ಹಸಿ ಗೊಜ್ಜು

ಬೇಕಾಗುವ ಸಾಮಗ್ರಿಗಳು
- ಒಂದು ಎಳೇ ಸೌತೇಕಾಯಿ
- ಅರ್ಧ ಚಮಚ ಉಪ್ಪು
- ಒಂದು ಬಟ್ಟಲು ಮೊಸರು
- ಹಸಿ ಶುಂಟಿ ಸಣ್ಣ ತುಂಡು
ವಗ್ಗರಣೆಗೆ
- ಎರಡು ಚಮಚ ತುಪ್ಪ
- ಕರಿಬೇವು
- ಸಾಸಿವೆ
- ನಾಲ್ಕು ಒಣಮೆಣಸಿನ ಕಾಯಿ
ಮಾಡುವ ವಿಧಾನ
- ಸೌತೇಕಾಯನ್ನು ಹಸಿಮೆಣಸಿನಕಾಯಿ,ಹಸಿ ಶುಂಟಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ
- ಹೆಚ್ಚಿದ ಮಿಶ್ರಣವನ್ನು ಮೊಸರಿಗೆ ಉಪ್ಪು ಸೇರಿಸಿ ಕಲಸಿ
- ತುಪ್ಪದ ವಗ್ಗರಣೆಯಲ್ಲಿ ಸಾಸಿವೆ ಸಿಡಿಸಿ ಒಣಮೆಣಸಿನ ಕಾಯಿ ಹಾಕಿ
- ಕಲಸಿದ ಮಿಶ್ರಣಕ್ಕೆ ವಗ್ಗರಣೆ ಬೆರೆಸಿ.
ಗಮನಿಸಿ
- ಇದನ್ನು ಈರುಳ್ಳೀ, ಮೂಲಂಗಿಯಿಂದಲೂ ಮಾದಬಹುದು.