುಂಡ : ಓಡಿ ಹೋಗಿಲ್ಲ, ಆದ್ರೆ ಸರ್ಜರಿ ಆದ ನಂತರ ಅವನ ಗುರುತೇ ಸಿಕ್ತಾ ಇಲ್ಲ!
ಆಸ್ಪತ್ರೆಯಲ್ಲಿ ಮಲಗಿದ್ದ ಗುಂಡ ನರ್ಸ್ ನನ್ನು ಕಂಡು ಹೇಳಿದ 'ನೀನು ನನ್ನ ಹೃದಯವನ್ನೇ ಕದ್ದಿರುವೆ'
ನರ್ಸ್: ಅದಕ್ಕೆ ಮೊದಲು ಡಾಕ್ಟ್ರು ನಿನ್ನ ಕಿಡ್ನಿಯನ್ನೇ ಕದ್ದಿದ್ದಾರೆ!
ಕಳ್ಳರಿಬ್ಬರು ಬ್ಯಾಂಕಿನ ದರೋಡೆ ಮಾಡಿ ಓಡಿ ಬಂದು ಒಂದು ಕಡೆ ಅವಿತು ಕುಳಿತರು
ಒಬ್ಬ ಕಳ್ಳ: ಎಷ್ಟು ಹಣ ಇದೆ ಅಂತ ಎಣಿಸಿ ನೋಡೋಣಾ ?
ಇನ್ನೊಬ್ಬ ಕಳ್ಳ: ನನಗೆ ನಿದ್ದೆ ಬರ್ತಾ ಇದೆ ಮನೇಗೆ ಹೋಗೋಣ, ಹೇಗಿದ್ರೂ ನಾಳೆ ಪೇಪರಲ್ಲಿ ಬಂದೇ ಬರುತ್ತಲ್ಲ.
ರೋಗಿಯೊಬ್ಬಳು: ಡಾಕ್ಟ್ರೇ, ನೀವು ನನ್ನನ್ನ ಟೆಸ್ಟ್ ಮಾಡುವಾಗ ನಿಮ್ಮ ನರ್ಸನ್ನು ಸ್ವಲ್ಪ ಒಳಗೆ ಕರೀತೀರಾ.
ಡಾಕ್ಟರ್: ಏನಮ್ಮಾ ನನ್ನ ಮೇಲೆ ನಿಮಗೆ ವಿಶ್ವಾಸ ಇಲ್ಲವೇನಮ್ಮ?
ರೋಗಿ: ನಿಮ್ಮ ಮೇಲೆ ವಿಶ್ವಾಸವಿದೆ, ಆದರೆ ಹೊರಗೆ ಕುಳಿತಿರುವ ನನ್ನ ಗಂಡನ ಮೇಲೆ ಇಲ್ಲ..!
ಮೆಡಿಕಲ್ ಕಾಲೇಜುಗಳಲ್ಲಿ ಅದೇನು ಕಲಿಸ್ತಾರೋ ಬಿಡ್ತಾರೋ ಗೊತ್ತಿಲ್ಲ...ಆದರೆ ಎರಡು ವಿಷಯಗಳನ್ನು ಚೆನ್ನಾಗಿ ಕಲಿಸ್ತಾರೆ
1.ಔಷಧಿ ಚೀಟಿಗಳನ್ನು ಯಾರಿಗೂ ಅರ್ಥವಾಗದ ಹಾಗೆ ಗೀಚಿ ಬರೆಯೋದು
2.ಬಿಲ್ಲುಗಳನ್ನು ಮಾತ್ರ ಸ್ಪಷ್ಟವಾಗಿ ಬರೆಯೋದು!
ಮೈಕೈಯೆಲ್ಲಾ ಗಾಯವಾಗಿ ಊದಿಕೊಂಡಿದ್ದ ಗುಂಡನನ್ನು ಕಂಡು ಗೆಳೆಯ - 'ಗುಂಡ, ಇದೇನೋ ನಿನ್ನ ಅವಸ್ಥೆ'?
ಗು೦ಡ: ಏನು ಹೇಳಲಿ, ಔಷಧ ಬದಲಾಗಿ ಹೋಯ್ತು.
ಗೆಳೆಯ : ಔಷಧ ಬದಲಾದರೆ ಹೀಗೆ ಆಗುತ್ತಾ? ಯಾವ ಔಷಧಿ ಅದು?
ಗುಂಡ: ರಾತ್ರಿ ಶಕ್ತಿ ವರ್ಧನೆಗೇಂತ ಡಾಕ್ಟರ್ ನನಗೆ ಔಷಧ ಕೊಟ್ಟಿದ್ರು. ಆದರೆ ಅದನ್ನು ಕುಡಿದದ್ದು ನನ್ನ ಹೆ೦ಡತಿ!!!
ಇನ್ಸ್ ಪೆಕ್ಟರ್: ನಿಜ ಹೇಳಿ, ನೀವು ಔಷಧ ಬದಲಾಯಿಸಿ ಇ೦ಜೆಕ್ಷನ್ ಚುಚ್ಚಿದ್ದರಿ೦ದಲೇ ತಾನೇ ಈಗ ರೋಗಿ ಸತ್ತದ್ದು?
ಡಾಕ್ಟರ್:ಅಲ್ಲಲ್ಲ.ಸಾರ್ ಇ೦ಜೆಕ್ಷನ್ ಸರಿಯಾಗಿತ್ತು. ಬದಲಾದದ್ದು ರೋಗಿ.!!
ಪ್ರಶ್ನೆ:ಭಾರತದ ಕಾನೂನು ವ್ಯವಸ್ತೆಯಲ್ಲಿ 2ನೇ ಮದುವೆಗೆ ಅವಕಾಶವಿಲ್ಲ. ಯಾಕೆ ?
ಉತ್ತರ: ಒಂದೇ ತಪ್ಪಿಗೆ ಎರಡೆರಡು ಶಿಕ್ಷೆ ಕೊಡಲಾಗುವುದಿಲ್ಲ.
ಇಬ್ಬರು ಸ್ನೇಹಿತರಿಗೆ 3 ಬಾಂಬುಗಳು ಸಿಕ್ಕಿದವು. ಪೋಲೀಸರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವಾಗ ಒಬ್ಬ ಹೇಳಿದ
`ಅಕಸ್ಮಾತ್ ದಾರಿಯಲ್ಲಿ 1 ಬಾಂಬ್ ಢಂ ಅಂದ್ಬಿಟ್ರೆ ಏನ್ ಮಾಡೋದು ?'
ಇನೊಬ್ಬ : 3 ರಲ್ಲಿ ಎರಡೇ ಸಿಕ್ಕಿದ್ದು ಅನ್ನೋದು ಅಷ್ಟೇ” !!!
ಮೊಬೈಲ್ ಕಂಪನಿಯಲ್ಲಿ ಕೆಲಸ ಖಾಲಿಯಿದೆ.ಅಂತ ಒಂದು ಜಾಹಿರಾತು
ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ರಾತ್ರಿ ಪಾಳಿ ಇಲ್ಲ, ಬೆಳಗ್ಗಿಂದ ಸಂಜೆ ವರೆಗು ಮಾತ್ರ ಕೆಲಸ,ಬೇಗ ಬಯೋ ಡಾಟಾ ಕಳಿಸಿ.
ಸಂಬಳ 10,000 ರೂ ........
ಕೆಲಸ.. ....... ........ಟವರ್ಮೇಲೆ ಕುಳಿತು ಕಾಗೆ ಓಡಿಸುವುದು

ಈ ತಿಂಗಳು ಬಾಡಿಗೆ ಕಟ್ಟಕ್ಕಾಗಲ್ಲಾ ಸಾರ್ -ಎಂದ ಬಾಡಿಗೆದಾರ. ಏನ್ರಿ ಆಚೆ ತಿಂಗಳೂ ಹೀಗೇ, ಹೋದ ತಿಂಗಳೂ ಹೀಗೇ, ಈಗಲೂ ಅದೇ? "ನನ್ನದು ಯಾವಾಗಲೂ ಒಂದೇ ಮಾತು ಸಾರ್"
"ಮ್ಯಾನೇಜರು ನಿನ್ನ ಕೆಲಸ ಏನೂಂತ ಹೇಳಿದ್ದಾರಲ್ವೆ?"ಮಾಲೀಕ ಕೇಳಿದ ಹೊಸ ನೌಕರ ಕೂಡಲೆ ಹೇಳಿದ"ಹೌದೂ ಸಾರ್ ಹೇಳಿದ್ದಾರೆ,ನೀವು ಬರೋದನ್ನ ಕಂಡ ಕೂಡ್ಲೆ ತಮ್ಮನ್ನ ಎಬ್ಬಿಸಬೇಕಂತೆ" !!
ಮೇಷ್ಟ್ರು ಪಾಠ ಮುಗಿಸಿ ಮನೆಗೆ ಹೋಗುವಾಗ ಕಾಲುಜಾರಿ ದೊಡ್ಡ ಹಳ್ಳಕ್ಕೆ ಬಿದ್ದು ಸಹಾಯಕ್ಕೆಂದು ಕೂಗುತ್ತಿದ್ದರು.ಮಕ್ಕಳೂ ಸಹ ಅದೇ ದಾರಿಯಲ್ಲಿ ಬರುತ್ತಿರಲು ಆ ಆರ್ಥ ನಾದ ಕೇಳಿ ಹಳ್ಳದಲ್ಲಿ ಇಣುಕಿ ನೋಡಲು ಮೇಷ್ಟ್ರು"ಮಕ್ಕಳಾ ನೀವಾದ್ರೂ ಬಂದ್ರಾಪ್ಪ ಬನ್ನಿ ನನ್ನನ್ನ ಮೇಲೆ ಹತ್ತಲು ಸಹಾಯ ಮಾಡಿ" ಎಂದರು.ತಕ್ಷಣ ತಿಮ್ಮ"ಊಹೂ ಮೇಷ್ಟ್ರೇ ಯಾರನ್ನ ಬೇಕಾದ್ರೂ ಮೇಲೆ ಎತ್ತೀವಿ ಆದರೆ ನಿಮ್ಮನ್ನ ಮಾತ್ರ ಸಾಧ್ಯವಿಲ್ಲ" ಅಂದ.ಮೇಷ್ತ್ರು "ಅಯ್ಯೋ ಯಾಕ್ರಪ್ಪಾ?" ಎಂದರು ಅದಕ್ಕೆ ತಿಮ್ಮ"ಆಹಾ ನೀವು ಹೇಳಿಕೊಟ್ಟ ಪಾಠ ಪ್ರತಿಯೊಬ್ಬನೂ ಸ್ವಪ್ರಯತ್ನದಿಂದಲೇ ಮೇಲಕ್ಕೆ ಬರಬೇಕು,ನಮಗೆ ಚೆನ್ನಾಗಿ ಅರ್ಥವಾಗಿದೆ"ಅನ್ನಬೇಕೆ.
ತಿಮ್ಮ:"ಮಹಾತ್ಮಾ ಗಾಂಧಿ ಎಷ್ಟು ಸ್ವಾರ್ಥಿಗಳೂ ಅಂತೀನಿ" ತಮ್ಮ:ಹ್ಯಾಗಪ್ಪಾ? ತಿಮ್ಮ:"ಅವರು ಹೋಗೋವಾಗ ನಮ್ಮ ದೇಶದಲ್ಲಿದ್ದ ಅಹಿಂಸೆ,ತ್ಯಾಗ,ಸತ್ಯದಂತಹ ಎಲ್ಲಾ ಗುಣಗಳನ್ನೂ ತೆಗೆದುಕೊಂಡು ಹೋಗಿಬಿಟ್ಟ್ರಲ್ಲಾ"
ತಂದೆ:"ಶಾಲೆ ಬಾಗಿಲು ಯಾವಾಗ ತೆಗೆಯುತ್ತದೆಯೋ?" ಮಗ:"ಅದಕ್ಕೇನಪ್ಪಾ ಬೀಗದ ಕೈ ಇದ್ದರೆ ಯಾವಾಗ ಬೇಕಾದ್ರೂ ತೆಗೀಬಹುದು"
3 ಜನ ದೇವಸ್ಥಾನದ ಅರ್ಚಕರು ಒಂದುದಿನ ಭೇಟಿಯಾದಾಗ ತಮಗೆ ಮಂಗಳಾರತಿ ತಟ್ಟೆಯಲ್ಲಿ ಬಿದ್ದ ಹಣವನ್ನು ಏನು ಮಾಡುತ್ತೇವೆಂದು ಬಿನ್ನವಿಸಿಕೊಳ್ಳುತ್ತಿದ್ದರು. ಮೊದಲನೆಯವ ಹೇಳಿದ:"ನಾನೊಂದೊ ಗೆರೆಯನ್ನು ಹಾಕಿ ನಾಲ್ಕು ಹೆಜ್ಜೆ ದೂರ ನಿಂತು ಬಂದ ಎಲ್ಲಾ ಹಣವನ್ನು ಅದರ ಕಡೆಗೆ ಎಸೆಯುತ್ತೇನೆ,ಆಚೆಗೆ ಬಿದ್ದದ್ದು ಹುಂಡಿಗೆ ಈಚೆಗೆ ಬಿದ್ದದ್ದು ನನಗೆ!" ಎರಡನೆಯವ:"ನಾನು ನೆಲದ ಮೇಲೆ ವೃತ್ತವನ್ನು ಬರೆದು ನಾಲ್ಕು ಹೆಜ್ಜೆ ದೂರ ನಿಂತು ಬಂದ ಎಲ್ಲಾ ಹಣವನ್ನು ಅದರ ಕಡೆಗೆ ಎಸೆಯುತ್ತೇನೆ,ಆಚೆಗೆ ಒಳಗೆ ಬಿದ್ದದ್ದು ಹುಂಡಿಗೆ ಹೊರಗೆ ಬಿದ್ದದ್ದು ನನಗೆ!" ಕಡೇಯ ಅರ್ಚಕ ಹೇಳಿದ:"ನಾನು ಹಾಗೆಲ್ಲಾ ಮಾಡಲ್ಲ,ಬಂದ ಎಲ್ಲಾ ಹಣವನ್ನು ಕೈಯಲ್ಲಿ ಹಿಡಿದು ಮೇಲೆ ಎಸೆಯುತ್ತೇನೆ,ಮೇಲೆ ಹೋದದ್ದು ದೇವರಿಗೆ ಕೆಳಗೆ ಬಂದದ್ದು ಮಾತ್ರ ನನಗೆ"ಅಂದ
ಮೇಷ್ಟ್ರು:"ಘಸ್ನಿ ಮೊಹಮದ್ ನಮ್ಮ ದೇಶಕ್ಕೆ ಮೊದಲ ಹೆಜ್ಜೆ ಇಟ್ಟ ಕೂಡಲೆ ಮಾಡಿದ್ದು ಏನು?" ತಿಮ್ಮ:"ಎರಡನೇ ಹೆಜ್ಜೆ ಇಟ್ಟ ಸಾರ್"
"ಹೋಮ್ ವರ್ಕ್ ಮಾಡಿದ್ದೀಯ ಜಲಜ?"..."ಹೌದೂ ಸಾರ್"....."ಸರಿ ತಗೋಡು ಬಾ"......"ಅದು ಹೇಗೆ ತರಲಿ ಸಾರ್ ಮನೆ ಕೆಲಸ ಪಾತ್ರೆ ತೊಳೆದು,ಬಟ್ಟೆ ಒಗೆದು,ಕಸಗೂಡಿಸಿ,ಮನೆ ವರೆಸಿದ್ದೆಲ್ಲಾ ತರಕ್ಕಾಗಲ್ಲ ಸಾರ್"
ತದವಾಗಿ ಕೆಲಸಕ್ಕೆ ಬಂದ ಕೂಲಿ ಆಳನ್ನು ಸಾಹುಕಾರ ಯಜಮಾನ ವಿಚಾರಿಸಿದ" ಏಯ್ ದಿನಾಗಲೂ ಕೆಲಸಕ್ಕೆ ತಡವಾಗಿ ಬರ್ತೀಯಲ್ಲಾ,ಏನ್ ಕಾರಣ?" ಎಂದ,ಅದಕ್ಕೆ ಆ ಆಳು "ಅರೆ ದೇವಸ್ಥಾನಕ್ಕೆ ಓಗ್ಬುಟ್ ಬರ್ತೀನೀ ಸ್ವಾಮಿ"ಎಂದ."ಅಕಸ್ಮಾತ್ ಆದ್ಯಾವ್ರು ಪ್ರತ್ಯಕ್ಷ ಆದರೆ ಏನ್ ಕೇಳೋತಿಯಾ?" ಸಾಹುಕಾರ ಕೇಳಿದ.ಅದಕ್ಕೆ ಆಳು"ತುಂಬ ಹಣ,ಐಸ್ವರ್ಯ,ದೊಡ್ಡಮನೆ ,ಜಮೀನು,ಚಿನ್ನ..." ಎನ್ನುತ್ತಿರಲಿ ಸಾಹುಕಾರ "ಥೂ ನಿನ್ನ ದೇವರು ಪ್ರ್ಯತ್ಯಕ್ಷ ಆದರೆ "ಶಾಂತಿ ಕೊಡು, ನೆಮ್ಮದಿ ಕೊಡು, ಸಂತೋಷ ಕೊಡು, ಆರೋಗ್ಯ ಕೊಡು,"ಅಂತ ಕೇಳ್ಬೇಕು ಗೊತ್ತಾಯ್ತ,ಅದಕ್ಕೆ ಆಳು ಮೆಲ್ಲನೆ ನುಡಿದ"ಅದ್ಸರಿ ಬುದ್ದಿ ಯಾರ್ಯಾರಿಗೆ ಏನಿಲ್ವೋ ಅದನ್ನೇ ತಾನೆ ಕೇಳ್ಕೋಬೇಕು"ಅನ್ನಬೇಕೆ!
ಕೆಲಸಕ್ಕೆ ತಡವಾಗುತ್ತಿದೆ,ಸ್ನಾನಕ್ಕೆ ನೀರು ಕಾದಿಲ್ಲ,ಶೇವಿಂಗ್ ಮಾಡಿಕೊಳ್ಳುತ್ತಾ ಅವಸರದಲ್ಲಿ ತಂದೆ ಮಗನನ್ನು "ಲೋ ಟೈಮ್ ಎಷ್ಟಾಯ್ತು ನೋಡಿ ಹೇಳೊ" ಮಗ ಗಡಿಯಾರ ನೋಡಿ ಬಂದು"ಗೊತ್ತಾಗ್ತಾ ಇಲ್ಲಾಪ್ಪ",....ತಂದೆ"ಸರಿ ದೊಡ್ಡಮುಳ್ಳು ಚಿಕ್ಕಮುಳ್ಳು ಎಲ್ಲೆಲ್ಲಿದೆ ಹೇಳು ಹೋಗ್ಲಿ" ಮಗ ನೋಡಿ ಬಂದು"ಎರಡೂ ಗಡಿಯಾರದಲ್ಲೇ ಇದೇಪ್ಪ"ಎಂದ
ಕಾರ್ಮಿಕನೊಬ್ಬ ದಿನಾ ಕೆಲಸಕ್ಕೆ ತಡವಾಗಿ ಬರುತ್ತಿದ್ದ,ನಂತರ ಕೆಲಸ ಶುರು ಮಾಡುವುದೂ ತಡ,ಕಾಫಿ,ತಿಂಡಿ,ಊಟ,ಟಯ್ಲೆಟ್ ಗೆ ಹೋಗಿ ಬರಿವುದೂ ತಡವೇ,ಇದನ್ನು ನೋಡಿ ಸಹಿಸಲಾರದೆ ಮಾಲೀಕ"ಅಲ್ಲಯ್ಯಾ ಎಲ್ಲಾನೂ ತಡವಾಗೇ ಮಾಡ್ತೀಯಲ್ಲ ನಿನ್ನ ಕೈನಲ್ಲಿ ಏನಾದ್ರೂ ಬೇಗ ಆಗುತ್ತಾ?" ......"ಆಗತ್ತೆ ಸ್ವಾಮಿ"........"ಏನು?"...."ಬೇಗ ಸುಸ್ತು ಆಗತ್ತೆ"

ಬ್ರೂಸ್ ಲೀ ಸಿನಿಮಾ ಬಂದ ಕಾಲವದು,
ಎಲ್ಲಿ ನೋಡಿದರೂ ಯುವಕರಿಗೆ ಕುಂಗ್ಫೂ ಕರಾಟೆ ಕಲಿಯುವ ಆಸೆ,
ಚಿತ್ರ ನೋಡಿ ಹೊರಗೆ ಬರುತ್ತಿದ್ದಂತೆ ಆ ಗೇಟ್ ಗೇ ಒಂದೇಟ್,ಆ ಕಾಂಪೌಂಡ್ಗೇ ಒಂದೇಟು.
ಅಂಥಾ ಕಾಲದಲ್ಲಿ ಗುಂಡನನ್ನು ಕರಾಟೆ ಕಲೀಬೇಕಮ್ಮಾ ಯಾರದ್ರೂ ಜಗಳಕ್ಕೆ ಬಂದ್ರೆ ?
ಉಪಯೋಗ ಅಲ್ವಾ ಎಂದರು, ಏನೂ ಗೊತ್ತಿಲ್ಲದ ಗುಂಡ ಜಾಣತನದಿಂದ ಹೇಳಿದ
"ಕರಾಟೆ ಬಹಳ ಸುಲಭ ಕಣಮ್ಮಾಮೊದಲು ಹೀಗೆ ಹ್ಹೂ.....ಆಮೇಲೆ ಹೀಗೆ ಹ್ಹ....
ಆಮೇಲೆ ಎಡಗಡೆ ತಿರುಗಿನೋಡು....ಬಲಗಡೆ ತಿರುಗಿ ನೋಡು......ಹಿಂದೆ ನೋಡು......
ಮುಂದೆ ನೋಡು...... ಜಾಗ ಯಾವ್ದು ಖಾಲೀ ಇದೆ ನೋಡು...... ದೌಡ್...."
ಹುಚ್ಚಾಸ್ಪತ್ರೆಯಲ್ಲಿ ರೋಗಿಯೊಬ್ಬ ಬಾವಿಯ ಸುತ್ತಲೂ ಸುತ್ತುತ್ತಾ 27,,,,27,,,,27,,,,27,,,,ಅನ್ನುತ್ತಿದ್ದ.
ಹೊಸದಾಗಿ ಕೆಲಸಕ್ಕೆ ಸೇರಿದ್ದ ವೈದ್ಯರು ಕುತೂಹಲದಿಂದ ಹತ್ತಿರಕ್ಕೆ ಹೋಗಿ ಬಾವಿಯಲ್ಲಿ
ಏನಿದೆ ಹೀಗೆ ಎಣಿಸುತ್ತಿದ್ದಾನಲ್ಲಾ ಎಂದು ಇಣುಕಿದನು...
ಅಷ್ಟರಲ್ಲಿ ಅವನನ್ನು ಆ ರೋಗಿ ಒಳಕ್ಕೆ ದಬ್ಬಿ 28,,,28,,,28,,,ಎಂದು ಮತ್ತೆ ಸುತ್ತುತ್ತಿದ್ದನು
ವಿಪರೀತ ಸಿಗರೇಟು ಸೇದುತ್ತಿದ್ದ ಗುಂಡನಿಗೆ ಡಾಕ್ಟರ್ ಅವನ ಈ ದುಶ್ಚಟ ಬಿಡಿಸಲು”ನೋಡು ಗುಂಡ ಇನ್ಮೇಲೆನೀನು ಊಟ ಆದ್ಮೇಲೆ ಮಾತ್ರ ಸಿಗರೇಟು ಸೇದು”ಅಂದರು.
ಎರಡೇ ದಿನ ಕಳೆದಿದೆ ಗುಂಡ ಓಡೋಡಿ ವಾಪಸ್ ಡಾಕ್ಟರ್ ಬಳಿಗೆ ಬಂದ"ಡಾಕ್ಟರೇ ಸಾಯೋಹಾಗೆ ಆಗ್ತಾ ಇದೆ,ಇನ್ನು ನಾನು ಬದುಕೋದಿಲ್ಲಾ",
"ಏನಾಯ್ತು ಗುಂಡ? ನಾನು ಹೇಳಿದ ಹಾಗೇ ಮಾಡಿದ್ಯಾ?"
"ಹೂ ಡಾಕ್ಟ್ರೇನೀವು ಹೇಳಿದ ಹಾಗೇ ಊಟ ಆದ್ಮೇಲೆ ಮಾತ್ರ ಒಂದು ಸಿಗರೇಟೇ ಸೇದ್ತಾ ಇದ್ದೀನಿ,ಆದರೆ ದಿನಕ್ಕೆ ಹನ್ನೆರಡು ಸಲ ಊಟ ಮಾಡಕ್ಕೆ ಆಗ್ತಾಇಲ್ಲ ಡಾಕ್ಟ್ರೇ,,,,ಕಾಪಾಡಿ"
ಗುಂಡಿನಚಟದಿಂದ ತಿಮ್ಮ ಅನಾರೋಗ್ಯ ತಂದುಕೊಂಡ ,ಹೆಂಡ್ತಿ ಮಕ್ಕಳು ಬೈದು "ಹೋಗಿ ಡಾಕ್ಟ್ರನ್ನ ಕಾಣ್ರೀ,ನೀವು ಕುಡೀರಿ ಆದ್ರೆ ಡಾಕ್ಟರ್ ಎಷ್ಟು ದಿನಕ್ಕೊಮ್ಮೆ ಕುಡೀ ಅಂತಾರೋ ಅಷ್ಟುಮಾತ್ರ ಕುಡೀರಿ" ಅಂದ್ರು.
ಅಪ್ಪಣೆಯಂತೆ ತಿಮ್ಮ ಡಾಕ್ಟರನ್ನ ಕಂಡು ಬಂದ ,ಮನೆಯವರೆಲ್ಲಾ ಕುತೂಹಲದಿಂದ ಕೇಳಿದರು "ಎಷ್ಟು ದಿನಕ್ಕೊಮ್ಮೆ ಕುಡೀಬೋದು ಅಂದ್ರು?"
ಅದಕ್ಕೆತಿಮ್ಮ"ಅದೆಲ್ಲಾ ಇರಲಿ ವಾರಕ್ಕೆ ಅದೆಷ್ಟು ತಿಂಗಳುಬರ್ತವೆಳ? "ಅನ್ನಬೇಕೇ
"ಏಯ್ ನೀನು ರಾಮಣ್ಣನವರ ಮಗ ಸೀನ ಅಲ್ವಾ,ಇದೇನೋ ಬಸ್ ಸ್ಟಾಪ್ ನಲ್ಲಿ ಆಸ್ಪತ್ರೆ ಡ್ರೆಸ್ ನಲ್ಲಿ? ನಿಂಗೆ ಹೃದಯ ಚಿಕಿತ್ಸ್ತೆ ಇತ್ತಲ್ವಾ ಇವತ್ತು?"
"ಅಯ್ಯೋ ಬಿಡಿಸಾರ್ ಬಟ್ಟೆ ಗಿಟ್ಟೆ ಎಲ್ಲಾ ಕಳ್ಚಿ ಈವೇಶ ಹಾಕ್ಬಿಟ್ಟು ದರದರ ಅಂತ ಶ್ರೆಚ್ಚರ್ ನಲ್ಲಿ ಎಳ್ಕೊಂಡ್ ಹೋಗ್ಬಿಡೋದಾ..... ಆಮೇಲೆ ಕತ್ತಲೆ ರೂಂನಲ್ಲಿ ಬಾಗಿಲು ಹಾಕಿ ಪಟಪಟ ಅಂತ ಮುಖಕ್ಕೆ ಲೈಟ್ ಹಾಕೋದಾ...
ಕತ್ತರಿ,ಚಾಕೂ,ದಪ್ಪ ಸೂಜೀ ಯಪ್ಪ....ಆಮೇಲೆ ಎಲ್ಲಾ ನರ್ಸ್ ಗಳು ಕೇಳ್ತಾರೆ- ಫಸ್ಟ್ ಆಪರೇಶನ್ನಾ?
ಹೆದರಬೇಡಿ ಏನೂ ಆಗಲ್ಲಾ ,ಹಾರ್ಟ್ ಆಪರೇಶನ್ ತುಂಬಾ ಸಿಂಪಲ್ಲು ..ಅಂತ"
"ಅಯ್ಯೋ ಅಷ್ಟಕ್ಕೇ ಹೆದರಿ ಓಡಿಬಂದ್ಯಾ?"..." ಅಯ್ಯೋ ಹಂಗದಿದ್ದು ನನಗಲ್ಲ ಹೊಸಾ ಡಾಕ್ಟರ್ ಗೆ"
ತಿಮ್ಮಡಾಕ್ಟರ್ ಬಳಿಗೆ ಓಡೋಡಿ ಬಂದ" ಡಾಕ್ಟರೇ ನಾನು ಪತ್ರ ಬರೆಯೋವಾಗ ನನ್ನ ಮಗ .... ನನ್ನ ಮಗ.....ಇಂಕ್ ಬಾಟಲ್ ಇಟ್ಟಿದ್ರೆ ಎತ್ಕೊಂಡ್ ಗಟ ಗಟ ಅಂತ ಕುಡುದ್ಬುಟ್ಟಾ ಡಾಕ್ಟ್ರೇ,,ಏನ್ ಮಾಡ್ಲೀ ಡಾಕ್ಟ್ರೇ ಬೇಗ ಬನ್ನೀ ಡಾಕ್ಟ್ರೇ "ಎಂದು ಗೋಗರೆದ.
ಆ ಡಾಕ್ಟರೋ ಬಹಳ ಬಿಜಿ, "ನೋಡಪ್ಪಾ ತಿಮ್ಮ ಇಲ್ಲಿ ತುಂಬಾ ಜನ ಇದ್ದಾರೇ ನಾನು ಇನ್ನು ಹತ್ತು-ಹದಿನೈದು ನಿಮಿಶದಲ್ಲಿ ಅಲ್ಲಿರ್ತೀನಿ ಅಲ್ಲೀವರೆಗೂ ನೀನು,,,,,,"ತಿಮ್ಮ ತಕ್ಷಣ ಹೇಳಿದ”ಅಲ್ಲೀವರೆಗೂ ಏನ್ ಮಾಡೋದ್ ಡಾಕ್ಟ್ರೇ, ಪೆನ್ಸಿಲ್ ನಲ್ಲೇ ಬರೀತಿರ್ತೀನಿ"
ಗುಂಡ ಖಾಯಿಲೆಯಿಂದ ಹೊರಗೆ ಬರಲಾಗದೆ, ಡಾಕ್ಟರ್ ಅವನನ್ನು ಕುರಿತು"ನೋಡಪ್ಪಾ ಗುಂಡಾ ನಿನಗೆ ಜೀವನದಲ್ಲಿ ಕಡೇ ಆಸೆ ಏನಾದ್ರೂ ಇದ್ರೆ ಕೇಳು" ಅಂದರು,
ಅದಕ್ಕೆ ಗುಂಡ "ಹೂ ಡಾಕ್ಟ್ರೇ ನನ್ನ ಕಡೇ ಆಸೆ ಎನಪ್ಪಾ ಅತಂತಂದ್ರೆ ಒಬ್ಬ ಒಳ್ಳೆ ಡಾಕ್ಟರನ್ನ ಕಾಣಬೇಕು ಅಂತ" ಅನ್ನಬೇಕೇ
ಹಾಲು ಕೊಳ್ಳುವಾಗ ಒಬ್ಬಾತ ಕೇಳಿದ"ಇದು ತಾಜಾ ಹಾಲು ತಾನೆ?" ಹಾಲಿನಾಕೆ "ಇದೇನ್ಸ್ವಾಮಿ ಹಿಂಗ್ ಕೇಳ್ತೀರಾ, ನಾಲ್ಕು ಘಂಟೆ ಮೊದಲು ಇದು ಹುಲ್ಲಾಗಿತ್ತು"
ಗುಂಡ ಹೊಸದಾಗಿ ಒಂದು ಹಳೆ ಕಾರ್ ಕೊಂಡ, ಸ್ನೆಹಿತರನ್ನೆಲ್ಲಾ ಒಂದು ರೌಂಡ್ ಕೂಡಿಸಿಕೊಂಡು ಹೋದ,"ತುಂಬಾ ಚೆನ್ನ್ನಾಗಿದೆ, ಇಂಥಾ ಕಾರ್ ಎಲ್ಲೂ ನೋಡಿಲ್ಲ" ಗೆಳೆಯನೊಬ್ಬ ಹೊಗಳಿದ,
ಮತ್ತೊಬ್ಬ ಹೇಳಿದ"ಹೌದು ಹಾರ್ನ್ ಒಂದು ಬಿಟ್ಟು ಮಿಕ್ಕೆಲ್ಲಾ ಭಾಗಗಳೂ ಶಬ್ದಮಾಡೋ ಕಾರ್ ಇದೇ ಮೊದಲು ನೋಡ್ತಿರೋದು"
ನೆಹರು ಹುಚ್ಚಾಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ರಂತೆ. ಬಾಗಿಲಿನಲ್ಲೇ ಒಬ್ಬಾತ ಅವರನ್ನು ನಿಲ್ಲಿಸಿ " ಯಾರು ನೀನು ? " ಅಂದ.
ಅದಕ್ಕೆ ಅವ " ನಾನು ಭಾರತದ ಪ್ರಧಾನಿ, ನೆಹರು "ಅಂದ .
ಹುಚ್ಚ ನಕ್ಕು " ನಾನೂ ಇಲ್ಲಿಗೆ ಬಂದಾಗ ಹೀಗೇ ಹೇಳ್ತಿದ್ದೆ,ಒಳಗೆ ಹೋಗು ಎಲ್ಲ ಸರಿ ಮಾಡ್ತಾರೆ,ಕರ್ಕೊಂಡು ಹೋಗ್ರಿ ಇವನನ್ನ " .
ಪುಟ್ಟ ಬಾಲಕಿ ಸೀಮಾ ಬೆಳಿಗ್ಗೆ ಎದ್ದೊಡನೆ ತನ್ನ ಕನಸಿನಲ್ಲಿ ಲಕ್ಷ್ಮಿ ಬಂದಿದ್ದನು ವಿವರಿಸಿದಳು.ಅವಳ ತಂದೆ ತಾಯಿಗೆ ಖಂಡಿತ ಎನೋ ಲಕ್ ಇರಬಹುದು ಎಂದು "ನಿಜವಾಗ್ಲೂ ? ಲಕ್ಷ್ಮೀನೇ ಬಂದ್ಲಾ? ಏನಂದ್ಲು?" ಅದಕ್ಕೆ ಸೀಮಾ "ಹೂ ಬಿಗಿಯಾಗಿ ಸೀರೆ ಉಟ್ಕೊಂಡು, ಬೆಳಿಗ್ಗೆ ಸೂರ್ಯ ಹುಟ್ಟೋ ಸಮಯಕ್ಕೆ ಸರಿಯಾಗಿ ದೊಡ್ಡ ಹಿತ್ತಾಳೆ ಬಿಂದಿಗೆ ಹಿಡ್ಕೊಂಡು ಮನೆ ಮುಂದೆಲ್ಲಾ ಚೆಲ್ತಾ ಇದ್ಳು?".... ಏನು?...ನೀರು....ಯಾರು....ನಮ್ಮನೆ ಕೆಲಸದವಳು..ಲಕ್ಷ್ಮೀ
ಖಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕು, ಏಕೆ? ಆಸ್ಪತ್ರೆ ನಡೆಸೋರು ಬದುಕಬೇಡವೇ? ಡಾಕ್ಟರನ್ನೂ ಕಾಣಬೇಕು, ಗೀಚಿದ್ದನ್ನ ಇಸ್ಕೋಡ್ ಬರಬೇಕು,ಏಕೆ? ಡಾಕ್ಟರ್ ಬದುಕಬೇಡವೇ? ಡಾಕ್ಟರ್ ಬರೆದುಕೊಟ್ಟ ಔಷಧಿ/ಮಾತ್ರೆ ಎಲ್ಲಾ ಅಂಗಡೀಲಿ ತಗೋಬೇಕು,ಏಕೆ? ಅಂಗಡಿ ನಡೆಸೋರು ಬದುಕಬೇಡವೇ? ಆಮೇಲೆ ತಂದ ಔಷಧಿ/ಮಾತ್ರೆ ಎಲ್ಲಾ ಬಚ್ಚಲಲ್ಲಿ ಸುರೀಬೇಕು,ಏಕೆ? ನೀವ್ ಬದುಕಬೇಡವೇ?
ಯುಗಾದಿಗೆ ನಾಕು ದಿನ ಮುಂಚೆ ಗುಂಡ ಪೆಚ್ಚಾಗಿ ಕುಳಿತಿದ್ದ.ಗೆಳೆಯ ಕಾರಣ ಕೇಳಲು "ಯುಗಾದಿಗೆ ನನ್ನ ಚಿಕ್ಕಪ್ಪನಿಕೆ ಸೈಕಲ್ಲು ಕೊಡ್ಲೋ ಅಥವಾ ಹಸು ಕೊಡ್ಲೋ ಅಂತ ಯೋಚಿಸುತ್ತಿದ್ದೇನೆ" ಅಂದ.
ಅದಕ್ಕೆ ಗೆಳೆಯ ಕುಚೋದ್ಯ ಮಾಡಲೆಂದು ಹಸು ಮೇಲೆ ಸವಾರಿ ಮಾಡಿದ್ರೆ ಕೆಟ್ಟದಾಗಿರಲ್ವಾ ಅಂದ.ಅದಕ್ಕೆ ಗುಂಡ "ಸೈಕಲ್ಲಿಂದ ಹಾಲು ಕರೆಯಲು ಹೋದ್ರೆ ಇನ್ನೂ ಭಯಂಕರ ಅಲ್ವಾ"ಅಂದ.
ಗುಂಡ ಹೊಸದಾಗಿ ಒಂದು ಹಳೆ ಕಾರ್ ಕೊಂಡ,ಸ್ನೇಹಿತರನ್ನೆಲ್ಲಾ ಒಂದು ರೌಂಡ್ ಕೂಡಿಸಿಕೊಂಡು ಹೋದ,"ತುಂಬಾ ಚೆನ್ನ್ನಾಗಿದೆ,ಇಂಥಾ ಕಾರ್ ಎಲ್ಲೂ ನೋಡಿಲ್ಲ" ಗೆಳೆಯನೊಬ್ಬ ಹೊಗಳಿದ, ಮತ್ತೊಬ್ಬ ಹೇಳಿದ"ಹೌದು ಹಾರ್ನ್ ಒಂದು ಬಿಟ್ಟು ಮಿಕ್ಕೆಲ್ಲಾ ಭಾಗಗಳೂ ಶಬ್ದಮಾಡೋ ಕಾರ್ ಇದೇ ಮೊದಲು ನೋಡ್ತಿರೋದು"
ಭಿಕ್ಷುಕ "ಸ್ವಾಮೀ ಒಂದು ಹತ್ತು ರೂಪಾಯಿ ಹಾಕೀ ಸ್ವಾಮೀ" ದಾರಿಹೋಕ"ಹತ್ಯಾಕೆ?" "ಬೆಲೆಗಳೆಲ್ಲಾ ಏರ್ ಬಿಟ್ಟಿದೆ ಅದಕ್ಕೆ"
ಭಿಕ್ಷುಕ "ಸ್ವಾಮೀ ಕಣ್ಣೇರಡೂ ಕಾಣಲ್ಲ ಒಂದು ರೂಪಾಯಿ ಭಿಕ್ಷೆ ಹಾಕೀ ಸ್ವಾಮೀ" ದಾರೀ ಹೋಕ "ಎಲಾ ಇವ್ನಾ ಒಂದು ಕಣ್ಣು ಕಾಣ್ತಿದೆ" " "ಸರಿ ಐವತ್ತು ಪೈಸ ಕೊಡಿ ಸ್ವಾಮಿ"
ಹುಚ್ಚಾಸ್ಪತ್ರೆಯಲ್ಲಿ ಕೇಳ್ಸಿದ್ದು"ನಿನ್ನ ಹೆಸರೇನು" "ಪಂಡಿತ್ ನೆಹರೂ" ಕೆಲಸ?,ಭಾರತದ ಪ್ರಧಾನಿ,ಯಾವೋನ್ ಹಂಗಂತ ಹೇಳಿದ್ದು? ದೇವರು ತಕ್ಷಣ ಪಕ್ಕದಲ್ಲಿ ಕುಳಿತಿದ್ದವ "ನಾನ್ ಹಾಗೆ ಹೇಳಿಲ್ಲಪ್ಪ!"
ಆರೋಪಿಯೊಬ್ಬನನ್ನು ಕೋರ್ಟಿನಲ್ಲಿ ತೀರ್ಪಾಗಿ ಸರಪಳಿ ಹಾಕಿ ದರದರ ಎಳೆದು ಸೆರೆಮನೆಗೆ ಒಯ್ಯುತಿದ್ದರು,ಗುಂಡ ಪೋಲೀಸರನ್ನು "ಯಾರಿವನು? ಎಲ್ಲಿಗೆ ಎಳ್ಕೊಂಡು ಹೋಗ್ತಿದ್ದೀರಿ?"ಅಂದ. ಅದಕ್ಕೆ ಪೋಲೀಸ್ "ಇವನೊಬ್ಬ ಕೊಲೆಗಡುಕ ಜೈಲಿಗೆ ಒಯ್ಯುತ್ತಿದ್ದೇವೆ" ಅಂದ."ಅಯ್ಯೋ ಜೈಲಿಗಾ ನಾನೆಲ್ಲೋ ಪ್ರೈಮರೀ ಸ್ಕೂಲ್ಗೇನೋ ಅಂತಿದ್ದೆ"
ಮಗಳು ಗಂಡನ ಸಮೇತ ಯುಗಾದಿಗೆಂದು ಅಮ್ಮನ ಊರಿಗೆ ಬಂದಿದ್ದಳು.ಹಬ್ಬಕ್ಕೆ ಭಾರೀ ಊಟೋಪಚಾರ ನಡೆದಿದೆ, ಊಟಕ್ಕೆಲ್ಲರೂ ಕುಳಿತಿರಲು ಅಳಿಯನಿಗೆ ವಾಯುವಿಸರ್ಜನೆ ಯಾಗಿ ಟೂಯ್ ಎಂದು ರಾಗವಾಗಿ ಹೂಸಿದನು, ಯಾರಿಗೂ ಅದರ ಅರಿವೇ ಆಗದಂತಿದ್ದರು.ಮತ್ತೆರಡು ನಿಮಿಷದ ನಂತರ ಅದೇ ಬಾದೆಯಿಂದ ಕಷ್ಟವಾಗಿ ಅದರ(ಶಬ್ಧ) ಜೊತೆಗೇ ಲಲಲಲ ರಾರಾ ಲಾಲಲಲ ಎಂದು ಹಾಡಿದ. ತಕ್ಷಣ ಅತ್ತೆಯವರು "ಅಳಿಯಂದಿರೇ ನೀವು ಆವಾಗ ಹಾಡಿದ ಹಾಡೇ ಚೆನ್ನಾಗಿತ್ತು" ಅನ್ಬೇಕೇ
ತೀರ್ಥಯಾತ್ರೆಗೆ ಹೊರಟ ತಂದೆ ಮಗನನ್ನು ಕರೆದು"ನೋಡು ತಿಮ್ಮಾ ನಾನು ಉತ್ತರಕ್ಕೆ ಹೊರಟಿದ್ದೇನೆ ವಾಪಸ್ ಬರೋದು ಖಚಿತ ಇಲ್ಲ, ಅಕಸ್ಮಾತ್ ಅನಾಹುತವಾಗಿ ಒಂದು ವರ್ಷವಾದ್ರೂ ಬರದೇ ಹೋದರೆ ಈ ಡಬ್ಬ ತೆಗೆದು ಇದರಲ್ಲಿನ ಹಣ ನೀನೇ ತಗೋ,"ಅಂದು ಕೀಲಿ ಕೈಗಿಟ್ಟು,ರೈಲಿಗೆ ಹೊರಟ, ರೈಲು ಹೊರಟಿದೆ, ಮಗ ಓಡೋಡಿ ಬಂದ "ಅಪ್ಪ ಇದು ಬೇರೆ ಯಾವುದೋ ಬೀಗದ ಕೈ" ಅಂದ
ಸೋಮಾರಿ ಸೋಮಣ್ಣ ಮಗೂನ ಎತ್ಕೊಂಡು ವಾಕಿಂಗ್ ಹೊರಟ. ದಾರಿಯಲ್ಲಿ ಗುಂಡ "ಏನ್ ಸೋಮಣ್ಣೋರೆ ಮಗು ನಿಮ್ದೇನೋ ನಿಮ್ಹಾಗೇ ಇದೆ ,ಮುದ್ದಾಗೆದೆ" ಅಂದ, ಸುಮ್ಮನಿರದೆ ಸೋಮಣ್ಣ" ಹೂ! ಇದರ ಬುದ್ಧಿನೂ ಬಹಳ ಚುರುಕು" ಅಂದ." ಓಹೋ ಹಾಗಿದ್ರೆ ಅವರಮ್ಮನ್ನ ಹೋತಿದೆ ಅನ್ಸತ್ತೆ" ಅಂದ.
ಗುಂಡ ಗಿಣಿ ಸಾಕುವ ಆಸೆಯಿಂದ ಹಕ್ಕಿ ಮಾರುವ ಅಂಗಡಿಗೆ ಹೋದ,"ಆ ಗಿಣಿಗೆ ಎಷ್ಟು?" ಅಂಗಡಿಯವ "ಒಂದುಲಕ್ಷ", "ಹಾ! ಯಾಕೆ ಅದೇನ್ ಮಾಡತ್ತೆ?" "ಅದು ಐಟಿ ಸಾಫ್ಟ್ ವೇರ್ ಇಂಜಿನಿಯರ್ರು","ಅದರಪಕ್ಕದ್ದು?" "ಎರಡು ಲಕ್ಷ". "ಹಾ! ಯಾಕೆ ಅದೇನ್ ಮಾಡತ್ತೆ?" "ಅದು ನ್ಯೂಕ್ಲಿಯರ್ ವಿಜ್ಞಾನಿ", "ಅದರಪಕ್ಕದ್ದು?" "ಒಂದು ಕೋಟಿ", ಗುಂಡ ಬೆಚ್ಚಿಬಿದ್ದು "ಹಾ! ಯಾಕೆ ಅದೇನ್ ಮಾಡತ್ತೆ?" "ಅದೇನೂ ಮಾಡಲ್ಲ ಸುಮ್ಮನೆ ಕೂತಿರತ್ತೆ". "ಮತ್ತೆ ಅದಕ್ಯಾಕೆ ಕೋಟಿ ರೂ?" "ಏನಿಲ್ಲಾ ಅವೆರಡಕ್ಕೆ ಡೌಟ್ ಬಂದ್ರೆ ಇದನ್ನ ಕೇಳತ್ತೆ."
ಬಾಕ್ಸಿಂಗ್ ಪಟು ಮಹಮದ್ ಆಲಿ ಒಮ್ಮೆ ಅಮೇರಿಕಾದಲ್ಲಿ ವಿಮಾನ ಹತ್ತಿದ. ಗಗನ ಸಖಿ ಸೀಟ್ ಬೆಲ್ಟ್ ಹಾಕಲು ಹೇಳಿದಳು. ಅದಕ್ಕೆ ಆಲಿ"ಸೂಪರ್ ಮ್ಯಾನ್ ಗೆ ಸೀಟ್ ಬೆಲ್ಟ್ ಅಗತ್ಯವಿಲ್ಲ"ಎಂದ. ತಕ್ಷಣ ಆಕೆ" ಸೂಪರ್ ಮ್ಯಾನ್ ಗೆ ವಿಮಾನದ ಅಗತ್ಯವೇಕೊ?" ಎಂದು ಹಾಸ್ಯ ಮಾಡಿ ಗೆದ್ದಳು.
ಐವತ್ತಕ್ಕೇ ನಿವೃತ್ತನಾಗಿ ಮನೆಗೆ ಬಂದ ಗುಂಡನನ್ನು ಒಬ್ಬ ಕೇಳಿದ"ಇಷ್ಟು ಬೇಗ ರಿಟೈರ್ ಆಗಲು ಕಾರಣ ಏನು,ಕೆಲಸ ಬೇಜಾರಾಯ್ತ"ಎಂದು. ಗುಂ:ಹಾಗೇನಿಲ್ಲ ಮಾನಸಿಕರೋಗ,ಆರೋಗ್ಯದಲ್ಲಿ ತೊಂದರೆ,,,, "ಅಂಥದ್ದೇನಾಗಿದೆ ನಿಮಗೆ" ಗುಂ: "ಅರೇ ನನಗಲ್ಲ, ನನ್ನ ನೋಡಿದ್ರೆ ನನ್ನ ಯಜಮಾನರಿಗೇ..."
ಜುಜುಬಿ ರೌಡಿಯೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದ, ಕೋರ್ಟು-ಕೇಸು-ಲಾಯರ್ರು-ವಾದ ರೌಡಿಯ ಕಡೆ ಕ್ರಿಮಿನಲ್ ಲಾಯರ್ ಭಲೇ ಬುದ್ಧಿವಂತ,ವಾದದಲ್ಲಿ ಗೆದ್ದ. ತೀರ್ಪು:”ಈತ ಯಾವ ಆಭರಣವನ್ನೂ ಕದ್ದಿಲ್ಲ,ನಿರ್ದೋಷಿ,ಬಿಡುಗಡೆ ಮಾಡಿ" ಎಂದರು ರೌಡಿ:(ಸುಮ್ಮನಿರಲಾರದೆ) ಹಾಗಾದರೆ ಕದ್ದ ಚಿನ್ನಾಭರಣ ಎಲ್ಲಾ ನಂದೇನಾ?...
ಪಾರ್ಕ್ ಬಳಿ ಕಾರ್ ನಿಲ್ಲಿಸಿ ಗುಂಡ ಜೇಬಿನಿಂದ ಸಿಗರೇಟ್ ಪ್ಯಾಕ್ ತೆಗೆದು ಉಳಿದಿದ್ದ ಒಂದೇ ಸಿಗರೇಟನ್ನು ಬಾಯಲ್ಲಿಟ್ಟು, ಖಾಲೀ ಪ್ಯಾಕನ್ನು ಅಲ್ಲೇ ಎಸೆದ, ಒಬ್ಬಾಕೆ ಅದನ್ನು ಕಂಡು ”ಯಾಕೆ ಸಾರ್ ನಿಮಗಿದು ಬೇಡವಾ" ಎಂದಳು ಗುಂಡ ಸ್ಟೈಲಾಗಿ "ಉ ಹೂ ಬೇಡ"ಎಂದ ”ಹಾಗಿದ್ರೆ ನಮಗೂ ಬೇಡ" ಎಂದು ಗುಂಡನ ಕಾರಿನೊಳಕ್ಕೇ ಎಸೆದಳು ಆ ಮುನ್ಸಿಪಾಲಿಟಿ ಕೆಲಸದವಳು
ಕಲಾವಿದನ ಪರಿಚಯ ಮಾಡುತ್ತಾ"ಇವರು ಖ್ಯಾತ ಕಲಾವಿದರು...ಒಂದೇ ನಿಮಿಷದಲ್ಲಿ ನಗುವ ಮುಖವನ್ನು ಅಳುವಹಾಗೆ ಮಾಡಿ ಬಿಡುತ್ತಾರೆ" "ಏ ಅದೇನ್ ಮಹ ನನ್ನ ಹೆಡ್ತಿ ಒಂದೇ ಸೆಕೆಂಡ್ ನಲ್ಲಿ ಮಾಡ್ತಾಳೇ"
ಪರೀಕ್ಷೆಗೆ ಮುಂಚೆ ಕ್ರಿಕೆಟ್ ಆಡೋದು ಅಪರಾಧಾನಾ? ನೀನು ಆಡೋ ರೀತಿ ಕ್ರಿಕೆಟ್ ಯಾವಾಗ ಆಡಿದ್ರೂ ಅಪರಾಧನೇ
ಕಲಾಮಂದಿರದ ಮೆಟ್ಟಿಲಮೇಲೆ ಕೇಳಿ ಬಂದ ಸಂಭಾಷಣೆ -ನಾಟಕಗಳಲ್ಲಿ ಯಾಕೆ ಇಂಟರ್ ವೆಲ್ ಕೊಡಲ್ಲ ? -ಕೊಟ್ರೆ ಯಾರೂ ವಾಪಸ್ ಬರಲ್ಲ....
ಬಾರೊಂದರಲ್ಲಿ ಇಬ್ಬರು ಘಂಟೆ ಎರಡಾದರೂ ಕುಡಿಯುತ್ತಾ ಕುಳಿತಿದ್ದರು ಅದರಲ್ಲೊಬ್ಬ ಹೇಳಿದ:ಕುಡಿದಿದ್ದು ಸಾಕಪ್ಪಾ ಮನೇಗೆ ಹೋಗೋಣ ಇನ್ನೊಬ್ಬ: ಅರೆ ಇರು ಗುರು ನಾನಿನ್ನೂ ಟೈಟೇ ಆಗಿಲ್ಲ. ೧.”ಹಾಗಿದ್ರೆ ನೀನು ಟೈಟ್ ಆಗೋದು ಯಾವಾಗ?”" ೨.ಕಣ್ಣು ಮಿಟುಕಿಸಿ ನೋಡುತ್ತಾ ”ಎದುರು ಕುಳಿತಿರುವ ಆ ಇಬ್ಬರು ನಾಲ್ಕು ಜನರ ಹಾಗೆ ಕಾಣಿಸಿದ ತಕ್ಷಣ” ೧.ಮತ್ತೆ ಮತ್ತೆ ಕಣ್ಣು ಮಿಟುಕಿಸಿ ನೋಡಿದ, ಎದುರಿಗೆ ಇದ್ದದ್ದು ಒಬ್ಬನೇ !
"ನೀನು ಯಾಕೆ ರಜಾನೇ ತಗೋಳೊಲ್ಲ?" "ಆಫೀಸ್ ಬಿಟ್ಟಿರೋದು ಕಷ್ಟ" "ಯಾಕೆ ನೀನಿದ್ರೆ ಅಲ್ಲಿ ಕೆಲಸಾನೇ ಆಗೊಲ್ವಾ? "ಆಗುತ್ತೆ ಅನ್ನೋದು ಅವರಿಗೆ ಗೊತ್ತಾಗಬಾರ್ದು, ಅದಕ್ಕೆ"
ಬಹಳ ದಿನದ ನಂತರ ಬಾಲ್ಯ ಸ್ನೇಹಿತ ಗುಂಡನನ್ನು ಭೇಟಿಯಾದ,ಬಾರೋ ಗುಂಡು ಹಾಕೋಣ ಎಂದ” ಗು: ”ಇಲ್ಲಪ್ಪ ನಾನುಕುಡಿಯೋದು ಬಿಟ್ಟು ಯಾವುದೋಕಾಲವಾಯ್ತು”..."ಅರೆ ಸ್ವಲ್ಪ ಕಣೋ”... ಗು: ”ನೋಡೋ ನಾನು ಕುಡಿಯದೇ ಇರಕ್ಕೆ ೩ ಕಾರಣ” ೧.ನಾನು ಬಾಟಲ್ ಮುಟ್ಟಲ್ಲ ಅಂತ ದೇವರ ಮುಂದೆ ಆಣೆ ಮಾಡಿದ್ದೀನಿ ೨. ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಕುಡಿಯೋದಿಲ್ಲ ಅಂತ ಪ್ರತಿಜ್ಞೆ ಮಾಡಿದ್ದೀನಿ ಇನ್ನು ಮುಖ್ಯವಾಗಿ ಕಡೆದು.....ಏನಪ್ಪಾಂದ್ರೆ.......(ತೇಗುತ್ತಾ) ೩. ನಾನು ಈಗತಾನೇ ಕಂಠಪೂರ್ತಿ ಕುಡಿದು ಬರ್ತಿದ್ದೀನಿ
ಗುಂಡ ಊರ ಪಟೇಲರ ಮಗನಿಗೆ ಚೆನ್ನಗಿ ಬಾರಿಸಿ ಓಡಿ ಬಂದು ಮನೆ ಸೇರಿಕೊಂಡ. ಸರಿ ಪಟೇಲರು ಗುಂಡನ ಅಪ್ಪನಿಗೆ ದೂರು ಹೇಳಿದರು,ಮಗನನ್ನು ಕರೆದು ವಿಚಾರಿಸಿದರು ಅಪ್ಪ:ಯಾಕೋ ಪಟೇಲರ ಮಗನಿಗೆ ಹಾಗಿ ಬಾರಿಸಿದ್ದೀ? ಗು:ಮತ್ತೆ ಅವ ನನ್ನನ್ನ ಚಿಕ್ಕವನಾಗಿದ್ದಾಗ ಘೇಂಡಾಮೃಗ ಅಂತ ಕರೀತಿದ್ದ? ಅಪ್ಪ: ಏನೋ ಚಿಕ್ಕವನಾಗಿದ್ದಾಗ ಹಾಗೆ ಕರೆದಾಂತ ಈಗ.ಯಾಕೋ ಹೊಡೆದೇ? ಗು: ನಾನು ಮೊನ್ನೆ ತಾನೆ ಮೈಸೂರಿಗೆ ಹೋಗಿದ್ದಾಗ ಘೇಂಡಾಮೃಗ ನೋಡಿದೆ.....
ಭಾಷಣ ಮಾಡುತ್ತಿದ್ದಾಗ ನಿದ್ರೆ ಮಾಡುತ್ತಿದ್ದ ಬ್ರಿಟನ್ ಪ್ರಧಾನಿಯಾಗಿದ್ದ ವಿನ್ ಸ್ಟನ್ ಚರ್ಚಿಲ್ ಅವರನ್ನು ಕಂಡು ಭಾಷಣಕಾರ "ನಾನು ಭಾಷಣ ಮಾಡುವಾಗ ಪ್ರಧಾನಿ ನಿದ್ರೆ ಮಾಡುತ್ತಿದ್ದಾರೆ, ನಾನಿದನ್ನು ಅಕ್ಷೇಪಿಸುತ್ತೇನೆ" ಎಂದು ಆರ್ಭಟಿಸಿದ. ತಕ್ಷಣ ಕಣ್ಣುಬಿಟ್ಟು ಚರ್ಚಿಲ್ "ನಿದ್ರೆ ಬಂದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು" ಎಂದರು
ಬ್ರಿಟನ್ನಿನ ಸುಂದರ ವೇಶ್ಯೆಯೊಬ್ಬಳು, ನೋಡಲು ಕುರೂಪಿಯಾದ ಚರ್ಚಿಲ್ ಗೆ ಹೀಗೊಂದು ಪತ್ರ ಬರೆದಳು... ”ನಾನೊಬ್ಬ ಅತಿರೂಪ ಸುಂದರಿ,ನೀವೊಬ್ಬ ಅತಿ ಬುದ್ಧಿವಂತ ಪುರುಷ, ನಾವಿಬ್ಬರೂ ಮದುವೆಯಾದರೆ, ನನ್ನಂತಹ ರೂಪವುಳ್ಳ ಮತ್ತು ನಿಮ್ಮಂತಹ ಬುದ್ಧಿಯುಳ್ಳ ಮಗುಹುಟ್ಟಿದರೆ ಎಷ್ಟು ಚೆನ್ನ? ಬನ್ನಿ ವಿವಾಹವಾಗೋಣ” ಚರ್ಚಿಲ್ ಉತ್ತರಿಸಿದರು "ಆದರೆ ಅದು ಹಾಗಾಗದೆ, ನನ್ನಂತಹ ರೂಪ ನಿನ್ನಂತಹ ಬುದ್ಧಿಯುಳ್ಳ ಮಗುವಾದರೆ?"
ಹೆಂಡತಿಗೆ ಡ್ರೈವಿಂಗ್ ಕಲಿಸಿಕೊಡುವ ಮುನ್ನ ಗಂಡ ವಿವರಿಸಲು ಹೊರಟ ”ನೋಡು ಚಿನ್ನಾ ಇದು ಕ್ಲಚ್ಚು,ಇದು ಬ್ರೇಕೂ,ಇದು ಅಕ್ಸ್ಲ್ ಲೇಟರ್ರು,ಇದು ಹಾರನ್ನ” ಹೆಂಡತಿ: (ರೇಗಿ) ರೀ ಅದೆಲ್ಲಾ ಇರಲಿ ಮೊದಲು ಡ್ರೈವಿಂಗ್ ಕಲಿಸಿರಿ
ಆಸೆಯಿಂದ ವಿದೇಶಕ್ಕೆ(ಲಂಡನ್) ವಿಮಾನದಲ್ಲಿ ಹೊರಟ ರಾಂಪಣ್ಣನಿಗೆ ಆಕಾಶದಲ್ಲಿ ಪಾಯಕಾನೆಗೆ ಅವಸರವಾಯ್ತು ! ಟಾಯ್ಲೆಟ್ ಬಳಸಲು ಬಾರದು, ಸರಿ ಒಂದು ಪ್ಲಾಸ್ಟಿಕ್ ಚೀಲದಲ್ಲೇ ಮಾಡಿದ, ಅದೇದಿನ ಲಂಡನ್ ಪೋಲೀಸರಿಗೆ ವಿಮಾನದಲ್ಲಿ ಒಂದೂವರೆ ಕೇ.ಜಿ.ಡ್ರಗ್ಸ್ ಸ್ಮಗ್ಲಿಂಗ್ ಅಗುತ್ತಿರುವ ಸುದ್ದಿ! ರಾಂಪಣ್ಣ ವಿಮಾನದಿಂದ ಇಳಿದಕೂಡಲೆ ಎಲ್ಲರಂತೆ ಇವನಿಗೂ ತಪಾಸಣೆ.ರಾಂಪಣ್ಣ ಪ್ಲಾಸ್ಟಿಕ್ ಚೀಲ ಕೊಡಲು ನಿರಾಕರಿಸಿದ ಸರಿ ಎಳೆದು ಒಯ್ದರು,ರಿಮಾಂಡು,ಚೀಲ ತೂಕ ಮಾಡಿದರು, ಒಂದು ಕೇ.ಜಿ.ಇದೆ ಸರಿ ಇನ್ನರ್ಧ ಎಲ್ಲಿ? ಅಯ್ಯೋ ನನ್ನ ಕೈಲಾದದ್ದು ಇಷ್ಟೆ ಮಾರಯ್ರೆ, ಹಿಂಸೆ! ಇನ್ನರ್ಧ ಕೇ.ಜಿ ಎಲ್ಲಿ? ರಾಂಪಣ್ನನಿಂದ ಅದೇ ಉತ್ತರ.ಮತ್ತೆ ಅದೇ ಪ್ರಶ್ನೆ ಇನ್ನರ್ಧ ಕೇ.ಜಿ ಎಲ್ಲಿ? ಮತ್ತದೇ ಉತ್ತರ, ಕಡೆಗೆ ತಪ್ಪು ತಿಳಿದು ವಾಪಸ್ ಡಿಪೋರ್ಟ್ ಕೆಲವು ದಿನಗಳ ಬಳಿಕ ರಾಂಪಣ್ನ ಬೇಸರದಿಂದ ಜಗಲಿಯಲ್ಲಿ ಕುಳಿತಿದ್ದ, ಗೆಳೆಯನೊಬ್ಬ ತಾನೂ ಲಂಡನ್ನಿಗೆ ಹೋಗುವ ಖುಷಿ ಸುದ್ದಿ ಹೇಳಿದ. ರಾಂಪಣ್ನ: ಓಯ್ ಲಂಡನ್ನಿಗೆ ಹೋಗುವುದಾ? ಸರಿಯಾಗಿ ಒಂದೂವರೆ ಕೇ.ಜಿ.ಮಾಡಲಿಕ್ಕೆ ಆದರೆ ಮಾತ್ರ ಹೋಗಿ ಮಾರಾಯರೆ!
ಸರದಾರ್ ಜೂಸ್ ಬಾಟಲನ್ನೆ ಬಹಳ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದದ್ದನ್ನು ಕಂಡು ಮತ್ತೊಬ್ಬ ಯಾಕೆಂದು ಕೇಳಿದ.ಅದಕ್ಕೆ ಸರ್ದಾರ್ ಹೇಳಿದ `ಅದರಮೇಲೆ CONCENTRATE ಅಂತ ಬರೆದಿದೆ?`
ನ್ಯಾಯಾಧೀಶ: ಹೋಗೀ ಹೋಗೀ ದೇವಸ್ಥಾನಕ್ಕೇ ಕನ್ನ ಹಾಕಿದ್ಯಲ್ಲಯ್ಯಾ? ಕಳ್ಳ: ಅಂಗಲ್ಲ ಸಾಮೀ, ಯಾವ್ದಾದ್ರೂ ಕೆಲ್ಸ ಸುರು ಮಾಡೋವಾಗ ದೇವ್ರಿಂದಾ ತಾನೇ ಸುರು ಅಚ್ಕೋಬೇಕೂ?
ಹೆಂ: ( ಮಧ್ಯ ರಾತ್ರಿ) ರೀ ಏನೋ ಶಬ್ಧ ಆಯ್ತು, ಅಲ್ಲ ಕಳ್ಳ ಏನಾದ್ರೂ,,,?!!! (ಸೋಮಾರಿ) ಗಂ: ಏ ಕಳ್ಳ ಬಂದ್ರೆ ಶಬ್ಧ ಎಲ್ಲಿ ಮಾಡ್ತಾನೆ? ಸುಮ್ನೆ ಮಲ್ಕೊಳೇ,,,, (ತುಸು ನಿಮಿಷದ ಬಳಿಕ) ಹೆಂ: ರೀ ಈಗ ನೋಡಿ ಶಬ್ಧಾನೇ ಬರ್ತಿಲ್ಲಾ? ಕಳ್ಳ ಬಂದಿರ್ಬೇಕು ಎದ್ದು ಹೋಗಿ ನೋಡ್ರಿ!
ವೈದ್ಯ: ಇವೆಲ್ಲಾ ತಿಂದ್ರೆ ಡಯಟ್ಟೂ ಅಲ್ಲ ಮೈ ತೂಕಾನೂ ಇಳಿಯಲ್ಲ. ಇನ್ಮೇಲೆ ಬರೀ ಚಪಾತಿ, ತರಕಾರಿ, ಹಣ್ಣು, ಸ್ಕಿಮ್ ಮಿಲ್ಕ್, ಸಕ್ಕರೆ ಇಲ್ಲದ ಸ್ವೀಟ್ಸ್!!! ತಿನ್ಬೇಕು ತಿಳೀತಾ? ರೋಗಿ: ಹೂ ಡಾಕ್ಟರ್, ಅದ್ಸರೀ ಇದೆಲ್ಲಾ ಊಟಕ್ಕೆ ಮೊದಲು ತಿನ್ಬೇಕಾ ಅಥವಾ ಆಮೇಲೋ?*!*?! ಮುಂದುವರೆಯುವುದು...
To be continued...