ಕ್ಯಾರೆಟ್ ಚಟ್ನಿ

ಬೇಕಾಗುವ ಸಾಮಗ್ರಿಗಳು
- ಕ್ಯಾರೆಟ್ ಅರ್ಧ ಕಿಲೋ
- ಅರ್ಧ ತೆಂಗಿನ ಕಾಯಿ ತುರಿದದ್ದು
- ಹಸಿ ಮೆಣಸಿನಕಾಯಿ ಹತ್ತು
- ಉಪ್ಪು ಒಂದು ಟೀ ಚಮಚ
- ಹುಣಸೇ ಹಣ್ಣು ನಿಂಬೆ ಗಾತ್ರ
- ಕೊತ್ತಂಬರಿ ಸೊಪ್ಪು ಒಂದು ಕಟ್ಟು
- ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು,ಉದ್ದಿನಬೇಳೆ
ಮಾಡುವ ವಿಧಾನ
- ಹುಣಸೇ ಹಣ್ಣನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ
- ಕ್ಯಾರೆಟ್ ತೊಳೆದು ತುರಿದಿಟ್ಟುಕೊಳ್ಳಿ
- ತುರಿದ ಕ್ಯಾರೆಟ್,ಹುಣಸೇಹಣ್ಣು ಹಾಗೂ ಮಿಕ್ಕಎಲ್ಲಾ ಸಾಮಾನಿನ ಜೊತೆ ಸೇರಿಸಿ ಅರ್ಧಲೋಟ ನೀರು ಬೆರೆಸಿ ರುಬ್ಬಿಕೊಳ್ಳಿ
- ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, (ಚಪಾತಿ ದೋಸೆ ಜೊತೆ ತಿನಲು ರುಚಿ)