ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 
ಮಕ್ಕಳ ಕ್ಯಾರೆಯೋಕೆ ವರ್ಕ್ ಶಾಪ್ picture

ಮಕ್ಕಳ ಕ್ಯಾರೆಯೋಕೆ ವರ್ಕ್ ಶಾಪ್


ಸ್ನೇಹಿತರೇ,ಕಳೆದ ಡಿಸೆಂಬರ್ ೨೩ ರಂದು ಸುಗಮಕನ್ನಡ ಹಮ್ಮಿಕೊಂಡಿದ್ದ ಸುಗಮ ಚಿಣ್ಣರ ಲೋಕದ ಮೊಟ್ಟಮೊದಲ ಕಾರ್ಯಕ್ರಮ ಮಕ್ಕಳ ಕ್ಯಾರೆಯೋಕಿ ವರ್ಕ್ ಶಾಪ್ ಯಶಸ್ವಿಯಾಗಿಯೂ, ಮಕ್ಕಳಿಗೆ ಬಹಳ ಉಪಯುಕ್ತವಾಗಿಯೂ, ನಡೆಸಿಕೊಟ್ಟ ಶ್ರೀಮತಿ.ಪುಷ್ಪಾ ಜಗದೀಶ್ ರವರಿಗೆ ಉತ್ಸಾಹ ತರುವಂತಾಗಿಯೂ, ಪೋಷಕರಿಗೆ ಮನರಂಜನೆಯಾಗಿಯೂ, ಸಮಿತಿಯವರಿಗೆ ಪ್ರೋತ್ಸಾಹ ನೀಡಿತು.ಮಕ್ಕಳ ಪರಿಚಯ, ಅವರ ಆಸೆ ಆಕಾಂಕ್ಷೆಗಳನ್ನು ಅವರೊಂದಿಗೆ ಹಂಚಿಕೊಂಡು, ಕೆಲವು ಸರಳ ಸಂಗೀತ ಸ್ವರಗಳ ಅಭ್ಯಾಸದೊಂದಿಗೆ ಶುರುಮಾಡಿ ಮಕ್ಕಳೊಡನೆ ಬಲು ಬೇಗ ಸ್ನೇಹದಿಂದ ಬೆರೆತ ಶ್ರೀಮತಿ.
ಪುಷ್ಪಾ `ವರ್ಕ್ ಶಾಪ್' ನ ಮುಂದಿನ ನಾಕು ತಾಸುಗಳನ್ನು ಸೊಗಸಾಗಿ ನಿರ್ವಹಿಸಿ ಮಕ್ಕಳು ತಾವು ಕಲಿತಿದ್ದ ಹಾಡುಗಳನ್ನು ಹಾಡಿಸಿ ಕೆಲವು ಸಲಹೆಗಳನ್ನಿತ್ತರು. ಮಕ್ಕಳು ಅವನ್ನು ಅಳವಡಿಸಿಕೊಡದ್ದು ಮುಂದೆ ಜ.೫ ರಂದು ನಡೆದ ಕಾರ್ಯಕ್ರಮದಲ್ಲಿ ಅರಿವಾಯಿತು.  ಭೋಜನ ವಿರಾಮದಲ್ಲಿ ಶ್ರೀಮತಿ.ಪುಷ್ಪಾ ತಾವು ಸಂಗೀತಲೋಕದಲ್ಲಿ ನಡೆದು ಬಂದ ದಾರಿ, ಸಾಧನೆ, ಪ್ರಶಸ್ತಿ-ಪ್ರಶಂಸೆಗಳ ಪ್ರತಿಬಿಂಬಿಸುವ ಭಾವಚಿತ್ರಗಳ ವಿವರಣೆ, ಗಣ್ಯರೊಡಗಿನ ಒಡನಾಟ ಎಲ್ಲವನ್ನೂ ಮಕ್ಕಳ ಜೊತೆ ಪೋಷಕರಿಗೂ ಪರಿಚಯಿಸಿದ್ದು ಆ ದಿನದ ವಿಶೇಷವೆನಿಸಿತು.
                  ಊಟದ ನಂತರ ಈ ರೀತಿಯ ಅಪರೂಪದ `ವರ್ಕ್ ಶಾಪ್' ಗೆ ಬಂದ ಮಕ್ಕಳಿಗೆ ಏನಾದರೊಂದು ವಿಶೇಷ ಕೊಡುಗೆ ನೀಡುವ ನಿಟ್ಟಿನಲ್ಲಿ ಸೊಗಸಾದ `ನಡೆದಿದೆ ಪೂಜಾರತಿ ವಿಶ್ವದೇವಿಗೆ' ಗೀತೆಯನ್ನು ಅಭ್ಯಾಸ ಮಾಡಿಸುವುದರೊಂದಿಗೆ ಮುಗಿಸಿದರು.ಸುಗಮ ಕನ್ನಡ ಸಮಿತಿಯ ಪರವಾಗಿ ಕನಕಾಪುರ ನಾರಾಯಣ ಅವರು ಶ್ರೀಮತಿ.ಪುಷ್ಪಾ, ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೂ ಧನ್ಯವಾದ ಸಮರ್ಪಿಸಿದರು

ಕಾರ್ಯಕ್ರಮಗಳ ಪಟ್ಟಿಗೆ ಹಿಂತಿರುಗು


ಇತ್ತೀಚಿನ ಕಾರ್ಯಕ್ರಮಗಳು

pictureಸಿಡ್ನಿ ನಾಟಕೋತ್ಸವ
pictureಸಿಡ್ನಿ ದಸರಾ/ರಾಜ್ಯೋತ್ಸವ ಹಾಡು ಹಸೆ ಹಬ್ಬ
pictureಕನ್ನಡ ಸಾಹಿತ್ಯ ಸಂಗಮ
pictureಸಿಡ್ನಿ ಯುಗಾದಿ ಹಬ್ಬ 2015
pictureಸಿಡ್ನಿ ದಸರಾ ಬೊಂಬೆ ಹಬ್ಬ ಮತ್ತು ಸಂಗೀತ ಸಂಜೆ
pictureಕನ್ನಡ ಕ್ಯಾರೆಯೋಕೆ ಸಂಜೆ ಮತ್ತು ಶ್ರೀಯುತ ಸುದರ್ಶನ್ ಅವರಿಗೆ ಸನ್ಮಾನ
pictureಸಿಡ್ನಿ ಯುಗಾದಿ ಆಚರಣೆ 2014
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಪಿ ಬಿ ಶ್ರೀನಿವಾಸ್ ಶ್ರದ್ಧಾಂಜಲಿ
 
 

© ಹಕ್ಕುಸ್ವಾಮ್ಯ 2008 - 2022