ಅರಳು ಸುಕುನುಂಡೆ

ಬೇಕಾಗುವ ಸಾಮಗ್ರಿಗಳು
- ಅಕ್ಕಿ ಒಂದು ಲೋಟ
- ಅರಳು (ಪುಡಿ) 3 ಲೋಟ
- ಬೆಲ್ಲದಪುಡಿ ಒಂದೂವರೆ ಲೋಟ
- ತೆಂಗಿನ ಕಾಯಿ ತುರಿ ಅರ್ಧ ಲೋಟ
- ಎಳ್ಳು ಎರಡು ಚಮಚ
- ಚಿಟಿಕೆ ತುಪ್ಪ
- ಚಿಟಿಕೆ ಉಪ್ಪು ಕರಿಯಲು ಎಣ್ಣೆ
ಮಾಡುವ ವಿಧಾನ
- ಬೆಲ್ಲವನ್ನು ಬಾನಲೆಗೆ ಹಾಕಿ ಒಂದು ಚಮಚ ನೀರು ಹಾಕಿ ಎಳೆಪಾಕ ಬಂದ ಕೂಡಲೇ ಕೆಳಗಿಳಿಸಿ
- ತಣ್ಣಗಾದಮೇಲೆ ಅದಕ್ಕೆ ಅರಳಿನ ಪುಡಿ ಹಾಕಿ ಕಲಸಿ
- ಎಳ್ಳನ್ನು ತುಪ್ಪದಲ್ಲಿ ಹುರಿದು ಹಾಕಿ
- ನಂತರ ಒಂದು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ,
- ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ