ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹುಳಿವಡೆ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು

  • ಕುಸುಬಲಕ್ಕಿ ಒಂದುಲೋಟ
  • ತುರಿದು ಬೇಯಿಸಿದ ಸಿಹಿಕುಂಬಳ ಕಾಯಿ ಹೋಳು ಒಂದುಲೋಟ
  • ಒಣಮೆಣಸಿನಕಾಯಿ ಹತ್ತು
  • ಹುಣಸೇಹಣ್ಣು ನೆಲ್ಲಿಕಾಯಿ ಗಾತ್ರ
  • ಉಪ್ಪು ಒಂದೂವರೆ ಚಮಚ
  • ಹೆಚ್ಚಿದ ಕೊತ್ತಂಬರಿ ಒಂದು ಕಂತೆ
  • ಕರಿಬೇವಿನೆಲೆ ಎರಡು ಚಮಚ
  • ಕಡಲೇಬೇಳೆ ಎರಡು ಚಮಚ
  • ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು
  • ಹಿಂಗಿ ಎರಡು ಚಿಟಿಕೆ

ಮಾಡುವ ವಿಧಾನ

  • ಅಕ್ಕಿ ಬೆಚ್ಚಗಿನ ನೀರಿನಲ್ಲಿ ಒಂದು ಘಂಟೆ ನೆನೆಸಿ.ಹಾಗೇ ಕಡಲೇಬೇಳೆಯನ್ನೂ ಬೇರೆ ಬಟ್ಟಲಿನಲ್ಲಿ ನೆನೆಸಿಡಿ
  • ನೆಂದ ಅಕ್ಕಿಗೆ ಮೆಣಸಿನಕಾಯಿ,ಸಿಹಿಕುಂಬಳ ಕಾಯಿ,ಹುಣಸೆ,ಉಪ್ಪು ನೀರಿಲ್ಲದೇ ನುಣ್ಣಗೆ ರುಬ್ಬಿ
  • ಅದಕ್ಕೆ ಕಡಲೇಬೇಳೆ,ಕೊತ್ತಂಬರಿ,ಕರಿಬೇವು,ಹಿಂಗು ಸೇರಿಸಿ ಗಟ್ಟಿಯಾಗಿ ಕಲಸಿ
  • ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ
 
 

© ಹಕ್ಕುಸ್ವಾಮ್ಯ 2008 - 2023