ಗರಗು ವಡೆ

ಬೇಕಾಗುವ ಸಾಮಗ್ರಿಗಳು
- ಉದ್ದಿನ ಬೇಳೆ ಅರ್ಧ ಕಿಲೋ
- ಎಂಟು ಹ.ಮೆ.ಕಾಯಿ
- ಎರಡು ಕಂತೆ ಕೊತ್ತಂಬರಿ
- ಕಾಲು ಲೋಟ ಅಕ್ಕಿ ಹಿಟ್ಟು
- ಎರಡು ಟೀ ಚಮಚ ತುಪ್ಪ
- ರುಚಿಗೆ ತಕ್ಕಷ್ಟು ಉಪ್ಪು ಚಿಟಿಕೆ ಸೋಡಾಪುಡಿ
- ಚಿಟಿಕೆ ಇಂಗು
- ಐದಾರು ಒಣ ಮೆ.ಕಾಯಿ
ಮಾಡುವ ವಿಧಾನ
- ಉದ್ದಿನಬೇಳೆ ನಾಲ್ಕು ತಾಸು ನೀರಿನಲ್ಲಿ ನೆನೆಸಿ
- ನಂತರ ನೀರು ಬಸಿದು, ಒಣ ಮೆ.ಕಾಯಿ,ಹ.ಮೆ.ಕಾಯಿ,ಉಪ್ಪು,ಇಂಗು,ಕೊತ್ತಂಬರಿ ಸೇರಿಸಿ ರುಬ್ಬಿಕೊಳ್ಳೀ
- ರುಬ್ಬಿದ ಹಿಟ್ಟಿಗೆಅಕ್ಕಿ ಹಿಟ್ಟು ಸೋಡಾಪುಡಿ,ತುಪ್ಪ ಹಾಕಿ ವಡೆ ಕರೆಯುವ ಹದದಲ್ಲಿ ಕಲಸಿ
- ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆಗಳನ್ನ್ನು ತಟ್ಟಿ ಬಿಡುವುದು