ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅಪ್ಪ-ಮಗ

picture

ತಂದೆ:ಮಗೂ ನಿನಗೆ ಪಾಕೆಟ್ ಮನಿ ಅಂತ ಐನೂರು ರೂ ಕೊಟ್ರೆ ಏನು ಮಾಡ್ತೀಯಾ? 

ಮಗ:ನಿನ್ನ ನಂಬೋಕ್ಕಾಗಲ್ಲ ಮೊದಲು ಎಣಿಸಿ ನೋಡ್ತೀನಿ

****

ಅಪ್ಪ: ಲೋ ಗುಂಡ ಪರೀಕ್ಷೆ ಯಾಕೋ ಬರೀಲಿಲ್ಲ? 

ಗುಂಡ:ಪೇಪರ್ ತುಂಬಾ ಟಫ್ ಆಗಿತ್ತು ಅಪ್ಪ. 

ಅಪ್ಪ:ಪರೀಕ್ಷೆನೇ ಬರೀಲಿಲ್ಲ ಟಫ್ ಅಂತ ಅದು ಹೇಗೆ ಗೊತ್ತಾಯ್ತು? 

ಗುಂಡ:ನೆನ್ನೇನೇ ಪೇಪರ್ ಲೀಕ್ ಆಗಿತ್ತು ಅಪ್ಪಾ... 

****

ಮಗ: ಅಪ್ಪ ನಾನು ಗಾಂಧೀಜಿ ಥರ ಆಗಬೇಕು

ಅಪ್ಪ:ಆಗೂ ಬೇಡ ಅಂದವರ್ಯಾರು

ಮಗ:ಹಾಗಿದ್ರೆ ಅವರು ಹನ್ನೆರಡನೇ ವಯಸ್ಸಿಗೇ ಮದುವೆ ಆದರು.....ನಾನೂ ಆಗುವೆ

****

 ತಂದೆ:"ಶಾಲೆ ಬಾಗಿಲು ಯಾವಾಗ ತೆಗೆಯುತ್ತದೆಯೋ?" ಮಗ:"ಅದಕ್ಕೇನಪ್ಪಾ ಬೀಗದ ಕೈ ಇದ್ದರೆ ಯಾವಾಗ ಬೇಕಾದ್ರೂ ತೆಗೀಬಹುದು"

****

ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ? 

ಅಪ್ಪ: ಇಲ್ಲಾ ಕಣೋ,ಯಾಕೆ? 

ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು? 

****

ಕೆಲಸಕ್ಕೆ ತಡವಾಗುತ್ತಿದೆ,ಸ್ನಾನಕ್ಕೆ ನೀರು ಕಾದಿಲ್ಲ,ಶೇವಿಂಗ್ ಮಾಡಿಕೊಳ್ಳುತ್ತಾ ಅವಸರದಲ್ಲಿ ತಂದೆ ಮಗನನ್ನು "ಲೋ ಟೈಮ್ ಎಷ್ಟಾಯ್ತು ನೋಡಿ ಹೇಳೊ" ಮಗ ಗಡಿಯಾರ ನೋಡಿ ಬಂದು"ಗೊತ್ತಾಗ್ತಾ ಇಲ್ಲಾಪ್ಪ",....ತಂದೆ"ಸರಿ ದೊಡ್ಡಮುಳ್ಳು ಚಿಕ್ಕಮುಳ್ಳು ಎಲ್ಲೆಲ್ಲಿದೆ ಹೇಳು ಹೋಗ್ಲಿ" ಮಗ ನೋಡಿ ಬಂದು"ಎರಡೂ ಗಡಿಯಾರದಲ್ಲೇ ಇದೇಪ್ಪ"ಎಂದ

****

ಗುಂಡ ಊರ ಪಟೇಲರ ಮಗನಿಗೆ ಚೆನ್ನಗಿ ಬಾರಿಸಿ ಓಡಿ ಬಂದು ಮನೆ ಸೇರಿಕೊಂಡ. ಸರಿ ಪಟೇಲರು ಗುಂಡನ ಅಪ್ಪನಿಗೆ ದೂರು ಹೇಳಿದರು,ಮಗನನ್ನು ಕರೆದು ವಿಚಾರಿಸಿದರು ಅಪ್ಪ:ಯಾಕೋ ಪಟೇಲರ ಮಗನಿಗೆ ಹಾಗಿ ಬಾರಿಸಿದ್ದೀ? ಗು:ಮತ್ತೆ ಅವ ನನ್ನನ್ನ ಚಿಕ್ಕವನಾಗಿದ್ದಾಗ ಘೇಂಡಾಮೃಗ ಅಂತ ಕರೀತಿದ್ದ? ಅಪ್ಪ: ಏನೋ ಚಿಕ್ಕವನಾಗಿದ್ದಾಗ ಹಾಗೆ ಕರೆದಾಂತ ಈಗ.ಯಾಕೋ ಹೊಡೆದೇ? ಗು: ನಾನು ಮೊನ್ನೆ ತಾನೆ ಮೈಸೂರಿಗೆ ಹೋಗಿದ್ದಾಗ ಘೇಂಡಾಮೃಗ ನೋಡಿದೆ.....

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022