ಶ್ರೀಖಂಡ

ಬೇಕಾಗುವ ಸಾಮಗ್ರಿಗಳು
- ಎರಡು ಲೀಟರ್ ಗಟ್ಟಿ ಮೊಸರು
- ಮುನ್ನೂರು ಗ್ರಾಂ ಸಕ್ಕರೆ
- ಎರಡು ಗ್ರಾಂ ಕೇಸರಿ
- ಅರ್ಧ ನಿಂಬೇಹಣ್ಣು
ಮಾಡುವ ವಿಧಾನ
- ಗಟ್ಟಿ ಮೊಸರನ್ನು ಬಟ್ಟೆಯಲ್ಲಿ ಶೋಧಿಸಿ,ಚೆನ್ನಾಗಿ ಬಸಿದು ನೀರಿನ ಅಂಶ ತೆಗೆಯಿರಿ
- ಈ ಮೊಸರಿಗೆ ನಿಂಬೇರಸ ಕೇಸರಿ ಸೇರಿಸಿ ಬೆರೆಸಿ
- ಸಕ್ಕರೆ ಬೆರೆಸಿ ಅದು ಕರಗುವ ವರೆಗೂ ಸೌಟಿನಿಂದ ಆಡಿಸುತ್ತಿರಿ.(ಮಿಕ್ಸಿಯನ್ನೂ ಬಳಸಬಹುದು)
- ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಬಳಿಕ ತಿನ್ನಲು ರೆಡಿ