ಅತಿರಸ

ಬೇಕಾಗುವ ಸಾಮಗ್ರಿಗಳು
- ಬೆಳ್ತಿಗೆ ಅಕ್ಕಿ ಮೂರು ಲೋಟ
- ಬೆಲ್ಲ ಮೂರು ಲೋಟ
- ಕರಿಮೆಣಸಿನ ಪುಡಿ ಮುಕ್ಕಾಲು ಟೀ ಸ್ಪೂನ್
- ಗಸಗಸೆ ಮೂರು ಟೀ ಸ್ಪೂನ್
- ಎರಡು ಚಿಟಿಕೆ ಉಪ್ಪು
- ಕರಿಯಲು ಎಣ್ಣೆ
ಮಾಡುವ ವಿಧಾನ
- ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ
- ನೀರು ಬಸಿದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ
- ಜರಡಿ ಹಿಡಿದು, ಅದಕ್ಕೆ ಕರಿಮೆಣಸಿನಪುಡಿ ಗಸಗಸೆ ಉಪ್ಪು ಬೆರೆಸಿ
- ಬೆಲ್ಲಕ್ಕೆ ಕಾಲು ಲೋಟ ನೀರು ಹಾಕಿ ನೂಲೆಳೆ ಪಾಕ ಮಾಡಿ
- ಇದಕ್ಕೆ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ಮಗುಚಿ ಕೆಳಗಿಳಿಸಿ
- ಆರಿದ ಬಳಿಕ ನಿಂಬೇಗಾತ್ರದ ಉಂಡೆ ಮಾಡಿ
- ಬೆರಳು ಗಾತ್ರದಷ್ಟು ದಪ್ಪಗೆ ತಟ್ಟಿ ಎಣ್ಣೆಯಲ್ಲಿ ಕರೆಯಿರಿ