ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು
- ಕಪ್ಪು ಎಳ್ಳು ಕಾಲು ಬಟ್ಟಲಿ
- ಕರಿಮೆಣಸಿನ ಕಾಳು ಎಂಟು
- ಕಾಯಿತುರಿ ಅರ್ಧ ಬಟ್ಟಲು
- ಮಾವಿನ ಹುಳಿಪುಡಿ ಕಾಲು ಚಮಚ
- ಉಪ್ಪು ರುಚಿಗೆ
- ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಒಂದೆರಡು ಕರಿಮೆಣಸು.
ಮಾಡುವ ವಿಧಾನ
- ಎಳ್ಳನ್ನು ಬಾಣಲೆಗೆ ಹಾಕಿ ಚಟ ಪಟ ಸಿಡಿಯುವ ವರೆಗೆ ಹುರಿಯಿರಿ
- ಇದಕ್ಕೆ ಕಾಯಿತುರಿ, ಕರಿಮೆಣಸು, ಉಪ್ಪು ಹಾಕಿ ನೀರು ಸಿಂಪಡಿಸಿ, ನುಣ್ಣಗೆ ರುಬ್ಬಿಕೊಳ್ಳಿ
- ಒಗ್ಗರಣೆ ಕೊಟ್ಟು ಕಲಸಿ