ಹೇರಳೇ ಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿಗಳು
- ಎರಡು ಹೇರಳೇ ಕಾಯಿ
- ಕಡಲೇಬೇಳೆ ಒಂದು ಚಮಚ
- ಉದ್ದಿನಬೇಳೆ ಒಂದು ಚಮಚ
- ಬೆಲ್ಲ ಅರ್ಧ ನಿಂಬೇಗಾತ್ರ
- ಒಣಕೊಬ್ಬರಿ ಐವತ್ತು ಗ್ರಾಂ
- ಒಣಮೆಣಸಿನಕಾಯಿ ಐದಾರು
- ನಾಲ್ಕು ಕಾಳು ಮೆಣಸು
- ಹುಣಸೇಹಣ್ಣು ನಿಂಬೇ ಗಾತ್ರ
- ಉಪ್ಪು ಒಂದು ಚಮಚ
- ವಗ್ಗರಣೆಗೆ ಸ್ವಲ್ಪ ಎಣ್ಣೆ
- ಕರಿಬೇವು
- ಸಾಸಿವೆ
ಮಾಡುವ ವಿಧಾನ
- ಹೇರಳೇಕಾಯನ್ನು ತೊಳೆದು ಸಿಪ್ಪೆ ಸಮೇತ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳೂವುದು
- ಉದ್ದು,ಕಡಲೆಬೇಳೆ,ಮೆಣಸು,ಒಣಮೆಣಸಿನಕಾಯಿ,ಕೊಬ್ಬರಿ ಸ್ವಲ್ಪ ಹುರಿದು,ಆರಿದ ನಂತರ ಪುಡಿಮಾಡಿ
- ಒಂದು ಬಾಣಲೆಗೆ ವಗ್ಗರಣೆ ಹಾಕಿ ಅದಕ್ಕೆ ಹೇರಳೇಕಾಯನ್ನು ಹಾಕಿ ಚೆನ್ನಾಗಿ ಹುರಿಯುತ್ತಿರಿ,ಉಪ್ಪು ಬೆರೆಸಿ
- ಮಸಾಲೆ ಪುಡಿಯನ್ನು ಬಾಣಲೆಗೆ ಹಾಕಿ
- ಹುಣಸೇ ಹಣ್ಣನ್ನು ಕಿವಿಚಿ,ಬೆಲ್ಲವನ್ನೂ ಬೆರೆಸಿ,ಎರಡುನಿಮಿಷ ಕುದಿಸಿ ಒಲೆ ಆರಿಸಿ.