ಕಡ್ಲೆ ಕಾಯಿ ಉಂಡೆ

ಬೇಕಾಗುವ ಸಾಮಗ್ರಿಗಳು
- ಕಡ್ಲೆ ಕಾಯಿ ಬೀಜ ಎರಡು ಲೋಟ
- ಅಕ್ಕಿ ಅರ್ಧ ಲೋಟ
- ಬೆಲ್ಲ ಒಂದು ಲೋಟ
- ಹೆಸರು ಬೇಳೆ ಕಾಲು ಲೋಟ
- ಏಲಕ್ಕಿ ನಾಲ್ಕು
- ತುಪ್ಪ ಒಂದು ಚಮಚ
- ನೀರು ಕಾಲು ಲೋಟ
ಮಾಡುವ ವಿಧಾನ
- ಸಿಪ್ಪೆ ಸುಲಿದ ಕಡ್ಲೆ ಕಾಯಿ ಬೀಜವನ್ನು ಬಾಣಲೆಯಲ್ಲಿ ಹುರಿದು,ಅರ್ಧದಷ್ಟನ್ನು ಪುಡಿಮಾಡಿ,
- ಅಕ್ಕಿ ಮತ್ತು ಹೆಸರುಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿ,
- ಬಾಣಲೆಯಲ್ಲಿ ಬೆಲ್ಲದ ಪಾಕ ತಯಾರಿಸಿ,
- ಪಾಕ ಸ್ವಲ್ಪ ಆರಿದಮೇಲೆ ಮಿಕ್ಕ ಎಲ್ಲಾಸಾಮಾನುಗಳನ್ನು ಮಿಶ್ರಣ ಮಾಡಿ
- ಪುಡಿ ಮಾಡಿದ ಏಲಕ್ಕಿ ಬೆರೆಸಿ ಹದವಾಗಿ ಉಂಡೆಗಳಾಗಿ ಕಟ್ಟಿ ಸವಿಯಿರಿ