ರವೆ ಬರ್ಫಿ

ಬೇಕಾಗುವ ಸಾಮಗ್ರಿಗಳು
- ಎರಡು ಬಟ್ಟಲು ಚಿರೋಟಿ ರವೆ(ಸಣ್ಣರವೆ)
- ಒಂದು ಬಟ್ಟಲು ತುಪ್ಪ
- ಒಂದು ಬಟ್ಟಲುಹಾಲು
- ನಾಲ್ಕುಬಟ್ಟಲು ಸಕ್ಕರೆ
- ಎಂಟು ಏಲಕ್ಕಿ ಕಾಯಿ
- ಕೇಸರಿ ದಳ ಹತ್ತು
ಮಾಡುವ ವಿಧಾನ
- ರವೆಯನ್ನು ಕೆಂಪಗಾಗದಂತೆ ಹುರಿದು ಅದಕ್ಕೆಹಾಲು,ಸಕ್ಕರೆ,ತುಪ್ಪಹಾಕಿ ಕಲಕುತ್ತಿರಬೇಕು.
- ಮಿಶ್ರಣ ಮೈಸೂರುಪಾಕಿನಂತೆ ತಳಬಿಟ್ಟಾಗ ಹಾಲಿನಲ್ಲಿ ನೆನೆಸಿದ ಕೇಸರಿ,ಏಲಕ್ಕಿ ಪುಡಿ ಹಾಕಿ ಸಮನಾಗಿ ಬೆರೆಸಿ.
- ತುಪ್ಪಹಚ್ಚಿದ ತಟ್ಟೆಯಲ್ಲಿ ಮಿಷ್ರಣವನ್ನು ಹರಡಿ,ಸ್ವಲ್ಪ ಆರಿದ ಮೇಲೆ ಬೆಲ್ಲೆಗಳಾಗಿ ಕತ್ತರಿಸಿ
- ಪೂರ್ತಿ ಆರಿದ ಮೇಲೆ ತೆಗೆದು ತಿನ್ನಬಹುದು