ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೂಂದಿ ರಾಯತ

ಬೇಕಾಗುವ ಸಾಮಗ್ರಿಗಳು

  • ಗಟ್ಟಿಮೊಸರು ಎರಡು ಲೋಟ
  • ಅರ್ಧ ಲೋಟ ಹಾಲು
  • ಬೂಂದಿ ಒಂದು ಲೋಟ
  • ಉಪ್ಪು ರುಚಿಗೆ
  • ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ,ನಾಲ್ಕಾರು ಕರಿಬೇವು ಎಲೆ
  • ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು 

ಮಾಡುವ ವಿಧಾನ

  • ಮೊಸರು ಕಡೆದು ಹಾಲು ಬೆರೆಸಿ ಚೆನ್ನಾಗಿ ಕಡೆಯಿರಿ, ಉಪ್ಪು ಹಾಕಿ
  • ಬೂಂದಿಯನ್ನು ನೀರಿನಲ್ಲಿ ಐದು ನಿಮಿಷ ನೆನೆಸಿ ಹಿಂಡಿ(ಮೃದುವಾಗಿ) ನೀರು ತೆಗೆದು,ಮೊಸರು ಬೆರೆಸಿ
  • ಒಗ್ಗರಣೆ ಹಾಕಿ ಮಿಶ್ರಣಕ್ಕೆ ಬೆರೆಸಿ
  • ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಅದಕ್ಕೆ ಸೇರಿಸಿ
  • ಮೆಣಸಿನ ಪುಡಿ ಅಥವಾ ಸಾರಿನ ಪುಡಿ ಚಿಟಿಕೆ ಬೆರೆಸಿದರೆ ರುಚಿ ಹೆಚ್ಚು

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬದನೆಕಾಯಿ ಬಜ್ಜಿ(ರಾಯತ)
ಖರ್ಜೂರದ ರಾಯತ
ಈರೂಳ್ಳಿ ರಾಯತ
ಮೂಲಂಗಿ ರಾಯತ
ಅನಾನಸ್(ಪೈನಾಪಲ್) ರಾಯತ
 
 

© ಹಕ್ಕುಸ್ವಾಮ್ಯ 2008 - 2025