ಭಾಷೆ ಎನ್ನುವುದು ವ್ಯಕ್ತಿಯ ಅಂತರಂಗದ ಭಾವ-ಭಾವನೆ, ಅನಿಸಿಕೆ , ಆಲೋಚನೆ ಮತ್ತು ಮನೋವರ್ತನೆ ವ್ಯವಸ್ಥಿತ ರೀತಿಯಲ್ಲಿ ಧ್ವನಿಸಂಕೇತಗಳ ಮೂಲಕ ಸಂವಹಿಸುವ ವ್ಯವಸ್ಥೆ.ಬದುಕಿನ ಸಹಜತೆ,ನಾಡಿನ ಒಗ್ಗಟ್ಟು,ಪರಂಪರೆಯ ಜೀವನ,ಸಮುದಾಯದ ಮೇಲ್ಮೆ, ಪ್ರಾಂತೀಯ ಮಹತ್ವ,ಚಾರಿತ್ರ್ಯ ಮೌಲ್ಯ , ಶಿಷ್ಟತೆ ಉಳಿಸಿ ಬೆಳೆಸಿ ಕಾಪಾಡುವುದೇ ಭಾಷೆ.ಮಗುವಿನ ಜೀವನದ ಅವಿಭಾಜ್ಯ ಅಂಗವೇ ಭಾಷೆ.
ನಮ್ಮ ಕನ್ನಡ, ಕಲಿಯಲು ಮತ್ತು ಕಲಿಸಲು ಸಂಕೀರ್ಣವಾದ ಭಾಷೆ . ಈ ಭಾಷೆಯಲ್ಲಿ ಈಗ ೪೯ ಅಕ್ಷರಗಳು ಮಾತ್ರ ಬಳಕೆಯಲ್ಲಿದೆ . ಗುಣಿತಾಕ್ಷರಗಳು , ಒತ್ತಕ್ಷರಗಳು , ಸಂಯುಕ್ತಾಕ್ಷರಗಳು ಹಾಗೂ ಉತ್ತಮ ವ್ಯಾಕರಣಗಳಿಂದ ಕೂಡಿದ ಶ್ರೀಮಂತ ಭಾಷೆಯಿದು . ಈ ಭಾಷೆಯನ್ನು ಮಕ್ಕಳಿಗೆ ಕಲಿಸುವಾಗ ಅನೇಕ ಗೊಂದಲಗಳು ಉಂಟಾಗುತ್ತದೆ . ಈ ಗೊಂದಲಗಳೇ ನಮಗೆ ಸ್ಫೂರ್ತಿಯನ್ನು ನೀಡಿ ಈ ಭಾಷೆಯನ್ನು ಇನ್ನೂ ಸುಗಮ, ಸರಳ , ಸುಲಭವಾಗಿಸಬೇಕೆಂಬ ಚಿಂತನೆಯಲ್ಲಿ ತೊಡಗಿಸುವಂತೆ ಮಾಡಿದೆ . ಇದಕ್ಕಾಗಿ ಮಕ್ಕಳು ಬಹು ಬೇಗ ಕನ್ನಡ ಕಲಿಯಲು ನೆರವಾಗುವಂತೆ ವಿಧಾನಗಳು ಮೂಡಿದವು . ಅದರಿಂದಾಗಿ ಕೆಲವು ವಿದ್ಯಾರ್ಥಿಗಳು ಸಫಲರಾಗಿ ಮೊದಲ ಹಂತವನ್ನು ದಾಟಿರುವುದೇ ಸಾಕ್ಷಿ. ಕನ್ನಡ ಕಲಿಕೆಗೆ ಮಕ್ಕಳ ಆಸಕ್ತಿಯಷ್ಟೇ ಪೋಷಕರ ಪ್ರೋತ್ಸಾಹ , ಸಹಕಾರ ಅಷ್ಟೇ ಮುಖ್ಯ.
ಇಂತಿ - ಶಾಲೆಯ ಉಪಾಧ್ಯಾಯರುಗಳು .
ಕಂಪೂಟರ್ ಯುಗದಲ್ಲಿ ನಮ್ಮ ಕನ್ನಡವನ್ನು ಇತ್ತೀಚಿನ MS Office Software ಗಳಲ್ಲಿನ ಫಾಂಟ್ನಲ್ಲಿ ಅಳವಡಿಸಿರೋದು ಎಲ್ಲರಿಗೂ ತಿಳಿದ ವಿಷಯವೇ ಸರಿ ! ಹಾಗೇ ನಮ್ಮ ಶಾಲೇನಲ್ಲೂ ಮಕ್ಕಳಿಗೆ ಕನ್ನಡ ಕಲಿಸಲು ಕಂಪ್ಯೂಟರ್ ಬಳಸುತ್ತಿರುವುದು ತಮಗೆಲ್ಲಾ ತಿಳಿದಿರಲಿ .
ಆಶ್ಚರ್ಯವೆಂದರೆ ! ಕನ್ನಡ ಲಿಪಿ ಒಂದೂವರೆ ಎರಡು ಸಾವಿರ ವರ್ಷಕ್ಕೂ ಹಳೆಯದು ಅಲ್ಲವೇ? ಪ್ರಪಂಚದೆಲ್ಲೆಡೆ ಗುರುತಿಸಿದರೆ ಸುಮಾರು ೫೦ಮಿಲಿಯನ್ನಿಗೂ ಮೀರಿ ಕನ್ನಡ ಬಲ್ಲವರಿದ್ದಾರೆ . ಕ್ರಿ.ಪೂ.೩ನೇ ಶತಮಾನದ ಮೌರ್ಯರು, ಕ್ರಿ . ಶ.೨ರ ಶಾತವಾಹನರು ನಂತರದ ಪಲ್ಲವರು, ಕದಂಬರು, ಗಂಗರು,ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದರಸರು, ಬಹಮನಿ ಸುಲ್ತಾನರು, ಮೈಸೂರಿನ ಒಡೆಯರು ಹಾಗೂ ಇನ್ನೂ ಅನೇಕರು ಆಳಿದ-ಆಡಿದ ಕನ್ನಡ ನಮ್ಮದು . ಕಲೆ, ವಾಸ್ತುಶಿಲ್ಪ, ಸಂಗೀತ , ಸಾಹಿತ್ಯ ಕನ್ನಡಿಗರ ಉಸಿರು . ಗಂಧ , ಚಿನ್ನ ಮತ್ತು ಮಲೆನಾಡಿನ ಹಸಿರಿಗೆ ಹೆಸರು . . . ಹೀಗಿರುವಾಗ ಕನ್ನಡಿಗರೇ ಕನ್ನಡ ಕಲಿಯಲು ಹಿಂಜರಿಯುತ್ತಿರುವುದು, ಏನಾದರೊಂದು ನೆಪ ಹೇಳಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಆಶ್ಚರ್ಯವೂ ಅಲ್ಲದೆ ಸೋಜಿಗವೂ ಅಲ್ಲವೆ ?
ನೀವು ಪ್ರಪಂಚದ ಯಾವುದೇ ಭಾಗದಲ್ಲಿದ್ದು, ನಿಮಗೆ ಉಚಿತ ಕನ್ನಡ ಕಲಿಸುವ ಕಲಿಯುವ ಆಸಕ್ತಿ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ. ಸಿಡ್ನಿಯಲ್ಲಿ ನಮ್ಮ ಕನ್ನಡ ಶಾಲೆಗಳ ವಿವರ
ಪ್ರತಿ ಶನಿವಾರ ಮಧ್ಯಾಹ್ನ 3 ರಿಂದ 5 ಘಂಟೆಯ ವರೆಗೆ | |
Wattle Grove Public School, Cressbrook Drive, Wattlegrove NSW 2173 | |
ಶ್ರೀ ಕನಕಾಪುರ ನಾರಾಯಣ +61 423 634 979 |
ಪ್ರತಿ ಭಾನುವಾರ ಮದ್ಯಾಹ್ನ 3 ರಿಂದ 5 ಘಂಟೆಯ ವರೆಗೆ | |
Toongabbie East Public School, Harris Rd, Wentworthville NSW 2145, Australia | |
ಶ್ರೀಮತಿ ಶ್ವೇತಾ ಫಡ್ನಿಸ್ +61 451 810 214 |
ಪ್ರತಿ ಭಾನುವಾರ ಮದ್ಯಾಹ್ನ 3.00 ರಿಂದ 4.30 ರ ವರೆಗೆ | |
#9, Oxford Street, Epping NSW 2121 | |
Temporarily closed Opening soon |