ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತರಕಾರಿ ಗಟ್ಟಿ ಬಜೆ

ಬೇಕಾಗುವ ಸಾಮಗ್ರಿಗಳು

  • ಸಣ್ಣಗೆ ಹೆಚ್ಚಿದ ಬೆಂಡೇಕಾಯಿ/ಅಲಸಂದೆ ನಾಲ್ಕು ಲೋಟ
  • ಹೆಚ್ಚಿದ ಹಸಿಮೆಣಸಿನಕಾಯಿ ನಾಲ್ಕು
  • ಎರಡು ಚಿಟಿಕೆ ಇಂಗು
  • ಕಡಲೆಹಿಟ್ಟು ಎರಡು/ಮೂರು ಲೋಟ
  • ರುಚಿಗೆ ಉಪ್ಪು
  • ಕರಿಯಲು ಎಣ್ಣೆ

ಮಾಡುವ ವಿಧಾನ

  • ಹೆಚ್ಚಿದ ತರಕಾರಿ, ಹಸಿಮೆಣಸನ್ನು ಉಪ್ಪಿನೊಂದಿಗೆ ಕಲಸಿಟ್ಟುಕೊಳ್ಳಿ.
  • ಇಂಗು ಬೆರೆಸಿ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ ನೀರಾಗದಂತೆ ಕಲಸಿ.
  • ಬಾಣಲೆಯಲ್ಲಿ ಬಿಸಿಯಾದ ಎಣ್ಣೆಗೆ ಹಿಟ್ಟು-ತರಕಾರಿ ಮಿಶ್ರಣವನ್ನು ನಿಂಬೇಗಾತ್ರ ಬಿಡಿಬಿಡಿಯಾಗಿ ಎಣ್ಣೆಗೆ ಬಿಡಿ
  • ಕೆಂಪಗಾದ ನಂತರ ತೆಗೆದು, ಆರಿಸಿ ಉಣಬಡಿಸಿ

*** ಬೆಂಡೆ/ಅಲಸಂದೆ ಬದಲು ಹೀರೇಕಾಯಿ/ಬಾಳೇಕಾಯಿ ಸಿಪ್ಪೆ ಉಪಯೋಗಿಸಿ ಗಟ್ಟಿಬಜೆ ಮಾಡಬಹುದು

 

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ
ಬಜ್ಜಿಗಳು
 
 

© ಹಕ್ಕುಸ್ವಾಮ್ಯ 2008 - 2023