ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹುರಳಿ ಸಾರು

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ಹುರಳಿ
  • ಅರ್ಧ ತೆಂಗಿನ ಕಾಯಿ ತುರಿ
  • ಒಂದು ಚಮಚ ಜೀರಿಗೆ
  • ನಿಂಬೆ ಗಾತ್ರ ಹುಣಸೇ ಹಣ್ಣು
  • ಐದಾರು ಒಣ ಮೆಣಸಿನ ಕಾಯಿ
  • ಒಂದು ಸಣ್ಣ ಸೌಟಿನಷ್ಟು ಕೊತ್ತಂಬರಿ ಬೀಜ
  • ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ

ಮಾಡುವ ವಿಧಾನ

  • ಹುರಳಿಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ.
  • ಕಾಯಿತುರಿ,ಕೊತ್ತಂಬರಿ ಬೀಜ,ಜೀರಿಗೆ ಜೊತೆಗೆ ಬೆಂದ ಕಾಳನ್ನೂ ಸ್ವಲ್ಪ ಬೆರೆಸಿ ರುಬ್ಬಿಕೊಳ್ಳಿ
  • ಬೆಂದ ಕಾಳಿಗೆ ಮಿಶ್ರಣವನ್ನು ಬೆರೆಸಿ ಉಪ್ಪು ಸೇರಿಸಿ ಗೊಟಾಯಿಸಿ.
  • ಹುಣಸೇ ರಸವನ್ನು ಬೆರೆಸಿ, ಒಗ್ಗರಣೆ ಹಾಕಿ ಒಲೆ ಆರಿಸಿ. 

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೆಂತ್ಯದ ಸಾರು
ಅವರೇಕಾಳು ಸಾರು
ನಿಂಬೆಕಾಯಿ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ಮೆಣಸಿನ ಸಾರು
 
 

© ಹಕ್ಕುಸ್ವಾಮ್ಯ 2008 - 2025