Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-2012
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಮಕ್ಕಳ ಕ್ಯಾರೆಯೋಕೆ ವರ್ಕ್
ಶಾಪ್
ವರದಿ Report
ಮಕ್ಕಳ ಕ್ಯಾರೆಯೋಕೆ ವರ್ಕ್ - ವರದಿ
ಸ್ನೇಹಿತರೇ,ಕಳೆದ ಡಿಸೆಂಬರ್ ೨೩ ರಂದು ಸುಗಮಕನ್ನಡ ಹಮ್ಮಿಕೊಂಡಿದ್ದ ಸುಗಮ ಚಿಣ್ಣರ ಲೋಕದ ಮೊಟ್ಟಮೊದಲ ಕಾರ್ಯಕ್ರಮ ಮಕ್ಕಳ ಕ್ಯಾರೆಯೋಕಿ ವರ್ಕ್ ಶಾಪ್ ಯಶಸ್ವಿಯಾಗಿಯೂ, ಮಕ್ಕಳಿಗೆ ಬಹಳ ಉಪಯುಕ್ತವಾಗಿಯೂ, ನಡೆಸಿಕೊಟ್ಟ ಶ್ರೀಮತಿ.ಪುಷ್ಪಾ ಜಗದೀಶ್ ರವರಿಗೆ ಉತ್ಸಾಹ ತರುವಂತಾಗಿಯೂ, ಪೋಷಕರಿಗೆ ಮನರಂಜನೆಯಾಗಿಯೂ, ಸಮಿತಿಯವರಿಗೆ ಪ್ರೋತ್ಸಾಹ ನೀಡಿತು.ಮಕ್ಕಳ ಪರಿಚಯ, ಅವರ ಆಸೆ ಆಕಾಂಕ್ಷೆಗಳನ್ನು ಅವರೊಂದಿಗೆ ಹಂಚಿಕೊಂಡು, ಕೆಲವು ಸರಳ ಸಂಗೀತ ಸ್ವರಗಳ ಅಭ್ಯಾಸದೊಂದಿಗೆ ಶುರುಮಾಡಿ ಮಕ್ಕಳೊಡನೆ ಬಲು ಬೇಗ ಸ್ನೇಹದಿಂದ ಬೆರೆತ ಶ್ರೀಮತಿ.
ಪುಷ್ಪಾ `ವರ್ಕ್ ಶಾಪ್' ನ ಮುಂದಿನ ನಾಕು ತಾಸುಗಳನ್ನು ಸೊಗಸಾಗಿ ನಿರ್ವಹಿಸಿ ಮಕ್ಕಳು ತಾವು ಕಲಿತಿದ್ದ ಹಾಡುಗಳನ್ನು ಹಾಡಿಸಿ ಕೆಲವು ಸಲಹೆಗಳನ್ನಿತ್ತರು. ಮಕ್ಕಳು ಅವನ್ನು ಅಳವಡಿಸಿಕೊಡದ್ದು ಮುಂದೆ ಜ.೫ ರಂದು ನಡೆದ ಕಾರ್ಯಕ್ರಮದಲ್ಲಿ ಅರಿವಾಯಿತು. ಭೋಜನ ವಿರಾಮದಲ್ಲಿ ಶ್ರೀಮತಿ.ಪುಷ್ಪಾ ತಾವು ಸಂಗೀತಲೋಕದಲ್ಲಿ ನಡೆದು ಬಂದ ದಾರಿ, ಸಾಧನೆ, ಪ್ರಶಸ್ತಿ-ಪ್ರಶಂಸೆಗಳ ಪ್ರತಿಬಿಂಬಿಸುವ ಭಾವಚಿತ್ರಗಳ ವಿವರಣೆ, ಗಣ್ಯರೊಡಗಿನ ಒಡನಾಟ ಎಲ್ಲವನ್ನೂ ಮಕ್ಕಳ ಜೊತೆ ಪೋಷಕರಿಗೂ ಪರಿಚಯಿಸಿದ್ದು ಆ ದಿನದ ವಿಶೇಷವೆನಿಸಿತು.
ಊಟದ ನಂತರ ಈ ರೀತಿಯ ಅಪರೂಪದ `ವರ್ಕ್ ಶಾಪ್' ಗೆ ಬಂದ ಮಕ್ಕಳಿಗೆ ಏನಾದರೊಂದು ವಿಶೇಷ ಕೊಡುಗೆ ನೀಡುವ ನಿಟ್ಟಿನಲ್ಲಿ ಸೊಗಸಾದ `ನಡೆದಿದೆ ಪೂಜಾರತಿ ವಿಶ್ವದೇವಿಗೆ' ಗೀತೆಯನ್ನು ಅಭ್ಯಾಸ ಮಾಡಿಸುವುದರೊಂದಿಗೆ ಮುಗಿಸಿದರು.ಸುಗಮ ಕನ್ನಡ ಸಮಿತಿಯ ಪರವಾಗಿ ಕನಕಾಪುರ ನಾರಾಯಣ ಅವರು ಶ್ರೀಮತಿ.ಪುಷ್ಪಾ, ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೂ ಧನ್ಯವಾದ ಸಮರ್ಪಿಸಿದರು. ನಿಮ್ಮ ಅನಿಸಿಕೆಗಳನ್ನು ಈ
ವಿಳಾಸಕ್ಕೆ ಈಮೈಲ್ ಮಾಡಿ
contactus@sugamakannada.com