ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕೇಸರಿ ಬಾದಾಮ್ ಕುಲ್ಫಿ

ಬೇಕಾಗುವ ಸಾಮಗ್ರಿಗಳು

  • ಹಾಲಿನ ಪುಡಿ 50ಗ್ರಾಂ
  • ನೀರು ಅರ್ಧ ಲೀಟರ್
  • ಜೋಳದಹಿಟ್ಟು 1 ಚಮಚ
  • ಖೋವಾ50 ಗ್ರಾಂ
  • ಕೇಸರಿ 1ಚಿಟಿಕೆ
  • ಹತ್ತು ಬಾದಾಮಿ ಚೂರು
  • ಸಕ್ಕರೆ 75ಗ್ರಾಂ
  • ಐಸ್ ಕ್ರೀಮ್ ಎರಡು ಕಪ್

ಮಾಡುವ ವಿಧಾನ

  • ನೀರಿನೊಂದಿಗೆ ಹಾಲಿನ ಪುಡಿ ಬೆರೆಸಿ,ಸಕ್ಕರೆ ಕೇಸರಿ ಸೇರಿಸಿ ಹತ್ತು ನಿಮಿಷ ಕುದಿಸಿ
  • ಖೋವಾ ಮತ್ತು ಬಾದಾಮಿಯನ್ನು ಹಾಕಿ ಮತ್ತೆ ಹತ್ತು ನಿಮಿಷ ಕುದಿಸಿ
  • ಜೋಳದ ಹಿಟ್ಟನ್ನು ಮೂರು ಚಮಚ ನೀರಿನಲ್ಲಿ ಬೆರೆಸಿ,ಐಸ್ ಕ್ರೀಮ್ ಅನ್ನೂ ಮಿಶ್ರಣಕ್ಕೆ ಸೇರಿಸಿ ಮತ್ತೆ ಹತ್ತು ನಿಮಿಷ ಕುದಿಸಿ
  • ಒಲೆಯ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ
  • ಅಗಲವಾದ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಅರ್ಧಗಂಟೆ ಇಟ್ಟು ಬೇಕಾದ ಅಕಾರಕ್ಕೆ ಕತ್ತರಿಸಿ ಕಡ್ಡಿ ಚುಚ್ಚಿಡಿ
  • ಮತ್ತೆ ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟು ತಿನ್ನಲು ಕೊಡಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆ ಐಸ್ ಕ್ರೀಮ್ ವಿಭಾಗದ ಮತ್ತಷ್ಟು ಪಾಕವಿಧಾನಗಳು

ವೆನಿಲಾ ಐಸ್ ಕ್ರೀಮ್
ಚಾಕಲೇಟ್ ಐಸ್ ಕ್ರೀಮ್
ಪಿಸ್ತ ಕುಲ್ಫಿ
ವೆನಿಲಾ ಐಸ್ ಕ್ರೀಮ್
ಚಾಕಲೇಟ್ ಐಸ್ ಕ್ರೀಮ್
 
 

© ಹಕ್ಕುಸ್ವಾಮ್ಯ 2008 - 2025