ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ಬೇಕಾಗುವ ಸಾಮಗ್ರಿಗಳು
ಹುರಳಿಕಾಳು1 ಲೋಟ
ಹೆಸರುಕಾಳು 1ಲೋಟ
ತೊಗರಿಬೇಳೆ 1ಲೋಟ
ಹುಣಸೇಹಣ್ಣು ನಿಂಬೆ ಗಾತ್ರ
ಬೆಲ್ಲ ಅರ್ಧ ನಿಂಬೆ ಹಣ್ಣೀನ ಗಾತ್ರ
ಮೆಣಸಿನ ಪುಡಿ(ಸಾರಿನ ಪುಡಿ)-4ಚಮಚ
ತೆಂಗಿನ ತುರಿ ಒಂದು ಹೋಳು
2ಚಮಚ ತುಪ್ಪ
ಒಗ್ಗರಣೆಗೆ ಸಾಸಿವೆ ಜೀರಿಗೆ
ಇಂಗು
ಮಾಡುವ ವಿಧಾನ
ಹುರಳಿಕಾಳು ಮತ್ತು ಹೆಸರುಕಾಳನ್ನು 1ರಾತ್ರಿ ನೆನೆಹಾಕಿ,ಚೆನ್ನಾಗಿ ತೊಳೆದು,ಬಟ್ಟೆಯಲ್ಲಿ ಕಟ್ಟಿ ಒಂದು ದಿನ ಇಟ್ಟರೆ ಮೊಳಕೆ ಬರುತ್ತದೆ
ಮೊಳಕೆ ಬಂದ ಕಾಳಿಗೆ 1ಚಮಚ ತುಪ್ಪ ಹಾಗೂ ತೊಗರಿಬೇಳೆ ಸೇರಿಸಿ ಕುಕ್ಕರ್ನಲ್ಲಿ ಬೇಯಿಸಿ
ಮಿಕ್ಕ ಮೆಣಸಿನಪುಡಿ,ತೆಂಗಿನತುರಿ,ಉಪ್ಪುಹುಣಸೇಹಣ್ಣು ಜೊತೆಗೆ1 ಸೌಟು ಬೆಂದ ಕಾಳು ಬೇಳೆಯನ್ನು ಸೇರಿಸಿ ರುಬ್ಬಿಕೊಳ್ಳಿ
ರುಬ್ಬಿದ ಸಾಮಗ್ರಿಯನ್ನೂ ಮತ್ತು ಬೆಲ್ಲವನ್ನುಮಿಶ್ರಣಕ್ಕೆ ಹಾಕಿ ಕುದಿಸಿ
ಚೆನ್ನಾಗಿ ಕುದ್ದ ನಂತರ ತುಪ್ಪ ಇಂಗು ಜೀರಿಗೆ,ಸಾಸಿವೆ ಒಗ್ಗರಣೆ ಕೊಡಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತೊಗರಿಬೇಳೆ ಸಾರು
ಮೆಣಸಿನ ಸಾರು
ನಿಂಬೆಕಾಯಿ ಸಾರು
ಅವರೇಕಾಳು ಸಾರು
ಹುರಳಿ ಸಾರು