ಉದ್ದಿನಬೇಳೆ ಚಟ್ನಿ

ಬೇಕಾಗುವ ಸಾಮಗ್ರಿಗಳು
- ಉದ್ದಿನಬೇಳೆ ಕಾಲು ಲೋಟ
- ಕಾಯಿತುರಿ ಅರ್ಧ ಲೋಟ
- ಕರಿಮೆಣಸಿನಕಾಳು ಏಳು/ಎಂಟು
- ಮಾವಿನಹುಳಿ ಅರ್ಧ ಚಮಚ
- ಉಪ್ಪು ರುಚಿಗೆ
- ಒಗ್ಗರಣೆಗೆ ಸಾಸುವೆ ಅರ್ಧ ಚಮಚ ಕರಿಮೆಣಸು ಮೂರು/ನಾಲ್ಕು, ಎಣ್ಣೆ ಎರಡು ಚಮಚ
ಮಾಡುವ ವಿಧಾನ
- ಉದ್ದು ಮತ್ತು ಕರಿಮೆಣಸನ್ನು ಕೆಂಪಗೆ ಹುರಿಯಿರಿ
- ಐದುನಿಮಿಷಗಳ ಕಾಲ ಆರಲು ಬಿಡಿ
- ಆರಿದ ಬೇಳೆ ಕರಿಮೆಣಸಿಗೆ ಕಾಯಿತುರಿ ಹುಳಿಪುಡಿ ಉಪ್ಪು ಹಾಕಿ ನುಣ್ಣಗೆ ರುಬ್ಬಿ
- ಒಗ್ಗರಣೆ ಹಾಕಿ ಚಪಾತಿ ದೋಸೆ ಇಡ್ಲಿ ಅಥವಾ ಅನ್ನದ ಜೊತೆಯಲ್ಲೂ ತಿನ್ನಬಹುದು