ಬಜ್ಜಿಗಳು

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಕಡಲೇ ಹಿಟ್ಟು
- ನಾಲ್ಕು ಚಮಚ ಅಚ್ಚ ಮೆಣಸಿನ ಪುಡಿ
- ಚಿಟಿಕೆ ಸೋಡ
- ಎರಡು ಚಮಚ ಉಪ್ಪು
- ಒಂದು ಚಮಚ ಜೀರಿಗೆ ಮತ್ತು ಮೆಣಸು ಪುಡಿ
- ಇಂಗು ಅರ್ಧ ಚಮಚ
- ಕರಿಯಲು ಎಣ್ಣೆ
ಮಾಡುವ ವಿಧಾನ
- ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ನಿರಿನಲ್ಲಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ
- ಎರಡು ಚಮಚ ಚೆನ್ನಾಗಿ ಕಾದ ಎಣ್ಣೆಯನ್ನು ಕಲಸಿದ ಮಿಶ್ರಣಕ್ಕೆ ಬೆರೆಸಿದಲ್ಲಿ ಬಜ್ಜಿ ಗರಿಗರಿ ಯಾಗಿ ಆಗುವುದು.
- ಹೀರೇ ಕಾಯಿ,ಪೈನಾಪಲ್,ಈರುಳ್ಳಿ,ಆಲೂಗಡ್ಡೆ,ಸೀಮೆ ಬದನೆಕಾಯಿ,ಬದನೆ ಕಾಯಿ,ಬೂದ ಕುಂಬಳಕಾಯಿ,ಬಾಳೇಕಾಯಿ,ದೊಡ್ದ ಮೆಣಸಿನಕಾಯಿ,ಉದ್ದ ಮೆ.ಕಾಯಿ ಈ ಯಾವುದಾದರೂ ಬಳಸಿ ಬಜ್ಜಿ ಮಾಡಬಹುದು.