ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಜಂಬೂ ಸವಾರಿ

picture

ಪುಟ್ಟುಗೆ ಆನೆ ಮೇಲೆ ಸವಾರಿ
ಪುಟ್ಟುಗೆ ಕುದುರೆ ಮೇಲೆ ಸವಾರಿ
ನಾಳೆ ಮೈಸೂರಲ್ಲಿ ಜಂಬೂ ಸವಾರಿ
ಕರೆದುಕೊಂಡು ಹೋಗುವೆ ಬೇಗ ಮಲಗು ಜಾಣಮರಿ

ಚುಕುಬುಕೂ ರೈಲು ಹತ್ತಿ ಮೈಸೂರಿಗೆ ಹೋಗೋಣ
ಬೊಂಬೆಗಳ ಕೊಡಿಸುವೆ ಬಂದಾಗ ಚನ್ನಪಟ್ ಣ
ಮಂಡ್ಯವೂ ಬಂದಾಗ ಬೆಲ್ಲದಾ ಘಮ ಘಮಾ.

ಅಲ್ಲಿ ನೋಡು ಕಾಣುತಿದೆ ಶ್ರೀರಂಗಪಟ್ಟಣ
ಶ್ರೀರಂಗನಾಥನಿಗೆ ಕೈಗಳನು ಮುಗಿಯೋಣ
ಕಾವೇರಿ ಕಂಡಾಗ ಮೈಯ್ಯೆಲ್ಲಾ ಜುಮ ಜುಮಾ.

ಇದೋ ನೋಡು ಬಂದಿತು ಮೈಸೂರು ನಗರವು,
ಅರಮನೇ ಉದ್ಯಾನವನಗಳಾ ಸಾಲು ಸಾಲು
ಓಡೋಡಿ ಹತ್ತೋಣ ಚಾಮುಂಡಿ ಮೆಟ್ಟಿಲು.

ಆನೆ ಹುಲಿ ಕರಡಿ ನರೀ ಜಿಂಕೆ ಮತ್ತು ಸಿಂಹ
ಹಾವು ಮೊಸಳೆ ನವಿಲು ಕೋತಿ ಜಿರಾಫೆ ನೋಡಮ್ಮ
ಬೋನಿನಲ್ಲೇ ಇರುವುದು ನೀನು ಲೇಸಮ್ಮ

ವಿಜಯದಶಮಿಯಾದಿನದ ಜಂಬೂಸವಾರಿ,
ಪಟ್ಟದಾನೆ ಮೇಲೆ ಚಿನ್ನದ ಅಂಬಾರಿ,
ಮೈಸೂರು ನಗರವೆಲ್ಲ ಹಿಗ್ಗುತಿದೆ ಹಿರಿ ಹಿರಿ.

ಹೇಗಿತ್ತು ಪುಟ್ಟು ಜಂಬು ಸವಾರಿ,
ಮೈಸೂರು ದಾರಿ
ನಿದ್ದೆ ಬಂದು ಬಿಟ್ಟಿತೆ ನನ್ನ ಜಾಣ್ ಮರಿ
ಕನಸ ಕಾಣುತಿರುವೆಯಾ ನನ್ನ ಪುಟ್ಟ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ನಾಗಶೈಲ ಕುಮಾರ್

ಕನ್ನಡ ಕಥೆ, ಕವನ, ಕಾದಂಬರಿ ಚಿಕ್ಕಂದಿನಿಂದಲೂ ಆಸಕ್ತಿ. ನಾಟಕ, ಸಂಗೀತ, ಚಾರಣ ಸೈಕಲ್ ಸವಾರಿ, ದೇಶ ಪರ್ಯಟನೆ ಅನುಭವ  à²¹à³Šà²‚ದಿದ್ದು ಈಗ ನಳಪಾಕ, ಪ್ರವಾಸ ಮುಖ್ಯ ಹವ್ಯಾಸ. ಬಿಡುವಿನ ವೇಳೆ ಲೇಖನ ಕವನ ರಚನೆ. ಕನ್ನಡ ಚಿತ್ರರಂಗದ ಕ್ವಿಜ಼್ ಅಂತಾಕ್ಷರಿಯಲ್ಲಿ ಅದ್ವಿತೀಯರು ಅನಿಸಿಕೊಂಡಿಹರು.


ಶ್ರೀ. ನಾಗಶೈಲ ಕುಮಾರ್ ಅವರಿಂದ ಮತ್ತಷ್ಟು ಲೇಖನಗಳು


pictureನನ್ನ ಚಿನ್ನ
pictureಜಂಬೂ ಸವಾರಿ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025