ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಿರು ಪರಿಚಯ

ಅಡುಗೆ ಮಾಡುವುದೂ ಒಂದು ಕಲೆ. ನಮ್ಮ ಸಿಡ್ನಿ ಸಮುದಾಯದಲ್ಲೇ ಸಾಕಷ್ಟು ಮಂದಿ ನಮ್ಮೂರಿನ ಕೆಲವು ಸಿಹಿ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ನಿಸ್ಸೀಮರು. ಅಂತಹ ಬಲ್ಲವರನ್ನು ಬರಮಾಡಿ ಬಾರದವರಿಗೆ ಮಾಡಿತೋರಿಸಿ ಅವರಿಗೂ ಹೊಸ-ಬಿಸಿ-ರುಚಿಗಳನ್ನೂ, ಮಾಡುವ ವಿಧಾನಗಳನ್ನೂ ಹಂಚಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ ಘಮ ಘಮ ಸುಗಮ.

ನಿಮಗೂ ಯಾವುದಾದರೂ ನಿಮ್ಮೂರಿನ ಹೊಸ-ಬಿಸಿ-ರುಚಿ ಗೊತ್ತಿದೆಯೇ? ಗಂಡಸರೂ ಹೆಂಗಸರೂ ಹಾಗೂ ಮಕ್ಕಳಿಗೂ ಅವಕಾಶ ಉಂಟು. ಪ್ರತಿಬಾರಿ ಅಡುಗೆ ಮಾಡಿ ತೋರಿಸುವವರಿಗೆ ಬಹುಮಾನ ಉಂಟು. ಘಮ ಘಮ ಸುಗಮಕ್ಕೆ ನೋಂದಣಿ ಉಚಿತ!!

ಕರ್ನಾಟಕದ ಕೆಲವು ಅಡುಗೆ ತಿನಿಸುಗಳನ್ನು ಈ ಪುಟದಲ್ಲಿ ಕಾಣಬಹುದು. ತಮಗೂ ತಮ್ಮೂರಿನ ತಿನಿಸು ತಿಳಿದಿದ್ದರೆ ತಪ್ಪದೆ ತಿಳಿಸಿ.

 

picture
ಪಲಾವ್ ಮತ್ತು ಭಾತ್ ಗಳು

picture
ಕರೆದ ತಿಂಡಿಗಳು

picture
ಸಿಹಿತಿಂಡಿಗಳು

 

picture
ಬಗೆ ಬಗೆಯ ಸಾರು

picture
ಬಗೆ ಬಗೆಯ ಚಟ್ನಿಗಳು

picture
ಬಗೆ ಬಗೆಯ ಪಾಯಸ

 

picture
ಬಗೆ ಬಗೆಯ ಪಾನಕ

picture
ಬಗೆ ಬಗೆಯ ರಾಯತ

picture
ಬಗೆ ಬಗೆಯ ಗೊಜ್ಜು

 

picture
ಬಗೆ ಬಗೆಯ ದೋಸೆ

picture
ಬಗೆ ಬಗೆಯ ಉಂಡೆ

picture
ಉತ್ತರ ಭಾರತದ ತಿನಿಸುಗಳು

 

picture
ಬಗೆ ಬಗೆಯ ಗಾರಿಗೆ

picture
ಬಗೆ ಬಗೆ ಐಸ್ ಕ್ರೀಮ್

picture
ದಕ್ಷಿಣ ಭಾರತ ತಿನಿಸುಗಳು

 

picture
ಉಡುಪಿ/ಮಂಗಳೂರು ಶೈಲಿ ಅಡುಗೆ

ಸಲಹೆಗಳು


1. ತರಕಾರಿಗಳನ್ನು ಕತ್ತರಿಸಿ ತೊಳೆಯುವುದಕ್ಕಿಂತ, ತೊಳೆದು ಕತ್ತರಿಸಬೇಕು. ಇದರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಹಾಳಾಗುವುದಿಲ್ಲ.
2. ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.
3. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಿಂದ ಸುತ್ತಿ ಫ್ರಿಜ್ ನಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.
4. ತರಕಾರಿಗಳನ್ನು ತಂದಂತೆಯೇ ಪ್ಲಾಸ್ಟಿಕ್ ಕವರ್ ನಲ್ಲಿ ಇಡುವುದಕ್ಕಿಂತ ಗಾಳಿಯಾಡುವಂತೆ ಎಲ್ಲಾದರು ಹರಡಿ ಇಡಬೇಕು. ಫ್ರಿಜ್ ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನ್ಯೂಸ್ ಪೇಪರ್ ನಲ್ಲಿ ಸುತ್ತಿ ಇಡುವುದು ಒಳ್ಳೆಯದು.
5. ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.
6. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿದರೆ ಬೇಗನೆ ಬೇಯುತ್ತದೆ.
7. ಅನ್ನ ಒಂದಕ್ಕೊಂದು ಅಂಟದಿರಲು ಅಕ್ಕಿ ಬೇಯಿಸುವಾಗ ಒಂದು ಚಮಚ ಎಣ್ಣೆ ಮತ್ತು ಎರಡು ಹನಿ ನಿಂಬೆರಸ ಹಾಕಿ ಬೇಯಿಸಿದರೆ ಸಾಕು.
 

© ಹಕ್ಕುಸ್ವಾಮ್ಯ 2008 - 2022